ಬಾಸ್ಮತಿ ಅಕ್ಕಿ - 2 ಕಪ್
ಬಟಾಣಿ ಬೇಯಿಸಿ - ½ ಕಪ್
ಕ್ಯಾರೆಟ್ ಸಣ್ಣಗೆ ತುಂಡು ಮಾಡಿ ಬೇಯಿಸಿ - ¼ ಕಪ್
ಕ್ಯಾಪ್ಸಿಕಂ - 1 ಸಣ್ಣಗೆ ತುಂಡು ಮಾಡಿ
ಈರುಳ್ಳಿ - ½ ಕಪ್
ಸಕ್ಕರೆ - 2 ಚಮಚ (ಸಿಹಿಗೆ ಅನುಗುಣವಾಗಿ)
ಉಪ್ಪು - 2 ಚಮಚ / ರುಚಿಗೆ ತಕ್ಕಂತೆ
ಪಿಸ್ತಾ, ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ - ¼ ಕಪ್
ಕ್ರೀಂ - 2 ಟೇಬಲ್ ಚಮಚ
ಹಾಲು - 1 ಟೇಬಲ್ ಚಮಚ- ಇದಕ್ಕೆ ಸ್ವಲ್ಪ ಕೇಸರಿ ಸೇರಿಸಿ ಕುದಿಸಿಡಬೇಕು.
ಚೆಕ್ಕೆ - ½” ಸಣ್ಣ ತುಂಡು / ಅಥವಾ 1-2 ಎಲೆ
ಏಲಕ್ಕಿ - 2
ಜೀರಿಗೆ - ¼ ಚಮಚ
ತುಪ್ಪ / ಬೆಣ್ಣೆ - 2 ಟೇಬಲ್ ಚಮಚ
ಹಣ್ಣುಗಳು (Seedless ದ್ರಾಕ್ಷಿ, ಆಪಲ್, Pineapple) - ಬೇಕಾದಷ್ಟು ಸಣ್ಣಗೆ ತುಂಡು ಮಾಡಿ
ಮಾಡುವ ವಿಧಾನ:
ಎರಡು ಕಪ್ ಅಕ್ಕಿಯನ್ನು ತೊಳೆದು 3 ಗ್ಲಾಸ್ ನೀರಿನಲ್ಲಿ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, 2 ಚಮಚ ತುಪ್ಪ ಹಾಕಿ ಬೇಯಿಸಬೇಕು. ಬೆಂದ ನಂತರ ಕುಕ್ಕರಿನ ಮುಚ್ಚಳ ತೆಗೆದಿಡಬೇಕು ಅಥವಾ ಒಂದು ದೊಡ್ಡ ಬಟ್ಟಲಿನಲ್ಲಿ ಅನ್ನವನ್ನು ಹರಡಿಡಬೇಕು. ಇದರಿಂದ ಅನ್ನ ಉದುರಾಗಿರುತ್ತದೆ.
ಇನ್ನೊಂದು ಪಾತ್ರೆಯಲ್ಲಿ ತುಪ್ಪ ಬಿಸಿಮಾಡಿ ಇದರಲ್ಲಿ dry fruits ಗಳನ್ನು ಹುರಿದು ತೆಗೆದಿಡಬೇಕು.
ನಂತರ ಇದೇ ತುಪ್ಪದಲ್ಲಿ ಈರುಳ್ಳಿಯನ್ನು ಚೆನ್ನಾಗಿ ಹುರಿಯಬೇಕು. ಇದಕ್ಕೆ ಚೆಕ್ಕೆ, ಏಲಕ್ಕಿ, ಜೀರಿಗೆ, ಕ್ಯಾಪ್ಸಿಕಂ ಸೇರಿಸಿ ಸ್ವಲ್ಪ ಹುರಿಯಿರಿ. ಬೇಯಿಸಿದ ಕ್ಯಾರೆಟ್, ಬಟಾಣಿ ಸೇರಿಸಿ ಸ್ವಲ್ಪ ಹುರಿದುಕೊಂಡು ನಂತರ ಕೇಸರಿ ಹಾಲು, ಕ್ರೀಂ ಮತ್ತು ಬೇಯಿಸಿಟ್ಟ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ.
