My photo
ಕರಾವಳಿ ಹುಡುಗಿ :)

Friday, October 2, 2009

ಪ್ರಶಸ್ತಿಗಳಿಂದ ಬೆಲೆಕಟ್ಟಲಾಗದ ಹಸಿರು ಕ್ರಾಂತಿಯ ಹರಿಕಾರ ಡಾ.ನೋರ್ಮನ್ ಇ ಬೊರ್ಲಾಗ್

“You cannot build a peaceful world on empty stomach
and human misery”
– Dr. Norman E Borlaug (March 25, 1914 - September 12, 2009).

ಎಷ್ಟು ಸತ್ಯವಾದ ಮಾತುಗಳು....

ಅನಿವಾರ್ಯ ಕಾರಣಗಳಿಂದಾಗಿ ತುಂಬಾ ದಿನಗಳಿಂದ ಬ್ಲಾಗ್ ನಲ್ಲಿ ಏನೂ ಬರೆದಿರಲಿಲ್ಲ. ಇವತ್ತು ಬರೆಯುತ್ತಿರುವುದು ಯಾವುದೇ ಅಡುಗೆ ವಿಧಾನದ ಬಗ್ಗೆ ಅಲ್ಲ. ಎಷ್ಟೋ ದೇಶಗಳ ಬಡ ಜನರ ಹಸಿವೆಯನ್ನು ನೀಗಿಸಿದ ಅಧಿಕ ಇಳುವರಿಯ ಗೋಧಿ ತಳಿಯ ಸಂಶೋಧಕ, ಹಸಿರು ಕ್ರಾಂತಿಯ ಹರಿಕಾರ, ಕೃಷಿ ವಿಜ್ಞಾನಿ (agronomist), ಮಾನವತಾವಾದಿ (humanitarian), ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಡಾ.ನೋರ್ಮನ್ ಇ ಬೊರ್ಲಾಗ್ ಬಗೆಗೆ.
ಅಮೆರಿಕದೇಶದ ಪ್ರಜೆಯಾಗಿ ಉಳಿದ ಬಡದೇಶಗಳ ಆಹಾರ ಕ್ರಾಂತಿಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟ ಕೃಷಿ ವಿಜ್ಞಾನಿ ಡಾ. ಬೊರ್ಲಾಗ್. ಇವರ ಆಲೋಚನೆ, ಸಂಶೋದನೆ, ಪರಿಶ್ರಮದಿಂದಾಗಿ ಭಾರತ, ಪಾಕಿಸ್ತಾನ, ಮೆಕ್ಸಿಕೋದಂತಹ ರಾಷ್ಟ್ರಗಳು ಆಹಾರ ಸ್ವಾವಲಂಬಿ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಯಿತು. ಬಿಲಿಯನ್ ಜನರ ಹಸಿವನ್ನು ನೀಗಿಸಿ, ಜೀವ ಉಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹಾಗಾಗಿ ಹಲವು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದುವು. ಇದರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ, ಅಮೇರಿಕಾದ ಪ್ರಜೆಗೆ ದೊರಕುವ ಅತ್ಯುನ್ನತ ಪ್ರಶಸ್ತಿ -Congressional Gold medal, ಜೊತೆಗೆ ಭಾರತದ ಪದ್ಮವಿಭೂಷಣ ಪ್ರಶಸ್ತಿ, ಮತ್ತು 50ಕ್ಕೂ ಹೆಚ್ಚು ವಿಶ್ವವಿಧ್ಯಾಲಯಗಳ ಗೌರವ ಡಾಕ್ಟರೇಟ್ ಪದವಿಗಳು. ಇವರ ಬಗ್ಗೆ ನೀವು ಇಲ್ಲಿ ಮತ್ತು ಇಲ್ಲಿ ಓದಬಹುದು.

ಡಾ ಬೊರ್ಲಾಗ್ ರವರು ನಾವು ಕೆಲಸ ಮಾಡುವ Texas A& M Universityಯಲ್ಲಿ ಉದ್ಯೋಗದಲ್ಲಿದ್ದರು. ಹಾಗಾಗಿ ಅವರ ಕೆಲವು ಪ್ರಶಸ್ತಿಗಳು ಹಾಗು ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ...


ನೊಬೆಲ್ ಶಾಂತಿ ಪ್ರಶಸ್ತಿ -ಹಸಿರು ಕ್ರಾಂತಿಯ ಹರಿಕಾರನಿಗೆ, ಸ್ವೀಡನ್ ನ ನೊಬೆಲ್ ಫೌಂಡೇಶನ್ ನವರು ಡಿಸೆಂಬರ್ 10, 1970 ರಲ್ಲಿ ಕೊಟ್ಟ ಪ್ರಶಸ್ತಿ. ಇವರು ಇದುವರೆಗೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಏಕಮಾತ್ರ ಸಸ್ಯಶಾಸ್ತ್ರಜ್ಞ/ ಕೃಷಿ ವಿಜ್ಞಾನಿ.



Congressional Gold Medal (ಜುಲೈ 17, 2006)- ಅಮೆರಿಕ ದೇಶವು ತನ್ನ ಪ್ರಜೆಯೊಬ್ಬನಿಗೆ ಕೊಡುವ ಅತ್ಯುನ್ನತ ಪಶಸ್ತಿ.


