My photo
ಕರಾವಳಿ ಹುಡುಗಿ :)
Showing posts with label ಗೊಜ್ಜು/ Gojju. Show all posts
Showing posts with label ಗೊಜ್ಜು/ Gojju. Show all posts

Sunday, January 24, 2010

ಹಾಗಲಕಾಯಿ ಗೊಜ್ಜು / BITTERGOURD GOJJU


ಹಾಗಲಕಾಯಿ - 1
ಉಪ್ಪು - 1 ಟೇಬಲ್ ಚಮಚ
ಸಕ್ಕರೆ - 4-5 ಚಮಚ
ಮೆಣಸಿನ ಪುಡಿ (ಬ್ಯಾಡಗಿ) - 1 ಚಮಚ
ಮೆಂತೆ ಪುಡಿ - ¼ ಚಮಚ (ಮೆಂತೆಯನ್ನು ಎಣ್ಣೆ ಹಾಕದೆ ಹುರಿದು ಪುಡಿ ಮಾಡಿ)

ಹಳದಿ ಪುಡಿ - ¼ ಚಮಚ
ಎಣ್ಣೆ - 4 ಟೇಬಲ್ ಚಮಚ
ಹುಣಸೆ ರಸ - 4 ಚಮಚ (ಲಿಂಬೆ ಗಾತ್ರದ ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ ರಸ ತೆಗೆದಿಟ್ಟುಕೊಳ್ಳಿ)
ಒಗ್ಗರಣೆಗೆ :

ಸಾಸಿವೆ - ¼ ಚಮಚ

ಕರಿಬೇವು 5-6 ಎಲೆ

ಹಿಂಗು - ಚಿಟಿಕೆ

ಮಾಡುವ ವಿಧಾನ:

ಹಾಗಲಕಾಯಿಯನ್ನು ತೊಳೆದುಕೊಂಡು ಎರಡು ಭಾಗ ಮಾಡಿ, ಬೀಜವನ್ನು ತೆಗೆದು, ಹಾಗಲಕಾಯಿಯನ್ನು ಸಾಧ್ಯವಾದಷ್ಟು ಸಣ್ಣಗೆ ಹೆಚ್ಚಿ. ಈ ತುಂಡುಗಳಿಗೆ ಉಪ್ಪು ಸೇರಿಸಿ ಒಂದು ಗಂಟೆ ಮುಚ್ಚಿಡಿ. ನಂತರ ಇದನ್ನು ಚೆನ್ನಾಗಿ ಹಿಂಡಿ ರಸವನ್ನೆಲ್ಲ ಬೇರ್ಪಡಿಸಿ.
ಒಂದು ಪಾತ್ರೆಯಲ್ಲಿ ಅರ್ಧ ಎಣ್ಣೆ ಹಾಕಿಕೊಂಡು ಹಾಗಲಕಾಯಿಯನ್ನು ಚೆನ್ನಾಗಿ ಮಗುಚುತ್ತಾ, 10-15 ನಿಮಿಷ crisp ಆಗುವ ತನಕ ಹುರಿಯಿರಿ. ಈಗ ಇನ್ನೊಂದು ಪಾತ್ರೆಯಲ್ಲಿ ಉಳಿದ ಎಣ್ಣೆಯನ್ನು ಹಾಕಿಕೊಂಡು ಒಗ್ಗರಣೆ ಮಾಡಿಕೊಂಡು, ಈರುಳ್ಳಿ ಯನ್ನು ಸೇರಿಸಿ ಕೆಂಪಗಾಗುವ ತನಕ (10 ನಿಮಿಷ) ಹುರಿದುಕೊಂಡು, ಹಳದಿ ಪುಡಿ, ಮೆಂತ್ಯದ ಪುಡಿ, ಹಾಗು ಮೆಣಸಿನ ಪುಡಿ ಸೇರಿಸಿ ಒಂದು ನಿಮಿಷ ಹುರಿದುಕೊಳ್ಳಿ. ನಂತರ ಹುರಿದ ಹಾಗಲ ಕಾಯಿ, ಸಕ್ಕರೆ, ಹುಣಸೆ ರಸ ಹಾಕಿ 5-10 ನಿಮಿಷ ಸಣ್ಣ ಉರಿಯಲ್ಲಿ ನೀರಿನಂಶ ಆರುವ ತನಕ ಕುದಿಸಿರಿ. ಈ ಹಂತದಲ್ಲಿ ರುಚಿ ನೋಡಿಕೊಂಡು ಬೇಕಿದ್ದರೆ
ಸಕ್ಕರೆ, ಉಪ್ಪು ಸೇರಿಸಿಕೊಳ್ಳಿ.
ಈ ಗೊಜ್ಜು ಮೊಸರನ್ನದೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

Sunday, July 12, 2009

ಮಾವಿನಹಣ್ಣು ಗೊಜ್ಜು / MANGO GOJJU

ಬೇಕಾಗುವ ಸಾಮಗ್ರಿಗಳು:
ಮಾವಿನಹಣ್ಣು - 2-3 (ಇದಕ್ಕೆ ಸ್ವಲ್ಪ ಹುಳಿಯಾಗಿರುವ ಮಾವಿನ ಹಣ್ಣು ಉಪಯೋಗಿಸಿದರೆ ತುಂಬ ರುಚಿಯಾಗುತ್ತದೆ).
ಹಸಿಮೆಣಸು - 1
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - ಸ್ವಲ್ಪ
ಒಗ್ಗರಣೆಗೆ :- ಎಣ್ಣೆ- 1 ಚಮಚ, ಸಾಸಿವೆ, ಸ್ವಲ್ಪ ಇಂಗು, ಕರಿಬೇವು, ಕೆಂಪು ಮೆಣಸು-1.

