My photo
ಕರಾವಳಿ ಹುಡುಗಿ :)

Friday, December 25, 2009

ಖರ್ಜೂರ ಕೇಕ್ ಮತ್ತು ಬಾಳೆಹಣ್ಣು ಕೇಕ್ (DATE CAKE & BANANA NUT CAKE) - EGGLESS

ಖರ್ಜೂರ ಕೇಕ್ :

ಈ ಖರ್ಜೂರದ ಕೇಕ್ ರೆಸಿಪಿ ಇಲ್ಲಿಂದ. ಇದು ನಮ್ಮ ಮನೆಯಲ್ಲಿ ಫೇವರಿಟ್ ಕೇಕ್ ಹಾಗು ನನ್ನ ಹೆಚ್ಚಿನ ಫ್ರೆಂಡ್ಸ್ ಗಳಿಗೆ ಇಷ್ಟವಾದ ಕೇಕ್. ಮಾಡಲು ಸುಲಭ, ಹಾಗು ತುಂಬಾ ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:
ಖರ್ಜೂರ - 18 (ಬೀಜ ತೆಗೆದು)
ಹಾಲು - ¾ ಕಪ್
ಸಕ್ಕರೆ - ¾ ಕಪ್
ಮೈದಾ ಹಿಟ್ಟು - 1 ಕಪ್
ಎಣ್ಣೆ / ಬೆಣ್ಣೆ - ¼ ಕಪ್
ಬೇಕಿಂಗ್ ಸೋಡಾ - 1 ಚಮಚ
Dry Fruits (ಗೋಡಂಬಿ, ಒಣ ದ್ರಾಕ್ಷಿ, ವಾಲ್ ನಟ್ಸ್) - ¼ ಕಪ್ಮಾಡುವ ವಿಧಾನ:
ಹಾಲಿನಲ್ಲಿ ಖರ್ಜೂರವನ್ನು ಸೇರಿಸಿಕೊಂಡು ಎರಡು ನಿಮಿಷ ಕುದಿಸಿರಿ. ಇದು ತಣ್ಣಗಾದ ನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡು, ಈ ಮಿಶ್ರಣದೊಂದಿಗೆ ಸಕ್ಕರೆ, ಎಣ್ಣೆ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಜರಡಿಯಾಡಿಸಿದ ಮೈದಾವನ್ನು ಸ್ವಲ್ಪ ಸ್ವಲ್ಪವೇ ಸೇರಿಸಿಕೊಂಡು ನಿಧಾನದಲ್ಲಿ ಬೆರೆಸಿರಿ. ಕೊನೆಯಲ್ಲಿ ಬೇಕಿಂಗ್ ಸೋಡಾ, ತುಂಡು ಮಾಡಿಟ್ಟ Dry fruits ಗಳನ್ನು ಸೇರಿಸಿ.


ಒಂದು ಬೇಕಿಂಗ್ ಪಾನ್ ಗೆ ಬೇಕಿಂಗ್ sprayಯನ್ನು ಸವರಿಕೊಂಡು ನಂತರ ಕೇಕ್ ನ ಮಿಶ್ರಣವನ್ನು ಸುರಿದು ಓವೆನ್ ನಲ್ಲಿ ಮಧ್ಯದ rackನಲ್ಲಿಟ್ಟು 350 F ನಲ್ಲಿ 35- 40 ನಿಮಿಷ ಬೇಯಿಸಿರಿ. ಕೇಕ್ ನ ಒಳಗಡೆ ಒಂದು ಚಾಕು ಅಥವಾ tooth pickನ್ನು ಹಾಕಿದಾಗ ಅದು ಸರಾಗವಾಗಿ ಬಂದರೆ ಕೇಕ್ ರೆಡಿಯಾಗಿದೆ. ಇದನ್ನು ಅರ್ಧ ಗಂಟೆ ತಣ್ಣಗಾಗಲು ಬಿಟ್ಟು ನಂತರ ಬೇಕಾದ ರೀತಿಯಲ್ಲಿ ತುಂಡು ಮಾಡಿಕೊಂಡು ತಿನ್ನಬಹುದು.

