Summer ಅಂದ್ರೆ ನೆನಪಾಗುವುದು ಏನಾರೂ ತಣ್ಣಗೆ ತಿನ್ನಲು ಅಥವಾ ಕುಡಿಯಲು.., ಸೊ ಸುಲಭವಾಗಿ ಮಾಡಬಹುದಾದ ಐಸ್ ಕ್ಯಾಂಡಿ ಮತ್ತು ಫ್ರುಟ್-ಚಾಟ್ ಇಲ್ಲಿದೆ. ಮಕ್ಕಳಿಗೆ ನೀರು/ ಹಾಲು / ಜ್ಯೂಸ್ ಕುಡಿಯಲು ಕೊಟ್ಟರೆ ಅಷ್ಟಾಗಿ ಇಷ್ಟವಿರುವುದಿಲ್ಲ..ಅದೇ ಈ ಐಸ್ ಕ್ಯಾಂಡಿಯನ್ನು ನಿಮಿಷದಲ್ಲಿ ಖಾಲಿ ಮಾಡುತ್ತಾರೆ.
ಮನೆಯಲ್ಲಿರಬಹುದಾದ ಯಾವುದಾದರೂ ಫ್ರೆಶ್ ಜ್ಯೂಸ್ ಗೆ (Tropicana Orange juice / Mango juice- 2 ಗ್ಲಾಸ್ ನಷ್ಟು) ಸ್ವಲ್ಪ ನೀರುಸೇರಿಸಿ (½ ಗ್ಲಾಸ್) 4-5 ಚಮಚ ಸಕ್ಕರೆ ಸೇರಿಸಿ, ಒಂದು ಸಣ್ಣಗಿನ ಕಪ್/ ಗ್ಲಾಸ್ /ಅಥವಾ ಐಸ್ ಕ್ಯಾಂಡಿಯ ಅಚ್ಚಿ (mould)ನಲ್ಲಿ ಹಾಕಿ ಮಧ್ಯ ಒಂದು ಕಡ್ಡಿ ಇಟ್ಟು ಫ್ರೀಜರ್ ನಲ್ಲಿ8-10 ಗಂಟೆ ಗಟ್ಟಿಯಾಗಲು ಬಿಡಿ. ಬೇಕಾದಾಗ ಹದ ಬಿಸಿಯ ಗ್ಲಾಸ್ ನೀರಿನಲ್ಲಿ 1-2 ನಿಮಿಷಇಟ್ಟು ನಂತರ ತೆಗೆದು ತಿನ್ನಲು ಕೊಡಿ.
ಇದೇ ರೀತಿ ಹಾಲನ್ನು ಸ್ವಲ್ಪ ಕುದಿಸಿ, ಅದಕ್ಕೆ ಪುಡಿ ಮಾಡಿದ ಗೋಡಂಬಿ, ಬಾದಾಮಿ ಹಾಕಿದರೆರುಚಿಯಾದ ಕುಲ್ಫಿ ಸಿದ್ದ.
ಅಲ್ಲಿಗೆ ಮಕ್ಕಳಿಗೆ ಬೇಕಾದ ಹಾಲು / ನೀರು/ ಜ್ಯೂಸ್ ಜೊತೆಗೆ ವಿಟಮಿನ್ - ಸಿ, ಕ್ಯಾಲ್ಸಿಯಂ, ಏನು ಬೇಕೋ ಎಲ್ಲ ಸಿಗುತ್ತದೆ. ಜೊತೆಗೆಅಮ್ಮನಿಗೆ ಕೂಡ ಇಷ್ಟದ ಕ್ಯಾಂಡಿ ಮಾಡಿಕೊಟ್ಟಿದ್ದಕ್ಕೆ ಒಂದು ಸ್ವೀಟ್ HUG ಕೂಡ.
ನಾಯಿ ಕೂಡ ಐಸ್ ಕ್ಯಾಂಡಿ ತಿನ್ನುತ್ತವೆ ಗೊತ್ತಾ.. ಬೆಂಗಳೂರಿನ ಅಕ್ಕನ ಮನೆಯನಾಯಿಮರಿಗೆ ಐಸ್ ಕ್ಯಾಂಡಿ ಬಲು ಇಷ್ಟ..
FRUIT CHAT ಹಣ್ಣುಗಳು - Apple, Orange, Strawberry, Grapes, Pineapple, southekaayi……..
