My photo
ಕರಾವಳಿ ಹುಡುಗಿ :)

Tuesday, March 16, 2010

ಹೋಳಿಗೆ / HOLIGE

ಹೂರಣ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಕಡಲೆಬೇಳೆ - 1 ಕಪ್
ನೀರು - ½ ಕಪ್
ಬೆಲ್ಲದ ಪುಡಿ - 1 ಕಪ್
ಏಲಕ್ಕಿ ಪುಡಿ - ½ ಚಮಚ

ಕನಕ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಮೈದಾ- 1½ ಕಪ್
ನೀರು - ¾ -1 ಕಪ್
ಹಳದಿ ಪುಡಿ - ಚಿಟಿಕೆ
ಉಪ್ಪು - ಚಿಟಿಕೆ
ಎಣ್ಣೆ - 2-3 ಟೇಬಲ್ ಚಮಚ

ಹೂರಣ ತಯಾರಿಸುವ ವಿಧಾನ:
ಕಡಲೇಬೇಳೆಯನ್ನು 1-2 ಘಂಟೆ ನೀರಿನಲ್ಲಿ ನೆನೆಸಿಡಿ.
ನಂತರ ಇದನ್ನು ತೊಳೆದುಕೊಂಡು ½ ಕಪ್ ನೀರು ಸೇರಿಸಿ, ಕುಕ್ಕರಿನಲ್ಲಿ ಬೇಯಲು ಇಡಿ.
ಕುಕ್ಕರಿನ steam ಬಂದ ನಂತರ weight ಹಾಕಿ ಸಣ್ಣ ಉರಿಯಲ್ಲಿ (whistle ಬರದಂತೆ) 15-20 ನಿಮಿಷ ಬೇಯಿಸಿ. ತಣ್ಣಗಾದ ನಂತರ ಬೇಯಿಸಿದ ಕಡಲೇಬೇಳೆಗೆ ಬೆಲ್ಲ ಸೇರಿಸಿ ಮಿಕ್ಸಿಯಲ್ಲಿ ನೀರು ಸೇರಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ, 12-15 ಉಂಡೆ ಮಾಡಿಟ್ಟುಕೊಳ್ಳಿ.

ಕನಕ ತಯಾರಿಸುವ ವಿಧಾನ:
ಮೈದಾ ಹಿಟ್ಟಿಗೆ, ಉಪ್ಪು, ಹಳದಿ ಪುಡಿ ಸೇರಿಸಿಕೊಂಡು ಬೇಕಾದಷ್ಟು ನೀರು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಿ. ಕೊನೆಯಲ್ಲಿ ಇದಕ್ಕೆ ಎಣ್ಣೆ ಸೇರಿಸಿ ½ ಘಂಟೆ ಮುಚ್ಚಿಡಿ. ಇದರಿಂದ 12-15 ಉಂಡೆ ಮಾಡಿ.