ಕೊನೆಯಲ್ಲಿ ದ್ರಾಕ್ಷಿ, ಆಪಲ್, ಅಥವಾ ನಿಮಗೆ ಬೇಕಾದ ಹಣ್ಣುಗಳನ್ನು ಸೇರಿಸಿ ತಿನ್ನಲು ಕೊಡಿ.
ಇದನ್ನು ಹಾಗೆಯೇ ತಿನ್ನಬಹುದು ಅಥವಾ raitha ದೊಂದಿಗೆ ಸವಿಯಬಹುದು. ನನಗೆ ಕ್ಯಾರೆಟ್ ಕೋಸಂಬರಿ ಯೊಂದಿಗೆ ತಿನ್ನಲು ಇಷ್ಟವಾಯಿತು.

Source: 100 Rice Delights by Mrs. Mallika Badrinath.
7 comments:
ವನಿತಾ,
ಕಾಶ್ಮೀರಿ ಪಲಾವ್ ರೆಸಿಪಿ ಸೂಪರ್...ಓದುತ್ತಿದ್ದರೆ ಬಾಯಲ್ಲಿ ನೀರೂರುತ್ತೆ...ಪ್ರಯತ್ನಿಸುತ್ತೇನೆ.,
ಮತ್ತೆ ಅರ್ಕುಟ್ ನಲ್ಲಿ ನಿಮ್ಮ ಫ್ಯಾಮಿಲಿ ಫೋಟೊ ನೋಡಿದೆ ಚೆನ್ನಾಗಿವೆ...
Thanks shivu
ವನಿತಾ...
ನಿಮ್ಮ ಕಾಶ್ಮೀರಿ ಪಲಾವ್ ನನ್ನ ಮಗನಿಗೆ ಇಷ್ಟವಾಯಿತು...
ನನಗೆ ಸ್ವಲ್ಪ ಖಾರ ಇಷ್ಟ...
ತೂಕ ಇಳಿಸುವ ಬಗೆಗೂ ತಿಳಿಸಿ
(ಅಂಥಹ ತಿಂಡಿಯ ಬಗೆಗೆ... ತಿನ್ನುವದನ್ನು ನಿಲ್ಲಿಸಿ ಅನ್ನಬೇಡಿ...!)
ಕಶ್ಮೀರಿ ಪಲಾವ್ ಚೆನ್ನಾಗಿತ್ತು...
ಅಭಿನಂದನೆಗಳು...
ವನಿತಾ ಅವರೇ,
ಈ ರೆಸೆಪಿ ಪಕ್ಕಾ ಫ್ಯಾಮಿಲಿಗೆ ಸರಿ, ನಮ್ಮಂಥ ಬ್ರಹ್ಮಚಾರಿಗಳಿಗೆ ಈ ಎಲ್ಲ ಸಾಮಗ್ರಿ ತಂದು, ಮಾಡುವುದು ಸ್ವಲ್ಪ ಕಷ್ಟದ ಕೆಲಸ..:-)
ಫೋಟೋ ನೋಡಿ,ಹಾಗೆ ಬಾಯಿ ಚಪ್ಪರಿಸುವ ಹಾಗಾಗಿದೆ..!!
It was great to read a cooking blog in Kannada. I must try your recipes, they sound very tasty. I have added your blog in my cooking blog.
Thanks ಪ್ರಕಾಶ್ ಹೆಗ್ಡೆ ಅವರೇ,
ನಮ್ಮನೆಯಲ್ಲೂ ಕೂಡ ಸ್ವೀಟ್ಸ್ ಮಾಡೋದು ಕಡಿಮೆ..ಚೌತಿ ಹಬ್ಬದ ದಿನ ಮಾಡಿದ್ದೆ...
@ಪ್ರಶಾಂತ್ ಭಟ್, :-)
Thanks Rashmi, for dropping by and your encouraging words..do try and let me know..
Lovely dish vanita..thx for sharing
Post a Comment