ಬೇಕಾಗುವ ಸಾಮಗ್ರಿಗಳು:
ತರಕಾರಿ - 2 ಕಪ್ (ಬದನೇಕಾಯಿ + ನುಗ್ಗೆಕಾಯಿ / ಮಂಗಳೂರು ಸೌತೆಕಾಯಿ / ಬೀನ್ಸ್+ ಕ್ಯಾರೆಟ್ - ಮುಂತಾದ ತರಕಾರಿಗಳನ್ನು ಉಪಯೋಗಿಸಬಹುದು)
ತೊಗರಿಬೇಳೆ - ¼ ಕಪ್
ಸಾಂಬಾರ್ ಈರುಳ್ಳಿ - 6-8 (ಇಲ್ಲದಿದ್ದರೆ 1 ಈರುಳ್ಳಿಯನ್ನು ಹೆಚ್ಚಿ ಉಪಯೋಗಿಸಬಹುದು)
ಟೊಮೇಟೊ - 1
ಬೆಲ್ಲ - 2 ಚಮಚ
ಹುಣಸೆ ರಸ - ಲಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದು
ಎಣ್ಣೆ - 2 ಚಮಚ
ಮಸಾಲೆಗೆ:
ಎಣ್ಣೆ - 1 ಚಮಚ
ಮೆಂತೆ - ½ ಚಮಚ
ಉದ್ದಿನಬೇಳೆ- 1 ಚಮಚ
ಮೆಣಸು (ಬ್ಯಾಡಗಿ) - 6-8
ಕೊತ್ತಂಬರಿ ಬೀಜ - 1 ½ ಚಮಚ
ಜೀರಿಗೆ - ½ ಚಮಚ
ಹಳದಿ ಪುಡಿ - ಚಿಟಿಕೆ
ಕರಿಬೇವು - 6 ಎಲೆ
ತೆಂಗಿನಕಾಯಿ - ¼ ಕಪ್ ತುರಿದು
ಒಗ್ಗರಣೆಗೆ :
ಎಣ್ಣೆ - 2 ಚಮಚ
ಸಾಸಿವೆ - ½ ಚಮಚ
ಹಿಂಗು - ½ ಚಮಚ
ಒಣ ಮೆಣಸು - 1
ಕರಿಬೇವು - 6 ಎಲೆ
ತಯಾರಿಸುವ ವಿಧಾನ :
ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ , ಮೆಂತೆ ಸ್ವಲ್ಪ ಬಣ್ಣ ಚೇಂಜ್ ಆಗುವ ತನಕ ಹುರಿದು, ನಂತರ ಉದ್ದಿನಬೇಳೆ ಸೇರಿಸಿ, ಸ್ವಲ್ಪ ಕೆಂಪಗಾಗುವ ತನಕ ಹುರಿಯಿರಿ. ಇದಕ್ಕೆ ಕರಿಬೇವು, ಕೊತ್ತಂಬರಿ ಬೀಜ, ಜೀರಿಗೆ ಸೇರಿಸಿ ಚೆನ್ನಾಗಿ ಪರಿಮಳ ಬರುವ ತನಕ ಹುರಿಯಿರಿ. ಮಸಾಲೆ ಹುರಿಯುವಾಗ ಸೀದು ಹೋಗದಂತೆ ನೋಡಿಕೊಳ್ಳಬೇಕು. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ. ತೆಂಗಿನತುರಿಯನ್ನು ಸ್ವಲ್ಪ ಕೆಂಬಣ್ಣ ಬರುವ ತನಕ ಹುರಿಯಿರಿ. ತಣ್ಣಗಾದ ನಂತರ ಈ ಮಸಾಲೆಯನ್ನು ರುಬ್ಬಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಸೇರಿಸಿಕೊಂಡು ಈರುಳ್ಳಿಯನ್ನು ಹುರಿದು, ಇದಕ್ಕೆ ಹೆಚ್ಚಿಟ್ಟ ತರಕಾರಿ ಸೇರಿಸಿ ಸ್ವಲ್ಪ ಹುರಿಯಿರಿ. ನಂತರ ಹೆಚ್ಚಿಟ್ಟ ಟೊಮೇಟೊ ಹಾಗೂ ಒಂದು ಕಪ್ ನೀರು ಸೇರಿಸಿ ಬೇಯಿಸಲು ಇಡಿ. ತರಕಾರಿ ಬೇಯುತ್ತ ಬಂದಾಗ, ಇದಕ್ಕೆ ತೊಗರಿಬೇಳೆ, ರುಬ್ಬಿಟ್ಟ ಮಸಾಲೆ, ಹುಳಿ, ಉಪ್ಪು, ಬೆಲ್ಲ ಮತ್ತು ಬೇಕಾದಷ್ಟು ನೀರು ಸೇರಿಸಿಕೊಂಡು ಸೇರಿಸಿ 10ನಿಮಿಷ ಹದ ಉರಿಯಲ್ಲಿ ಕುದಿಸಿರಿ. ಕೊನೆಯಲ್ಲಿ ಒಗ್ಗರಣೆ ಸೇರಿಸಿ. ಈ ಸಾಂಬಾರನ್ನು ಇಡ್ಲಿ, ದೋಸೆ ಅಥವಾ ಅನ್ನದೊಂದಿಗೆ ಉಪಯೋಗಿಸಬಹುದು.
