My photo
ಕರಾವಳಿ ಹುಡುಗಿ :)

Tuesday, March 16, 2010

ಹೋಳಿಗೆ / HOLIGE

ಹೂರಣ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಕಡಲೆಬೇಳೆ - 1 ಕಪ್
ನೀರು - ½ ಕಪ್
ಬೆಲ್ಲದ ಪುಡಿ - 1 ಕಪ್
ಏಲಕ್ಕಿ ಪುಡಿ - ½ ಚಮಚ

ಕನಕ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಮೈದಾ- 1½ ಕಪ್
ನೀರು - ¾ -1 ಕಪ್
ಹಳದಿ ಪುಡಿ - ಚಿಟಿಕೆ
ಉಪ್ಪು - ಚಿಟಿಕೆ
ಎಣ್ಣೆ - 2-3 ಟೇಬಲ್ ಚಮಚ

ಹೂರಣ ತಯಾರಿಸುವ ವಿಧಾನ:
ಕಡಲೇಬೇಳೆಯನ್ನು 1-2 ಘಂಟೆ ನೀರಿನಲ್ಲಿ ನೆನೆಸಿಡಿ.
ನಂತರ ಇದನ್ನು ತೊಳೆದುಕೊಂಡು ½ ಕಪ್ ನೀರು ಸೇರಿಸಿ, ಕುಕ್ಕರಿನಲ್ಲಿ ಬೇಯಲು ಇಡಿ.
ಕುಕ್ಕರಿನ steam ಬಂದ ನಂತರ weight ಹಾಕಿ ಸಣ್ಣ ಉರಿಯಲ್ಲಿ (whistle ಬರದಂತೆ) 15-20 ನಿಮಿಷ ಬೇಯಿಸಿ. ತಣ್ಣಗಾದ ನಂತರ ಬೇಯಿಸಿದ ಕಡಲೇಬೇಳೆಗೆ ಬೆಲ್ಲ ಸೇರಿಸಿ ಮಿಕ್ಸಿಯಲ್ಲಿ ನೀರು ಸೇರಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ, 12-15 ಉಂಡೆ ಮಾಡಿಟ್ಟುಕೊಳ್ಳಿ.

ಕನಕ ತಯಾರಿಸುವ ವಿಧಾನ:
ಮೈದಾ ಹಿಟ್ಟಿಗೆ, ಉಪ್ಪು, ಹಳದಿ ಪುಡಿ ಸೇರಿಸಿಕೊಂಡು ಬೇಕಾದಷ್ಟು ನೀರು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಿ. ಕೊನೆಯಲ್ಲಿ ಇದಕ್ಕೆ ಎಣ್ಣೆ ಸೇರಿಸಿ ½ ಘಂಟೆ ಮುಚ್ಚಿಡಿ. ಇದರಿಂದ 12-15 ಉಂಡೆ ಮಾಡಿ.

ಹೋಳಿಗೆ ತಯಾರಿಸುವ ವಿಧಾನ:
ಕೈಗೆ ಎಣ್ಣೆ ಹಚ್ಚಿಕೊಂಡು ಕನಕದ ಒಂದು ಉಂಡೆ ತೆಗೆದುಕೊಂಡು ಅಂಗೈ ಯಲ್ಲಿ ಸ್ವಲ್ಪ ತಟ್ಟಿ, ಇದರಲ್ಲಿ ಒಂದು ಹೂರಣದ ಉಂಡೆಯನ್ನು ತುಂಬಿಸಿ ಇಡಿ.
ಎಲ್ಲಾ ಉಂಡೆಗಳಿಗೂ ಇದೇ ತರ ತುಂಬಿಸಿಕೊಂಡು ಎಣ್ಣೆ ಸವರಿದ ಪ್ಲೇಟ್ ನಲ್ಲಿಡಿ. ಈ ಉಂಡೆಗಳನ್ನು ಮೈದಾ ಪುಡಿ ಬಳಸಿಕೊಂಡು ಸಾಧ್ಯವಾದಷ್ಟು ತೆಳ್ಳಗೆ ಚಪಾತಿಯಂತೆ ಲಟ್ಟಿಸಿ.
ಲಟ್ಟಿಸಿದ ಹೋಳಿಗೆಯನ್ನು ಹದ ಬಿಸಿಯಾದ ಕಬ್ಬಿಣದ ಕಾವಲಿಯಲ್ಲಿ ಮೇಲಿನಿಂದ ಸ್ವಲ್ಪ ತುಪ್ಪ ಸವರಿಕೊಂಡು ಎರಡೂ ಕಡೆ ಸ್ವಲ್ಪ ಕೆಂಪಾಗುವ ತನಕ ಬೇಯಿಸಿ, ಬಿಸಿಯಾರುವ ತನಕ ಹೋಳಿಗೆಯನ್ನು ಒಂದು ಪೇಪರ್ ನಲ್ಲಿ ಹರಡಿಡಿ. ನಂತರ ಇದನ್ನು ತುಪ್ಪ ಅಥವಾ ತೆಂಗಿನ ಹಾಲಿನೊಂದಿಗೆ ಸವಿಯಲು ಕೊಡಿ.