ಬೇಕಿಂಗ್ ಪಾನ್ ಇಲ್ಲದಿದ್ದರೆ ಯಾವುದೇ ಪಿಂಗಾಣಿಯ Oven safe ಪಾತ್ರೆಯಲ್ಲಿ ಕೇಕ್ ನ್ನು ಮಾಡಬಹುದು.
ಬೇಕಿಂಗ್ sprayಯ ಬದಲು ಪಾತ್ರೆಗೆ (ಒಂದು aluminium foil ಹಾಕಿ ಅಥವಾ ಹಾಕದೆ) ಎಣ್ಣೆ ಸವರಿಕೊಂಡು ಇದರ ಮೇಲೆ ಸ್ವಲ್ಪ ಮೈದಾಪುಡಿಯನ್ನು ಹರಡಿ ಕೊಂಡು ನಂತರ ಪಾತ್ರೆಯನ್ನು ಕವುಚಿ ಹಾಕಿ ಹೆಚ್ಚಾಗಿರುವ ಮೈದಾ ಪುಡಿಯನ್ನು ತೆಗೆದರೆ ಬೇಕಿಂಗ್ ಪಾನ್ ಸಿದ್ದ. ನಂತರ ಇದರಲ್ಲಿ ಕೇಕ್ ಮಿಶ್ರಣವನ್ನು ಹಾಕಬೇಕು. ಕೇಕ್ ಮಿಕ್ಸ್ ಕೊನೆಯಲ್ಲಿ ಇಡ್ಲಿ ಹಿಟ್ಟಿ ಗಿಂತಲೂ ಹೆಚ್ಚು ಗಟ್ಟಿಯಾಗಿರಬೇಕು.
ಬೇಕಿಂಗ್ ಪಾನ್ ನಲ್ಲಿ 2-2½ ಇಂಚು ದಪ್ಪಕ್ಕೆ ಹಿಟ್ಟು ಹಾಕಿದರೆ ಕೇಕ್ ಚೆನ್ನಾಗಿ ಬರುತ್ತದೆ. ಕೇಕ್ ಗೆ white sugar ಮತ್ತು brown sugarನ್ನು ಸಮಪ್ರಮಾಣದಲ್ಲಿ ಹಾಕಿದರೆ ಕೇಕ್ ಹೆಚ್ಚು ರುಚಿಯಾಗುತ್ತದೆ.

ಬಾಳೆಹಣ್ಣು ಕೇಕ್ / BANANA – NUT CAKE

ಬೇಕಾಗುವ ಸಾಮಗ್ರಿಗಳು:
ಬಾಳೆಹಣ್ಣು - 3 (ಪಚ್ಚೆ ಬಾಳೆ)
ಮೈದಾ ಹಿಟ್ಟು - 1¼ ಕಪ್
ಸಕ್ಕರೆ - ½ ಕಪ್
ಎಣ್ಣೆ / ಬೆಣ್ಣೆ - ¼ ಕಪ್
ಬೇಕಿಂಗ್ ಸೋಡಾ - 1 ಚಮಚ

ವೆನಿಲ್ಲಾ ಎಸೆನ್ಸ್ - 1 ಚಮಚ
ಹಾಲು - ¼ ಕಪ್
Dry Fruits (ಗೋಡಂಬಿ, ಒಣ ದ್ರಾಕ್ಷಿ, ವಾಲ್ ನಟ್ಸ್) - ¼ ಕಪ್


ಮಾಡುವ ವಿಧಾನ:
ಸಿಪ್ಪೆ ಸುಲಿದ ಬಾಳೆಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಇದಕ್ಕೆ ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿರಿ.
ನಂತರ ಒಂದು ಬೇಕಿಂಗ್ ಪಾನ್ ನಲ್ಲಿ ಹಾಕಿ ಓವೆನ್ನಲ್ಲಿ 350 F ನಲ್ಲಿ 35- 40 ನಿಮಿಷ ಬೇಯಿಸಿರಿ.

ತಣ್ಣಗಾದ ನಂತರ ಬೇಕಾದ ರೀತಿಯಲ್ಲಿ ತುಂಡು ಮಾಡಿಕೊಂಡು ತಿನ್ನಬಹುದು.

10 comments:

shivu said...