ನಾನು ಮಂಗಳೂರು ರಸಂ (ಸಾರು) ಮಾಡಲು ಕೂಡ ಇದೆ ಮಸಾಲೆ ಉಪಯೋಗಿಸ್ತೇನೆ...ಟೊಮೇಟೊ ಕಟ್ ಮಾಡಿ 1 ಕಪ್ ನೀರಿನಲ್ಲಿ 10 ನಿಮಿಷ ಬೇಯಿಸಿ ನಂತರ ಇದೇ ಮಸಾಲೆ ಪುಡಿ + ಎರಡು ಚಮಚ ತೆಂಗಿನ ತುರಿ (ಹುರಿದು ಅಥವಾ ಹುರಿಯದೆ) , ಸ್ವಲ್ಪ pepper ಪುಡಿ, ಹುಳಿ, ಬೆಲ್ಲ ಹಾಗೂ 1 ಕಪ್ ನೀರು ಸೇರಿಸಿ ಕುದಿಸಿ, ಕೊನೆಯಲ್ಲಿ ಸೇಮ್ ಒಗ್ಗರಣೆ ಸೇರಿಸಿದರೆ ಸಾರು ರೆಡಿ.
ಈ ಸಾರಿನಲ್ಲಿ ಬೆಳ್ಳುಳ್ಳಿ ಅಥವಾ ಈರುಳ್ಳಿ ಯನ್ನು ಸೇರಿಸುವುದಿಲ್ಲ.ಆದರೆ ನಾನು ಈರುಳ್ಳಿ ಯನ್ನು ಫ್ರೈ ಮಾಡಿ ಸೇರಿಸುತ್ತೇನೆ.
10 comments:
ವಾವ್!! ಚಿತ್ರ ನೋಡಿಯೇ ಬಾಯಲ್ಲಿ ನೀರು ಬ೦ತು.ಒಳ್ಳೊಳ್ಳೆ ರೆಸಿಪಿ ಕೊಡ್ತಾ ಇದ್ದೀರಾ..ಥ್ಯಾ೦ಕ್ಸ್.
ಬಾಯಲ್ಲಿ ನೀರೂರಿತು...
ನಾಳೆ ನಮ್ಮನೆಯಲ್ಲಿ ನಿಮ್ಮ ಸಂಬಾರ್...
ರುಚಿ ನೋಡಿ ಮತ್ತೆ ಬರುವೆ...
ಬರೆಯುವೆ...
ಸರಳವಾದ ನಿರೂಪಣೆ.. ..
ಚಂದದ ಫೋಟೊಗಳಿಗೆ... ಅಭಿನಂದನೆಗಳು..
ವನಿತಾ
ಬಾಯಲ್ಲಿ ನೀರೂರ್ತ ಇದೆ ನಿಮ್ಮ ಸಾಂಬಾರ್ ಚಿತ್ರ
ಮಂಗಳೂರಿನ ಕೆಲವು ಪದಾರ್ಥಗಳು ನೀಡುವ ರುಚಿ ಇನ್ನೆಲ್ಲಿಯೂ ಸಿಗದು
ಈಗ ನಳಪಾಕದ ಸಮಯ. ನಾಳೆ ತಮ್ಮ ರೆಸಿಪಿ ಹೇಗಿತ್ತು ಅ೦ಥಾ ಹೇಳ್ತೇನೆ.