ಎಲ್ಲ ಹಣ್ಣುಗಳನ್ನು ತುಂಡು ಮಾಡಿಕೊಂಡು ಇದರ ಮೇಲೆಒಂದು ಚಮಚ ಚಾಟ್ ಮಸಾಲ ಬೆರೆಸಿತಿನ್ನಲು ಕೊಡಿ.
ಇದುಮಂಗಳೂರಿನಅದರಲ್ಲೂತುಳುವರಮನೆಯಮದುವೆ, ಹಬ್ಬಗಳಲ್ಲಿಇರಲೇಬೇಕಾದಖಾದ್ಯ.ತೊಂಡೆಕಾಯಿಗೆತುಳುವಿನಲ್ಲಿ ‘ಮನೋಳಿ’ಹಾಗೂಪಲ್ಯಕ್ಕೆ ‘ಆಜಾಯಿನ/ಸುಕ್ಕ’ಎಂದುಕರೆಯುತ್ತಾರೆ. ಈಪಲ್ಯಕ್ಕೆತೆಂಗಿನತುರಿಯನ್ನುಮಸಾಲೆಯೊಂದಿಗೆಧಾರಾಳವಾಗಿಬಳಸಲಾಗುತ್ತದೆ. ಅದರಲ್ಲೂ ‘ವಿಷುಹಬ್ಬ’ದಂದುಇದೇರೀತಿ ತೊಂಡೆಕಾಯಿ ಮತ್ತುಎಳೆಹಸಿಗೇರುಬೀಜದೊಂದಿಗೆಸೇರಿಸಿಪಲ್ಯವನ್ನು ತಯಾರಿಸುತ್ತಾರೆ. ಈ ಪಲ್ಯ ತಿನ್ನಲು ತುಂಬ ರುಚಿ.
ಬೇಕಾಗುವಸಾಮಗ್ರಿಗಳು:
ತೊಂಡೆಕಾಯಿ - ಕಪ್ (1/2 kg, ಉದ್ದಕ್ಕೆಸೀಳಿ) ಈರುಳ್ಳಿ - 1 (ಸಣ್ಣಗೆಹೆಚ್ಚಿ) ಟೊಮೇಟೊ - 1 (ಸಣ್ಣಗೆಹೆಚ್ಚಿ) ಕಡ್ಲೆ (Kabuli Chana)- 1 ½ ಕಪ್ ತೆಂಗಿನಕಾಯಿ - 1 ಕಪ್ತುರಿದು
ಇಲ್ಲಿ ಉತ್ತಮ ಗುಣ ಮಟ್ಟದ ಬ್ಯಾಡಗಿ ಮೆಣಸು ಸಿಗದ ಕಾರಣ ನಾನುಮಸಾಲೆಯ ಪುಡಿಗಳನ್ನು ಮೆಣಸು ಸೇರಿಸದೆ ಹುರಿದು ಪುಡಿಮಾಡಿಟ್ಟುಕೊಳ್ಳುತ್ತೇನೆ. ಕೊನೆಯಲ್ಲಿನನ್ನಪ್ರೀತಿಯ ಅತ್ತೆಊರಿನಿಂದಕಳಿಸಿದಬ್ಯಾಡಗಿಮೆಣಸಿನಪುಡಿಯನ್ನುಬಳಸುತ್ತೇನೆ.