ವನಿತಾ,

ನಾನು ಈಗ ಸ್ವಲ್ಪ ಜಿಮ್, ಡಯಟಿಂಗ್ ಅಂತ ವರ್ಕೌಟ್ ಮಾಡುತ್ತಿದ್ದರೇ ನೀವೇನು ಮತ್ತೆ ಕರ್ಜೂರ, ಬಾಳೆಹಣ್ಣು ಕೇಕು ಅಂತ ಬಾಯಲ್ಲಿ ನೀರೂರಿಸುತ್ತಿರಲ್ಲ....

ನೋಡಿ ಆಯಿತು. ಇನ್ನು ಸುಮ್ಮನಿರುವುದಕ್ಕಾಗುತ್ತಾ...

Madhu said...

hi Vanitha,
Came here thru your comment on my blog. You too have a very neat blog, loved reading all recipes in Kannada. I'll be coming here more often now.
About your query, you can find both wheat germ, flaxseeds ina whole food or natural food stores.
But you'll find flaxseeds as whole seeds, you have grind and make powdered yourself, its very easy.
If you happen to know any Kannada names for Wheat germ, please do let me know.
Thanks..

manamukta said...

ವನಿತಾ ಅವರೆ,

ಖರ್ಜೂರ ಹಾಗೂ ಬಾಳೆಹಣ್ಣಿನ ರುಚಿಕರ ಕೇಕ್ ಗಳನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

Ruchi Ruchi Adige said...

@ Vanitha..
Cake thumba laayika bayindu.. aanu 2 sarthi try maadi astu laayika bandittille... :( Innodari maaduvaga ninna recipe try maadthe... :)

ಜಲನಯನ said...

Vanita..neenu idono heli nanage matte adige mane kade odisbeda...aitaa?? nannavalu idanna nodidroo kasta..matte I will be exptl animal aagi bidteeni....hahaha

ವನಿತಾ / Vanitha said...

ಶಿವು..ಡಯಟಿಂಗ್ ಜೊತೆಗೆ ಸ್ವಲ್ಪ ಕೇಕ್ ತಿನ್ನಿ, ಏನು ಆಗಲ್ಲ..

Thanks Madhu for visiting my blog and for ur appreciation..:)

ಥ್ಯಾಂಕ್ಸ್ ಮನಮುಕ್ತ.

ಥ್ಯಾಂಕ್ಸ್ ವೇಣಿ, ಟ್ರೈ ಮಾಡಿ ಹೇಳು, I am sure this time u will not go wrong.gudluck dear:)


ಅಜಾದ್ ಸರ್, ನೀವು ಕಿಚೆನ್ ಗೆ ಹೋದ್ರೆ
ನಿಮ್ಮನೆಯವರಿಗೆ ತುಂಬಾ ಸಂತಸ ವಾಗಬಹುದು.so try ಮಾಡ್ತೀರಲ್ಲಾ..?

Ramya Manja said...

Hey Vanita,First timer to ur blog,kannada dalli blog nodi tumba kushi aythu,looks like some one close to us is sharing their cooking ventures.....Cake looks delicous and sounds as well.....

I will be here more often since I am following u....

ಸವಿಗನಸು said...

ವನಿತಾ,

ಅಬ್ಬಾ! ಹೊಟ್ಟೆ ಹಸಿವು ಆಗುತ್ತಿರುವಾಗಲೆ ನಿಮ್ಮ ಬ್ಲಾಗ್ ನೋಡಿದೆ....ಬಾಯಲ್ಲಿ ನೀರು ಬರಿಸುವ ಆಗಿದೆ ನಿಮ್ಮ ಬ್ಲಾಗು....
ನಮ್ಮಂಥಹ ಬೋಜನಪ್ರಿಯರಿಗೆ ಹೇಳಿ ಮಾಡಿಸಿದ ಬ್ಲಾಗ್ ಇದು....
ಇಷ್ಟು ದಿನ ನೋಡದೆ ಮಿಸ್ ಮಾಡಿಕೊಂಡಿದ್ದೆ....
ಚೆನ್ನಾಗಿದೆ...

ವನಿತಾ / Vanitha said...

Thank you my dear friends:-)

Jayalaxmi said...

Hi Vanitha,

I came through your blog searching for recipes but unfortunately I am unable to read kannada though i can understand and speak a bit but born and bought up in mumbai, your cakes seems to very interesting and delicious, just would like to suggest give a language translation links so that it could help people like me. Thanks,