ಥ್ಯಾಂಕ್ಸ್ ವಿಜಯಶ್ರೀ, ಪ್ರಕಾಶಣ್ಣ, ಗುರುಮೂರ್ತಿ, ಸೀತಾರಾಮ್ ಸರ್:)
ಮಂಗಳೂರ್ ಸಾಂಬಾರ್ ರೆಸಿಪೆ ಸುಮಾರ್ ಕಡೆ ಹುಡುಕಿದ್ದೇ ... ಥ್ಯಾಂಕ್ಸ್ ವನಿತಾ ಶೇರ್ ಮಾಡಿದ್ದಕ್ಕೆ .. ನಾಳೆನೆ ಟ್ರೈ ಮಾಡ್ತೀನಿ :)
Thank u very much
ವನಿತಾ,
ಮಂಗಳೂರು ಸಾಂಬಾರ್ ಸೂಪರ್....ಟ್ರೈ ಮಾಡಿಯಾಯ್ತು...ಮತ್ತೆ ಮಂಗಳೂರು ರಸಂ ರೆಸಿಪಿ ಕೊಡಲು ಸಾಧ್ಯವೇ.?[ನನ್ನ ಶ್ರೀಮತಿ ಕುಕ್ಕೆ ಸುಬ್ರಮಣ್ಯದಲ್ಲಿ ಮಂಗಳೂರು ರಸಂನಲ್ಲಿ ಊಟ ಮಾಡಿ ಆ ತರ ರಸಂ ಮಾಡಬೇಕಂತಿದ್ದಾಳೆ]
Thanks Ranjita:))
@ಶಿವು ನಾನು ಮಂಗಳೂರು ರಸಂ (ಸಾರು) ಮಾಡಲು ಕೂಡ ಇದೆ ಮಸಾಲೆ use ಮಾಡ್ತೇನೆ.ಟೊಮೇಟೊ ಕಟ್ ಮಾಡಿ 1 ಕಪ್ ನೀರಿನಲ್ಲಿ 10 ನಿಮಿಷ ಬೇಯಿಸಿ ನಂತರ ಮಸಾಲೆ ಪುಡಿ + ಎರಡು ಚಮಚ ತೆಂಗಿನ ತುರಿ (ಹುರಿದು ಅಥವಾ ಹುರಿಯದೆ) , ಸ್ವಲ್ಪ pepper ಪುಡಿ, ಹುಳಿ, ಬೆಲ್ಲ ಹಾಗೂ 1 ಕಪ್ ನೀರು ಸೇರಿಸಿ ಕುದಿಸಿ, ಕೊನೆಯಲ್ಲಿ ಸೇಮ್ ಒಗ್ಗರಣೆ ಸೇರಿಸಿದರೆ ಸಾರು ರೆಡಿ.
ಈ ಸಾರಿನಲ್ಲಿ ಬೆಳ್ಳುಳ್ಳಿ ಅಥವಾ ಈರುಳ್ಳಿ ಯನ್ನು ಸೇರಿಸುವುದಿಲ್ಲ.ಆದರೆ ನಾನು ಈರುಳ್ಳಿ ಯನ್ನು ಫ್ರೈ ಮಾಡಿ ಸೇರಿಸುತ್ತೇನೆ.ಇದು ಸಿಂಪಲ್ ಆಗಿ ಬರೆದದ್ದು..ಟೈಮ್ ಆದಾಗ ಇನ್ನೊಂದು ಪೋಸ್ಟ್ ಬರೀತೇನೆ
ವನಿತಾ,
ಇವತ್ತು ನೀವು ರೆಸಿಪಿ ಕೊಟ್ಟ ಬದನೇಕಾಯಿ ಸಾರು ಮಾಡಿದ್ದೆ. ಸೂಪರ್ ಹಿಟ್!! ನಾನು ಬದನೇಕಾಯಿ ತಿನ್ನುವುದಿಲ್ಲವೆಂದು ಇಷ್ಟು ದಿನ ಗಿಡದಲ್ಲಿ ಬಿಡುವುದನ್ನೆಲ್ಲಾ ಇಲ್ಲಿಯ ಸ್ನೇಹಿತರಿಗೆ ಹಂಚಿಯಾಗಿತ್ತು. ಇವತ್ತು ನಾನೇ ಯಾಕೆ ಮಾಡಿ ತಿನ್ನಬಾರದು ಎನಿಸಿ ಬದನೇಕಾಯಿ+ಆಲೂಗೆಡ್ಡೆ ಹಾಕಿ ಸಾರು ಮಾಡಿದ್ದೆ ಮಸ್ತ್ ಆಗಿತ್ತು:) ಮತ್ತೊಮ್ಮೆ ಥ್ಯಾಂಕ್ಸು.
Post a Comment