ಬೇಕಾಗುವ ಸಾಮಗ್ರಿಗಳು:
ಮಶ್ರೂಮ್ (Button Mushroom) - 200 ಗ್ರಾಂ
ಕ್ಯಾಪ್ಸಿಕಂ (Capsicum / Bell pepper) - ¼ ಕಪ್ (ಉದ್ದಕ್ಕೆ ಹೆಚ್ಚಿದ್ದು)
ಬಟಾಣಿ - ¼ ಕಪ್ (ಬೇಯಿಸಿದ್ದು / Frozen)
ಈರುಳ್ಳಿ - 1 ಕಪ್
ಟೊಮೇಟೊ - ½ ಕಪ್ (ಹೆಚ್ಚಿದ್ದು)
ಟೊಮೇಟೊ ಪ್ಯೂರಿ (Tomato puree) – 5 ಚಮಚ
ಕ್ರೀಂ - ½ ಕಪ್ (Whipping cream)
ಶುಂಠಿ - 1 ಚಮಚ (ತುರಿದು)
ಬೆಳ್ಳುಳ್ಳಿ - 1 ಚಮಚ (ತುರಿದು)
ಜೀರಿಗೆ - ½ ಚಮಚ
ಜೀರಿಗೆ ಪುಡಿ - 1 ಚಮಚ
ಕೊತ್ತಂಬರಿ ಪುಡಿ - 1 ಚಮಚ
ಮೆಣಸಿನ ಪುಡಿ - 1- 2 ಚಮಚ
ಮೆಂತ್ಯ ಪುಡಿ - ಚಿಟಿಕೆ
ಅರಿಶಿನ ಪುಡಿ - ಚಿಟಿಕೆ
ಎಣ್ಣೆ - 1-2 ಟೇಬಲ್ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಮಶ್ರೂಮ್ ನ್ನು, ಒದ್ದೆ ಬಟ್ಟೆಯಲ್ಲಿ ಒರೆಸಿ, ತುಂಡು ಮಾಡಿಟ್ಟುಕೊಳ್ಳಬೇಕು.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆಯನ್ನು ಹುರಿದುಕೊಂಡು, ಶುಂಠಿ- ಬೆಳ್ಳುಳ್ಳಿಯನ್ನು ಸೇರಿಸಿಕೊಂಡು, 1 ನಿಮಿಷ ಹುರಿಯಬೇಕು. ನಂತರ ಇದಕ್ಕೆ ಈರುಳ್ಳಿಯನ್ನು ಸೇರಿಸಿ, ಕೆಂಪಗಾಗುವ ತನಕ ಹುರಿಯಬೇಕು. ನಂತರ ಎಲ್ಲಾ ಮಸಾಲೆಯ ಸಾಮಗ್ರಿಗಳನ್ನು ಸೇರಿಸಿಕೊಂಡು, ಸಣ್ಣ ಉರಿಯಲ್ಲಿ 2-3 ನಿಮಿಷ ಹುರಿಯಬೇಕು. ಇದಕ್ಕೆ ಟೊಮೇಟೊ ಪ್ಯೂರಿ, ಟೊಮೇಟೊ ಸೇರಿಸಿ , 5 ನಿಮಿಷ ಹುರಿದುಕೊಂಡು, ನಂತರ ಕಟ್ ಮಾಡಿದ ಮಶ್ರೂಮ್, ಕ್ಯಾಪ್ಸಿಕಂ , ಬಟಾಣಿ ಸೇರಿಸಿ, ಸಣ್ಣ ಉರಿಯಲ್ಲಿ 30 ನಿಮಿಷ ಮುಚ್ಚಿ ಬೇಯಿಸಬೇಕು. ಕೊನೆಯಲ್ಲಿ ½ ಕಪ್ ಕ್ರೀಂ ಸೇರಿಸಿ, ಒಂದು ಸಲ ಕುದಿಸಿ, ಉಪ್ಪು ಸೇರಿಸಿ, ಒಲೆಯಿಂದ ಇಳಿಸಿದರೆ, ಕಡಾಯಿ ಮಶ್ರೂಮ್ ಸಿದ್ದ. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಚಪಾತಿ, ರೊಟ್ಟಿ ಯೊಂದಿಗೆ ತಿನ್ನಬಹುದು.
ಮಶ್ರೂಮ್ ನ್ನು ನೀರಿನಲ್ಲಿ ಮುಳುಗಿಸಿ ತೊಳೆದರೆ, ಅದು ಬೇಯಿಸುವಾಗ crispness ಕಳೆದುಕೊಳ್ಳುತ್ತದೆ. ಹಾಗೆಯೇ ಬೇಯಿಸುವಾಗ ಕೂಡ, ನೀರು ಸೇರಿಸಬಾರದು. ಸಣ್ಣ ಉರಿಯಲ್ಲಿ ಬೇಯಿಸಿದರೆ ಅದು ನೀರು ಬಿಟ್ಟುಕೊಳ್ಳುತ್ತದೆ. ಇದೇ ನೀರು ಬೇಯಲು ಸಾಕಾಗುತ್ತದೆ. ಇದನ್ನು ಕ್ರೀಂ ಸೇರಿಸದೆ ಕೂಡ ಮಾಡಬಹುದು.

ಮನೆಯಲ್ಲಿ ಟೊಮೇಟೊ ಪ್ಯೂರಿ ಮಾಡುವ ವಿಧಾನ - ಕುದಿಯುವ ನೀರಿಗೆ ಇಡೀ ಟೊಮೇಟೊವನ್ನು ಹಾಕಿಕೊಂಡು, 5-10 ನಿಮಿಷ ಕುದಿಸಬೇಕು. ತಣ್ಣಗಾದ ನಂತರ ಸಿಪ್ಪೆ ತೆಗೆದುಕೊಂಡು, ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.
3 comments:
ವನಿತಾ,
ಒಳ್ಳೆ ಪ್ರಯತ್ನ, ಬ್ಲಾಗ ತುಂಬ ಚೆನ್ನಾಗಿದೆ. Mushroom curry looks soo yummy!! ನೋಡಿ ಬಾಯಲ್ಲಿ ನೀರು ಬರ್ತಾ ಇದೆ:)
ವನಿತಾ,
ನೀವು ಕೊಟ್ಟಿರುವ ರೆಸೆಪಿಯನ್ನು[ಕಡಾಯಿ ಮಸ್ರೂಮ್ ] ಹೆಚ್ಚಾಗಿ ಮದುವೆಗಳಲ್ಲಿ ತಿಂದಿದ್ದೇನೆ...[ಮದುವೆ ಫೋಟೊ ತೆಗೆಯುವ ಸಮಯದಲ್ಲಿ] ತುಂಬಾ ಚೆನ್ನಾಗಿರುತ್ತದೆ...
ಧನ್ಯವಾದಗಳು...
Thanks shivu & KFB (sorry didnt get ur name!)
Post a Comment