ವಿಷು ಅಥವಾ ಸೌರಮಾನ ಯುಗಾದಿ ಎಂದರೆ ನನಗೆ ನೆನಪಾಗುವುದು ನನ್ನೂರು, ಕಾಸರಗೋಡು ಜಿಲ್ಲೆಯ ಪುಟ್ಟ ಗ್ರಾಮ'ಕಯ್ಯಾರು', ಅದೇಹಿರಿಯ ಕವಿಗಳ ಹೆಸರಲ್ಲಿರೋ ಊರು. ಕೇರಳಿಗರ ಪ್ರಭಾವವೋ ತಿಳಿಯದು, ಇಲ್ಲಿರುವ ಹೆಚ್ಚಿನ ಹಿಂದೂಗಳೆಲ್ಲರೂ ಆಚರಿಸುವ ಹೊಸವರುಷದ ಹಬ್ಬ, ವಿಷು (ಬಿಸು = ತುಳು), ಅಥವಾ ಸೌರಮಾನ ಯುಗಾದಿ. ವಿಷು ಹಬ್ಬದಂದು ಅಮ್ಮಬೆಳಗ್ಗೆ ಎದ್ದು ಮನೆಯೆಲ್ಲ ಶುಚಿ ಮಾಡಿ, ಮನೆಯಲ್ಲಿ ಬೆಳೆದ ತೆಂಗಿನಕಾಯಿ, ಹಣ್ಣು, ತರಕಾರಿ, ಹೂವುಗಳೊಂದಿಗೆ ಅಕ್ಕಿ ಮತ್ತು ಕನ್ನಡಿ - ಇವೆಲ್ಲವನ್ನೂ ದೀಪದೊಂದಿಗೆ ದೇವರ ಕೋಣೆಯಲ್ಲಿಸಿದ್ದಪಡಿಸುತ್ತಾರೆ. ಇದನ್ನೇ ‘ವಿಷುಕಣಿ’ ಎನ್ನುವುದು. ಬೆಳಿಗ್ಗೆದ್ದು ವಿಶುಕಣಿ ನೋಡಿನಂತರ ಮನೆಯ ಹಿರಿಯರಿಗೆಲ್ಲ ನಮಸ್ಕಾರ ಮಾಡಿ ಅವರ ಆಶೀರ್ವಾದ ಹಾಗೂ ಬಳುವಳಿ ಪಡೆಯುವ ದಿನ.ಅಂತೆಯ ಬೇರೆ ಊರಿನಲ್ಲಿರುವ ಹೆಣ್ಣು ಮಕ್ಕಳು, ತಂದೆ-ತಾಯಿ ಅಥವಾ ಅಣ್ಣನ ಮನೆಗೆ ಬಂದುಆಶೀರ್ವಾದ ಪಡೆಯುತ್ತಾರೆ. ನಂತರ ಎಲ್ಲರೂ ಮನೆಯಲ್ಲಿ ಸೇರಿ ಮದ್ಯಾಹ್ನದ ಸಿಹಿಊಟ..ಅದರಂತೆಯೇ ಹಲವು ವರ್ಷಗಳಿಂದ ನಮ್ಮೊಂದಿಗೆ ಕುಟುಂಬದ ಸದಸ್ಯರಂತೆ ಬೆಳೆದ ಆತ್ಮೀಯಕೆಲಸದವರು ತಮ್ಮ ಮನೆಯಲ್ಲಿ ಬೆಳೆದ ಹಣ್ಣು ತರಕಾರಿಗಳನ್ನು ತಂದು ಆಚರಣೆಯಲ್ಲಿಪಾಲ್ಗೊಳುತ್ತಾರೆ.
ಹಲವು ವಿಷು ಹಬ್ಬ ಕಳೆದು ಹೋದರು ಕೂಡಾಅದರ ಸಿಹಿ ನೆನಪುಗಳು ಮಾಸಿಲ್ಲ....ಜೊತೆಗೆನಮ್ಮೊಂದಿಗಿದ್ದ ಆತ್ಮೀಯ ಹಿರಿಯರ ಅಗಲಿಕೆಯ ಕಹಿ ನೆನಪುಗಳು ....
ಏಪ್ರಿಲ್ ೧೪ ರಂದು ವಿಷು ಹಬ್ಬ (ಸೌರಮಾನ ಯುಗಾದಿ) ವನ್ನು ಆಚರಿಸುವ ಎಲ್ಲ ಮಿತ್ರರಿಗೂನನ್-ಪ್ರಪಂಚದ ಶುಭಾಶಯಗಳು.
