
ಇದರಲ್ಲಿ ಪ್ರಿಯಾ ರಾವ್ ಎನ್ನುವ ಆಂದ್ರಪ್ರದೇಶದ ಹುಡುಗಿ ತೀರಾ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದು, ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ಬಂದು, ನಿಕ್ಕ್ ಎನ್ನುವ ಅಮೆರಿಕನ್ ಹುಡುಗನನ್ನು ಪ್ರೀತಿಸಿ ಅವನೊಂದಿಗೆ ವಾಸಿಸುವವಳ ಕಥೆ. ಕೆಲವು ವರ್ಷಗಳ ನಂತರ ಭಾರತಕ್ಕೆ ರಜೆಯಲ್ಲಿ ಮರಳಿದಾಗ ಅಲ್ಲಿ ಕೇವಲ ಒಂದು ವಾರದೊಳಗೆ ನಡೆಯುವ ಅವಳ ಬಾಳಿನ ಪ್ರಮುಖ ಘಟನೆಯನ್ನು ಈ ಕಾದಂಬರಿಯಲ್ಲಿ ಸರಳವಾದ ರೀತಿಯಲ್ಲಿ ಮಲ್ಲಾಡಿಯವರು ಮನಮುಟ್ಟುವಂತೆ ಬಿಚ್ಚಿಡುತ್ತಾರೆ. ಭಾರತಕ್ಕೆ ರಜೆಯಲ್ಲಿ ಬಂದಾಗ, ಬೇಸಗೆಕಾಲದಲ್ಲಿ ಹೇರಳವಾಗಿ ಲಭಿಸುವ, ಮಾವಿನಕಾಯಿಯೊಂದಿಗೆ ಬಿಚ್ಚಿಕೊಳ್ಳುವ ಅವಳ ಬಾಲ್ಯದ ನೆನಪುಗಳು, ಬಾಲ್ಯದಿಂದ ಬೆಳೆದು ಬಂದ, ಮತ್ತು ಮನೆಯವರೆಲ್ಲರು ಅನುಸರಿಸುವ ಭಾರತೀಯ ಸಂಸ್ಕೃತಿ, ಈಗ ನೆಲೆಸಿರುವ ಅಮೇರಿಕಾದಲ್ಲಿನ ಸಾಂಸ್ಕೃತಿಕ ಭಿನ್ನತೆಗಳು ಹಾಗು ಅವಳ ಪ್ರೇಮವನ್ನು Orthodox ನಂಬಿಕೆಯೊಂದಿಗೆ ಬೆಳೆದ, ಅಮ್ಮ, ಅಪ್ಪ, ಅಜ್ಜ, ಅಜ್ಜಿ ಯವರೊಂದಿಗೆ ಹೇಳಿಕೊಳ್ಳಲು ತೊಳಲಾಡುವ ಸಂಧಿಗ್ದತೆಯೇ ಕಥೆಯ ಪ್ರಮುಖ ಅಂಗ.
ನಾವು ಭಾರತೀಯರಾದ ಕಾರಣವೋ ಏನೋ, ಅವರ ಕಥೆಗಳು ಮನ ಮುಟ್ಟುತ್ತದೆ. ದೂರದ ದೇಶದಲ್ಲಿದ್ದು ಕೊಂಡೇ ನಮ್ಮೂರಿಗೆ ಹೋದ ಅನುಭವವನ್ನು ಕೊಡುತ್ತದೆ. ಇದರಲ್ಲಿ ಪ್ರತಿ Chapterನ ಆರಂಭ ದಲ್ಲೂ ಆವರು ಆಂದ್ರಪ್ರದೇಶದ ಮಾವಿನಕಾಯಿ ಉಪ್ಪಿನಕಾಯಿ (ಆವಕ್ಕಾಯಿ), ದಾಲ್, ರವೆ ಲಡ್ಡು ……ಹೀಗೆ ಸಾಂಪ್ರದಾಯಿಕ ಆಂದ್ರ ಅಡುಗೆಗಳ ಬಗ್ಗೆಯೂ ತಿಳಿಸುತ್ತ ಹೋಗುತ್ತಾರೆ.