Presidential medal of freedom (ಜನವರಿ 10, 1977) - ಇದು Congressional Gold Medal ಜೊತೆಗೆ ಅಮೆರಿಕ ದೇಶವು ತನ್ನ ಪ್ರಜೆಯೊಬ್ಬನಿಗೆ ಕೊಡುವ ಅತ್ಯುನ್ನತ ಪಶಸ್ತಿ.


National medal of science (ಫೆಬ್ರವರಿ13, 2005). ವಿಜ್ಞಾನ ಕ್ಷೇತ್ರದಲ್ಲಿ ಅಮೆರಿಕ ದೇಶವು ತನ್ನ ಪ್ರಜೆಗೆ ಕೊಡುವ ಅತ್ಯುನ್ನತ ಪ್ರಶಸ್ತಿ.


ಅಧಿಕ ಇಳುವರಿಯ ಗೋಧಿ ತಳಿಯ ಉತ್ಪಾದನೆಗಾಗಿ ಮೆಕ್ಸಿಕೋ ಸರಕಾರದಿಂದ ಕೊಡಲ್ಪಟ್ಟ Order of the Aztec Eagle award (1970). ಇದು ಮೆಕ್ಸಿಕೋ ಸರಕಾರ ವಿದೇಶೀಯರಿಗೆ ಕೊಡುವ ಅತ್ಯುನ್ನತ ಪ್ರಶಸ್ತಿ.

ಕ್ಯಾನ್ಸರಿನಿಂದ ಬಳಲುತ್ತಿದರು ಕೂಡ ನಗುಮುಖದಿಂದ ತಮ್ಮ ಕಿರಿಯ ಸಹೋದ್ಯೋಗಿಗಳೊಂದಿಗೆ ಯಾವಾಗಲು discussionಗೆ ಪ್ರಾಮುಖ್ಯತೆ ನೀಡುತ್ತಿದ್ದ ಡಾ.ನೋರ್ಮನ್ ಇ ಬೊರ್ಲಾಗ್ ಜೊತೆಗೆ, ನಮ್ಮ ಮನೆಯವರು ಎರಡು ವರ್ಷಗಳ ಹಿಂದೆ.

ಈ ಎಲ್ಲ ಪ್ರಶಸ್ತಿ ಗಳು ಇಲ್ಲಿನ George bush Presidential library & Museum ನಲ್ಲಿಡಲಾಗಿದೆ.

ವೈಜ್ಞಾನಿಕ ಸಂಶೋಧನೆಗಳು ಎಷ್ಟೋ ಮಲ್ಟಿನ್ಯಾಷನಲ್ ಕಂಪನಿಗಳ ಧನಗಳಿಕೆಯ ಸೊತ್ತಾಗುವ ಈ ಕಾಲದಲ್ಲಿ ಡಾ. ಬೊರ್ಲಾಗ್ ರವರ ನಿಸ್ವಾರ್ಥ ಸೇವೆ ಹಾಗು ಮಾನವೀಯತೆ ನಿಜವಾಗಿಯು ಅನುಕರಣೀಯ. ಅವರು ನಡೆದು ಬಂದ ದಾರಿ, ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯ ನೆಲೆಯಾಗಬೇಕು.

7 comments:

shivu.k said...

ವನಿತಾರವರೆ,

ಡಾ ಬೊರ್ಲಾಗ್ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ. ನೀವು ಮತ್ತೊಮ್ಮೆ ಅವರ ಸಾಧನೆ ಮತ್ತು ಪ್ರಶಸ್ತಿಗಳ ಬಗ್ಗೆ ಚೆನ್ನಾಗಿ ಮಾಹಿತಿ ನೀಡಿದ್ದೀರಿ. ಮತ್ತೆ ಅವರಿರುವ ಸ್ಥಳದಲ್ಲಿ ನೀವು ಇರುವುದನ್ನು ನೋಡಿದರೆ ನೀವು ಅದೃಷ್ಟವಂತರು ಅನ್ನಿಸುತ್ತೆ. ಅವರ ಸಾಧನೆಯ ಫೋಟೋಗಳನ್ನು ನೋಡಿ ಖುಷಿಯಾಯ್ತು...

ಧನ್ಯವಾದಗಳು.

Ittigecement said...

ಒಬ್ಬ ಆದರ್ಷ ಪುರುಷನನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು..

ಹಸಿವೆ, ಅಡುಗೆ ಇವೆಲ್ಲ ಒಂದೇ ಡಿಪಾರ್ಟ್‍ಮೆಂಟುಗಳು...

Unknown said...

ಉತ್ತಮ ಲೇಖನ ವನಿತಾ ಅವರೇ

ಇಂತಿ
ವಿನಯ

Rashmi said...

Hi Vanitha,

Dr. Norman E Borlaug bagge kelidde ashte aadare ishtu detail aagi tiLidiralilla. Neevu avara bagge haagu avara saadhanegaLa bagge collect maadi tumba chennagi baredideeri. yellara jote share maadiddu tamma oLeyathana :)

Rashmi

Krishnaveni said...

Hey Borlaug bagge monne paper illi oditte... Ninna hubby avara ottinge work maadittavu heli gonthittille... Nice to know... laayika baradde...:)

ಗೌತಮ್ ಹೆಗಡೆ said...

nimma husband tumbaa punyavantaru:) olleya maahitiyulla baraha:)

ವನಿತಾ / Vanitha said...

ಥ್ಯಾಂಕ್ಸ್ ಶಿವೂ, ಪ್ರಕಾಶ್ ಹೆಗ್ಡೆ, ವಿನಯ್, ಗೌತಮ, ರಶ್ಮಿ ಮತ್ತು ವೇಣಿ..