ಟೊಮೇಟೊ - 1 ಬೆಲ್ಲ - 2 ಚಮಚ ಹುಣಸೆ ರಸ - ಲಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದು
ಎಣ್ಣೆ - 2 ಚಮಚ
ಮಸಾಲೆಗೆ: ಎಣ್ಣೆ - 1 ಚಮಚ ಮೆಂತೆ - ½ ಚಮಚ ಉದ್ದಿನಬೇಳೆ- 1 ಚಮಚ ಮೆಣಸು (ಬ್ಯಾಡಗಿ) - 6-8 ಕೊತ್ತಂಬರಿ ಬೀಜ - 1 ½ ಚಮಚ ಜೀರಿಗೆ - ½ ಚಮಚ ಹಳದಿ ಪುಡಿ - ಚಿಟಿಕೆ ಕರಿಬೇವು - 6 ಎಲೆ ತೆಂಗಿನಕಾಯಿ - ¼ ಕಪ್ ತುರಿದು
ಒಗ್ಗರಣೆಗೆ: ಎಣ್ಣೆ - 2 ಚಮಚ ಸಾಸಿವೆ- ½ ಚಮಚ ಹಿಂಗು- ½ ಚಮಚ
ಒಣ ಮೆಣಸು - 1 ಕರಿಬೇವು - 6 ಎಲೆ
ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, ಮೆಂತೆ ಸ್ವಲ್ಪ ಬಣ್ಣ ಚೇಂಜ್ ಆಗುವ ತನಕಹುರಿದು, ನಂತರ ಉದ್ದಿನಬೇಳೆ ಸೇರಿಸಿ, ಸ್ವಲ್ಪ ಕೆಂಪಗಾಗುವ ತನಕ ಹುರಿಯಿರಿ. ಇದಕ್ಕೆಕರಿಬೇವು, ಕೊತ್ತಂಬರಿ ಬೀಜ, ಜೀರಿಗೆ ಸೇರಿಸಿ ಚೆನ್ನಾಗಿ ಪರಿಮಳ ಬರುವ ತನಕ ಹುರಿಯಿರಿ.ಮಸಾಲೆ ಹುರಿಯುವಾಗ ಸೀದು ಹೋಗದಂತೆ ನೋಡಿಕೊಳ್ಳಬೇಕು. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ.ತೆಂಗಿನತುರಿಯನ್ನು ಸ್ವಲ್ಪ ಕೆಂಬಣ್ಣ ಬರುವ ತನಕ ಹುರಿಯಿರಿ. ತಣ್ಣಗಾದನಂತರ ಈ ಮಸಾಲೆಯನ್ನು ರುಬ್ಬಿಡಿ.
ತೊಗರಿಬೇಳೆಯನ್ನು ತೊಳೆದುಕೊಂಡು ಕುಕ್ಕರಿನಲ್ಲಿ ಬೇಯಿಸಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಸೇರಿಸಿಕೊಂಡು ಈರುಳ್ಳಿಯನ್ನು ಹುರಿದು,ಇದಕ್ಕೆಹೆಚ್ಚಿಟ್ಟ ತರಕಾರಿ ಸೇರಿಸಿಸ್ವಲ್ಪ ಹುರಿಯಿರಿ. ನಂತರ ಹೆಚ್ಚಿಟ್ಟ ಟೊಮೇಟೊ ಹಾಗೂಒಂದು ಕಪ್ ನೀರು ಸೇರಿಸಿಬೇಯಿಸಲುಇಡಿ. ತರಕಾರಿ ಬೇಯುತ್ತ ಬಂದಾಗ, ಇದಕ್ಕೆ ತೊಗರಿಬೇಳೆ, ರುಬ್ಬಿಟ್ಟ ಮಸಾಲೆ, ಹುಳಿ, ಉಪ್ಪು, ಬೆಲ್ಲಮತ್ತು ಬೇಕಾದಷ್ಟು ನೀರು ಸೇರಿಸಿಕೊಂಡು ಸೇರಿಸಿ 10ನಿಮಿಷ ಹದ ಉರಿಯಲ್ಲಿ ಕುದಿಸಿರಿ. ಕೊನೆಯಲ್ಲಿ ಒಗ್ಗರಣೆ ಸೇರಿಸಿ. ಈ ಸಾಂಬಾರನ್ನು ಇಡ್ಲಿ, ದೋಸೆ ಅಥವಾ ಅನ್ನದೊಂದಿಗೆಉಪಯೋಗಿಸಬಹುದು.
ನಾನು ಮಂಗಳೂರು ರಸಂ (ಸಾರು) ಮಾಡಲು ಕೂಡ ಇದೆ ಮಸಾಲೆ ಉಪಯೋಗಿಸ್ತೇನೆ...ಟೊಮೇಟೊ ಕಟ್ ಮಾಡಿ 1 ಕಪ್ ನೀರಿನಲ್ಲಿ 10 ನಿಮಿಷ ಬೇಯಿಸಿ ನಂತರ ಇದೇ ಮಸಾಲೆ ಪುಡಿ + ಎರಡು ಚಮಚ ತೆಂಗಿನ ತುರಿ (ಹುರಿದು ಅಥವಾ ಹುರಿಯದೆ) , ಸ್ವಲ್ಪ pepper ಪುಡಿ, ಹುಳಿ, ಬೆಲ್ಲ ಹಾಗೂ 1 ಕಪ್ ನೀರು ಸೇರಿಸಿ ಕುದಿಸಿ, ಕೊನೆಯಲ್ಲಿ ಸೇಮ್ ಒಗ್ಗರಣೆ ಸೇರಿಸಿದರೆ ಸಾರು ರೆಡಿ. ಈ ಸಾರಿನಲ್ಲಿ ಬೆಳ್ಳುಳ್ಳಿ ಅಥವಾ ಈರುಳ್ಳಿ ಯನ್ನು ಸೇರಿಸುವುದಿಲ್ಲ.ಆದರೆ ನಾನು ಈರುಳ್ಳಿ ಯನ್ನು ಫ್ರೈ ಮಾಡಿ ಸೇರಿಸುತ್ತೇನೆ.
