My photo
ಕರಾವಳಿ ಹುಡುಗಿ :)

Monday, March 9, 2009

ಈರುಳ್ಳಿ ಬಜೆ / ನೀರುಳ್ಳಿ ಬಜೆ (ONION BAJJI)

ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - 2-3 ಕಪ್ (ಉದ್ದಕ್ಕೆ ಹೆಚ್ಚಿದ್ದು)
ಕಡಲೆ ಹಿಟ್ಟು - 5-6 ಟೇಬಲ್ ಚಮಚ
ಅಕ್ಕಿ ಹಿಟ್ಟು - 1 ಟೇಬಲ್ ಚಮಚ
ಕಾರ್ನ್ ಫ್ಲೋರ್ - 1 ಟೇಬಲ್ ಚಮಚ
ಜೀರಿಗೆ - 1 ಚಮಚ
ಕೆಂಪು ಮೆಣಸಿನ ಪುಡಿ - ½ - ¾ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಸೋಡಾ ಪುಡಿ - ¼ ಚಮಚ
ಹಿಂಗು - ಸ್ವಲ್ಪ
ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಕೆ ಹೆಚ್ಚಿದ್ದು)
ಪಾಲಕ್ ಸೊಪ್ಪು - 2 ಟೇಬಲ್ ಚಮಚ (ಸಣ್ಣಕೆ ಹೆಚ್ಚಿದ್ದು)
ಎಣ್ಣೆ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ, ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿಕೊಂಡು ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಬೇಕು. ಈರುಳ್ಳಿಯಲ್ಲಿರುವ ನೀರು ಬಿಟ್ಟುಕೊಳ್ಳುವ ಕಾರಣ, ಇದಕ್ಕೆ ನೀರು ಸೇರಿಸಬಾರದು. ಕೊನೆಯಲ್ಲಿ ಬೇಕಿದ್ದರೆ ಸ್ವಲ್ಪ ನೀರನ್ನು ಕೈಗೆ ಸವರಿಕೊಂಡು, ಸಣ್ಣ ಗಾತ್ರದಲ್ಲಿ ಹಿಟ್ಟನ್ನು ತೆಗೆದುಕೊಂಡು, ಕಾದ ಎಣ್ಣೆಗೆ ಹಾಕಿ, ಕೆಂಬಣ್ಣ ಬರುವ ತನಕ ಕರಿಯಬೇಕು.
ಇದನ್ನು ಅಕ್ಕಿ ಹಿಟ್ಟು, ಕಾರ್ನ್ ಫ್ಲೌರ್, ಸೋಡಾ ಪುಡಿ, ಪಾಲಕ್ ಸೊಪ್ಪು ಹಾಗು ಕೊತ್ತಂಬರಿ ಸೊಪ್ಪು ಹಾಕದೆ ಕೂಡ ಮಾಡಬಹುದು.

8 comments:

Sia said...

Vanita, glad you liked ennegai. you have got a lovely blog with some of my fav recipes. will visit it often.

hEmAsHrEe said...

hi vanita ,
recepies are good !
i have cooked some of them already, anyway will try your receipes some time.
thank you .

Shree said...

ಬಾಯಿಲೆಲ್ಲಾ ನೀರೋ ನೀರು! :-) ಗೊಂತೇ ಇತ್ಲೆ, ನೀ ಇಷ್ಟು ಜೋರು ಅಡಿಗೆ ಮಾಡ್ತೆ ಹೇಳಿ... :-) ಬ್ಲಾಗು ಟೇಸ್ಟಿ ಇದ್ದು...

ಸುಪ್ತದೀಪ್ತಿ suptadeepti said...

ನಮಸ್ಕಾರ ವನಿತಾ,
ಸ್ನೇಹ ಕೊಂಡಿಯ ಮೂಲಕ ನಿಮ್ಮ ಬ್ಲಾಗ್ ಲಿಂಕ್ ಸಿಕ್ಕಿತು. ಈ ನೀರುಳ್ಳಿ ಬಜೆಯನ್ನು ಇನ್ನೂ ಗರಿ-ಗರಿಯಾಗಿ ಮಾಡುವ ವಿಧಾನ ನಾವಡರ ಚೆಂಡೆಮದ್ದಳೆ ಬ್ಲಾಗಲ್ಲಿದೆ. ಅದರ ಕೊಂಡಿ ಇಲ್ಲಿದೆ, ನೋಡಿ: http://chendemaddale.wordpress.com/2008/04/15/%e0%b2%97%e0%b2%b0%e0%b2%bf%e0%b2%ae%e0%b3%81%e0%b2%b0%e0%b2%bf-%e0%b2%88%e0%b2%b0%e0%b3%81%e0%b2%b3%e0%b3%8d%e0%b2%b3%e0%b2%bf-%e0%b2%aa%e0%b2%95%e0%b3%8b%e0%b2%a1/