ಹೋಳಿಗೆ ತಯಾರಿಸುವ ವಿಧಾನ:
ಕೈಗೆ ಎಣ್ಣೆ ಹಚ್ಚಿಕೊಂಡು ಕನಕದ ಒಂದು ಉಂಡೆ ತೆಗೆದುಕೊಂಡು ಅಂಗೈ ಯಲ್ಲಿ ಸ್ವಲ್ಪ ತಟ್ಟಿ, ಇದರಲ್ಲಿ ಒಂದು ಹೂರಣದ ಉಂಡೆಯನ್ನು ತುಂಬಿಸಿ ಇಡಿ.
ಎಲ್ಲಾ ಉಂಡೆಗಳಿಗೂ ಇದೇ ತರ ತುಂಬಿಸಿಕೊಂಡು ಎಣ್ಣೆ ಸವರಿದ ಪ್ಲೇಟ್ ನಲ್ಲಿಡಿ. ಈ ಉಂಡೆಗಳನ್ನು ಮೈದಾ ಪುಡಿ ಬಳಸಿಕೊಂಡು ಸಾಧ್ಯವಾದಷ್ಟು ತೆಳ್ಳಗೆ ಚಪಾತಿಯಂತೆ ಲಟ್ಟಿಸಿ.
ಲಟ್ಟಿಸಿದ ಹೋಳಿಗೆಯನ್ನು ಹದ ಬಿಸಿಯಾದ ಕಬ್ಬಿಣದ ಕಾವಲಿಯಲ್ಲಿ ಮೇಲಿನಿಂದ ಸ್ವಲ್ಪ ತುಪ್ಪ ಸವರಿಕೊಂಡು ಎರಡೂ ಕಡೆ ಸ್ವಲ್ಪ ಕೆಂಪಾಗುವ ತನಕ ಬೇಯಿಸಿ, ಬಿಸಿಯಾರುವ ತನಕ ಹೋಳಿಗೆಯನ್ನು ಒಂದು ಪೇಪರ್ ನಲ್ಲಿ ಹರಡಿಡಿ. ನಂತರ ಇದನ್ನು ತುಪ್ಪ ಅಥವಾ ತೆಂಗಿನ ಹಾಲಿನೊಂದಿಗೆ ಸವಿಯಲು ಕೊಡಿ.

ಮಂಗಳೂರು ಕಡೆಯಲ್ಲಿ ಹೆಚ್ಹಾಗಿ ಹೋಳಿಗೆಯನ್ನು ಮದುವೆ ಸಮಾರಂಭಗಳಲ್ಲಿ ಮಾಡುತ್ತಾರೆ. ಈ ಹೋಳಿಗೆಗಳು ತುಂಬಾ ತೆಳ್ಳಗೆ ಪದರ ಪದರ ವಾಗಿರುತ್ತದೆ. ಕರ್ನಾಟಕದ ಉಳಿದ ಭಾಗದಲ್ಲಿ ಹೋಳಿಗೆಗೆ 'ಒಬ್ಬಟ್ಟು' ಎಂದು ಕರೆಯುತ್ತಾರೆ. ಇಲ್ಲಿ ಬೆಲ್ಲದೊಂದಿಗೆ ಹೂರಣವನ್ನು ಬೇಯಿಸಿ, ನೀರು ಆರಿದ ನಂತರ ಉಪಯೋಗಿಸುತ್ತಾರೆ. ಇದನ್ನು ಕಡಲೆಬೇಳೆ ಅಥವಾ ತೊಗರಿ ಬೇಳೆಯಿಂದಲೂ ಮಾಡಬಹುದು. ಬೇಳೆಯನ್ನು ಹೆಚ್ಚಿನ ನೀರಿನಲ್ಲಿ ಬೇಯಿಸಿ, ನಂತರ ಈ ನೀರನ್ನು ತೆಗೆದುಕೊಂಡು ರುಚಿಯಾದ ಒಬ್ಬಟ್ಟು ಸಾರು / ಕಟ್ಟು ಸಾರನ್ನು ಕೂಡ ಮಾಡುತ್ತಾರೆ.


ನನ್- ಪ್ರಪಂಚದ ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು..
ಹೊಸ ವರುಷ ಎಲ್ಲರಿಗೂ ಹರುಷ ತರಲಿ :)
ವನಿತಾ.

Wednesday, March 3, 2010

ಹಿಟ್ಟು ಒಂದು; ತಿಂಡಿ ಹಲವು (NAAN, PIZZA, CALZONES & STUFFED BUN)

ಬೇಕಾಗುವ ಸಾಮಗ್ರಿಗಳು:

ಗೋಧಿ ಹಿಟ್ಟು - 2 ½ ಕಪ್ (ಕೇವಲ ಮೈದಾ ಅಥವಾ 1:1 ಮೈದಾ: ಗೋಧಿಹಿಟ್ಟನ್ನು ಮಿಕ್ಸ್ ಮಾಡಿ ಕೂಡ ಉಪಯೋಗಿಸಬಹುದು)
ಉಪ್ಪು
- 1 ಚಮಚ

ಸಕ್ಕರೆ - ½ ಚಮಚ

ನೀರು - 1 ಕಪ್

ಎಣ್ಣೆ - 2 ಚಮಚ (preferably Olive oil)
FLAX SEED POWDER 3 ಚಮಚ (optional)

Flax seedನಲ್ಲಿ ಫೈಬರ್ ಹಾಗೂ Omega-3-fattyacid ಯಥೇಚ್ಚವಾಗಿರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದು.

