My photo
ಕರಾವಳಿ ಹುಡುಗಿ :)

Monday, December 8, 2008

ಮೆಣಸುಕಾಯಿ


ಇದಕ್ಕೆ ಯಾಕೆ ಈ ಹೆಸರು ಬಂತು ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ಅಮ್ಮ ಇದನ್ನು ಮಾಡುತ್ತ ಇದ್ದುದನ್ನು ನೋಡಿ ನಾನು ಕಲಿತೆ. ಇದು ಹವ್ಯಕ ಸಮಾಜ ಬಾಂಧವರ ಒಂದು ಸ್ಪೆಷಲ್ ಅಡುಗೆ.

ಬೇಕಾಗುವ ಸಾಮಗ್ರಿಗಳು:
ಅನಾನಸು ಹೋಳುಗಳು-೧ ಕಪ್
ತೆಂಗಿನತುರಿ-೧ ಕಪ್
ಮೆಣಸು- ೮-೧೦
ಎಳ್ಳು-೨ ಚಮಚ
ಉದ್ದಿನಬೇಳೆ-೧ ಚಮಚ
ಹುಣಿಸೇಹಣ್ಣು- ಸ್ವಲ್ಪ
ಬೆಲ್ಲ- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಸ್ವಲ್ಪ
ಒಗ್ಗರೆಣೆಗೆ:ಸಾಸಿವೆ, 1-ಮೆಣಸು, ಕರಿಬೇವು, ಹಿಂಗು.

ಉದ್ದಿನಬೇಳೆ ಹಾಗು ಎಳ್ಳನ್ನು ಎಣ್ಣೆ ಹಾಕದೆ ಪ್ರತ್ಯೇಕವಾಗಿ ಹುರಿಯಿರಿ. ಕಪ್ಪು ಎಳ್ಳನ್ನು ಉಪಯೋಗಿಸಿದರೆ ಅದರ ಸಿಪ್ಪೆಯನ್ನು ಕೈಯಿಂದ ಉಜ್ಜಿ ಬೇರ್ಪಡಿಸಿ. ನಂತರ ಸ್ವಲ್ಪ ಎಣ್ಣೆ ಹಾಕಿ ಮೆಣಸನ್ನು ಹುರಿದಿಡಿ. ಹಾಗೆಯೆ ತೆಂಗಿನಕಾಯಿ ತುರಿಯನ್ನು ಸ್ವಲ್ಪ ಬಾಡಿಸಿ. ನಂತರ ಇದನ್ನು ನುಣ್ಣಗೆ ರುಬ್ಬಿಡಿರಿ.ಒಂದು ಪಾತ್ರೆಯಲ್ಲಿ ಅನಾನಸು ಹೋಳುಗಳನ್ನು ಸ್ವಲ್ಪ ನೀರು ಸೇರಿಸಿ 5-8 ನಿಮಿಷ ಬೇಯಿಸಿರಿ. ಇದಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ, ಬೇಕಾದಷ್ಟು ಪ್ರಮಾಣದಲ್ಲಿ ಉಪ್ಪು, ಹುಳಿ, ಬೆಲ್ಲ ಹಾಗು ನೀರು ಸೇರಿಸಿ ೫ ನಿಮಿಷ ಕುದಿಸಿರಿ. ಸ್ವಲ್ಪ ಎಣ್ಣೆಯಲ್ಲಿ ಸಾಸಿವೆ, ಹಿಂಗು ಮತ್ತು ಕರಿಬೇವು ಸೇರಿಸಿ ಒಗ್ಗರಣೆ ಕೊಡಿರಿ. ಇದು ಅನ್ನದೊಂದಿಗೆ ಸವಿಯಲು ರುಚಿ.
ಮೆಣಸುಕಾಯಿಯನ್ನು ಹಾಗಲಕಾಯಿ ಅಥವಾ ಮಾವಿನ ಹಣ್ಣಿನಿಂದ ಕೂಡ ಮಾಡಬಹುದು.