ಮಂಗಳೂರು ಕಡೆಯಲ್ಲಿ ಹೆಚ್ಹಾಗಿ ಹೋಳಿಗೆಯನ್ನು ಮದುವೆ ಸಮಾರಂಭಗಳಲ್ಲಿ ಮಾಡುತ್ತಾರೆ. ಈ ಹೋಳಿಗೆಗಳು ತುಂಬಾ ತೆಳ್ಳಗೆ ಪದರ ಪದರ ವಾಗಿರುತ್ತದೆ. ಕರ್ನಾಟಕದ ಉಳಿದ ಭಾಗದಲ್ಲಿ ಹೋಳಿಗೆಗೆ 'ಒಬ್ಬಟ್ಟು' ಎಂದು ಕರೆಯುತ್ತಾರೆ. ಇಲ್ಲಿ ಬೆಲ್ಲದೊಂದಿಗೆ ಹೂರಣವನ್ನು ಬೇಯಿಸಿ, ನೀರು ಆರಿದ ನಂತರ ಉಪಯೋಗಿಸುತ್ತಾರೆ. ಇದನ್ನು ಕಡಲೆಬೇಳೆ ಅಥವಾ ತೊಗರಿ ಬೇಳೆಯಿಂದಲೂ ಮಾಡಬಹುದು. ಬೇಳೆಯನ್ನು ಹೆಚ್ಚಿನ ನೀರಿನಲ್ಲಿ ಬೇಯಿಸಿ, ನಂತರ ಈ ನೀರನ್ನು ತೆಗೆದುಕೊಂಡು ರುಚಿಯಾದ ಒಬ್ಬಟ್ಟು ಸಾರು / ಕಟ್ಟು ಸಾರನ್ನು ಕೂಡ ಮಾಡುತ್ತಾರೆ.


ನನ್- ಪ್ರಪಂಚದ ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು..
ಹೊಸ ವರುಷ ಎಲ್ಲರಿಗೂ ಹರುಷ ತರಲಿ :)
ವನಿತಾ.

8 comments:

ಮನಮುಕ್ತಾ said...

ವನಿತ ಅವರೆ,
ನಿನ್ನೆ ಹಬ್ಬಕ್ಕೆ ಎಣ್ಣೆ ಹೊಳಿಗೆ ಮಾಡಿದ್ದೆ. ಕಡ್ಲೆಕಟ್ಟಿನ ಸಾರು ಕೂಡಾ ಮಾಡಿದ್ದೆ.ಮಾಡ್ತಾ ಇರುವಾಗ, ನಿಮ್ಮ ಬ್ಲೊಗ್ನಲ್ಲಿ ಈ ಸಾರಿಯ ರೆಸಿಪಿ ಹೋಳಿಗೆಯದು ಇರಬಹುದೇನೋ ಅ೦ದು ಕೊ೦ಡಿದ್ದೆ ..
ಇಲ್ಲಿ ನೋಡಿದರೆ ಅದೇ..ಇದೆ!...ಖುಶಿಯಾಯ್ತು.
ನಾನು ಇನ್ನು ಹಿಟ್ಟಿನ ಹೋಳಿಗೆ ಮಾಡಿಲ್ಲ..
I will try it next time..

