My photo
ಕರಾವಳಿ ಹುಡುಗಿ :)

Saturday, January 16, 2010

ಮ್ಯಾಕರೋನ್ಸ್ / CASHEW MACAROONS


ದಕ್ಷಿಣ ಕನ್ನಡ, ಕಾಸರಗೊಡು ಸಮೀಪ ಬೆಳೆಯಲಾಗುವ ಒಂದು ಪ್ರಮುಖ ವಾಣಿಜ್ಯ ಬೆಳೆ - ಗೇರು.
ಬಾಲ್ಯದಲ್ಲಿ ಗೇರುಹಣ್ಣನ್ನು ಉಪ್ಪು ಹಾಕಿ ತಿನ್ನುವುದೆಂದರೆ ಏನೋ ವಿಶೇಷ ಸಂಬ್ರಮ. ಅಂತೆಯೇ ಮಂಗಳೂರಿನಲ್ಲಿ ಯುಗಾದಿ ಆಚರಣೆಯಲ್ಲಿ ತಯಾರಿಸಲಾಗುವ ಖಾದ್ಯಗಳಲ್ಲಿ ಹಸಿ ಗೋಡಂಬಿ ತಿರುಳಿನಿಂದ ತಯಾರಿಸಲಾಗುವ ಪಲ್ಯ, ಪಾಯಸಗಳಿಗೆ ಪ್ರಮುಖ ಆದ್ಯತೆ.

ಒಣ ಗೋಡಂಬಿಯನ್ನು ಸಿಪ್ಪೆಯಿಂದ ಬೇರ್ಪಡಿಸಲು ಗೇರುಬೀಜವನ್ನು ಮಣ್ಣಿನ ಪಾತ್ರೆಯಲ್ಲಿ ಅಥವಾ ಕೆಂಡದಲ್ಲಿ ಹುರಿಯಬೇಕು. ಇದರ ಸಿಪ್ಪೆಯಿಂದ ಹೊರಸೂಸುವ ಎಣ್ಣೆಯಲ್ಲಿ ಚರ್ಮಕ್ಕೆ allergyಯಾಗುವಂತಹ ಅಸಿಡ್ ಗಳಿರುತ್ತದೆ. ತಣ್ಣಗಾದ ನಂತರ ಗೋಡಂಬಿ ತಿರುಳನ್ನು ಸಿಪ್ಪೆಯಿಂದ ಬೇರ್ಪಡಿಸಬೇಕು. ಈ ರೀತಿ ಬಿಸಿ ಬಿಸಿ ತೆಗೆದ ಗೋಡಂಬಿ ತಿನ್ನಲು ಬಹಳ ರುಚಿ.

ಮಂಗಳೂರಿನ ಬೇಕರಿಗಳಲ್ಲಿ ಈ ಗೋಡಂಬಿ
ಮತ್ತು ಮೊಟ್ಟೆಯಿಂದ ತಯಾರಿಸಲಾಗುವ 'ಮ್ಯಾಕರೋನ್ಸ್ ' (Cashew Macaroons) ಎಂಬ ಸಿಹಿ ತಿಂಡಿ ಬಹಳ ಹೆಸರುವಾಸಿ. ಬಹಳಷ್ಟು ಜನರಿಗೆ ಈ ಸಿಹಿತಿಂಡಿ ಮಾಡಲು ಮೊಟ್ಟೆ ಉಪಯೋಗಿಸುತ್ತಾರೆ ಎಂದು ತಿಳಿದಿರಲಿಕ್ಕಿಲ್ಲ..ಇದನ್ನು ತಯಾರಿಸುವುದು ತುಂಬಾ ಸುಲಭ.

ಬೇಕಾಗುವ ಸಾಮಗ್ರಿಗಳು:
ಮೊಟ್ಟೆಯ ಬಿಳಿ ಭಾಗ - 2 ಮೊಟ್ಟೆಯಿಂದ ಸ್ವಲ್ಪ ಕೂಡ ಹಳದಿ ಭಾಗ ಬರದಂತೆ ಬೇರ್ಪಡಿಸಬೇಕು
ಸಕ್ಕರೆ - 3/4 ಕಪ್
ಗೋಡಂಬಿ - 3/4 ಕಪ್ (ಗೋಡಂಬಿಯನ್ನು ಮಿಕ್ಸಿ ಯಲ್ಲಿ
ಹಾಕಿ ಸ್ವಲ್ಪ ಪುಡಿ ಮಾಡಬೇಕು )
ವೆ
ನಿಲ್ಲ ಎಸ್ಸೆನ್ಸ್ - 1/4 ಚಮಚ
ಲಿಂಬೆ ರಸ -
1/4 ಚಮಚ
ಉಪ್ಪು - ಚಿಟಿಕೆ

ಮಾಡುವ ವಿಧಾನ :

