My photo
ಕರಾವಳಿ ಹುಡುಗಿ :)

Friday, April 24, 2009

ಹೆಸರುಕಾಳು ವಡೆ / MUNG BEAN VADA


ಬೇಕಾಗುವ ಸಾಮಗ್ರಿಗಳು:
ಹೆಸರುಕಾಳು - 2 ಕಪ್ (ಮೊಳಕೆ ಬರಿಸಿದ್ದು)
ಈರುಳ್ಳಿ - 1 ಕಪ್ (ಸಣ್ಣಗೆ ಹೆಚ್ಚಿ)
ಬೆಳ್ಳುಳ್ಳಿ ತುರಿದು - 1 ಚಮಚ
ಶುಂಠಿ ತುರಿದು - 1 ಚಮಚ
ಜೀರಿಗೆ - ½ ಚಮಚ
ಎಳ್ಳು - ½ ಚಮಚ
ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಗೆ ಹೆಚ್ಚಿ)
ಕರಿಬೇವು - 1 ಚಮಚ (ಸಣ್ಣಗೆ ಹೆಚ್ಚಿ)
ಹಸಿಮೆಣಸು - 1- 2 (ಸಣ್ಣಗೆ ಹೆಚ್ಚಿ)
ಕಾರದ ಪುಡಿ - ¼ ಚಮಚ
ಕಡ್ಲೆ ಹಿಟ್ಟು - 1 ಟೇಬಲ್ ಚಮಚ
ಕಾರ್ನ್ ಫ್ಲೋರ್ - 1 ಟೇಬಲ್ ಚಮಚ
ಉಪ್ಪು - ½ ಚಮಚ / ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಮಾಡುವ ವಿಧಾನ:
ಮೊಳಕೆ ಬರಿಸಿದ ಹೆಸರುಕಾಳನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಬೇಕು. ಇದಕ್ಕೆ ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ (ನೀರು ಹಾಕದೆ) ಚೆನ್ನಾಗಿ ಮಿಕ್ಸ್ ಮಾಡಬೇಕು. ಇದರಿಂದ 10 ಉಂಡೆಗಳನ್ನು ಮಾಡಿ ಬೇಕಾದ ಆಕಾರದಲ್ಲಿ ಕೈಯಿಂದ ಒತ್ತಿ, ಕೆಂಬಣ್ಣ ಬರುವವರೆಗೆ, ಕಾದ ಎಣ್ಣೆಯಲ್ಲಿ ಹದ ಉರಿಯಲ್ಲಿ ಕರಿದರೆ, ಹೆಸರುಕಾಳು ವಡೆ/ ಪಕೋಡ ಸಿದ್ದ. ಇದನ್ನು, ಟೊಮೇಟೊ ಸಾಸ್ / ತೆಂಗಿನ ಕಾಯಿ ಚಟ್ನಿ ಯೊಂದಿಗೆ ತಿನ್ನಬಹುದು.

ಇದಕ್ಕೆ ಎಲ್ಲಿಯೂ ನೀರು ಸೇರಿಸಬಾರದು. ಮೊಳಕೆ ಬರಿಸಿದ ಹೆಸರುಕಾಳು ಇಲ್ಲದಿದ್ದಲ್ಲಿ, ಹೆಸರುಕಾಳನ್ನು ನೀರಿನಲ್ಲಿ 5-6 ಗಂಟೆ ನೆನೆಸಿ ಉಪಯೋಗಿಸಬಹುದು. ಉಂಡೆ ಮಾಡುವಾಗ ಅಂಟು ಬರದಿದ್ದಲ್ಲಿ, ಸ್ವಲ್ಪ ಹಿಟ್ಟು ಜಾಸ್ತಿ ಹಾಕಿ ಉಂಡೆ ಮಾಡಬಹುದು.

6 comments:

shivu.k said...

ವನಿತಾ...

ಹೆಸರು ಕಾಳಿನ ವಡೆ ಫೋಟೊ ತುಂಬಾ ಚೆನ್ನಾಗಿದೆ....ಇನ್ನೂ ರುಚಿ ಹೇಗಿರಬಹುದು....

ಮಾಡುವ ವಿದಾನ ಓದಿದೆ....ಮುಂದಿನ ವಾರ ನನ್ನಾಕೆಗೆ ತೋರಿಸಿ ಮಾಡಿಸಿಕೊಳ್ಳುವ ಆಸೆ ನನ್ನದು....

ಧನ್ಯವಾದಗಳು...

jomon varghese said...

madam, idannu madalu kandita nanaganthu baruvudilla. seeda nimma manege bandare hege anta yochisutiddene... :)

Anonymous said...

ನೋಡ್ಲಿಕ್ಕೆ ಚಂದ ಉಂಟು. ಮಾಡಿ ನೋಡ್ತೇವೆ :-)

ರೂpaश्री said...

ನನ್ನ ಶೊದರತ್ತೆಯವರು ಇದನ್ನ ಮಾಡ್ತಾರೆ, ಅವರಿಂದ ನಾ ಕಲಿತದ್ದು. ಅಂದ ಹಾಗೆ ನಿಮ್ಮ ಬ್ಲಾಗ್ ಕೆಂಡಸಂಪಿಗೆಯ ದಿನದ ಬ್ಲಾಗ್ ಆಗಿ ಮೊಡಿ ಬಂದಿದೆ:)

Lakshmi said...

waah..super recipe kanri. evathe hogi hesarukaalu nenasthini.

ವನಿತಾ / Vanitha said...

ಎಲ್ಲರಿಗೂ ಧನ್ಯವಾದಗಳು ...