My photo
ಕರಾವಳಿ ಹುಡುಗಿ :)

Thursday, June 18, 2009

ಕಲ್ಲಂಗಡಿ ಹಣ್ಣಿನ ಸಿಪ್ಪೆ ಪಲ್ಯ



ನನ್ನ ಅಮ್ಮ ಈ ಪಲ್ಯ ಮಾಡ್ತಿದ್ದರು. ಆದ್ರೆ ಈ ಪಲ್ಯ ಬೇರೆ ಕಡೆಯಲ್ಲೂ ಫೇಮಸ್ ಇದೆ ಎಂದು ಪಾಕಚಂದ್ರಿಕೆ ಯಲ್ಲಿ ನೋಡಿ ತಿಳಿಯಿತು. ಕಲ್ಲಂಗಡಿ ಹಣ್ಣು ತಿಂದಾದ ನಂತರ ಉಳಿಯುವ ಸಿಪ್ಪೆಯನ್ನು ಬಳಸಿ ಈ ಪಲ್ಯವನ್ನು ಮಾಡಬಹುದು.

ಬೇಕಾಗುವ ಸಾಮಗ್ರಿಗಳು :
ಕಲ್ಲಂಗಡಿ ಹಣ್ಣಿನ ಸಿಪ್ಪೆ - 2-3 ಕಪ್ (ಸಿಪ್ಪೆಯನ್ನು ಒಂದು ಸಲ ನೀರಲ್ಲಿ ತೊಳೆದು ಸಣ್ಣಗೆ ಹೆಚ್ಚಬೇಕು)
ಈರುಳ್ಳಿ - ಸ್ವಲ್ಪ (ಸಣ್ಣಗೆ ಕಟ್ ಮಾಡಿ)
ಟೊಮೇಟೊ - ಸ್ವಲ್ಪ (ಸಣ್ಣಗೆ ಕಟ್ ಮಾಡಿ)

ಮಸಾಲೆಗೆ
ಕೊತ್ತಂಬರಿ ಪುಡಿ - ¾ ಚಮಚ
ಜೀರಿಗೆ ಪುಡಿ - ¾ ಚಮಚ
ಮೆಣಸಿನ ಪುಡಿ (ಬ್ಯಾಡಗಿ) - ¾ ಚಮಚ
ಅರಿಶಿನ ಪುಡಿ - ಸ್ವಲ್ಪ
ತೆಂಗಿನ ಕಾಯಿ ತುರಿ - ¾ ಕಪ್
ಉಪ್ಪು - ರುಚಿಗೆ ತಕ್ಕಷ್ಟು

ಒಗ್ಗರೆಣೆಗೆ
ಎಣ್ಣೆ, ಸಾಸಿವೆ, ಉದ್ದಿನಬೇಳೆ, ಬೆಳ್ಳುಳ್ಳಿ, ಕರಿಬೇವಿನ ಎಲೆ.

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ನಂತರ ಒಗ್ಗರಣೆ ಸೇರಿಸಿ, ಕೊನೆಯಲ್ಲಿ ಈರುಳ್ಳಿ ಹಾಕಿ ಸ್ವಲ್ಪ ಹುರಿಯಬೇಕು. ನಂತರ ಟೊಮೇಟೊ (ಅಥವಾ ಸ್ವಲ್ಪ ಹುಣಸೆ ರಸ) , ಹೆಚ್ಚಿದ ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಾಗು ¼ ಕಪ್ ನೀರು ಸೇರಿಸಿ, 10-15 ನಿಮಿಷ ಹದ ಉರಿಯಲ್ಲಿ ಬೇಯಿಸಬೇಕು. ಕೊನೆಯಲ್ಲಿ ನೀರು ಆವಿಯಾದ ನಂತರ ಎಲ್ಲ ಮಸಾಲೆಯ ಸಾಮಗ್ರಿಗಳನ್ನು ಸೇರಿಸಿ, ಉಪ್ಪು, ಕಾಯಿತುರಿ ಸೇರಿಸಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಒಲೆಯಿಂದ ಇಳಿಸಿದರೆ ಪಲ್ಯ ಸಿದ್ದ.

4 comments:

Ramya's Mane Adige said...

awesome!! didnt know i cud use watermelon skin for something!!

shivu.k said...

ರೂಪ,

ಏನ್ರೀ ನೀವು ಎಂಥೆಂಥದ್ರಲ್ಲಿ ಪಲ್ಯ ಮಾಡುತ್ತೀರಿ...! ನಮ್ಮ ತನದ ಗಂಧಗಾಳಿ ಇಲ್ಲದ ದೂರದ ಊರಿನಲ್ಲಿದ್ದುಕೊಂಡು ನಮಗೆಲ್ಲಾ ಇಂಥ ಹೊಸ ರುಚಿಗಳನ್ನು ತೋರಿಸಿಕೊಡುತ್ತಿರುವುದು....ನನಗಂತೂ ತುಂಬಾ ಖುಷಿಯಾಗುತ್ತೆ...

ಧನ್ಯವಾದಗಳು..

PaLa said...

"ಕಸದಿಂದ ರಸ" - ಕಲ್ಲಂಗಡಿ ಸಿಪ್ಪೆ ದನಕ್ಕೆ ಹಾಕಲು ಮಾತ್ರ ಯೋಗ್ಯ ಎಂಬ ನನ್ನ ಅನಿಸಿಕೆ ಬದಲಿಸಬೇಕಿದೆ!

ವನಿತಾ / Vanitha said...

@Ramya..even its taste awesome..!!!

Thanks Shivu and pala..