ಮಾವಿನಹಣ್ಣನ್ನು ಕುದಿಯುವ ನೀರಿನಲ್ಲಿ 10 ನಿಮಿಷ ಬೇಯಿಸಿಕೊಳ್ಳಿ. ನಂತರ ಮಾವಿನ ಹಣ್ಣಿನ ಸಿಪ್ಪೆಯನ್ನು ಬೇರ್ಪಡಿಸಿ, ಹಣ್ಣನ್ನು ಚೆನ್ನಾಗಿ ಕೈಯಿಂದ ಹಿಚುಕಬೇಕು. ಇದಕ್ಕೆ ಹೆಚ್ಚಿದ ಹಸಿಮೆಣಸು, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಗು 1/4 ಗ್ಲಾಸ್ ನೀರುಸೇರಿಸಿ 5 ನಿಮಿಷ ಕುದಿಸಬೇಕು. ಕೊನೆಯಲ್ಲಿ ಒಗ್ಗರಣೆ ಕೊಟ್ಟರೆ, ರುಚಿಯಾದ ಗೊಜ್ಜು ಸಿದ್ದ. ಮಾವಿನ ಹಣ್ಣಿನ ಗೊಜ್ಜನ್ನು ಅನ್ನದೊಂದಿಗೆ ತಿನ್ನಲು ರುಚಿ.

Friday, December 19, 2008

ಬದನೆಕಾಯಿ ಗೊಜ್ಜು / BRINJAL GOJJU / BAINGAN BARTHA


ಬೇಕಾಗುವ ಸಾಮಗ್ರಿಗಳು:

ಗುಳ್ಳ ಬದನೆ - 1
ಈರುಳ್ಳಿ (ಸಣ್ಣಗೆ ಹೆಚ್ಚಿದ್ದು) - 1 ಕಪ್
ಹಸಿ ಮೆಣಸು- 2 (ಸಣ್ಣಗೆ ಸೀಳಿದ್ದು)
ಹುಣಸೆ ಹಣ್ಣಿನ ರಸ- 4 ಚಮಚ
ಬೆಲ್ಲ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 5 ಚಮಚ
ಒಗ್ಗರಣೆಗೆ - ಸ್ವಲ್ಪ ಎಣ್ಣೆ, ಸಾಸಿವೆ, ಹಿಂಗು, ಕರಿಬೇವು, ಬೆಳ್ಳುಳ್ಳಿ
ಬದನೇಕಾಯಿಯನ್ನು ತೊಳೆದುಕೊಂಡು, ಸ್ವಲ್ಪ ಎಣ್ಣೆಯನ್ನು ಸವರಬೇಕು. ನಂತರ ಒಲೆಯ ಕೆಂಡದಲ್ಲಿ ಇಟ್ಟು 5 ನಿಮಿಷಕ್ಕೊಮ್ಮೆ ಬದನೆಕಾಯಿಯ ಬದಿಯನ್ನು ತಿರುಗಿಸುತ್ತಾ ಸಿಪ್ಪೆ ಚೆನ್ನಾಗಿ ಬಾಡುವ ತನಕ ಸುಡಬೇಕು. ಒಲೆ ಇಲ್ಲದಿದ್ದರೆ, ಕಾವಲಿಗೆಯಲ್ಲಿ ಎಣ್ಣೆ ಸವರಿ ಮಾಡಬಹುದು. ಎಲ್ಲಾ ಬದಿಗಳನ್ನು ಸಮವಾಗಿ ಸುಟ್ಟ ನಂತರ, ತಣ್ಣಗೆ ಅದ ಮೇಲೆ, ಸಿಪ್ಪೆಯನ್ನು ಕೈಯಿಂದ ಎಳೆದು ತೆಗೆಯಬೇಕು. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ, ಕೈಯಿಂದ ಅಥವಾ ಸೌಟಿನ ಸಹಾಯದಿಂದ, ಸಣ್ಣಗೆ ಜಜ್ಜಿ, ಬದಿಯಲ್ಲಿಡಿ.
ಇನ್ನು, ಒಂದು ಬಾಣಲೆಗೆ, ಎಣ್ಣೆಯನ್ನು ಹಾಕಿ, ಹಸಿಮೆಣಸು ಸೇರಿಸಿ, ಈರುಳ್ಳಿಯನ್ನು ಚೆನ್ನಾಗಿ ಬಣ್ಣ ಬರುವ ತನಕ ಹುರಿಯಿರಿ. ಕೊನೆಯಲ್ಲಿ ಇದಕ್ಕೆ ಜಜ್ಜಿದ ಬದನೆಕಾಯಿಯನ್ನು ಸೇರಿಸಿ, ಹುಣಸೆ ರಸ, ಸ್ವಲ್ಪ ಬೆಲ್ಲ ಹಾಗು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸಣ್ಣ ಉರಿಯಲ್ಲಿ, 5 ನಿಮಿಷ ಬೇಯಿಸಿರಿ. ಇದಕ್ಕೆ ಒಗ್ಗರಣೆ ಸೇರಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ, ಸವಿಯಲು ಕೊಡಿರಿ.
ಇದನ್ನು ಚಪಾತಿ ಅಥವಾ ಅನ್ನದೊಂದಿಗೆ ಉಪಯೋಗಿಸಬಹುದು.