Dry active yeast powder – 1 ಚಮಚ
ಈಸ್ಟ್ ನ್ನು ಒಂದು ಪಾತ್ರೆಗೆ ಹಾಕಿ ಹದ ಬೆಚ್ಚಗಿನ ನೀರಿನಲ್ಲಿ ಕಲಸಿ 3 ನಿಮಿಷ ಇಡಿ. ನಂತರ ಇದನ್ನು ಹಿಟ್ಟಿಗೆ ಸೇರಿಸಿಕೊಂಡು ಉಪ್ಪು ಮತ್ತು ಬೇಕಾದಷ್ಟು ನೀರು ಸೇರಿಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ. ಕೊನೆಯಲ್ಲಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಒಂದು ಗಾಳಿಯಾಡದ ಪಾತ್ರೆಯಲ್ಲಿ ಮುಚ್ಚಿಡಿ. ಒಂದು ಘಂಟೆಯ ನಂತರ ಹಿಟ್ಟು ಎರಡು ಪಟ್ಟು ಹಿಗ್ಗುತ್ತದೆ. ಇದನ್ನು ಪುನ: ಕಲಸಿ ಒಂದು ಗಂಟೆ ಮುಚ್ಚಿಡಿ. ನಂತರ ಹಿಟ್ಟನ್ನು ಬೇಕಾದ ರೀತಿಯಲ್ಲಿ ಉಪಯೋಗಿಸಿ.

------------------------------------------------------------



ನಾನ್ ಮಾಡುವ ವಿಧಾನ:

ಹಿಟ್ಟನ್ನು ಚಪಾತಿಗಿಂತ ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಂಡು ಓವೆನ್ನಲ್ಲಿ 500F (or BROIL) ನಲ್ಲಿ 2-3ನಿಮಿಷ ಬೇಯಿಸಿ.ಇದನ್ನು ಮಧ್ಯದಿಂದ ತುಂಡು ಮಾಡಿ ಬೇಕಾದ ಪಲ್ಯದೊಂದಿಗೆ ತಿನ್ನಲು ಕೊಡಿ. ಓವೆನ್ನಿಂದ ತೆಗೆದ ಕೂಡಲೇ ಬೇಕಿದ್ದರೆ ಸ್ವಲ್ಪ ಬೆಣ್ಣೆಯನ್ನು ಸವರಬಹುದು.
ಹೆಚ್ಚಿನ ವಿವರಗಳಿಗೆ: Manjula's Kitchen

---------------------------------------------------------


ಪಿಜ್ಜಾ ಮಾಡುವ ವಿಧಾನ:

ಮಿಕ್ಕಿ ಪಿಜ್ಜಾ ಬೇಕ್ ಮಾಡುವ ಮೊದಲು


ಮೇಲೆ ಹೇಳಿದ ಹಿಟ್ಟನ್ನು 3/4 - ಒಂದು ಇಂಚು ದಪ್ಪಕ್ಕೆ ಚಪಾತಿಯಂತೆ ಲಟ್ಟಿಸಿ. ಇದರ ಮೇಲಿಗೆ marinara ಸಾಸ್, ಅಥವಾ ಯಾವುದೇ ಸಾಸ್ ಸವರಿ ಓವೆನ್ ನಲ್ಲಿ 400F ನಲ್ಲಿ ಮಧ್ಯದ ರಾಕ್ ನಲ್ಲಿ 8-10 ನಿಮಿಷ ಬೇಯಿಸಿ. ನಂತರ ಇದನ್ನು ಹೊರಗೆ ತೆಗೆದು, ಇದರ ಮೇಲೆ ನಿಮಗೆ ಬೇಕಾದ ತರಕಾರಿಗಳನ್ನು (Olives, ಕ್ಯಾಪ್ಸಿಕಂ, ಟೊಮೇಟೊ, ಈರುಳ್ಳಿ, mushrooms, ಪಾಲಕ್ ಸೊಪ್ಪು) ಸಮವಾಗಿ ಹರಡಿ, ಮೇಲಿನಿಂದ ಬೇಕಾದಷ್ಟು

