ಬೆಂಡೆಕಾಯಿ - 8-10
ಈರುಳ್ಳಿ - ¼ ಕಪ್ (ಸಣ್ಣಗೆ ಹೆಚ್ಚಿ)
ತೆಂಗಿನ ತುರಿ - 1 ಕಪ್
ಕೊತ್ತಂಬರಿ ಪುಡಿ - ¾ ಚಮಚ
ಜೀರಿಗೆ ಪುಡಿ - ¾ ಚಮಚ
ಮೆಣಸಿನ ಪುಡಿ - 1 ಚಮಚ
ಹಳದಿ - ಚಿಟಿಕೆ
ಹಿಂಗು - ಚಿಟಿಕೆ
ಹುಣಸೆಹಣ್ಣಿನ ರಸ - ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದದ್ದು
ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಗೆ ಹೆಚ್ಚಿ)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಸ್ವಲ್ಪ
ಮಾಡುವ ವಿಧಾನ:
ಬೆಂಡೆಕಾಯಿಯನ್ನು ನೀರಿನಲ್ಲಿ ತೊಳೆದು ಚೆನ್ನಾಗಿ ಒರೆಸಬೇಕು. ತೊಟ್ಟು ತೆಗೆದ ಬೆಂಡೆಕಾಯಿಯನ್ನು ಬುಡದಿಂದ ¾ ಭಾಗದ ತನಕ ಉದ್ದಕ್ಕೆ 2 ಸೀಳು ಮಾಡಬೇಕು. ತೆಂಗಿನತುರಿಯನ್ನು ಘಂ ಎನ್ನುವ ತನಕ ಹುರಿದುಕೊಂಡು, ತರಿತರಿಯಾಗಿ ಪುಡಿ ಮಾಡಬೇಕು. ಇದಕ್ಕೆ ಎಲ್ಲ ಮಸಾಲೆ ಸಾಮಗ್ರಿ, ಈರುಳ್ಳಿ, ಹುಣಸೆಹಣ್ಣಿನ ರಸ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಬೇಕಿದ್ದರೆ ಸ್ವಲ್ಪ ನೀರು ಸೇರಿಸಬಹುದು. ಈ ಮಸಾಲೆಯನ್ನು ಸೀಳಿಟ್ಟ ಬೆಂಡೆಕಾಯಿಯ ಒಳಗೆ ತುಂಬಿಸಬೇಕು. ಒಂದು ನಾನ್ ಸ್ಟಿಕ್ ಕಾವಲಿಯಲ್ಲಿ, ಸ್ವಲ್ಪ ಎಣ್ಣೆ ಹಾಕಿ, ಬೆಂಡೆಕಾಯಿಗಳನ್ನಿಟ್ಟು, ಸಣ್ಣ ಉರಿಯಲ್ಲಿ 30 ನಿಮಿಷ (10 ನಿಮಿಷಕ್ಕೊಮ್ಮೆ ಬೆಂಡೆಕಾಯಿಯನ್ನು ತಿರುಗಿಸುತ್ತಿರಬೇಕು) ಬೇಯಿಸಬೇಕು.
7 comments:
ಚೆನ್ನಾಗಿದೆ, ಬಾಯಲ್ಲಿ ನೀರೂರಿಸುವ೦ತಿದೆ.
ವನಿತಾರವರೆ...
ಇದು ನನಗೆ ಬಹಳ ಇಷ್ಟ...
ಓವನ್ ನಲ್ಲೂ ಮಾಡ ಬಹುದು ಅಲ್ಲವಾ..?
ಬಾಯಲ್ಲಿ ನೀರು ತರಿಸುವಂಥಹ ಚಿತ್ರ...
ಅಭಿನಂದನೆಗಳು..
ವನಿತಾ,
ಸೂಪರ್ ಕಣ್ರೀ....ಬೆಂಡೆಕಾಯಿ ಸ್ಟಫ್ ಚಿತ್ರವೂ ಚೆನ್ನಾಗಿದೆ...ಮೊನ್ನೆ ಭಾನುವಾರ ನನ್ನ ಶ್ರೀಮತಿ ಯಶವಂತ ಪುರ ಸಂತೆಯಿಂದ ಬೆಂಡೆಕಾಯಿ ತಂದಿದ್ದಾಳೆ ಇದನ್ನು ತೋರಿಸಿ ಮಾಡಿಸುತ್ತೇನೆ...
ಧನ್ಯವಾದಗಳು...
ಮತ್ತೆ ನನ್ನ ಬ್ಲಾಗಿನ ಹೊಸ ಲೇಖನಗಳಿಗೆ ಬೇಟಿಕೊಡಿ...ಮತ್ತೆ ಸಿಗೋಣ..
ಇವತ್ತು ಇದನ್ನು ಟ್ರೈ ಮಾಡುವ ಅನ್ನಿಸುತ್ತಿದೆ, ಜೊತೆಗೆ ಬಾಯಲ್ಲಿ ನೀರೂರುತ್ತಿದೆ
ಹಾಗೇ ತಿನ್ನೋದ ಇದು, ಅಥವಾ ಯಾವುದಾದರ ಜೊತೆ ನೆಂಚಿಕೊಳ್ಳಲಿಕ್ಕಾ?
Paranjape, Shivu, Dr Satyanarayana ಧನ್ಯವಾದಗಳು ನಿಮ್ಮ ಪ್ರತಿಕ್ರ್ರಿಯೆಗಳಿಗೆ,
Prakash, ನಾನು ಇದು ವರೆಗೆ ಓವೆನ್ ನಲ್ಲಿ ಮಾಡಿಲ್ಲ..ಬೇರೆಯವರ ಬ್ಲಾಗ್ ನಲ್ಲಿ ನೋಡಿದ್ದೇನೆ ಅಷ್ಟೇ...ಧನ್ಯವಾದಗಳು ..
@PALA..ಅನ್ನ ಅಥವಾ ಚಪಾತಿ ಜೊತೆ ತಿನ್ನಲಿಕ್ಕೆ ಚೆನ್ನಾಗಿರುತ್ತದೆ..
Post a Comment