My photo
ಕರಾವಳಿ ಹುಡುಗಿ :)

Tuesday, April 20, 2010

ಐಸ್ ಕ್ಯಾಂಡಿ ಮತ್ತು ಫ್ರುಟ್ ಚಾಟ್/ ICE CANDY AND FRUIT CHAT FOR SUMMER

Summer ಅಂದ್ರೆ ನೆನಪಾಗುವುದು ಏನಾರೂ ತಣ್ಣಗೆ ತಿನ್ನಲು ಅಥವಾ ಕುಡಿಯಲು.., ಸೊ ಸುಲಭವಾಗಿ ಮಾಡಬಹುದಾದ ಐಸ್ ಕ್ಯಾಂಡಿ ಮತ್ತು ಫ್ರುಟ್-ಚಾಟ್ ಇಲ್ಲಿದೆ.
ಮಕ್ಕಳಿಗೆ ನೀರು/ ಹಾಲು / ಜ್ಯೂಸ್ ಕುಡಿಯಲು ಕೊಟ್ಟರೆ ಅಷ್ಟಾಗಿ ಇಷ್ಟವಿರುವುದಿಲ್ಲ..ಅದೇ ಈ ಐಸ್ ಕ್ಯಾಂಡಿಯನ್ನು ನಿಮಿಷದಲ್ಲಿ ಖಾಲಿ ಮಾಡುತ್ತಾರೆ.

ಮನೆಯಲ್ಲಿರಬಹುದಾದ ಯಾವುದಾದರೂ ಫ್ರೆಶ್ ಜ್ಯೂಸ್ ಗೆ (Tropicana Orange juice / Mango juice- 2 ಗ್ಲಾಸ್ ನಷ್ಟು ) ಸ್ವಲ್ಪ ನೀರು ಸೇರಿಸಿ (½ ಗ್ಲಾಸ್) 4-5 ಚಮಚ ಸಕ್ಕರೆ ಸೇರಿಸಿ, ಒಂದು ಸಣ್ಣಗಿನ ಕಪ್/ ಗ್ಲಾಸ್ / ಅಥವಾ ಐಸ್ ಕ್ಯಾಂಡಿಯ ಅಚ್ಚಿ (mould)ನಲ್ಲಿ ಹಾಕಿ ಮಧ್ಯ ಒಂದು ಕಡ್ಡಿ ಇಟ್ಟು ಫ್ರೀಜರ್ ನಲ್ಲಿ 8-10 ಗಂಟೆ ಗಟ್ಟಿಯಾಗಲು ಬಿಡಿ. ಬೇಕಾದಾಗ ಹದ ಬಿಸಿಯ ಗ್ಲಾಸ್ ನೀರಿನಲ್ಲಿ 1-2 ನಿಮಿಷ ಇಟ್ಟು ನಂತರ ತೆಗೆದು ತಿನ್ನಲು ಕೊಡಿ.


ಇದೇ ರೀತಿ ಹಾಲನ್ನು ಸ್ವಲ್ಪ ಕುದಿಸಿ, ಅದಕ್ಕೆ ಪುಡಿ ಮಾಡಿದ ಗೋಡಂಬಿ, ಬಾದಾಮಿ ಹಾಕಿದರೆ ರುಚಿಯಾದ ಕುಲ್ಫಿ ಸಿದ್ದ.


ಅಲ್ಲಿಗೆ ಮಕ್ಕಳಿಗೆ ಬೇಕಾದ ಹಾಲು / ನೀರು/ ಜ್ಯೂಸ್ ಜೊತೆಗೆ ವಿಟಮಿನ್ - ಸಿ, ಕ್ಯಾಲ್ಸಿಯಂ, ಏನು ಬೇಕೋ ಎಲ್ಲ ಸಿಗುತ್ತದೆ. ಜೊತೆಗೆ ಅಮ್ಮನಿಗೆ ಕೂಡ ಇಷ್ಟದ ಕ್ಯಾಂಡಿ ಮಾಡಿಕೊಟ್ಟಿದ್ದಕ್ಕೆ ಒಂದು ಸ್ವೀಟ್ HUG ಕೂಡ.



ನಾಯಿ ಕೂಡ ಐಸ್ ಕ್ಯಾಂಡಿ ತಿನ್ನುತ್ತವೆ ಗೊತ್ತಾ.. ಬೆಂಗಳೂರಿನ ಅಕ್ಕನ ಮನೆಯ ನಾಯಿಮರಿಗೆ ಐಸ್ ಕ್ಯಾಂಡಿ ಬಲು ಇಷ್ಟ..


FRUIT CHAT
ಹಣ್ಣುಗಳು - Apple, Orange, Strawberry, Grapes, Pineapple, southekaayi……..
ಎಲ್ಲ ಹಣ್ಣುಗಳನ್ನು ತುಂಡು ಮಾಡಿಕೊಂಡು ಇದರ ಮೇಲೆ ಒಂದು ಚಮಚ ಚಾಟ್ ಮಸಾಲ ಬೆರೆಸಿ ತಿನ್ನಲು ಕೊಡಿ.



17 comments:

Krishnaveni said...

Hey candy noduvaga baayili neeru batthu.... looks very nice..:) Enage thumba ista aa 50 paise candy indialli road side illi maarthavalla..:)

Hey ninage candy acchu elli sikitthu.. Indianda thandada?

ಮನಮುಕ್ತಾ said...