Shredded ಚೀಸ್ ಮತ್ತು ಒಂದೆರಡು ಚಮಚ ಒಲಿವ್ ಎಣ್ಣೆ ಸೇರಿಸಿ, ಪುನ: 5-8 ನಿಮಿಷ ಅಥವಾ ಚೀಸ್ ಕರಗುವ ತನಕ ಬೇಯಿಸಿರಿ.

--------------------------------------------------


Calzone ಮತ್ತು stuffed bun ಮಾಡಲು ಉಪಯೋಗಿಸುವ ಪಲ್ಯ ಮಾಡುವ ವಿಧಾನ:
ಆಲೂಗಡ್ಡೆ - 2 ಬೇಯಿಸಿ, ಪುಡಿ ಮಾಡಿ
ಯಾವುದೇ
ಕಾಳು (ಬಟಾಣಿ/Red bean/ Black bean)- ¾ ಕಪ್ ಬೇಯಿಸಿ
ಈರುಳ್ಳಿ
- ½ ಕಪ್
ಗರಂ
ಮಸಾಲ ಪುಡಿ - 1 ಚಮಚ
ಉಪ್ಪು
- ರುಚಿಗೆ ತಕ್ಕಷ್ಟು
ಕೊತ್ತಂಬರಿ
ಸೊಪ್ಪು - ಸ್ವಲ್ಪ
ಜೀರಿಗೆ
- ½ ಚಮಚ
ಶುಂಟಿ
- ಬೆಳ್ಳುಳ್ಳಿ ಪೇಸ್ಟ್ / ತುರಿದು - 1ಚಮಚ
ಎಣ್ಣೆ
- 2-3 ಚಮಚ
ಒಂದು
ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಇದಕ್ಕೆ ಜೀರಿಗೆ, ಈರುಳ್ಳಿ - ಶುಂಟಿ ಸ್ಟ್ ಸೇರಿಸಿ, 1 ನಿಮಿಷ ಹುರಿದುಕೊಂಡು, ಈರುಳ್ಳಿ ಸೇರಿಸಿ ಕೆಂಪಗಾಗುವ ತನಕ ಹುರಿಯಿರಿ. ಈಗ ಸ್ವಲ್ಪ ಹಳದಿ ಪುಡಿ, ಉಪ್ಪು, ಗರಂ ಮಸಾಲೆ ಪುಡಿ ಸೇರಿಸಿ, 1ನಿಮಿಷ ಹುರಿದುಕೊಂಡು , ಕೊನೆಯಲ್ಲಿ ತರಕಾರಿ ಮತ್ತು ಕಾಳುಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ 2-3 ನಿಮಿಷ ಬೆರೆಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
ಮಕ್ಕಳಿಗ
ಇದನ್ನು ಉಪಯೋಗಿಸುತ್ತಿದ್ದರೆ, ಗರಂ ಮಸಾಲ ಪುಡಿಯನ್ನು ಬೇಕಾದಂತೆ ಕಡಿಮೆ ಹಾಕಿ, ಪಲ್ಯವನ್ನು ಬೇರೆ ತೆಗೆದಿಟ್ಟುಕೊಂಡು, ಉಳಿದ ಪಲ್ಯಕ್ಕೆ ಪುನ ಗರಮ್ ಮಸಾಲ ಪುಡಿಯನ್ನು ಹಾಕಿಕೊಳ್ಳಬಹುದು.
ಪಲ್ಯವನ್ನು ಪಫ್ಫ್ಸ್ / ಸಮೋಸ ಅಥವಾ ಯಾವುದೇ fillingಗಳಿಗೆ ಉಪಯೋಗಿಸಬಹುದು.
---------------------------------------------------

