My photo
ಕರಾವಳಿ ಹುಡುಗಿ :)

Wednesday, February 17, 2010

Baghare Baingan

ಜೋಳದ ರೊಟ್ಟಿ ಹಾಗು ಎಣ್ಣೆಗಾಯಿ ನನ್ನ ಫೇವರಿಟ್ ಡಿಶ್ ಗಳಲ್ಲೊಂದು. ಎಣ್ಣೆಗಾಯಿ ಮಾಡಲು ಸಮಯ ತೆಗೆದುಕೊಳ್ಳುತ್ತದೆ, ಆದರೆ ಎಣ್ಣೆಗಾಯಿಯಷ್ಟೇ ರುಚಿಯಾಗಿರುವ Baghare Baingan ಮಾಡಲು ತುಂಬಾ ಸುಲಭ. ಇದು ಒಂದು ಹೈದರಾಬಾದಿ ಡಿಶ್.
(Recipe source: Monsoonspice.com)


ಬೇಕಾಗುವ ಸಾಮಗ್ರಿಗಳು:
ಸಣ್ಣ ಬದನೇಕಾಯಿ- 6
ಎಣ್ಣೆ - 4 ಟೇಬಲ್ ಚಮಚ
ಈರುಳ್ಳಿ - 1 ಕಪ್ (ಸಣ್ಣಗೆ ಹೆಚ್ಚಿ)
ತೆಂಗಿನಕಾಯಿ
ತುರಿ - 1/2 ಕಪ್
ನೆಲಗಡಲೆ - 2 ಟೇಬಲ್ ಚಮಚ
ಎಳ್ಳು - 1 ಚಮಚ
ಕೊತಂಬರಿ ಬೀಜ - 1 ಚಮಚ
ಹಳದಿ ಪುಡಿ - ಸ್ವಲ್ಪ
ಬ್ಯಾಡಗಿ ಮೆಣಸು - 6-8 (ಖಾರಕ್ಕೆ ತಕ್ಕಂತೆ)
ಗೋಡಂಬಿ- 10 (optional)
ಬೆಲ್ಲ ಪುಡಿ - 1 ಚಮಚ
ಉಪ್ಪು - ರುಚಿಗೆ ತಕ್ಕಂತೆ
ಹುಣಸೆ ರಸ - ಸಣ್ಣ ನಿಂಬೆ ಗಾತ್ರದ ಹುಣಸೆ ಹಣ್ಣಿನಿಂದ ತೆಗೆದು
ಒಗ್ಗರಣೆಗೆ - ಎಣ್ಣೆ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು

ಮಾಡುವ ವಿಧಾನ:
ಬದನೆಕಾಯಿಯನ್ನು ತೊಳೆದು ಒರೆಸಿಕೊಂಡು ‘+’ ಆಕಾರದಲ್ಲಿ ಮುಕ್ಕಾಲು ಭಾಗದ ವರೆಗೆ ಸೀಳಿ.
ಒಂದು ಬಾಣಲೆಯಲ್ಲಿ ಅರ್ಧ ಚಮಚ ಎಣ್ಣೆ ಹಾಕಿಕೊಂಡು ಕೊತ್ತಂಬರಿ, ಎಳ್ಳು, ಮೆಣಸನ್ನು ಒಂದೊಂದಾಗಿ ಹುರಿದು ತೆಗೆದಿಡಿ.
ನಂತರ ಇದೇ ಪಾತ್ರೆಯಲ್ಲಿ ನೆಲಗಡಲೆ ಹಾಗು ಗೋಡಂಬಿ ಹಾಕಿ ಹುರಿದಿಟ್ಟುಕೊಳ್ಳಿ. ಕೊನೆಯಲ್ಲಿ ತೆಂಗಿನ ತುರಿಯನ್ನು ಸೇರಿಸಿಕೊಂಡು ಸ್ವಲ್ಪ ಕೆಂಪಗೆ ಬರುವ ವರೆಗೆ ಹುರಿದುಕೊಳ್ಳಿ.
ಎಲ್ಲಾ ಮಸಾಲೆ ಸಾಮಗ್ರಿಗಳನ್ನು ಸೇರಿಸಿಕೊಂಡು ಮಿಕ್ಸಿಯಲ್ಲಿ ಬೇಕಾದಷ್ಟು ನೀರು ಸೇರಿಸಿಕೊಂಡು ರುಬ್ಬಿಕೊಳ್ಳಿ.


ಈಗ ಬಾಣಲೆಯಲ್ಲಿ 2 ಟೇಬಲ್ ಚಮಚ ಎಣ್ಣೆಯೊಂದಿಗೆ ಸೀಳಿದ ಬದನೆಕಾಯಿಯನ್ನು ಸಣ್ಣ ಉರಿಯಲ್ಲಿ ಮಗುಚುತ್ತಾ ಹುರಿದು (15-20 ನಿಮಿಷ) ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ.

