My photo
ಕರಾವಳಿ ಹುಡುಗಿ :)

Saturday, May 29, 2010

ಹೀಗೊಂದು ಪುಸ್ತಕ “Three Cups of Tea by Greg Mortenson & David Oliver Relin”



"The first time you take tea, you are an invited stranger.
The second time you take tea, you are an honored guest.
The third time you share a cup of tea, you become a part of the family." - ಪಾಕಿಸ್ತಾನದ ಬಾಲ್ಟಿ ಜನರ ನಡೆ-ನುಡಿಯಲ್ಲಿ ಹಾಸು ಹೊಕ್ಕಾಗಿರುವ ಮಾತಿದು.
ಹೀಗೆ ಅವರ ಮನೆಯವನಂತೆ ಪಾಕಿಸ್ತಾನ - ಅಫ್ಘಾನಿಸ್ತಾನದಲ್ಲಿ ಸಮಾಜಸೇವೆಯನ್ನು ಮಾಡಿದ ಅಮೆರಿಕದ ವ್ಯಕ್ತಿ, “Three Cups of Tea” ಪುಸ್ತಕದ ನಾಯಕ, Greg Mortenson.

ಮೂಲತಃ Greg Mortenson ಒಬ್ಬ ಪರ್ವತಾರೋಹಿ. ಜಗತ್ತಿನ ಎರಡನೇ ಎತ್ತರದ ಪರ್ವತವಾದ K2 ಪರ್ವತ ಶ್ರೇಣಿಯನ್ನೇರಲು(ಎವರೆಸ್ಟ್ ಹಾಗು ಕಾಂಚನಜುಂಗ ಪರ್ವತ ಪ್ರಥಮ ಹಾಗು ಮೂರನೇ ಸ್ಥಾನದಲ್ಲಿದೆ) ಹೊರಟ ಈತ ಹಾದಿ ತಪ್ಪಿ, ಪಾಕಿಸ್ತಾನದ ಒಂದು ಹಳ್ಳಿ, Korpheಯನ್ನು ಬಂದು ಸೇರುತ್ತಾನೆ. ಈ ಹಳ್ಳಿಯಲ್ಲಿ ಕೆಲವು ವಾರಗಳ ಕಾಲ ತಂಗಿ, ಅವರ ಆತಿಥ್ಯವನ್ನು ಸವಿಯುತ್ತಾನೆ ಹಾಗು ಹಳ್ಳಿಯ ಪರಿಸ್ಥಿತಿ, ಬಡತನವನ್ನು ನೋಡಿ ಮರುಗುತ್ತಾನೆ. ಅಲ್ಲಿನ ಹಳ್ಳಿಯ ಮಕ್ಕಳಿಗೆ ಒಂದೇ ಒಂದು ಶಾಲೆ ಕೂಡ ಇರುವುದಿಲ್ಲ. ಅವರಿಗೆ ಯಾವುದೇ ರೀತಿಯ ಫಾರ್ಮಲ್ ವಿಧ್ಯಾಭ್ಯಾಸದ ಬಗ್ಗೆ ತಿಳಿದಿರಲಿಲ್ಲ. ಹೆಣ್ಣು ಮಕ್ಕಳು ಶಾಲೆಗೆ ಹೋಗಬಾರದು ಎನ್ನುವ ಪರಿಸ್ಥಿತಿಯಿದ್ದ ಹಳ್ಳಿಯಲ್ಲಿ, ಹಳ್ಳಿಯ ಮುಖ್ಯಸ್ಥ ಹಾಜಿ ಅಲಿಯವರಲ್ಲಿ, ಮುಂದೊಮ್ಮೆ ಇಲ್ಲಿ ಬಂದು ಈ ಮಕ್ಕಳಿಗೋಸ್ಕರ ಶಾಲೆಯನ್ನು ಕಟ್ಟಿಸಿಕೊಡುತ್ತೇನೆ ಎನ್ನುವ
promiseನೊಂದಿಗೆ ಅಮೆರಿಕಕ್ಕೆ ಮರಳುತ್ತಾನೆ.

