Thursday, July 26, 2012
Monday, June 25, 2012
Healthy and Yummy Broccoli Soup
ಈ ಒಂದು ವರ್ಷ ದಲ್ಲಿ ಬ್ಲಾಗ್ ನಲ್ಲಿ ಏನೂ ಬರೆದಿಲ್ಲ. ಯಾಕೆ ಬರೀತಿಲ್ಲ ಎಂದು ಕೇಳ್ತಾ ಇದ್ದ ಫ್ರೆಂಡ್ಸ್
ಗಳೆಲ್ಲರಿಗೂ ತುಂಬಾ ಥ್ಯಾಂಕ್ಸ್. ಒಂದು ವರ್ಷದಲ್ಲಿ Texasನಿಂದ ಮಂಗಳೂರಿಗೆ,
ಅಲ್ಲಿಂದ ಮತ್ತೆ ಕುವೈತ್ -ಹೀಗೆ settle ಆಗೋದ್ರಲ್ಲಿ ಬಿಸಿ. ಹಾಗೂ ಮೂವರಿದ್ದ ಸಂಸಾರಕ್ಕೆ ಇನ್ನೊಂದು ಪುಟಾಣಿ
ಗುಬ್ಬಚ್ಚಿಯ entryಯಿಂದಾಗಿ ಸ್ವಲ್ಪ
ಸೋಮಾರಿತನ.
ಕುವೈತ್ ನಲ್ಲಿರುವ ಸಾಲು
ಸಾಲು ಇಂಡಿಯನ್ ಹೋಟೆಲ್ ಗಳಿಂದಾಗಿ ಈ ವರ್ಷ cooking ಮಾಡಿದ್ದು ಬಹಳ ಕಡಿಮೆ.. ಇಲ್ಲಿಯ ಒಂದು ಇಂಡಿಯನ್ ರೆಸ್ಟೋರೆಂಟ್ ನ Broccoli Soup ನಮಗೆ ಬಹಳ ಇಷ್ಟ ಆಯ್ತು. ಹಾಗೆ ಮನೆಯಲ್ಲಿ ಟ್ರೈ ಮಾಡಿದ ಸೂಪ್ recipe ನಿಮಗೋಸ್ಕರ:
Broccoli - ಸಣ್ಣದು ಒಂದು (fresh or frozen)
ಸ್ವಲ್ಪ ಬೆಣ್ಣೆ
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಪೆಪ್ಪರ್ ಪುಡಿ
ಹಾಲು- 2- 3 ಕಪ್
ಒಂದು ಪಾತ್ರೆಯಲ್ಲಿ ಒಂದೆರಡು ಚಮಚದಷ್ಟು ಬೆಣ್ಣೆ ಹಾಕಿ, ಇದರಲ್ಲಿ cut ಮಾಡಿದ Broccoliಯನ್ನು 5 ನಿಮಿಷ ಹುರಿಯಬೇಕು. ನಂತರ ಇದಕ್ಕೆ ಅರ್ಧ ಕಪ್ ನೀರು ಸೇರಿಸಿ 5 ನಿಮಿಷ ಬೇಯಿಸಿ, ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ತರಿ-ತರಿಯಾಗಿ ರುಬ್ಬಿ ಇಟ್ಟುಕೊಳ್ಳಿ. ಉಳಿದ ಹಾಲನ್ನು ಒಂದು ಪಾತ್ರೆಯಲ್ಲಿ ಕುದಿಸಿಕೊಂಡು, ಇದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ ಇನ್ನೆರಡು ನಿಮಿಷ ಕುದಿಸಿ. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಪೆಪ್ಪೆರ್ ಪುಡಿ ಸೇರಿಸಿ ಬಿಸಿ ಬಿಸಿಯಾಗಿ ಸವಿಯಿರಿ.

(Soup ಜಾಸ್ತಿ ನೀರಾದರೆ, 4 ಚಮಚದಷ್ಟು ಹಾಲಿಗೆ
ಒಂದು ಚಮಚ ಮೈದಾ ಹಿಟ್ಟು ಸೇರಿಸಿ
ಗಂಟಿಲ್ಲದಂತೆ ಮಿಕ್ಸ್ ಮಾಡಿಕೊಂಡು, soupಗೆ ಸೇರಿಸಿ ಒಂದೆರಡು ನಿಮಿಷ ಕುದಿಸಿರಿ)
Healthy and Yummy Broccoli Soup:
Ingredients-
2 Spoons butter
1 small head of broccoli (fresh/frozen)
2 cups milk
salt and ground black pepper to taste
Directions
- Melt butter in a pot, and saute chopped broccoli for 5 minutes, and boil for 5 minutes by adding little water.
- Once it is cooled, puree it. (Don’t make it very smooth)
- In small saucepan, boil milk over medium-heat, add pureed broccoli. Boil for 2-3 minutes. Finally season with salt and pepper before serving. (Fried Onion and garlic can also be added. If the soup is watery then, stir in All-purpose flour (1 spoon) in little milk and add to it; All-purpose flour can be substituted with cream too)
Subscribe to:
Posts (Atom)