ಈಗ
ಒಗ್ಗರಣೆ ಸೇರಿಸಿಕೊಂಡು, ಈರುಳ್ಳಿ ಯನ್ನು ಚೆನ್ನಾಗಿ ಹುರಿದು, ಮಸಾಲೆ ಹಾಗು ಬೇಕಾದಷ್ಟು ನೀರು ಸೇರಿಸಿಕೊಂಡು ಸಣ್ಣ ಉರಿಯಲ್ಲಿ 10 ನಿಮಿಷ ಕುದಿಸಿರಿ. ಇದಕ್ಕೆ ಹುರಿದಿಟ್ಟ ಬದನೆಕಾಯಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ರಸ, ಬೆಲ್ಲ ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷ ಕುದಿಸಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
ಇದನ್ನು ಚಪಾತಿ
, ರೊಟ್ಟಿ, ಅಥವಾ ಅನ್ನದೊಂದಿಗೆ ತಿನ್ನಬಹುದು.

14 comments:

ಸವಿಗನಸು said...

ವನಿತಾ,
ಜೋಳದ ರೊಟ್ಟಿ ಎಣ್ಣೆಗಾಯಿ ನನಗೂ ಸಹ ಫೇವರಿಟ್......
ಚಿತ್ರ ನೋಡಿ ಬಾಯಲ್ಲಿ ನೀರು ಬಂತು...
ಚೆನ್ನಾಗಿದೆ...

ಚುಕ್ಕಿಚಿತ್ತಾರ said...

ಈ ಭಾನುವಾರ ಇದೇ ಅಡುಗೆ ನನ್ನದು ವನಿತಾ ಅವರೆ...!ಥ್ಯಾ೦ಕ್ಸ್.

V.R.BHAT said...

ಬಾಯಲ್ಲಿ ನೀರು ಬರ್ತಾ ಇದೆ !

ಮನಮುಕ್ತಾ said...

ವನಿತಾ ಅವರೆ,
’Baghare baingan’ ರುಚಿಕರವಾದ ಡಿಶ್ ತೋರಿಸಿಕೊಟ್ಟಿದ್ದೀರಿ.ಧನ್ಯವಾದಗಳು.
ರಸಗುಲ್ಲಾ ರೆಸಿಪಿ ಇದ್ದರೆ ನಿಮ್ಮ ಮು೦ದಿನ ಸ೦ಚಿಕೆಯಲ್ಲಿ ದಯವಿಟ್ಟು ತಿಳಿಸಿ ಕೊಡಿ.
ನಾನು ಮಾಡಿದಾಗ,ಉ೦ಡೆಗಳು ಸಕ್ಕರೆ ಪಾಕ ಚೆನ್ನಾಗಿ ಹೀರಿಕೊ೦ಡರೂ ಸರಿಯಾದ ಆಕಾರ ಬರಲಿಲ್ಲ.
ವ೦ದನೆಗಳು.

FH said...

I am salivating too, looks so delicious. Wish i had some akki rotti now!:)

Kannada Cuisine said...

Love it...

ವನಿತಾ / Vanitha said...

ಮಹೇಶಣ್ಣ, ವಿಜಯಶ್ರೀ (ಚುಕ್ಕಿಚಿತ್ತಾರ),ಮನಮುಕ್ತಾ, ವಿ. ಆರ್. ಭಟ್, ಆಶಾ ಮತ್ತು ಸ್ಮಿತಾ...ನಿಮ್ಮೆಲ್ಲ ಪ್ರತಿಕ್ರಿಯೆಗೆ ಥ್ಯಾಂಕ್ಸ್.
@ಮನಮುಕ್ತಾ..ನಾನು ರಸಗುಲ್ಲ ಟ್ರೈ ಮಾಡಿಲ್ಲ.ಜೈ ಹೋ ಹಲ್ದಿರಾಮ್ ರಸಗುಲ್ಲ !!!

Rashmi said...

Wow Vanitha,

Bayalli neeru barta ide photo nodi....aadare nanige sanna badanekayi sigodilla illi :(, tumba ruchiyagide nimma baghare baingan :)

shivu.k said...

ವನಿತಾ,

ಎಣಗಾಯಿ ನನ್ನ ಫೇವರೇಟ್. ಅದೇ ತರಹದ ಹೊಸ ರೆಸಿಪಿಕೊಟ್ಟಿದ್ದಕ್ಕೆ ಧನ್ಯವಾದಗಳು.

Manasa said...

Vanita,

chitra nodi bayalli nir baroke shuru aayatu ree.. India bittanginda yeNagaayi tinde illa.. receipe kottiddiraa weekend try madatinree... Thanks

ಸಾಗರದಾಚೆಯ ಇಂಚರ said...

Vanita madam\

namge yavaaga manege karetiraa,
nimma barahadindane baayalli neeru bartaa ide

ARUNA said...

Bagara baingan looks yumm!

Rekha said...

eegle madkondu thinbekyu ansuthe.

ವನಿತಾ / Vanitha said...

Thanks a lot my dear friends for you sweet words:)