ನಿಮ್ಮ ಫ್ರುಟ್ ಚಾಟ್ ಹಿಡಿಸಿತು.ಕ್ಯಾ೦ಡಿ ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ.ಮಾಡುತ್ತಿರುತ್ತೇನೆ.

Unknown said...

Nice way to beat the heat.. candy and milk ice cream looks yum..with very easy recipe.
My little one loved the shot of dog eating ice...

ತೇಜಸ್ವಿನಿ ಹೆಗಡೆ said...

ನನ್ನ ಪುಟ್ಟಿಗೆ ಮಾಡಿಕೊಡುವೆ.. :) ಧನ್ಯವಾದಗಳು.

ಸಾಗರದಾಚೆಯ ಇಂಚರ said...

ವನಿತಾ
ನಮ್ಮ ಬಾಯಲ್ಲಿಯೂ ನೀರು ಬಂತು
ಆದರೆ ಇಲ್ಲಿನ ಚಳಿಗೆ ಕ್ಯಾಂಡಿ ತಿನ್ನಲು ಇನ್ನು ೨ ತಿಂಗಳು ಕಾಯಬೇಕು :)

ಮನಸಿನಮನೆಯವನು said...

-->ವನಿತಾ / Vanitha,

ಹ! ಹ ! ಕ್ಯಾಂಡಿ..
ತುಂಬಾ ಧಗೆ ಇದೆ,
ಕ್ಯಾಂಡಿ ಮುಖಪುಟದಲ್ಲಿದೆ.

ಜಲನಯನ said...

ವನಿತಾ...ಇದ್ಯಾಕೋ ಆಂಟಿ ಕ್ಲೈಮಾಕ್ಸ್ ಆಯ್ತು...ಹಹಹ aunty...not Anti.... ನಾಯಿಗೂ ಇಷ್ಟ ಅನ್ನೋದು ತೋರಿಸೋಕಾ...ಹಹಹಹ...

shivu.k said...

ವನಿತಾ,

ನನಗೇ ನಿಮ್ಮ ಐಸ್ ಕ್ಯಾಂಡಿ ರೆಸಿಪಿ ನೋಡಿ ಬಾಲ್ಯ ನೆನಪಾಯಿತು. ಈಗೆಲ್ಲಾ ಅಂತವನ್ನು ತಿನ್ನದೇ ಸ್ಟೈಲಾಗಿ ಕಪ್‍ನಲ್ಲಿ ತಿನ್ನುತ್ತೇವಲ್ಲ...ನಾಯಿ ಐಸ್ ಇಷ್ಟಪಡುವುದು ನಿಜಕ್ಕೂ ಅಚ್ಚರಿಯೇ!

ಸೀತಾರಾಮ. ಕೆ. / SITARAM.K said...

nice recipe

Badarinath Palavalli said...

ಓದಿ ಹಸಿವಾಗುತಿದೆ!

madam,

Nice, writing...

Pl. visit my Kanada Poety Blog:
www.badari-poems.blogspot.com

- Badarinath Palavalli

shruthi said...

hi vani, visitng your blog after sometime. Liked the idea on Kulfi.
Very cool :)

ದೀಪಸ್ಮಿತಾ said...

ನೋಡಿದರೆ ಬಾಯಲ್ಲಿ ನೀರೂರಿಸುತ್ತಿದೆ ನಿಮ್ಮ ಫೋಟೋಗಳು

ವನಿತಾ / Vanitha said...

Veni..nangoo candy ishta..adu 50 paisege gadbad:)

@ಮನಮುಕ್ತಾ thanks..:)

Madhu..thanks..Hogs to ur lil one:)

@ತೇಜಸ್ವಿನಿ ಹೆಗಡೆ..ನನ್ ಪ್ರಪಂಚಕ್ಕೆ ಸ್ವಾಗತ :)
ಗುರುಮೂರ್ತಿ, !! ಜ್ಞಾನಾರ್ಪಣಾಮಸ್ತು , ಆಜಾದ್ ಸರ್,
ಸೀತಾರಾಮ್ ಸರ್, ದೀಪಸ್ಮಿತ ----ಥ್ಯಾಂಕ್ಸ್


Thank you my dear friends:)

ವನಿತಾ / Vanitha said...

Shruti..glad you are back,.keep visiting:)

ಶಿವು,ಕಪ್ ನಲ್ಲಿ ತಿಂದರೆ ಕ್ಯಾಂಡಿ ರುಚಿ ಬರಲ್ಲ ಅಲ್ವೇ!!
ಆ ನಾಯಿಮರಿಗೆ ಐಸ್ಕ್ರೀಂ,Chocolates,ಕ್ಯಾಂಡಿ..(ಮಕ್ಕಳಿಗೆ ಏನು ಇಷ್ಟ ಆಗತ್ತೋ ಅದೆಲ್ಲವೂ..) ಬಹಳ ಇಷ್ಟ..ಆದ್ರೆ ಜಾಸ್ತಿ ಕೊಡಬಾರದಂತೆ :(

ವನಿತಾ / Vanitha said...

Thanks Badarinath Palavalli for visiting nan-prapancha:)

ವಾಣಿಶ್ರೀ ಭಟ್ said...

modala barige nimma blog nodidaga tumba aasharya ayitu.. tumba sundara vaagide...

ವನಿತಾ / Vanitha said...

Thanks Vanishree:))