My photo
ಕರಾವಳಿ ಹುಡುಗಿ :)

Saturday, February 28, 2009

ಬಸಳೆ ಸೊಪ್ಪಿನ ತಂಬುಳಿ [Basale (Indian Spinach) Soppina Thambuli]


ತಂಬುಳಿಯನ್ನು ಹೆಚ್ಚಾಗಿ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಮಾಡುತ್ತಾರೆ. ಬಾಳೆಎಲೆಯಲ್ಲಿ ಉಪ್ಪು, ಉಪ್ಪಿನಕಾಯಿ, ಪಲ್ಯಗಳು ಹಾಗು ಅನ್ನ ಎಲ್ಲ ಬಡಿಸಿದ ನಂತರ, ತುಪ್ಪ ಸಾರು ಬಡಿಸುವುದರ ಮೊದಲು ತಂಬುಳಿಯನ್ನು ಅನ್ನಕ್ಕೆ ಬಡಿಸುತ್ತಾರೆ. ಇದು ತುಂಬ ಜೀರ್ಣಕಾರಿ.

ಬೇಕಾಗುವ ಸಾಮಗ್ರಿಗಳು:
ಬಸಳೆ ಸೊಪ್ಪು - 10
ಜೀರಿಗೆ - ½ ಚಮಚ
ಶುಂಠಿ - 1 ಸೆ. ಮಿ. ತುಂಡು
ಮೊಸರು / ಮಜ್ಜಿಗೆ - ½ ಕಪ್
ತೆಂಗಿನ ತುರಿ - ½ ಕಪ್
ಹಸಿ ಮೆಣಸು - 1 ರಿಂದ 2
ಉಪ್ಪು - ½ ಚಮಚ / ರುಚಿಗೆ ತಕ್ಕಷ್ಟು
ಎಣ್ಣೆ - ಸ್ವಲ್ಪ
ಒಗ್ಗರಣೆಗೆ - ಎಣ್ಣೆ, ಸಾಸಿವೆ, ಕರಿಬೇವು.
ಮಾಡುವ ವಿಧಾನ
ಬಸಳೆ ಸೊಪ್ಪನ್ನು ತೊಳೆದು, ಚೆನ್ನಾಗಿ ಒರೆಸಿ, ನಂತರ ಸಣ್ಣ ಸಣ್ಣ ತುಂಡು ಗಳನ್ನಾಗಿ ಮಾಡಬೇಕು. ಸ್ವಲ್ಪ (1 ಚಮಚ) ಎಣ್ಣೆ ಹಾಕಿ ಬಸಳೆಸೊಪ್ಪನ್ನು 5 ನಿಮಿಷ ಚನ್ನಾಗಿ ಹುರಿಯಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ ರುಬ್ಬಬೇಕು. ಮಜ್ಜಿಗೆ ಉಪಯೋಗಿಸಿದರೆ ಕೊನೆಯಲ್ಲಿ ಸೇರಿಸಿದರೆ ಸಾಕು.
ಇದನ್ನು ನಂತರ ಪಾತ್ರೆಗೆ ಹಾಕಿ, ಉಪ್ಪು ಸೇರಿಸಿ, ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಬೇಕು. ಇದು ಚಟ್ನಿಗಿಂತ ಸ್ವಲ್ಪ ತೆಳ್ಳಗಿರಬೇಕು. ಕೊನೆಯಲ್ಲಿ ಒಗ್ಗರಣೆ ಸೇರಿಸಿದರೆ, ತಂಬುಳಿ ಸಿದ್ದ.

5 comments:

ಸುಪ್ತದೀಪ್ತಿ suptadeepti said...

ಒಂದೆಲಗ (ತಿಮರೆ), ಎಲೆಹುರಿ (ಎಲೆಮುರಿ) ಸೊಪ್ಪು, ಗೇರು ಚಿಗುರು, ಪೇರಲೆ ಚಿಗುರು, ಕಾಕೆ ಸೊಪ್ಪು, ಮುಂತಾದ ಹಲವಾರು ಎಲೆ-ಚಿಗುರುಗಳ ತಂಬುಳಿ ಮಾಡುವದು ಗೊತ್ತಿತ್ತು (ಒಂದೆಲಗ ಮಾತ್ರ ಹಸಿ, ಉಳಿದದ್ದೆಲ್ಲ ಹುರಿದುಕೊಳ್ಳಬೇಕು). ಬಸಳೆಸೊಪ್ಪಿನದು ಮಾತ್ರ ಗೊತ್ತಿರಲಿಲ್ಲ.
ಯಾವುದೇ ಸೊಪ್ಪನ್ನು ಹುರಿದುಕೊಳ್ಳುವಾಗ ಹತ್ತು ಕಾಳು ಜೀರಿಗೆ ಸೇರಿಸಿದರೆ ಇನ್ನೂ ಘಮ್ಮೆನ್ನುತ್ತದೆ. ಜೀರ್ಣಕ್ರಿಯೆಗೂ ಸಹಕಾರಿ.

ವನಿತಾ / Vanitha said...

ಸುಪ್ತದೀಪ್ತಿಯವರೇ, ಧನ್ಯವಾದಗಳು. ಹೌದು, ನೀವು ಹೇಳಿದ್ದು ಸರಿ, ಆದರೆ, ನನಗೆ ಇಲ್ಲಿ ಬಸಳೆ ಸೊಪ್ಪು ಬಿಟ್ಟು ಬೇರೆ ಏನು ಸಿಗಲ್ಲ.

Bannadi said...

Nice; Ondu question?
Basale soppu US nalli sigutta

ವನಿತಾ / Vanitha said...

ಸಿಕ್ತದೆ ಶ್ರೀನಿವಾಸ್ ಅವರೆ, Chinaದವರ
storeನಲ್ಲಿ.

Anonymous said...

ನಾವೂ ಬಸಳೆ ಸೊಪ್ಪಿನ ತಂಬುಳಿ ಮಾಡಿದೆವು. ತುಂಬಾ ಚೆನ್ನಾಗಿತ್ತು. ಮಾಡುವ ಬಗೆ ಹಾಕಿದ್ದಕ್ಕೆ ತುಂಬ ಧನ್ಯವಾದಗಳು. :-)