My photo
ಕರಾವಳಿ ಹುಡುಗಿ :)

Monday, June 8, 2009

ಖರ್ಜೂರ ಹಲ್ವ / DATE HALWA

ಬೇಕಾಗುವ ಸಾಮಗ್ರಿಗಳು:
ಖರ್ಜೂರ - 10
ಹಾಲು - 1 ಕಪ್ (160 ml)
ಸಕ್ಕರೆ - ½ ಕಪ್ (ನಿಮ್ಮ ರುಚಿಗೆ ಹೊಂದಿಕೊಂಡು)
Dry fruits (ಬಾದಾಮಿ, ಪಿಸ್ತಾ, ಗೋಡಂಬಿ, ಒಣ ದ್ರಾಕ್ಷಿ-ಎಲ್ಲ ಸಣ್ಣಗೆ ಕಟ್ ಮಾಡಿ) - 1ಕಪ್
ತುಪ್ಪ - ¼ ಕಪ್
ಏಲಕ್ಕಿ ಪುಡಿ - ಸ್ವಲ್ಪ
ಮಾಡುವ ವಿಧಾನ:
ಸಣ್ಣಗೆ ತುಂಡು ಮಾಡಿದ ಪಿಸ್ತಾ, ಬಾದಾಮಿ, ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ತೆಗೆದಿಡಬೇಕು. ಖರ್ಜೂರದ ಬೀಜ ತೆಗೆದು, ಅದನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ದಪ್ಪತಳದ ಪಾತ್ರೆಯಲ್ಲಿ, ಹಾಲು ಮತ್ತು ಖರ್ಜೂರವನ್ನು ಹದಉರಿಯಲ್ಲಿ ಖರ್ಜೂರ ಮೆತ್ತಗೆ ಆಗುವ ತನಕ (10 ನಿಮಿಷ) ಕುದಿಸಬೇಕು. ಇದಕ್ಕೆ ಸಕ್ಕರೆ ಮತ್ತು ತುಪ್ಪ ಸೇರಿಸಿ, ತಳ ಬಿಡುವ ತನಕ (20 ನಿಮಿಷ) ಕಾಯಿಸಬೇಕು. ಕೊನೆಯಲ್ಲಿ ಏಲಕ್ಕಿ ಪುಡಿ, ಹುರಿದಿಟ್ಟ ಡ್ರೈ fruit ಗಳನ್ನು ಸೇರಿಸಿ, ತುಪ್ಪ ಸವರಿದ ಪ್ಲೇಟ್ ನಲ್ಲಿ ಹರಡಿ ಫ್ರೀಜರ್ ನಲ್ಲಿ 30 ನಿಮಿಷ ಇಟ್ಟು, ನಂತರ ಬೇಕಾದ ಆಕಾರಕ್ಕೆ ತುಂಡು ಮಾಡಿದರೆ, ಖರ್ಜೂರ ಹಲ್ವ ಸಿದ್ದ. ಇದನ್ನು ಫ್ರಿಜ್ ನಲ್ಲಿ ಇಟ್ಟರೆ ತಿನ್ನಲು ತುಂಬ ರುಚಿಯಾಗಿರುತ್ತದೆ.

6 comments:

PaLa said...

ಸೂಪರ್ರಾಗಿದೆ

Ittigecement said...

ಖರ್ಜೂರದ ಹಲ್ವಾ ಹೊಸದು...

ಇಂದೇ ಮನೆಯಲ್ಲಿ ಮಾಡಲು ಹೇಳುವೆ....

ನಿಮ್ಮ ಬ್ಲಾಗಿಗೆ ಬಂದರೆ ಬಾಯಲ್ಲಿ ನೀರು ತರಿಸಿ ಬಿಡ್ತೀರಿ...

shivu.k said...

ವನಿತಾ,

ನಿಮ್ಮ ಹೊಸ ತಿಂಡಿಯನ್ನು ನೋಡುತ್ತಿದ್ದರೇ ಬಸುರಿ ಬಯಕೆಯಂತೆ ತಿನ್ನುವ ಆಸೆಯಾಗುತ್ತದಲ್ರೀ.....ಮಾಡಿಸೋಣ ನನ್ನ ಶ್ರೀಮತಿ ಮನೆಯಲ್ಲಿ ಇಲ್ವಲ್ಲರೀ...

Savi-Ruchi said...

karjura halwa recipe na tumba dinadinda hudukuttha idde, dhanyavadagalu heli kottiddakke, ee shanivara namma maneli idu guarantee :)

ವನಿತಾ / Vanitha said...

Thanks Pala, Prakash and shivu..

@ಶಿವು..ಹೇಮಶ್ರೀ ಬಂದ ಮೇಲೆ ಮಾಡಿ, ನಂತರ ತಿಳಿಸಿ..

@sush..thanks nimma abhipraaya tilisiddakke..maadi nanthara tilisi...nimma savi-ruchi thumba chennagide..

vani said...

Thanks vanitha I will do as soon as I get all things, it seems really good