My photo
ಕರಾವಳಿ ಹುಡುಗಿ :)

Saturday, April 4, 2009

ಮಜ್ಜಿಗೆ ನೀರು / BUTTERMILK



ಬೇಕಾಗುವ ಸಾಮಗ್ರಿಗಳು:
ಮೊಸರು - 1 ಗ್ಲಾಸ್
ಶುಂಠಿ - ಸ್ವಲ್ಪ
ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಗೆ ಹೆಚ್ಚಿದ್ದು)
ಹಸಿಮೆಣಸು - 1
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರೆಣೆಗೆ -
ಎಣ್ಣೆ - 1 ಚಮಚ
ಸಾಸಿವೆ - ¼ ಚಮಚ
ಕರಿಬೇವು - 3-4 ಎಲೆಗಳು
ಹಿಂಗು - ಸ್ವಲ್ಪ

ಮಾಡುವ ವಿಧಾನ:
ಮೊಸರನ್ನು ಮಿಕ್ಸಿಯಲ್ಲಿ ಸ್ವಲ್ಪ ಕಡೆದುಕೊಳ್ಳಬೇಕು. ಇದನ್ನು ಒಂದು ಪಾತ್ರೆಗೆ ಹಾಕಿ, ಜಜ್ಜಿದ ಶುಂಠಿ, ಸೀಳಿದ ಹಸಿಮೆಣಸು, ಉಪ್ಪು, ಕೊತ್ತಂಬರಿ ಸೊಪ್ಪು, ಬೇಕಾದಷ್ಟು ನೀರು (2-3 ಗ್ಲಾಸ್) ಸೇರಿಸಬೇಕು. ಕೊನೆಯಲ್ಲಿ ಒಗ್ಗರಣೆ ಸೇರಿಸಿದರೆ, ರುಚಿಯಾದ ಮಜ್ಜಿಗೆ ನೀರು ರೆಡಿ.

2 comments:

shivu.k said...

ಈ ಬೇಸಿಗೆಯಲ್ಲಿ ಮಾಡಿಕೊಂಡು ಕುಡಿಯುತ್ತಿದ್ದೇನೆ...ಸಕ್ಕತ್ ಇಷ್ಟವಾಗುತ್ತೆ....

ವನಿತಾ / Vanitha said...

ಹೌದ ಶಿವು...ತುಂಬ ತಂಪಾಗಿರುತ್ತದೆ..