ಒಂದು ಪಾತ್ರೆಗೆ ಲಿಂಬೆ ರಸವನ್ನು ಒಳಗಿನಿಂದ ಸವರಿಕೊಂಡು ಇದರಲ್ಲಿ ಮೊಟ್ಟೆಯ
ಬಿಳಿಭಾಗ
ಮತ್ತು ಚಿಟಿಕೆ ಉಪ್ಪು ಸೇರಿಸಿಕೊಂಡು electric egg beater
ನಲ್ಲಿ low speedನಲ್ಲಿ 2-3 ನಿಮಿಷ ಹಾಗು high speedನಲ್ಲಿ 3ನಿಮಿಷದಷ್ಟು ಮಿಕ್ಸ್ ಮಾಡಿದರೆ, ಈ ಮಿಶ್ರಣವು ದಪ್ಪದ ಹಿಟ್ಟಿನ ಹದಕ್ಕೆ ಬಂದಿರುತ್ತದೆ. ಇದಕ್ಕೆ ಸ್ವಲ್ಪ ಸ್ವಲ್ಪವೇ ಸಕ್ಕರೆ ಸೇರಿಸುತ್ತಾ ಮಿಕ್ಸ್ ಮಾಡಿಕೊಂಡು ಕೊನೆಯಲ್ಲಿ ಗೋಡಂಬಿ ಪುಡಿಯನ್ನು ಸೇರಿಸಿಕೊಂಡು ಒಂದು ಚಮಚದಲ್ಲಿ ನಿದಾನದಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು.
ಒಂದು ಚಮಚದಷ್ಟು ಈ ಮಿಶ್ರಣವನ್ನು ಒಂದು ಬೇಕಿಂಗ್ ಶೀಟ್ ನ ಮೇಲಿಟ್ಟು ಮೊದಲೇ ಆನ್ ಮಾಡಿದ ಓವೆನ್ ನ ಮಧ್ಯದ
rackನಲ್ಲಿಟ್ಟು 325F ನಲ್ಲಿ 15-20 ನಿಮಿಷ ಬೇಯಿಸಿರಿ.
ಓವೆನ್ ನಿಂದ ತೆಗೆದಾಗ ಮ್ಯಾಕರೋನ್ಸ್
ತುಂಬಾ ಸಾಫ್ಟ್ ಆಗಿರುತ್ತದೆ. ಅರ್ಧ ಗಂಟೆಯ ನಂತರ, ಸ್ವಲ್ಪ ತಣ್ಣಗಾದ ಮೇಲೆ ಬೇಕಿಂಗ್ ಶೀಟ್ ನಿಂದ ಬೇರ್ಪಡಿಸಿ ಒಂದು ಡಬ್ಬದಲ್ಲಿ ತುಂಬಿ ಫ್ರಿಜ್ ನಲ್ಲಿಟ್ಟು ಬೇಕಾದಾಗ ಸವಿಯಿರಿ.
ಈ ರೀತಿ 10- 15 ಮ್ಯಾಕರೋನ್
ನ್ನು ಮಾಡಬಹುದು.
ಗೋಡಂಬಿಯ ಬದಲು ನೆಲ ಕಡಲೆ ಕೂಡ
ಉಪಯೋಗಿಸಬಹುದು.

ಉಪಯುಕ್ತ ಮಾಹಿತಿಯುಳ್ಳ ವೆಬ್ ಸೈಟ್ ಗಳು,
Tuticorin Cashew macaroon
coconut macaroons


ನನ್ - ಪ್ರಪಂಚದ ಓದುಗರಿಗೆಲ್ಲ ಹೊಸವರುಷ ಹೊಸ ಹರುಷ ತರಲಿ ಎಂದು ಹಾರೈಸುತ್ತಾ,
ವನಿತಾ.


8 comments:

shivu.k said...

ವನಿತಾ,

ನಾನು ಮಂಗಳೂರು ಅಥವ ಉಡುಪಿಗೆ ಹೋದರೆ ಮ್ಯಾಕರಾನ್ ತರದೇ ಬರುವುದಿಲ್ಲ. ಅಷ್ಟು ರುಚಿಯಾಗಿರುತ್ತದೆ. ಅದರ ರೆಸೆಪಿ ಕೊಟ್ಟಿದ್ದೀರಿ...ಧನ್ಯವಾದಗಳು.

ಸವಿಗನಸು said...

ಹೊಸ ತಿಂಡಿ...
ಗೋಡಂಬಿ ಅಂದರೆ ರುಚಿ ಅಲ್ವ....

Unknown said...

Wow,First time heard of this,looks delicious...

great entry..
njoy blogging n happy cooking....

ವನಿತಾ / Vanitha said...

ನಿಜವಾಗ್ಲೂ ಶಿವು...ಬಾಯಲ್ಲಿ ಹಾಕಿದ ತಕ್ಷಣ ಕರಗುವಂತಹ ಮ್ಯಕರೂನ್ ರುಚಿ ನೋಡಿದ್ರೆ ಯಾರು ಬಿಡಲಿಕ್ಕಿಲ್ಲ ಅಲ್ವೇ..

ಮಹೇಶ್ ಸರ್.. ಧನ್ಯವಾದಗಳು

Thanks Ramya for ur appreciation:-)

ಸಾಗರದಾಚೆಯ ಇಂಚರ said...

ಪುನಃ ನನಗೆ ಉಡುಪಿ ನೆನಪು ಮಾಡಿದಿರಿ
ಬಹಳ ಇಷ್ಟ ನನಗೆ ಇದು

ಹರೀಶ ಮಾಂಬಾಡಿ said...

ಗೋಡಂಬಿ ಸುಟ್ಟು ಹಾಕಿದ್ದು ನೆನಪಾಯ್ತು :)

Rashmi said...

Wow naanu kele irlilla ee tindi na, totally new to me :). Interesting anstu!

ವನಿತಾ / Vanitha said...

ಹರೀಶ್, ಗುರುಮೂರ್ತಿ..ನಂಗೆ ಕೂಡ ನಮ್ಮೂರ ನೆನಪಾಯ್ತು..:)

ರಶ್ಮಿ, ನಮ್ಮನೆಯಲ್ಲಿ ಮ್ಯಕಾರೋನ್ ಎಲ್ಲರ ಫೇವರಿಟ್. ತುಂಬಾ ಟೇಸ್ಟಿಯಾಗಿರುತ್ತದೆ.