Calzone ಮಾಡುವ ವಿಧಾನ:


ಹಿಟ್ಟನ್ನು ಚಪಾತಿಯಂತೆ ದಪ್ಪಕ್ಕೆ ಲಟ್ಟಿಸಿ, marinara ಸಾಸ್, ಅಥವಾ ಯಾವುದೇ ಸಾಸ್ ಸವರಿ. ಇದರ ಒಂದು ಭಾಗದಲ್ಲಿ ಪಲ್ಯ ಹಾಗೂ ಸ್ವಲ್ಪ (Shredded Mozzarella) ಚೀಸ್ ನ್ನಿಟ್ಟು ಇನನೊಂದು ಭಾಗವನ್ನು ಮುಚ್ಚಿ ಎಲ್ಲ ಕಡೆಗಳಲ್ಲೂ ಬೆರಳಿನಿಂದ ಸ್ವಲ್ಪ ನೀರು ಮುಟ್ಟಿಸಿಕೊಂಡು ಮುಚ್ಚಿ. ಇದನ್ನು ಓವೆನ್ ನಲ್ಲಿ ಮಧ್ಯದ ರಾಕ್ ನಲ್ಲಿಟ್ಟು 400F ನಲ್ಲಿ 8-10 ನಿಮಿಷ ಬೇಯಿಸಿ.

ಹೆಚ್ಚಿನ ವಿವರಗಳು ಇಲ್ಲಿ.
--------------------------


STUFFED ಬನ್ ಮಾಡುವ ವಿಧಾನ:

ಒಂದು ಎಣ್ಣೆ ಸವರಿದ ಬೋರ್ಡ್ ಮೇಲೆ ಬನ್ನಿನ ಹಿಟ್ಟನ್ನು ತೆಗೆದುಕೊಂಡು ಕೈಯಿಂದಲೇ ಪೂರಿಯ ಗಾತ್ರಕ್ಕೆ ರಿಂದ ½ ಇಂಚು ದಪ್ಪಕ್ಕೆ) ಒತ್ತಿ. ಇದರಲ್ಲಿ ಪಲ್ಯವನ್ನಿಟ್ಟು, ಹಿಟ್ಟನ್ನು ಎಲ್ಲಾ ಭಾಗದಿಂದಲೂ ಸೇರಿಸಿಕೊಂಡು ಪುನ ಕೈಯಿಂದ ಒತ್ತಿಕೊಂಡು ಬನ್ ಆಕಾರದಲ್ಲಿ ತಟಟಿ ಒಂದು ಎಣ್ಣೆ ಸವರಿದ aluminium ಶೀಟ್ ಮೇಲಿಡಿ. ಇದನ್ನು ovenನಲ್ಲಿ ಮಧ್ಯದ ರಾಕ್ ನಲ್ಲಿಟ್ಟು 25-30 ನಿಮಿಷ (ಕೆಂಪಗೆ ಆಗುವ ತನಕ) ಬೇಕ್ ಮಾಡಿ. ಓವೆನ್ ನಿಂದ ಹೊರ ತೆಗೆದ ತಕ್ಷಣ ಮೇಲಿನಿಂದ ಸ್ವಲ್ಪ ಬೆಣ್ಣೆಯನ್ನು ಸವರಿ ತಣ್ಣಗಾದ ಮೇಲೆ ತಿನ್ನಲು ಕೊಡಿ.

ಹೆಚ್ಚಿನ ವಿವರಗಳು ಇಲ್ಲಿ

---------------------------
Thanks to Manjula aunty, Namratha & Madhu for sharing their recipes:)