ಗುರು-ದೆಸೆ !! said...

'ವನಿತಾ / Vanitha' ಅವರಿಗೆ "ಉಗಾದಿಯ ಶುಭಾಶಯಗಳು.."

ಹಬ್ಬಗಳ ಪ್ರಮುಖ ತಿನಿಸು "ಒಬ್ಬಟ್ಟು.."
ಒಬ್ಬಟ್ಟಿನಲ್ಲಿ ಎರಡು ವಿಧಗಳು. ೧)ಕಾಯಿ ಒಬ್ಬಟ್ಟು,೨)ಕಾಳು ಒಬ್ಬಟ್ಟು.
ನೀವು ಒಂದರ ಬಗ್ಗೆ ಬರೆದಿದ್ದೀರಿ..
ಇನ್ನೊಂದನ್ನೂ ಬರೆಯಿರಿ..ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ..: http://manasinamane.blogspot.com (ಮಾರ್ಚ್ ೧೫ ರಂದು ನವೀಕರಿಸಲಾಗಿದೆ)

shivu.k said...

ವನಿತಾ,

ಇದೇ ಹೋಳಿಗೆಯನ್ನೆ ಹೇಮಾಶ್ರೀ ಕೂಡ ಮಾಡಿದ್ದಳು. ಹಾಲು ತುಪ್ಪದ ಜೊತೆ ಬ್ಯಾಟಿಂಗ್ ಮಾಡುತ್ತಿದ್ದರೆ....ಆ ಸಮಯದಲ್ಲಿ ಜಿಮ್, ಪ್ರಾಣಯಾಮ[ಡೈಯೆಟಿಂಗ್] ಎಲ್ಲಾ ಮರೆತುಹೋಗಿತ್ತು..ಆಹ...ಅಹ....

Leena said...

vanitha,

nanu kannadatti,modala bari nima blog nodta iddini,tumba chennagi present madidira!kannadadali madirodu nodi tumba kushi aithu .holige nodi bayali neeru barta idde!!!nanu nana bloglistge nima blog serisikondidini...nivu ome beti kodi..

AshKuku said...

Hey!

Came here through Leena space.... I was so happy to have found this awesomely made Kannada space.... Prathi shabdadallu kannadada ruchi ide.... Nanage thumba ishtavaayithu ee jaaga..... Aaa holige nodi, sannadiddaaga daddy every weekend thartha idru.... Amma adara mele bisi thuppa savari thinlikke kodtha iddaru... Nanage adella nenapaayithu.... Samaya hege badalaaguththade..... Eega nenapugalashte paalige.... Kelavomme naavu beliyade iddare eshtu chennaagirthiththu antha annisuththade..... How I Wish!!!!!!
Hugs))))

Ash....
(http://asha-oceanichope.blogspot.com/)

ಜಲನಯನ said...

Vanitha...yummy..yummy...baayalli ..neeroorisidri...guLiyappa..matte neeru dose...

nenapina sanchy inda said...

Thanks Vanitha for visiting my blog. I am from Mumbai, presently in Bangalore.
I always pride myself on me being a good cook, but i tried hoLige only once and it became like 'kaTTige' and my hubs srikanth said its hard enough to play hockey, so i left it at that.
The mangalore stores here, provide good hoLiges, but nothing cAN BEAT home made ones alwaa?/ Now that my girls are quite grown up i should try it out once more and i shall use ur recipe.
Isn't cocum available in ur Indian Stores?? I have stock worth 2 years, hehehe
:-)
malathi S

Vinuthan Kumar said...

ಹಾಯ್ ವನಿತಾ!
ನಿಮ್ಮ ಬ್ಲಾಗ್ನಲ್ಲಿ ಒಳ್ಳೊಳ್ಳೆ ರುಚಿಕರವಾದ ತಿಂಡಿಗಳಿವೆ...
ನೋಡಿ ತುಂಬಾ ಖುಷಿಯಾಯ್ತು!
ನಿಮಗೆ ತುಂಬಾ ಧನ್ಯವಾದಗಳು...