Wednesday, September 15, 2010
ಥ್ಯಾಂಕ್ಸ್ 'ಸುಧಾ'
(http://www.sudhaezine.com/pdf/2010/09/16/20100916a_072101.pdf)
Sunday, September 5, 2010
ಹಬ್ಬಕ್ಕೆ ಎರಡು ದಿಢೀರ್ ಸ್ವೀಟ್ಸ್ (ಗೋಧಿ ಪುಡಿ ಹಲ್ವ ಮತ್ತು ಖರ್ಜೂರ ಪಾಯಸ / Wheat flour Halwa and Dates Payasa)
ಗೋಧಿಪುಡಿ ಹಲ್ವ
ಬೇಕಾಗುವ ಸಾಮಗ್ರಿಗಳು:
ಗೋಧಿ ಪುಡಿ - 1 ಕಪ್
ಸಕ್ಕರೆ - 1 ಕಪ್
ಹಾಲು - 1 ಕಪ್
ತುಪ್ಪ - ¼ ಕಪ್
ಏಲಕ್ಕಿ ಪುಡಿ - 1 ಚಮಚ
ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ಇದಕ್ಕೆ ಗೋಧಿಪುಡಿಯನ್ನು ಸೇರಿಸಿ, ಸಣ್ಣ ಉರಿಯಲ್ಲಿ ಕೆಂಬಣ್ಣ ಬರುವ ತನಕ (15-20 ನಿಮಿಷ) ಹುರಿಯಿರಿ. ನಂತರ ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಕೊನೆಯಲ್ಲಿ ಹಾಲು ಸೇರಿಸಿ. ಈ ಮಿಶ್ರಣ ತಳ ಬಿಡುವಾಗ (5 ನಿಮಿಷ) ಒಂದು ತುಪ್ಪ ಸವರಿದ ಪ್ಲೇಟ್ ಗೆ ಹಾಕಿ ಸ್ವಲ್ಪ ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ತುಂಡು ಮಾಡಿ. ಮೇಲಿನಿಂದ ಗೋಡಂಬಿ-ಬಾದಾಮಿ ಪೌಡರ್ ನ್ನು ಉದುರಿಸಿ ಅಥವಾ ಇಡೀ ಗೋಡಂಬಿಯಿಂದ ಅಲಂಕರಿಸಿ.
ಖರ್ಜೂರ ಪಾಯಸ
ಬೇಕಾಗುವ ಸಾಮಗ್ರಿಗಳು:
ಖರ್ಜೂರ - 15
ತೆಂಗಿನ ಹಾಲು - 3 ಕಪ್ (½ ತೆಂಗಿನಕಾಯಿಯನ್ನು ತುರಿದು ನೀರು ಸೇರಿಸಿಕೊಂಡು ಮಿಕ್ಸಿಯಲ್ಲಿ ರುಬ್ಬಿ, ಹಾಲನ್ನು ಹಿಂಡಿ ತೆಗೆಯಿರಿ. ಪುನ ಇದಕ್ಕೆ ನೀರು ಸೇರಿಸಿ ಇನ್ನೊಮ್ಮೆ ಹಾಲು ತೆಗೆದಿಡಿ.)
ಸಕ್ಕರೆ ಅಥವಾ ಬೆಲ್ಲ - ½ ಕಪ್ (ಸಿಹಿಗೆ ತಕ್ಕಂತೆ)
ಏಲಕ್ಕಿ ಪುಡಿ - 1 ಚಮಚ
ಖರ್ಜೂರದ ಬೀಜ ತೆಗೆದು ಸಣ್ಣಗೆ ತುಂಡು ಮಾಡಿಕೊಂಡು ಅರ್ಧ ಕಪ್ ನೀರಿನಲ್ಲಿ 5 ನಿಮಿಷ ಕುದಿಸಿರಿ. ತಣ್ಣಗಾದ ನಂತರ ಇದನ್ನು ಮಿಕ್ಸಿಯಲ್ಲಿ ರುಬ್ಬಿ. ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಇದಕ್ಕೆ ತೆಂಗಿನ ಹಾಲು ಮತ್ತು ಸಕ್ಕರೆ ಸೇರಿಸಿ 5 ನಿಮಿಷ ಹದ ಉರಿಯಲ್ಲಿ ಕುದಿಸಿರಿ. ಕೊನೆಯಲ್ಲಿ ಏಲಕ್ಕಿಪುಡಿ ಹಾಗು ತುಪ್ಪದಲ್ಲಿ ಹುರಿದ ಗೋಡಂಬಿ ಹಾಗು ಒಣ ದ್ರಾಕ್ಷೆಯನ್ನು ಸೇರಿಸಿ, ಬಿಸಿ ಅಥವಾ ತಣ್ಣಗಾದ ನಂತರ ಸವಿಯಲು ಕೊಡಿ. ಪಾಯಸ ಗಟ್ಟಿಯಾಗಿದ್ದರೆ, ಕೊನೆಯಲ್ಲಿ ½ - 1 ಕಪ್ ಹಾಲು ಕೂಡ ಸೇರಿಸಬಹುದು.ಈ ಎರಡು ಸ್ವೀಟ್ಸ್ಗಳನ್ನು ಮಾಡಲು ತುಂಬಾ ಸುಲಭ ಹಾಗೂ ಕಡಿಮೆ ಸಮಯದಲ್ಲಿ ಮಾಡಬಹುದು.
Recipe source: Vidyakka
ನನ್- ಪ್ರಪಂಚದ ಓದುಗರೆಲ್ಲರಿಗೂ ಗೌರಿ - ಗಣೇಶ ಹಬ್ಬದ ಶುಭಾಶಯಗಳೊಂದಿಗೆ,
ವನಿತಾ.