My photo
ಕರಾವಳಿ ಹುಡುಗಿ :)

Thursday, July 23, 2009

ಕ್ಯಾರೆಟ್ ಹಲ್ವ / CARROT HALWA

ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ (ತುರಿದುಕೊಂಡು) – 4 ಕಪ್
ಹಾಲು - 2 ಕಪ್
ಸಕ್ಕರೆ - 1 ಕಪ್
ಏಲಕ್ಕಿ ಪುಡಿ - ಸ್ವಲ್ಪ
ಗೋಡಂಬಿ - 2 ಟೇಬಲ್ ಚಮಚ
ದ್ರಾಕ್ಷಿ - 2 ಟೇಬಲ್ ಚಮಚ
ತುಪ್ಪ - 2 ಟೇಬಲ್ ಚಮಚ

ಮಾಡುವ ವಿಧಾನ :
ಕ್ಯಾರೆಟ್ ನ್ನು ತೊಳೆದು ಒರೆಸಿಕೊಂಡು, ತುರಿದಿಟ್ಟುಕೊಳ್ಳಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿಕೊಂಡು ಗೋಡಂಬಿಯನ್ನು ಹುರಿದು ಬದಿಯಲ್ಲಿಡಿ. ನಂತರ ಇದಕ್ಕೆ ತುರಿದ ಕ್ಯಾರೆಟ್ ನ್ನು ಹಾಕಿ 10 ನಿಮಿಷ ಬಾಡಿಸಿಕೊಳ್ಳಿ. ಈ ತುರಿಗೆ ಹಾಲು ಸೇರಿಸಿ, ಚೆನ್ನಾಗಿ ಬೇಯಲು ಬಿಡಿ. (ಹಾಲು ಮತ್ತು ತುರಿದ ಕ್ಯಾರೆಟ್ ನ್ನು ಕುಕ್ಕರಿನಲ್ಲಿ ಕೂಡ ಬೇಯಿಸಬಹುದು) . ಹಾಲು ಆವಿಯಾದ ನಂತರ ಇದಕ್ಕೆ ಸಕ್ಕರೆ ಮತ್ತು ದ್ರಾಕ್ಷಿ ಸೇರಿಸಿ ಚೆನ್ನಾಗಿ ಮಗುಚಿರಿ. ಕೊನೆಯಲ್ಲಿ ಇದು ತಳ ಬಿಡಲು ಶುರುವಾದಾಗ, ಏಲಕ್ಕಿ ಪುಡಿ ಹಾಗು ಗೋಡಂಬಿ ಸೇರಿಸಿ, ಒಲೆಯಿಂದ ಇಳಿಸಿ, ಬೇಕಾದ ಪಾತ್ರೆಗೆ ಹಾಕಿ ಇಡಿರಿ. ಇದನ್ನು ಬಿಸಿಯಾಗಿ ಅಥವಾ ಫ್ರಿಜ್ ನಲ್ಲಿಟ್ಟು ತಂಪಾದ ನಂತರ ಕೂಡ ತಿನ್ನಬಹುದು.

11 comments:

Hemashree said...

:) what a coincidence!

just now i prepared carrot halwa and kept in the fridge!
and here i am reading your recipe!

ವನಿತಾ / Vanitha said...

Really..nie to know that Hemashree..Enjoy carrot halwa..

Roopa said...

ಬಾಯಲ್ಲಿ ನೀರೂರಿತು!! ಇದಕ್ಕೆ condensed milk ಹಾಕಿ ಮಾಡಿ, ಸ್ವಲ್ಪ ರಿಚ್ ಎನಿಸಿದ್ರೂ ಸಕ್ಕತಾಗಿರುತ್ತೆ:)
ಶ್ರಾವಣ ಬಂತು ಇನ್ನೇನು ಹಬ್ಬಗಳು ಶುರು, ಸ್ವೀಟ್ ಮಾಡೊದೇ ಕೆಲ್ಸ:-)

ವನಿತಾ / Vanitha said...

ಹೌದು ರೂಪಶ್ರೀ..ಆದ್ರೆ ನಾನು ಹೆಚ್ಚಾಗಿ condensed milk, cream, ಕೋಯಾ ಎಲ್ಲ avoid ಮಾಡ್ತೇನೆ..

shivu.k said...

ವನಿತ,

ನನ್ನಾಕೆ ವರಮಹಾಲಕ್ಷ್ಮಿ ಹಬ್ಬಕ್ಕೆ ಏನೇನೋ ಸಿಹಿ ಪಟ್ಟಿ ಹಾಕಿಕೊಂಡಿದ್ದಾಳೆ. ಇದನ್ನು ಸೇರಿಸಲು ಹೇಳುತ್ತೇನೆ...ಥ್ಯಾಂಕ್ಸ್..

ವನಿತಾ / Vanitha said...

@ಶಿವು, ಧನ್ಯವಾದಗಳು ..Enjoy ಹಬ್ಬಗಳನ್ನ...

Unknown said...

Brocolli sabji I tried and it was excellent continue your Puta hejje.
Samll step by you will be gaint leap for Mankind

ಮಲ್ಲಿಕಾರ್ಜುನ.ಡಿ.ಜಿ. said...

ಹಬ್ಬಗಳು ಹತ್ತಿರವಾಯಿತೆಂದು ಒಳ್ಳೆ ಸಿಹಿಯ ರೆಸಿಪಿ ಕೊಟ್ಟಿದ್ದೀರಿ.ಧನ್ಯವಾದಗಳು. ಚಿತ್ರ ನೋಡುತ್ತಿದ್ದರೆ ತಿನ್ನುವ ಆಸೆಯಾಗುತ್ತಿದೆ.

Anonymous said...

sugarless sweet maaDOdu hEge? :o

ವನಿತಾ / Vanitha said...

Thanks Vasu and Mallikarjun..

ವನಿತಾ / Vanitha said...

@Anonymous..sugar substitute use maadi try maaDabahudu..Nanage hecchu tilidilla..google nalli noDidare nimage thumba maahiti siguttade.