
ಬೇಕಾಗುವ ಸಾಮಗ್ರಿಗಳು:
Broccoli – ½ ಕೆ. ಜಿ.
ಬೆಳ್ಳುಳ್ಳಿ - 10 ಎಸಳು (ಸಣ್ಣಗೆ ಹೆಚ್ಚಿದ್ದು)
ಬೆಣ್ಣೆ - ಸ್ವಲ್ಪ
ಲಿಂಬೆರಸ - 3 ಚಮಚ
ಕರಿಮೆಣಸಿನ ಪುಡಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
Broccoliಯನ್ನು, ತೊಳೆದು ನೀರು ಒರೆಸಿಕೊಂಡು, ಸಣ್ಣ ಸಣ್ಣ ತುಂಡು ಮಾಡಬೇಕು.
ಒಂದು ನಾನ್ ಸ್ಟಿಕ್ ಪಾತ್ರೆಯಲ್ಲಿ, ಸ್ವಲ್ಪ ಬೆಣ್ಣೆ ಹಾಕಿಕೊಂಡು, ಇದರಲ್ಲಿ ಬೆಳ್ಳುಳ್ಳಿಯನ್ನು ಕೆಂಬಣ್ಣ ಬರುವ ತನಕ ಕಾಯಿಸಿಕೊಂಡು, Broccoliಯನ್ನು ಸೇರಿಸಿ, 10 ನಿಮಿಷ ಸಣ್ಣ ಉರಿಯಲ್ಲಿ ಕಾಯಿಸಬೇಕು. ಕೊನೆಯಲ್ಲಿ ಸ್ವಲ್ಪ ಉಪ್ಪು, ಕರಿಮೆಣಸಿನ ಪುಡಿ, ಲಿಂಬೆ ರಸ ಸೇರಿಸಿದರೆ Broccoli stir fry ಸಿದ್ದ. ಇದನ್ನು starter ಆಗಿ ಉಪಯೋಗಿಸಬಹುದು.
Broccoliಯಲ್ಲಿ ವಿಟಮಿನ್ ಸಿ, ಕೆ ಹಾಗು ಬಿಯು ಧಾರಾಳವಾಗಿ ಸಿಗುತ್ತದೆ (http://en.wikipedia.org/wiki/Broccoli).
ಇದೇ ರೀತಿ Broccoliಯೊಂದಿಗೆ cauliflowerನ್ನು ಸೇರಿಸಿ ಕೂಡ ಮಾಡಬಹುದು.
6 comments:
ನಿಮ್ಮ ಬ್ಲಾಗ್ ನೋಡಿದೆ. ಚೆನ್ನಾಗಿದೆ. ಅಮೆರಿಕ ತಿಂಡಿ, ತಿನಿಸುಗಳ ಬಗ್ಗೆ ಮಾಹಿತಿ ನೀಡಿ ಚೆನ್ನಾಗಿರತ್ತೆ. ಜತೆಗೆ ನಿಮ್ಮ ತವರು, ಅಮೆರಿಕ ತಿಂಡಿಗಳ ಬಗ್ಗೆ ಸಾಮ್ಯತೆ ಇದ್ದಾರೆ ಅದನ್ನು ಬರೆಯಿರಿ. ಮಾಹಿತಿಗೆ ಥ್ಯಾಂಕ್ಸ್.
ನಮಸ್ಕಾರ,
ನಾನು ನಿಮ್ಮ ಬ್ಲಾಗನ್ನು ಅನುಸರಿಸುತ್ತಿದ್ದೇನೆ. ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ, ಅನುಸರಿಸಿದರೆ ಸ೦ತೋಷ. ನಿಮ್ಮ ಹೊಸರುಚಿ recipe ನೋಡುತ್ತಿದ್ದೇನೆ
ವನಿತಾ ಮೇಡಮ್,
ಆಹಾ ಬಾಯಲ್ಲಿ ನೀರೂರುತ್ತೆ...ಸೂಪರ್....
ಹಾಯ್ ವನಿತಾ,,
ಶಿವೂ ರವರ ಬ್ಲಾಗಿನಲ್ಲಿ ಕಾಮೆಂಟ್ಸ್ ನೋಡ್ತಾ ಇರಬೇಕಾದ್ರೆ ನಿಮ್ಮ ಬ್ಲಾಗಿಗೆ ಬಂದು ಇಣುಕಿ ನೋಡಿದೆ.. ನಿಮ್ಮದೇ ಅದ ಪಾಕಶಾಲಾ ಪ್ರಪಂಚ ತುಂಬ ಚೆನ್ನಾಗಿ ಇದೆ... ಪರವಾಗಿಲ್ಲ, ಅಮೆರಿಕದಲ್ಲೇ ಇದ್ದುಕೊಂಡು ನಮ್ಮ ದೇಸಿಯ ಅಡುಗೆಗಳ ಬಗ್ಗೆ ಚೆನ್ನಾಗಿ ಮಾಹಿತಿ ಕೊಟ್ಟಿದಿರ..
ಹಾಂ ಇದನ್ನು ನೋಡುತಿರಬೇಕದ್ರೆ ನಮ್ಮ ಅಮ್ಮನೂ ಜೋತೆನಲ್ಲಿ ಇದ್ರೂ,, ಮೆಂತೆ ಸೊಪ್ಪು ಹೆಸರು ಕಾಳು ಪಲ್ಯ ದ ರೆಸಿಪಿ ನೋಡಿ,, ನಾಳೆ ಟ್ರೈ ಮಾಡ್ತೇನೆ ಅಂತ ಹೇಳ್ತಾ ಇದ್ರೂ, ನೋಡೋಣ,, ಹೇಗೆ ಇರುತ್ತೋ ಟೀಸ್ಟ್ ಅಂತ,
ಫ್ರೀ ಇದ್ದಾಗ ನನ್ನ ಬ್ಲಾಗಿಗೂ ಬಂದು ಹೋಗಿ..
ಧನ್ಯವಾದಗಳು
ಗುರು
Hey Vanitha.. Today I tried this recipe... Laayika aagitthu.. Ibringu ista aathu:-)
Post a Comment