ಇದಕ್ಕೆ ಈರುಳ್ಳಿಯ ಜೊತೆಗೆ ಖಾರದ ಪುಡಿಯನ್ನೂ ಸಣ್ಣಗೆ ಹೆಚ್ಚಿದ ಕರಿಬೇವು ಎಲೆಗಳನ್ನೂ ಸೇರಿಸಿಕೊಳ್ಳಬಹುದು. ಚೆನ್ನಾಗಿರತ್ತೆ. ನೀವು ಹೇಳಿದಂಟೆ, ಎಲ್ಲವನ್ನೂ ಒಟ್ಟಿಗೆ ಕಲಸಿಕೊಳ್ಳುವುದಕ್ಕಿಂತ ಈ ವಿಧಾನದಲ್ಲಿ ಮಾಡಿದರೆ ತುಂಬಾ ಗರಿಗರಿಯಾಗಿ ಇರುತ್ತದೆ.

shivu.k said...

ಹಲೋ ವನಿತಾ ಮೇಡಮ್,

ಚಿತ್ರ ನೋಡಿ ನಂತರ ಓದಿದರೆ ಬಾಯಲ್ಲಿ ನೀರೂರುತ್ತಲ್ಲ ಮೇಡಮ್, ನಿಮ್ಮ ಬ್ಲಾಗನ್ನು ಹಿಂಬಾಲಿಸಬೆಕಾದ್ದೆ...ಮತ್ತು ಲಿಂಕಿಸಿಕೊಳ್ಳಬೇಕಾದ್ದೆ...ಅವೆರಡನ್ನು ಇವತ್ತೆ ಮಾಡುತ್ತೇನೆ..ಹೀಗೆ ಬರುತ್ತಿರಲಿ ಹೊಸ ರುಚಿ...ಥ್ಯಾಂಕ್ಸ್...

shivu.k said...

ವನಿತಾ ಮೇಡಮ್,

ಬ್ಲಾಗಿನ ಗೆಳೆಯರಿಂದ ನಿಮ್ಮ ಬ್ಲಾಗಿಗೆ ಬಂದೆ...ನೋಡಿದರೆ...ಇಲ್ಲಿ ಸೂಪರ್...ತಿಂಡಿಗಳ ದೊಡ್ಡ ರೆಸಿಪೀನೇ ಇದೆಯಲ್ಲಾ....ಇನ್ನು ಮುಂದೆ ನಿಮ್ಮ ಬ್ಲಾಗ್ ನೋಡುತ್ತಾ ಬೇಕಾದ ಅಡುಗೆಯನ್ನು ನಾನೇ ಪ್ರಯತ್ನಿಸಬಹುದು ಅನ್ನಿಸುತ್ತೆ....
ಧನ್ಯವಾದಗಳು...

Paru ... said...

Bajji tumba chennagide..Luv to see more posts of udupi dishes..

ವನಿತಾ / Vanitha said...

ಧನ್ಯವಾದಗಳು,Sia, Hemashree, shree, Supthadeepthi, Shivu, & Paru. ಹೀಗೇ ಬರುತ್ತಾ ಇರಿ.. ನಿಮ್ಮ ಪ್ರೋತ್ಸಾಹವೇ ನನಗೆ ಹುಮ್ಮಸ್ಸು..

ಸುಪ್ತ ದೀಪ್ತಿ ಯವರೇ, ಮತ್ತೊಮ್ಮೆ ಧನ್ಯವಾದಗಳು. ಹೌದು, ಅದು authentic ಈರುಳ್ಳಿ ಬಜೆ (ಮಂಗಳೂರಿನಲ್ಲಿ ಹಾಗೆಯೇ ಮಾಡುತ್ತಾರೆ), ನಾನು ಈ ರೀತಿ ಯಾದರೂ ನನ್ನ ಮಗಳ ಹೊಟ್ಟೆಗೆ ಸ್ವಲ್ಪ ತರಕಾರಿ ಹಾಗು ಸೊಪ್ಪು ಗಳು ಹೋಗಲಿ, ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎಂದು, ಹೆಚ್ಚ್ಹಾಗಿ ಸೊಪ್ಪುಗಳನ್ನು ಸೇರಿಸುತ್ತೇನೆ.