My photo
ಕರಾವಳಿ ಹುಡುಗಿ :)

Tuesday, June 2, 2009

ಮೊಳಕೆ ಕಾಳು - ಬಸಳೆ ಸೊಪ್ಪು ಸಾಂಬಾರ್


ಬೇಕಾಗುವ ಸಾಮಗ್ರಿಗಳು:
ಬಸಳೆ - ½ ಕೆ. ಜಿ.
ಮೊಳಕೆ ಕಾಳು (ಹೆಸರು ಕಾಳು ಅಥವಾ ಹುರುಳಿ ಕಾಳು)- 1 ಕಪ್
ಈರುಳ್ಳಿ - ¼ ಕಪ್
ಟೊಮೇಟೊ - ¼ ಕಪ್
ಹುಣಸೆಹಣ್ಣಿನ ರಸ - ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದು
ಬೆಲ್ಲ - ಸ್ವಲ್ಪ (ಬೇಕಿದ್ದರೆ ಮಾತ್ರ)
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರೆಣೆಗೆ- ಎಣ್ಣೆ, ಕರಿಬೇವು, ಸಾಸಿವೆ, ಬೆಳ್ಳುಳ್ಳಿ,

ಮಸಾಲೆಗೆ:
ತೆಂಗಿನಕಾಯಿ ತುರಿ - 1 ಕಪ್
ಬ್ಯಾಡಗಿ ಮೆಣಸು - 5-6
ಕೊತ್ತಂಬರಿ ಬೀಜ - 2 ಚಮಚ
ಜೀರಿಗೆ - 1 ಚಮಚ
ಮೆಂತೆ - 6-8 ಬೀಜ
ಹಳದಿ ಪುಡಿ - ಚಿಟಿಕೆ

ಮಾಡುವ ವಿಧಾನ:
ಬಸಳೆ ಸೊಪ್ಪನ್ನು ದಂಟಿನಿಂದ ಬೇರ್ಪಡಿಸಿ, ತೊಳೆದು ಇಟ್ಟುಕೊಳ್ಳಬೇಕು.
ಬಸಳೆ ದಂಟನ್ನು 2-3 ಇಂಚು ಉದ್ದದ ತುಂಡು ಮಾಡಿಕೊಂಡು, ಮೊಳಕೆ ಕಾಳು ಸೇರಿಸಿ, ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಬೇಕು.
ಮಸಾಲೆಯ ಎಲ್ಲ ಸಾಮಗ್ರಿಗಳನ್ನು ಒಂದೊಂದಾಗಿ ಪರಿಮಳ ಬರುವ ತನಕ ಹುರಿಯಬೇಕು. ಕೊನೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೆಣಸನ್ನು ಹುರಿಯಬೇಕು. ಈ ಮಸಾಲೆ ಸಾಮಗ್ರಿಗಳನ್ನು ತೆಂಗಿನತುರಿ ಸೇರಿಸಿ , ಸ್ವಲ್ಪ ನೀರು ಸೇರಿಸಿಕೊಂಡು ರುಬ್ಬಿಟ್ಟು ಕೊಳ್ಳಬೇಕು.
ಬೇಯಿಸಿದ ದಂಟು, ಕಾಳು, ತುಂಡು ಮಾಡಿದ ಸೊಪ್ಪು, ಟೊಮೇಟೊ, ಈರುಳ್ಳಿ, ಹುಣಸೆ ರಸ, ಉಪ್ಪು, ಸ್ವಲ್ಪ ಬೆಲ್ಲ ಸೇರಿಸಿ 5 ನಿಮಿಷ ಕುದಿಸಬೇಕು. ಕೊನೆಯಲ್ಲಿ ರುಬ್ಬಿದ ಮಸಾಲೆ ಸೇರಿಸಿ, 5-10 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ, ಒಲೆಯಿಂದ ಇಳಿಸಬೇಕು. ಕೊನೆಯಲ್ಲಿ ಒಗ್ಗರಣೆ ಸೇರಿಸಿ.

6 comments:

Anonymous said...

ಬಸಳೆ ಸೊಪ್ಪು ಇಷ್ಟೆಲ್ಲಾ famous ಅಂತ ಗೊತ್ತೇ ಇರಲಿಲ್ಲ! ನಾಳೆ ಇದೇ ಸಾಂಬಾರ್!

PaLa said...

ಬಸಳೆ ಸೊಪ್ಪಿನ ಹುಳಿ, ಮುದ್ದೆ ಒಳ್ಳೆ ಕಾಂಬಿನೇಶನ್ನು

shivu.k said...

ವನಿತಾ,

ಬಸಳೆ ಸೊಪ್ಪು ತಿಂದು ತುಂಬಾ ದಿನವಾಗಿತ್ತು. ಈಗ ಈ ರೀತಿ ಸಾಂಬರ್ ಮಾಡಿಕೊಂಡು ತಿನ್ನಲು ಕಾರಣವೂ ಸಿಕ್ಕಿತ್ತು. ಧನ್ಯವಾದಗಳು..

ವನಿತಾ / Vanitha said...

ಜ್ಯೋತಿ, famous ಅಂತಲ್ಲ..ನಂಗೆ ಸಿಗುವ ಕೆಲವೇ ಕೆಲವು Indian ತರಕಾರಿಗಳಲ್ಲಿ ಇದು ಒಂದು..ಹಾಗು ನಮ್ಮನೆಯವರ favourite..

Pala, ಹೌದಾ..ಗೊತ್ತಿರಲ್ಲಿಲ್ಲ..ತಿಳಿಸಿದ್ದಕ್ಕೆ ಧನ್ಯವಾದಗಳು.

ಧನ್ಯವಾದಗಳು ಶಿವು, ಸಾಂಬಾರ್ ಮಾಡಿ ತಿಂದಾಯ್ತಾ..?

Anonymous said...

wikipedia link ನೋಡಿ ಹಾಗಂದೆ ಅಷ್ಟೇ, ಬೆಂಗಳೂರಲ್ಲಿ ಬಸಳೆ ಸಿಗುವುದು ಕಷ್ಟ :-(

ವನಿತಾ / Vanitha said...

OK jyothi..summage thamaashe maadide..