ಹಾಗಲಕಾಯಿ - 1
ಉಪ್ಪು - 1 ಟೇಬಲ್ ಚಮಚ
ಸಕ್ಕರೆ - 4-5 ಚಮಚ
ಮೆಣಸಿನ ಪುಡಿ (ಬ್ಯಾಡಗಿ) - 1 ಚಮಚ
ಮೆಂತೆ ಪುಡಿ - ¼ ಚಮಚ (ಮೆಂತೆಯನ್ನು ಎಣ್ಣೆ ಹಾಕದೆ ಹುರಿದು ಪುಡಿ ಮಾಡಿ)
ಹಳದಿ ಪುಡಿ - ¼ ಚಮಚ
ಎಣ್ಣೆ - 4 ಟೇಬಲ್ ಚಮಚ
ಹುಣಸೆ ರಸ - 4 ಚಮಚ (ಲಿಂಬೆ ಗಾತ್ರದ ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ ರಸ ತೆಗೆದಿಟ್ಟುಕೊಳ್ಳಿ)
ಒಗ್ಗರಣೆಗೆ :
ಸಾಸಿವೆ - ¼ ಚಮಚ
ಕರಿಬೇವು 5-6 ಎಲೆ
ಹಿಂಗು - ಚಿಟಿಕೆ
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಅರ್ಧ ಎಣ್ಣೆ ಹಾಕಿಕೊಂಡು ಹಾಗಲಕಾಯಿಯನ್ನು ಚೆನ್ನಾಗಿ ಮಗುಚುತ್ತಾ, 10-15 ನಿಮಿಷ crisp ಆಗುವ ತನಕ ಹುರಿಯಿರಿ. ಈಗ ಇನ್ನೊಂದು ಪಾತ್ರೆಯಲ್ಲಿ ಉಳಿದ ಎಣ್ಣೆಯನ್ನು ಹಾಕಿಕೊಂಡು ಒಗ್ಗರಣೆ ಮಾಡಿಕೊಂಡು, ಈರುಳ್ಳಿ ಯನ್ನು ಸೇರಿಸಿ ಕೆಂಪಗಾಗುವ ತನಕ (10 ನಿಮಿಷ) ಹುರಿದುಕೊಂಡು, ಹಳದಿ ಪುಡಿ, ಮೆಂತ್ಯದ ಪುಡಿ, ಹಾಗು ಮೆಣಸಿನ ಪುಡಿ ಸೇರಿಸಿ ಒಂದು ನಿಮಿಷ ಹುರಿದುಕೊಳ್ಳಿ. ನಂತರ ಹುರಿದ ಹಾಗಲ ಕಾಯಿ, ಸಕ್ಕರೆ, ಹುಣಸೆ ರಸ ಹಾಕಿ 5-10 ನಿಮಿಷ ಸಣ್ಣ ಉರಿಯಲ್ಲಿ ನೀರಿನಂಶ ಆರುವ ತನಕ ಕುದಿಸಿರಿ. ಈ ಹಂತದಲ್ಲಿ ರುಚಿ ನೋಡಿಕೊಂಡು ಬೇಕಿದ್ದರೆ ಸಕ್ಕರೆ, ಉಪ್ಪು ಸೇರಿಸಿಕೊಳ್ಳಿ.
ಈ ಗೊಜ್ಜು ಮೊಸರನ್ನದೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.
8 comments:
ವನಿತಾ,
ಹಾಗಲಕಾಯಿ ಎಷ್ಟೊ ಜನ ತಿನ್ನೊಲ್ಲ...ಹೀಗೆ ಮಾಡಿದ್ರೆ ಖಂಡಿತ ತಿನ್ನುತ್ತಾರೆ....
ಚೆಂದದ ವಿವರ....
ವನಿತಾ
ಹಾಗಲಕಾಯಿ ಗೊಜ್ಜು ಮಾಡೋಣವೆಂದರೆ
ಹಾಗಲಕಾಯಿ ಇಲ್ಲಿ ಸಿಗುವುದಿಲ್ಲ
ಇನ್ನೊಮ್ಮೆ ನಿಮ್ಮಲ್ಲಿಗೆ ಬಂದಾಗ ತಿನ್ನುತ್ತೇವೆ :)
Vanitha, it's so wonderful to see your Kannada blog. I would spend sometime today going thru' all the recipes here. I have added to my reader too, I will be checking often. See you every Wednesday at FH too. Thanks for letting me know your place here.
My mom and husband is from around Hasaan and my dad is from around Mysore, so I am familiar with both cooking styles. Brother is in Bangalore. Nice to meet you! :))
Oh forgot, Hagalkai Gojju looks wonderful. I don't get it often but we love it with akki rotti.
Haagalla Kayi Gojju...
hahahaha
ವನಿತಾ,
ಹಾಗಲಕಾಯಿ ಅಂದ್ರೆ ಕಹಿ ಅಂತ ನಾನು ತಿನ್ನೋಲ್ಲ. ನೀವು ಕೊಟ್ಟಿರೋ ರೆಸಿಪಿ ನೋಡಿದ್ರೆ ಒಮ್ಮೆ ಪ್ರಯತ್ನಿಸಬಹುದು ಅನ್ನಿಸುತ್ತೆ...
ವನಿತಾ,
ನೆನ್ನೆ ನೀವು ಹೇಳಿದಂತೆ " ಹಾಗಲಕಾಯಿ ಗೊಜ್ಜು" ಮಾಡಿದ್ದೆ. ಸಕ್ಕರೆ ಬದಲು ಬೆಲ್ಲ ಹಾಕಿದ್ದೆ...ಚೆನ್ನಾಗಿ ಬಂತು. ಇಷ್ಟು ದಿನ ಯಜಮಾನರು ನಾನೇನೇ ಅಡಿಗೆ ಮಾಡಿದರೂ ಅದನ್ನು ಅವರಮ್ಮನ ಅಥವಾ ಅವರಜ್ಜಿಯ ಅಡಿಗೆಗೆ ಹೋಲಿಸುತ್ತಿದ್ದರು. ನೆನ್ನೆ ನನ್ನ ಹಾಗಲಕಾಯಿ ಗೊಜ್ಜಿಗೆ ಪುಲ್ A+ :)
Thanks my dear friends..:)
@Nilgiri..Nimge Special thanks..howdu sakkare/ bella yavudaadroo upayogisabahudu..
Post a Comment