ಅಮೆರಿಕಕ್ಕೆ ಬಂದು ಸಮಾಜ ಸೇವೆಗಾಗಿ ಆರ್ಥಿಕ ಸಹಾಯಕ್ಕೆಂದು ಹಲವು ವ್ಯಕ್ತಿ ಗಳನ್ನು ಭೇಟಿ ಮಾಡುತ್ತಿದಾಗ, Jean Hoerni ಎನ್ನುವ ಮಿಲೆನಿಯರ್ ಸಹಾಯ ಮಾಡುತ್ತಾನೆ. ಅವರು ಕೊಟ್ಟ $12,000 ದೊಂದಿಗೆ ಪಾಕಿಸ್ತಾನಕ್ಕೆ ಮರಳಿ, ನೂರಾರು ಸಮಸ್ಯೆ ಹಾಗೂ ಹಲವು ಎಡರು ತೊಡರುಗಳನ್ನು ಎದುರಿಸಿ, ಮೊದಲನೆಯದಾಗಿ ಗ್ರಾಮಕ್ಕೆ ಬೇಕಿದ್ದ ಒಂದು ಸೇತುವೆ, ಹಾಗು ಸತತ ಪರಿಶ್ರಮದಿಂದ ಹಳ್ಳಿಗೆ ಪ್ರಥಮ ಶಾಲೆಯನ್ನು ನಿರ್ಮಿಸಿ, ಅಲ್ಲೊಬ್ಬ ಟೀಚರನ್ನು ನೇಮಿಸಿ ಅಲ್ಲಿನ ಮಕ್ಕಳ ಅಭಿವೃದ್ದಿಗಾಗಿ ತನ್ನ ಸೇವೆಯನ್ನು ಮುಡಿಪಾಗಿಸುತ್ತಾನೆ.

ಕೇವಲ ಒಂದು ಹಳ್ಳಿಯ, ಒಂದು ಶಾಲೆಗೇ ಸೀಮಿತವಾಗಿರದೆ Jean Hoerni ರ ಸಹಾಯದ ಮೂಲಕ Central Asia Institute ಎನ್ನುವ ಸಂಸ್ಥೆಯನ್ನು ಸ್ಥಾಪಿಸುತ್ತಾನೆ. ಈ ಸಂಸ್ಥೆಯ ಮೂಲಕ ಪಾಕಿಸ್ತಾನ, ಅಫ್ಘಾನಿಸ್ತಾನದ ಹಲವು ಹಳ್ಳಿಗಳಲ್ಲಿ, ಪ್ರತಿ ಹೆಜ್ಜೆಗೂ ಆತಂಕ, ಭಯ, ಫಾರಿನರ್ ಒಬ್ಬನಿಗೆ ಅಲ್ಲಿನ ಧಾರ್ಮಿಕ ಮುಖಂಡರಿಂದ ಬರುವ ಬೆದರಿಕೆ, ಹಾಗು ಸೆಪ್ಟೆಂಬರ್ 11ರ ನಂತರ ಅಮೆರಿಕನ್ನರಿಂದಲೇ ಬರುವ ಬೆದರಿಕೆಗಳನ್ನು ಲೆಕ್ಕಿಸದೆ, ನೂರಕ್ಕೂ ಹೆಚ್ಚು ಶಾಲೆ, ಅವುಗಳಿಗೆ ಬೇಕಾದ ಉಪಕರಣಗಳು, ಪುಸ್ತಕ, ಟೀಚರ್, ನೀರು ಮತ್ತು ಹಲವು ಸೌಲಭ್ಯ, 50,000ಕ್ಕೂ ಮಿಕ್ಕಿ ಮಕ್ಕಳಿಗೆ ವಿಧ್ಯಾಭ್ಯಾಸವನ್ನು ಒದಗಿಸುತ್ತಾನೆ. ಈ ಮೂಲಕ ಒಂದು ಕಾಲದಲ್ಲಿ ಶಾಲೆಯ ಮೆಟ್ಟಿಲನ್ನೂ ಹತ್ತದ ಹೆಣ್ಣು ಮಕ್ಕಳ, ಅದರಲ್ಲೂ ಒಂದು ಹೆಣ್ಣು ಮಗಳ ಮೆಡಿಕಲ್ ವಿಧ್ಯಾಭ್ಯಾಸಕ್ಕೆ ಕೂಡ ಕಾರಣಕರ್ತನಾಗುತ್ತಾನೆ.

ಹೃದಯ ವೈಶಾಲ್ಯತೆಯಿದ್ದರೆ ಒಬ್ಬ ಮನುಷ್ಯನಿಂದ ಎಂತಹ ಸಾಮಾಜಿಕ ಬದಲಾವಣೆಯನ್ನು ತರಬಹುದು ಎನ್ನುವುದಕ್ಕೆ ಉತ್ತಮ ಮಾದರಿ Gregರವರ ಜೀವನ. Really inspiring book.
(ಚಿತ್ರ - internet source)
Odu bazar link