My photo
ಕರಾವಳಿ ಹುಡುಗಿ :)

Sunday, October 25, 2009

ಮೆಕ್ಸಿಕನ್ ರೈಸ್ / MEXICAN RICE

ಅನ್ನ ಎಂದರೆ ಒಂದು ಮೈಲು ದೂರ ಓಡುವ ನನ್ನ ಮಗಳು ಒಂದು ದಿನ, ಸ್ಕೂಲ್ ನಿಂದ ಬಂದು ಅಮ್ಮಾ ‘I had yummy yellow rice” ಅಂದಾಗ ನನಗೆ ಆಶ್ಚರ್ಯ, ಜೊತೆಗೆ ಕುತೂಹಲ ಕೂಡ!!!
ಹಾಗೆಯೇ ಗೂಗಲ್ ನಲ್ಲಿ ಹುಡುಕಿದಾಗ yellow rice ಅಂದರೆ ಒಂದು Mexican dish, ಇದನ್ನು ಮಾಡಲು annatto ಅಥವಾ Bixa seed ನ paste ಹಾಕಬೇಕೆಂದು ಗೊತ್ತಾಯಿತು. ಮತ್ತು ಇದನ್ನು ಹಾಕದೆಯೂ ಕೂಡ Mexican rice ಮಾಡಬಹುದೆಂದು ತಿಳಿಯಿತು. ನಮ್ಮ Fried riceನ ತರಾನೆ ಟೇಸ್ಟ್ ಬರುತ್ತದೆ. ಮಾಡಲು ತುಂಬಾ ಸುಲಭ ಹಾಗು 25-30ನಿಮಿಷದ ಒಳಗೆ ಸಿದ್ದವಾಗುತ್ತದೆ. ನಾನು ಮೆಕ್ಸಿಕನ್ನರ long grain riceಗೆ ಬದಲಾಗಿ ನಮ್ಮ ಬಾಸ್ಮತಿ ಅನ್ನವನ್ನು ಉಪಯೋಗಿಸಿದೆ.

ಅಕ್ಕಿ - 1 ಕಪ್

ಈರುಳ್ಳಿ - 1 (ಉದ್ದಕ್ಕೆ ತೆಳ್ಳಗೆ ಸೀಳಿ)

ಟೊಮೇಟೊ- 1 (ಉದ್ದಕ್ಕೆ ತೆಳ್ಳಗೆ ಸೀಳಿ)

ಕ್ಯಾಪ್ಸಿಕಂ - ½ (ಉದ್ದಕ್ಕೆ ತೆಳ್ಳಗೆ ಸೀಳಿ)

ಉಪ್ಪು - 1 ಚಮಚ / ರುಚಿಗೆ ತಕ್ಕಷ್ಟು

ಮೆಣಸಿನ ಪುಡಿ- ½ ಚಮಚ / (ಖಾರಕ್ಕೆ ಹೊಂದಿಕೊಂಡು)

ಬೆಳ್ಳುಳ್ಳಿ - ದೊಡ್ಡ 2 ಎಸಳು (ಸಣ್ಣಗೆ ಹೆಚ್ಚಿ)

ಟೊಮೇಟೊ ಸಾಲ್ಸಾ - 2 ಚಮಚ (ಇದು ಮೆಕ್ಸಿಕನ್ನರ ಸಾಸ್, ಟೊಮೇಟೊ ಜೊತೆಗೆ ಈರುಳ್ಳಿ, ಮೆಣಸು, ಬೆಳ್ಳುಳ್ಳಿ ಹಾಕಿದ ಮಿಶ್ರಣ)

ಎಣ್ಣೆ / ತುಪ್ಪ - 5-6 ಚಮಚ

ಅಕ್ಕಿಯನ್ನು ಸ್ವಲ್ಪ ನೀರಿನಲ್ಲಿ 15-20 ನಿಮಿಷ ನೆನೆಸಿಡಿ.

1 ½ - 2 ಕಪ್ ನೀರನ್ನು ಒಂದು ಬಾಣಲೆಯಲ್ಲಿ ಹಾಕಿಕೊಂಡು ಕುದಿಯಲು ಬಿಡಿ.

ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ / ತುಪ್ಪ ಹಾಕಿಕೊಂಡು ಬೆಳ್ಳುಳ್ಳಿ ಯನ್ನು ಚೆನ್ನಾಗಿ ಕೆಂಪಗೆ ಆಗುವ ತನಕ ಹುರಿದು, ನಂತರ ಇದಕ್ಕೆ ಈರುಳ್ಳಿ ಯನ್ನು ಸೇರಿಸಿ, ಚೆನ್ನಾಗಿ ಹುರಿಯಿರಿ. ಅಕ್ಕಿಯನ್ನು ತೊಳೆದುಕೊಂಡು ಬಸಿದು, ಇದಕ್ಕೆ ಸೇರಿಸಿಕೊಂಡು ಇನ್ನು 5 ನಿಮಿಷ ಹುರಿಯಿರಿ. ಕೊನೆಯಲ್ಲಿ ಮೆಣಸಿನ ಪುಡಿ, ಸಾಲ್ಸಾ, ಉಪ್ಪು ಸೇರಿಸಿ ಈ ಮಿಶ್ರಣವನ್ನು ಕುದಿಯುವ ನೀರಿಗೆ ಸೇರಿಸಿ, ಸಣ್ಣ ಉರಿಯಲ್ಲಿ 15-20 ನಿಮಿಷ (ನೀರು ಆರುವ ತನಕ) ಬೇಯಿಸಿರಿ.