ಹೂರಣ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಕಡಲೆಬೇಳೆ - 1 ಕಪ್ ನೀರು - ½ ಕಪ್ ಬೆಲ್ಲದ ಪುಡಿ - 1 ಕಪ್ ಏಲಕ್ಕಿ ಪುಡಿ - ½ ಚಮಚ
ಕನಕ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಮೈದಾ- 1½ ಕಪ್ ನೀರು - ¾ -1 ಕಪ್ ಹಳದಿ ಪುಡಿ - ಚಿಟಿಕೆ ಉಪ್ಪು - ಚಿಟಿಕೆ ಎಣ್ಣೆ - 2-3 ಟೇಬಲ್ ಚಮಚ
ಹೂರಣ ತಯಾರಿಸುವ ವಿಧಾನ: ಕಡಲೇಬೇಳೆಯನ್ನು 1-2 ಘಂಟೆ ನೀರಿನಲ್ಲಿ ನೆನೆಸಿಡಿ. ನಂತರ ಇದನ್ನು ತೊಳೆದುಕೊಂಡು ½ ಕಪ್ ನೀರು ಸೇರಿಸಿ, ಕುಕ್ಕರಿನಲ್ಲಿ ಬೇಯಲು ಇಡಿ. ಕುಕ್ಕರಿನ steam ಬಂದ ನಂತರ weight ಹಾಕಿ ಸಣ್ಣ ಉರಿಯಲ್ಲಿ (whistle ಬರದಂತೆ) 15-20 ನಿಮಿಷ ಬೇಯಿಸಿ. ತಣ್ಣಗಾದ ನಂತರ ಬೇಯಿಸಿದ ಕಡಲೇಬೇಳೆಗೆ ಬೆಲ್ಲ ಸೇರಿಸಿ ಮಿಕ್ಸಿಯಲ್ಲಿ ನೀರು ಸೇರಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ, 12-15 ಉಂಡೆ ಮಾಡಿಟ್ಟುಕೊಳ್ಳಿ.
ಕನಕ ತಯಾರಿಸುವ ವಿಧಾನ: ಮೈದಾ ಹಿಟ್ಟಿಗೆ, ಉಪ್ಪು, ಹಳದಿ ಪುಡಿ ಸೇರಿಸಿಕೊಂಡು ಬೇಕಾದಷ್ಟು ನೀರು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಿ. ಕೊನೆಯಲ್ಲಿ ಇದಕ್ಕೆ ಎಣ್ಣೆ ಸೇರಿಸಿ ½ ಘಂಟೆ ಮುಚ್ಚಿಡಿ. ಇದರಿಂದ 12-15 ಉಂಡೆ ಮಾಡಿ.