ಇದು ಉಪ್ಪಿನಕಾಯಿ ಮಾಡುವ ಸಿಂಪಲ್ ವಿಧಾನ. ನಾನು ಅದೇ ರೀತಿ ಮಾವಿನಕಾಯಿ ಉಪ್ಪಿನಕಾಯಿ ಮನೆಯಲ್ಲಿ ಮಾಡಿದಾಗ ತುಂಬ ಚೆನ್ನಾಗೇ ಬಂತು. ಹಾಗಾಗಿ ಇಲ್ಲಿ ಬರೆಯುತ್ತಾ ಇದ್ದೇನೆ.
ಮಾವಿನಕಾಯಿ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು:
ಹುಳಿಮಾವಿನ ಕಾಯಿ - 5 ಕಪ್
ಸಾಸಿವೆ ಪುಡಿ - 1 ಕಪ್
ಮೆಣಸಿನ ಪುಡಿ - 1 ಕಪ್
ಉಪ್ಪು- 1 ಕಪ್
ಹಳದಿ ಪುಡಿ - ಸ್ವಲ್ಪ
ಮೆಂತೆ ಪುಡಿ - 1 ಚಮಚ
ಎಣ್ಣೆ - 3 ಕಪ್
ಮಾಡುವ ವಿಧಾನ :
ಮಾವಿನಕಾಯಿಯನ್ನು ಸಣ್ಣದಾಗಿ ಕಟ್ ಮಾಡಿಟ್ಟುಕೊಂಡು, ಮೇಲಿನ ಎಲ್ಲ ಪುಡಿಗಳನ್ನು ಬೆರೆಸಿ, ಕೊನೆಯಲ್ಲಿ ಎಣ್ಣೆ ಸೇರಿಸಿ, 4 ವಾರಗಳ ಕಾಲ ಮುಚ್ಚಿ ಇಡಬೇಕು.
ಉಪ್ಪಿನಕಾಯಿ ಮಾಡುವಾಗ ಗಮನಿಸಬೇಕಾದ ಅಂಶ ವೆಂದರೆ, ಯಾವುದೇ ಪಾತ್ರೆ, ಚಮಚ ಹಾಗು ಕೈಯಲ್ಲಿ ಸ್ವಲ್ಪ ಕೂಡ ನೀರಿನ ಅಂಶ ಇರಬಾರದು. ಇದರಿಂದ ಉಪ್ಪಿನಕಾಯಿ ಬೇಗ ಕೆಡುತ್ತದೆ.
2 comments:
ವಿನುತಾ ಮೆಡಮ್,
ಮಾವಿನಕಾಯಿ ಉಪ್ಪಿನಕಾಯಿಯ ರೆಸಿಪಿ ಜೊತೆಗೆ ಅಮೂಲ್ಯ ಮಲ್ಲಾದಿಯವರ ಪುಸ್ತಕವನ್ನು ಉತ್ತಮವಾಗಿ ಲಿಂಕಿಸಿದ್ದೀರಿ..ನನಗೂ ಓದಬೇಕೆನ್ನುವ ಕುತೂಹಲವುಂಟಾಗುತ್ತಿದೆ...
ಮತ್ತೆ ನನ್ನ ಬ್ಲಾಗಿನಲ್ಲಿ ಹೊಸ ಟೋಪಿಗಳನ್ನು ಹಾಕಿದ್ದೇನೆ[ಅದು ಪರಿಸರ ಟೋಪಿಗಳು]ಹಾಕಿಕೊಳ್ಳಲು ಬನ್ನಿ....ಇಷ್ಟವಾದರೆ ನಾಲ್ಕು ಮಾತು ಕಾಮೆಂಟಿಸಿ..
aha..!
Post a Comment