6 comments:

Ittigecement said...

ವನಿತಾರವರೆ....

WELL COME TO BLOG WORLD..!!

ಬಾಯಲ್ಲಿ ನೀರು ಬಂತು...
ನನ್ನ ಮಡದಿಗೆ ತೋರಿಸಿದ್ದೇನೆ..
ನಂತರ ರಿಪೋರ್ಟ್ ಕೊಡುವೆ...

ನನ್ನ ಅಕ್ಕನ ಮಗಳು.. ಅಲ್ಲೇ ಟೆಕ್ಸಾಸ್ ನಲ್ಲಿದ್ದಾಳೆ..

ಧನ್ಯವಾದಗಳು....

shivu.k said...

ವನಿತಾ ಮೇಡಮ್,
ನಿಮ್ಮ ಬ್ಲಾಗಿಗೆ ಅನಿರೀಕ್ಷಿತವಾಗಿ ಬಂದೆ. ನೋಡಿದರೆ ಹೊಸ ಐಟಮ್, ಇದನ್ನು ನನ್ನಾಕೆಗೆ ತೋರಿಸಿದೆ. ಪ್ರಯೋಗವನ್ನು ಮಾಡಿದ್ದು ಆಯ್ತು. ಚೆನ್ನಾಗಿದೆ. ನೀವು ನನ್ನ ಬ್ಲಾಗುಗಳಿಗೊಮ್ಮೆ ಬನ್ನಿ. ಅಲ್ಲಿ ನಿಮಗಿಷ್ಟವಾದ ಫೋಟೊಗಳು ಮತ್ತು ಲೇಖನಗಳು ಸಿಗಬಹುದು..
ನನ್ನ ಬ್ಲಾಗ್ ವಿಳಾಸ:
http://camerahindhe.blogspot.com/
ಚಿತ್ರಲೇಖನಗಳಿಗಾಗಿ:
http://chaayakannadi.blogspot.com/

ವನಿತಾ / Vanitha said...
This comment has been removed by the author.
ವನಿತಾ / Vanitha said...

ಧನ್ಯವಾದಗಳು, Prakash hegde & Shivu ಅವರೇ, ಹೀಗೇ ಬರುತ್ತಾ ಇರಿ..
ನಾನು ನಿಮ್ಮಿಬ್ಬರ ಬ್ಲಾಗ್ ನ regular reader. ಆದರೆ, ಲಿಂಕ್ ಸಿಕೊಳ್ಳುವುದನ್ನು, ನಿದಾನಕ್ಕೆ ಕಲಿಯುತ್ತೇನೆ.

Bannadi said...

Very Nice

PaLa said...

ಮುದ್ದು ಹುಳಿ ಅಂತಾರೆ ಇದಕ್ಕೆ ಉಡುಪಿ ಕಡೆ. ಹಾಗಲ ಕಾಯಿದು ಮಾಡ್ಬೇಕಾದ್ರೆ ಹಾಗಲ ಕಾಯೀನ ಸಣ್ಣಗೆ ಹೆಚ್ಚಿ, ಅರಶಿಣ, ಉಪ್ಪಿನ ಜೊತೆ ನೀರಲ್ಲಿ ಸ್ವಲ್ಪ ಹೊತ್ತು ನೆನೆಸಿಟ್ರೆ ಕಹಿ ಬಿಡುತ್ತೆ. ನಂತರ ಅದನ್ನ ಕೆಂಪಾಗೋವರ್ಗೂ ತುಪ್ಪದಲ್ಲಿ ಹುರಿದ್ರೆ ಸಕ್ಕತ್ತಾಗಿರುತ್ತೆ.

ಅನಾನಾಸ್ ಜೊತೆ ಹುರಿದ ನೆಲಗಡಲೆ ಕೂಡ ಹಾಕ್ಬಹುದು

ಡೊಳ್ಮೆಣಸಿನ ಕಾಯೀನೂ ಸೇರಿಸ್ಕೋಬಹುದು :)