ಹೋಳಿಗೆ ತಯಾರಿಸುವ ವಿಧಾನ: ಕೈಗೆ ಎಣ್ಣೆ ಹಚ್ಚಿಕೊಂಡು ಕನಕದ ಒಂದು ಉಂಡೆ ತೆಗೆದುಕೊಂಡು ಅಂಗೈ ಯಲ್ಲಿ ಸ್ವಲ್ಪ ತಟ್ಟಿ, ಇದರಲ್ಲಿ ಒಂದು ಹೂರಣದ ಉಂಡೆಯನ್ನು ತುಂಬಿಸಿ ಇಡಿ. ಎಲ್ಲಾ ಉಂಡೆಗಳಿಗೂ ಇದೇ ತರ ತುಂಬಿಸಿಕೊಂಡು ಎಣ್ಣೆ ಸವರಿದ ಪ್ಲೇಟ್ ನಲ್ಲಿಡಿ. ಈ ಉಂಡೆಗಳನ್ನು ಮೈದಾ ಪುಡಿ ಬಳಸಿಕೊಂಡು ಸಾಧ್ಯವಾದಷ್ಟು ತೆಳ್ಳಗೆ ಚಪಾತಿಯಂತೆ ಲಟ್ಟಿಸಿ. ಲಟ್ಟಿಸಿದ ಹೋಳಿಗೆಯನ್ನು ಹದ ಬಿಸಿಯಾದ ಕಬ್ಬಿಣದ ಕಾವಲಿಯಲ್ಲಿ ಮೇಲಿನಿಂದ ಸ್ವಲ್ಪ ತುಪ್ಪ ಸವರಿಕೊಂಡು ಎರಡೂ ಕಡೆ ಸ್ವಲ್ಪ ಕೆಂಪಾಗುವ ತನಕ ಬೇಯಿಸಿ, ಬಿಸಿಯಾರುವ ತನಕ ಹೋಳಿಗೆಯನ್ನು ಒಂದು ಪೇಪರ್ ನಲ್ಲಿ ಹರಡಿಡಿ. ನಂತರ ಇದನ್ನು ತುಪ್ಪ ಅಥವಾ ತೆಂಗಿನ ಹಾಲಿನೊಂದಿಗೆ ಸವಿಯಲು ಕೊಡಿ.
ಮಂಗಳೂರು ಕಡೆಯಲ್ಲಿ ಹೆಚ್ಹಾಗಿ ಹೋಳಿಗೆಯನ್ನು ಮದುವೆ ಸಮಾರಂಭಗಳಲ್ಲಿ ಮಾಡುತ್ತಾರೆ. ಈ ಹೋಳಿಗೆಗಳು ತುಂಬಾ ತೆಳ್ಳಗೆ ಪದರ ಪದರ ವಾಗಿರುತ್ತದೆ. ಕರ್ನಾಟಕದ ಉಳಿದ ಭಾಗದಲ್ಲಿ ಹೋಳಿಗೆಗೆ 'ಒಬ್ಬಟ್ಟು' ಎಂದು ಕರೆಯುತ್ತಾರೆ. ಇಲ್ಲಿ ಬೆಲ್ಲದೊಂದಿಗೆ ಹೂರಣವನ್ನು ಬೇಯಿಸಿ, ನೀರು ಆರಿದ ನಂತರ ಉಪಯೋಗಿಸುತ್ತಾರೆ. ಇದನ್ನು ಕಡಲೆಬೇಳೆ ಅಥವಾ ತೊಗರಿ ಬೇಳೆಯಿಂದಲೂ ಮಾಡಬಹುದು. ಬೇಳೆಯನ್ನು ಹೆಚ್ಚಿನ ನೀರಿನಲ್ಲಿ ಬೇಯಿಸಿ, ನಂತರ ಈ ನೀರನ್ನು ತೆಗೆದುಕೊಂಡು ರುಚಿಯಾದ ಒಬ್ಬಟ್ಟು ಸಾರು / ಕಟ್ಟು ಸಾರನ್ನು ಕೂಡ ಮಾಡುತ್ತಾರೆ.
ನನ್- ಪ್ರಪಂಚದ ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.. ಹೊಸ ವರುಷ ಎಲ್ಲರಿಗೂ ಹರುಷ ತರಲಿ :) ವನಿತಾ.
ಹಿಟ್ಟನ್ನುಚಪಾತಿಗಿಂತ ಸ್ವಲ್ಪ ದಪ್ಪಕ್ಕೆಲಟ್ಟಿಸಿಕೊಂಡುಓವೆನ್ನಲ್ಲಿ500F (or BROIL) ನಲ್ಲಿ2-3ನಿಮಿಷಬೇಯಿಸಿ.ಇದನ್ನುಮಧ್ಯದಿಂದತುಂಡುಮಾಡಿಬೇಕಾದಪಲ್ಯದೊಂದಿಗೆತಿನ್ನಲುಕೊಡಿ.ಓವೆನ್ನಿಂದತೆಗೆದಕೂಡಲೇಬೇಕಿದ್ದರೆಸ್ವಲ್ಪಬೆಣ್ಣೆಯನ್ನುಸವರಬಹುದು. ಹೆಚ್ಚಿನ ವಿವರಗಳಿಗೆ: Manjula's Kitchen