ಕೊನೆಯಲ್ಲಿ ಇನ್ನೊಂದು ಪಾತ್ರೆಯಲ್ಲಿ, ಸ್ವಲ್ಪ ಎಣ್ಣೆ ಹಾಕಿಕೊಂಡು ಕ್ಯಾಪ್ಸಿಕಂನ್ನು ಚೆನ್ನಾಗಿ ಹುರಿಯಿರಿ. ಸ್ಟೋವ್ ಆರಿಸಿಬಿಟ್ಟು ನಂತರ ಟೊಮೇಟೊ ತುಂಡುಗಳನ್ನು ಸೇರಿಸಿ, ಇದನ್ನು ಅನ್ನದೊಂದಿಗೆ ಮಿಕ್ಸ್ ಮಾಡಿ raitha ದೊಂದಿಗೆ ತಿನ್ನಲು ಕೊಡಿ.

9 comments:

Paru ... said...

Vanitha, Nimma blog tumba chennagide. Mexican rice looks so very yummy. Thanks for visiting Brindavans and leading me here..

shivu.k said...

ಅರೆರೆ...ಮೆಕ್ಸಿಕನ್ ರೈಸ್ ಹೀಗಾ ಮಾಡೋದು, ನನ್ನಾಕೆ ಇಲ್ಲದಾಗ ನಾನೊಮ್ಮೆ ಎಲೆಕೋಸು ಉಪಯೋಗಿಸಿ ಮಾಡಿದ್ದೆ. ನನ್ನ ಪ್ರೆಂಡು ತಿಂದು ಚೆನ್ನಾಗಿದೆ ಅಂದು ಯಾವುದು ಈ ರೈಸ್ ಅಂದ ನಾನು ಮೆಕ್ಸಿಕನ್ ರೈಸ್ ಅಂತ ಹೇಳಿ ಕಾಲರ್ ಏರಿಸಿದ್ದೆ.

ನಾನು ರುಚಿ ನೋಡಿದ್ದೆ. ಒಂಥರ ಚೆನ್ನಾಗಿತ್ತು....

ಈಗ ನಿಜವಾದ ಮೆಕ್ಸಿಕನ್ ರೈಸ್ ಮಾಡಿಸುತ್ತೇನೆ...ಧನ್ಯವಾದಗಳು ವನಿತಾ.

ವಿ.ರಾ.ಹೆ. said...

Super!

Bengluralli hotelnavrige gottadre plate ge 50 rupayi ittu blade haktare ! (eegagle kelavu hotelgaLalli iraloobahudu) :)

Rashmi said...

Hi Vanitha,

Interesting recipe! Nanigu anna andre swalpa ashtikashte amma na hathira yavaglu biskotha idde anna ne muttalla bari tindi antha :-p adikke takka atte mane sikkide ruchi ruchi tindigalige yettida Ki! Aadre nimma ee mexican rice different aagide try maadi helthini henge aagithu antha :)
Thanks for sharing!
Rashmi

ಪಾಚು-ಪ್ರಪಂಚ said...

ವನಿತಾ ಅವರೇ,

ಇದು ಬ್ರಹ್ಮಚಾರಿಗಳಿಗೆ ಹೇಳಿ ಮಾಡಿಸಿದ ಅಡುಗೆ :-)
ನನಗೆ ಟೊಮೇಟೊ ಸಾಲ್ಸಾ ಸಿಗಲಿಲ್ಲ. ಬದಲಾಗಿ ಗಾರ್ಲಿಕ್ ಪೇಸ್ಟ್ ಹಾಕಿದೆ..! ಚಿತ್ರದಲ್ಲಿ ಕಾಣುವ ಹಾಗೆ ಹಳದಿ ಬಣ್ಣ ಬರಲಿಲ್ಲ :-(

ಆದರೆ ಒಳ್ಳೆ ರುಚಿ ಇತ್ತು..!

ಧನ್ಯವಾದಗಳು.

ವನಿತಾ / Vanitha said...

Thanks paaru for visiting my blog:)

@ಶಿವು, authentic ಮೆಕ್ಷಿಕನ ರೈಸ್ ಹೀಗೆಯೇ ಇರುತ್ತದಾ ಎಂದು ನಂಗೆ ತಿಳಿದಿಲ್ಲ..
@ ಧನ್ಯವಾದಗಳು ವಿಕಾಸ್ ಹೆಗಡೆ ಅವರೇ.
@ಪ್ರಶಾಂತ್ ಭಟ್..ಟ್ರೈ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್..ಸಾಲ್ಸಾ ಅಂದರೆ ಟೊಮೇಟೊ ಪೇಸ್ಟ್/ puree ..ಹಾಗಾಗಿ garlic ಪೇಸ್ಟ್ ಜೊತೆಗೆ ಸ್ವಲ್ಪ ಪ್ಯುರೀ ಹಾಕಿದರೆ ಕಲರ್ ಬರತ್ತೆ ಹಾಗು tastiಯಾಗಿರುತ್ತದೆ.

ವನಿತಾ / Vanitha said...

@thanks rashmi..nange kooda anna andre swalpa doorane..ya, please do try and let me know..

ಬಾಲು ಸಾಯಿಮನೆ said...

ಕೆಲವು ತಿಂಗಳಿಗಾಗಿ Forced Bachelor ಆದ ಅಪರೂಪಕ್ಕೆ ಒಳ್ಲೇ ಊಟ ಮಾಡುವಾ ಅಂತ ನಿಮ್ಮ ಮೆಕ್ಷಿಕನ್ ರೈಸ ಪ್ರಯೋಗ ಮಾಡಿದೆ, ಚನ್ನಾಗಿತ್ತು. ಧನ್ಯವಾದಳು

ವನಿತಾ / Vanitha said...

Thanks Balu Saayimane:-)