My photo
ಕರಾವಳಿ ಹುಡುಗಿ :)

Friday, April 10, 2009

ಅವಿಲ್ / ಅವಿಯಲ್ / AVIAL

ಅವಿಲ್ ಅಥವಾ ಆವಿಯಲ್ ಮಲಯಾಳಿಗರ ಓಣಂ ಊಟದ ಪ್ರಮುಖ ಡಿಶ್. ಮನೆಯಲ್ಲಿ ಎಲ್ಲಾ ತರಕಾರಿಗಳು ಸ್ವಲ್ಪ ಸ್ವಲ್ಪ ಇದ್ದರೆ, ಇದು ಒಂದು ರುಚಿಯಾದ ಅಡುಗೆ.




ಅವಿಲ್ ಮಾಡಲು ಬೇಕಾಗುವ ಸಾಮಗ್ರಿಗಳು:
ತರಕಾರಿಗಳು - 3-4 ಕಪ್ (ತೊಂಡೆಕಾಯಿ, ಬಾಳೆಕಾಯಿ, ಸುವರ್ಣಗಡ್ಡೆ, ಬೀನ್ಸ್, ಹೀರೆಕಾಯಿ, ಸೋರೆಕಾಯಿ, ಪಡುವಲಕಾಯಿ, ಸೌತೆಕಾಯಿ, ಆಲೂಗಡ್ಡೆ -ಎಲ್ಲಾ ತರಕಾರಿಗಳನ್ನು ಸ್ವಲ್ಪ ದೊಡ್ಡದಾಗಿ ಕಟ್ ಮಾಡಬೇಕು)
ನನಗೆ ಎಲ್ಲಾ ತರಕಾರಿಗಳು ಸಿಗದ ಕಾರಣ ಬಾಳೆಕಾಯಿ, ಬೀನ್ಸ್, ಆಲೂಗಡ್ಡೆ ಹಾಗು ಅವರೆಕಾಳು ಹಾಕಿ ಮಾಡಿದ್ದೇನೆ)
ತೆಂಗಿನ ತುರಿ - 1 ಕಪ್
ಹಸಿಮೆಣಸು - 3
ಜೀರಿಗೆ - 1 ಚಮಚ
ಶುಂಠಿ - 2 ಸೆ.ಮಿ ತುಂಡು
ಬೆಳ್ಳುಳ್ಳಿ - 1 ಎಸಳು (ಬೇಕಿದ್ದರೆ ಮಾತ್ರ)
ಮೊಸರು - ½ ಕಪ್

ಹಳದಿ ಪುಡಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಕರಿಬೇವು- 8- 10 ಎಲೆ
ತೆಂಗಿನ ಎಣ್ಣೆ - 2 ಚಮಚ

ಮಾಡುವ ವಿಧಾನ :
ತರಕಾರಿಯನ್ನು 2 ಹಸಿಮೆಣಸು, ಒಂದು ಕಪ್ ನೀರು ಸೇರಿಸಿ ಬೇಯಿಸಿ ಇಟ್ಟುಕೊಳ್ಳಬೇಕು.
ತೆಂಗಿನತುರಿಯನ್ನು 1 ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಹಳದಿ ಪುಡಿ ಸೇರಿಸಿ ರುಬ್ಬಬೇಕು. ಇದನ್ನು ಬೇಯಿಸಿದ ತರಕಾರಿಯೊಂದಿಗೆ ಬೆರೆಸಿ, ಉಪ್ಪು, ಕೊನೆಯಲ್ಲಿ ಮೊಸರು ಸೇರಿಸಿ, ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಬೇಕು. ಕೊನೆಯಲ್ಲಿ ಎಣ್ಣೆ ಬಿಸಿ ಮಾಡಿ ಕರಿಬೇವಿನ ಒಗ್ಗರಣೆ ಕೊಟ್ಟರೆ ಅವಿಲ್ ಸಿದ್ದ.
ಅವಿಲ್ ಸಾಂಬಾರಿಗಿಂತ ಗಟ್ಟಿಯಾಗಿ ಇರುತ್ತದೆ. ಇದನ್ನು ಅನ್ನ ಹಾಗು ಚಪಾತಿಯೊಂದಿಗೆ ತಿನ್ನಬಹುದು.

7 comments:

shivu.k said...

ವಿನುತಾ ಮೇಡಮ್,

ಇದನ್ನು ಒಮ್ಮೇ ಮಾಡಿಕೊಳ್ಳಬೇಕಿಸುತ್ತದೆ...ನನ್ನ ಶ್ರೀಮತಿಗೆ ಮಾಡಲು ಹೇಳುತ್ತೇನೆ...

ನಾವಡ said...

ನಮಸ್ಕಾರ,
ಚೆನ್ನಾಗಿದೆ ನಿಮ್ಮ ಬ್ಲಾಗ್. ನನಗೆ ತಿಳಿದಂತೆ ಅವಿಲ್ ಗೆ ಬೆಳ್ಳುಳ್ಳಿ ಹಾಕುವುದಿಲ್ಲ.
ನಾವಡ

ವನಿತಾ / Vanitha said...

ನಾವಡರೆ,
ಧನ್ಯವಾದಗಳು ಬ್ಲಾಗ್ ಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ,
ಹೌದು,ಅವಿಲ್ ಗೆ ಯಾರು ಬೆಳ್ಳುಳ್ಳಿ ಹಾಕುವುದಿಲ್ಲ.
ನೀವು ಬೆಳ್ಳುಳ್ಳಿ ಉಪಯೋಗಿಸುವವರಾದರೆ,ಒಂದು ಸಲ ಈ ತರ ಬೆಳ್ಳುಳ್ಳಿ ಹಾಕಿ ಮಾಡಿ ನೋಡಿ,ನಂತರ ತಿಳಿಸಿ.

Chevar said...

ಅವಿಯಲ್ ಸೂಪರ್. ಕೇರಳದ ಭಕ್ಷ್ಯದ ಬಗ್ಗೆ ತೆರಿಪಾಯಿನಯಿಕ್ ಸೊಲ್ಮೆಲು. ಅಡುಗೆ ಜತೆ ಬೇರೆ ವಿಷಯಗಳೂ ಬರಲಿ.

shruthi said...

vanitha, thanks the tasty avial. Somehow i thought it will be a long procedure.Your recipe is easy,quick! keep up the good work.

sorry i couldn't type in kannada :(

bhadra said...

ಅವಿಯಲ್ ಸೊಗಸಾಗಿದೆ - ಇನ್ನೊಂದು ಮುಖ್ಯ ತರಕಾರಿಯನ್ನು ಹಾಕಲು ನೀವು ಮರೆತಂತಿದೆ - ಅದೇ ನುಗ್ಗೆಕಾಯಿ - drumstick

ಬಾಯಲ್ಲಿ ನೀರೂರುತ್ತಿದೆ

ವನಿತಾ / Vanitha said...

@shruthi..thanks dear for ur comment

@srinivas..ನಂಗೆ ಇಲ್ಲಿ Fresh ನುಗ್ಗೆಕಾಯಿ ಸಿಗಲ್ಲ..ಅದಿಕ್ಕೆ ಹಾಕಿಲ್ಲ.so ನುಗ್ಗೆಕಾಯಿ ಹಾಕದೆಯೂ ಮಾಡಬಹುದು...ತಿಳಿಸಿದ್ದಕ್ಕೆ ಥ್ಯಾಂಕ್ಸ್