My photo
ಕರಾವಳಿ ಹುಡುಗಿ :)

Saturday, June 27, 2009

ಚಕ್ಕುಲಿ / CHAKKULI



ಮನೆಯಲ್ಲಿದ್ದಾಗ ಅಮ್ಮ ಮಾಡಿದ ಚಕ್ಕುಲಿಯನ್ನು ಡಬ್ಬ ಖಾಲಿಯಾಗುವ ತನಕ ತಿನ್ನೋದು ಬಿಟ್ರೆ, ಹೇಗೆ ಮಾಡುವುದು ಎಂದು ತಿಳಿಯುವ ಗೋಜಿಗೆ ಹೋಗಿರಲಿಲ್ಲ. ನಂತರ ಕೆಲವು ವರ್ಷಗಳ ಕಾಲ ಮೈಸೂರಿನಲ್ಲಿದ್ದಾಗ, ಅಯ್ಯಂಗಾರ್ಸ್ ಬೇಕರಿ, ಶ್ರೀಕೃಷ್ಣ ಬೇಕರಿ, ಮಹಾಲಕ್ಷ್ಮಿ ಸ್ವೀಟ್ಸ್, ಲಾಯಲ್ ವರ್ಲ್ಡ್...ಹೀಗೆ ಎಲ್ಲಾ ಕಡೆ ಒಳ್ಳೆಯ ತಿಂಡಿಗಳು ಸಿಕ್ತಾ ಇದ್ದಾಗ ನಿಜವಾಗಿಯೂ ಮನೆಯಲ್ಲಿ ಮಾಡುವ ಪ್ರಮೇಯವೇ ಬಂದಿರಲಿಲ್ಲ. ಕೊನೆಗೂ ಇಲ್ಲಿ ಬಂದ ಮೇಲೆ ಸ್ವಂತ ಮಾಡಿದ್ರೆನೇ ತಿನ್ನೋ ಭಾಗ್ಯ, ಹೀಗೆ ಶುರುವಾಯಿತು ಚಕ್ಕುಲಿ ಪ್ರಯೋಗ.
(ಫ್ರೆಂಡ್ ಕೃಷ್ಣವೇಣಿಯ ಬ್ಲಾಗ್ ನೋಡಿ ಮಾಡಿದ್ದು)
ಚಕ್ಕುಲಿ ಮಾಡಲು ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ - 2 ಕಪ್
ಉದ್ದಿನಬೇಳೆ - 1 ಕಪ್ (ಅಥವಾ 1½ ಕಪ್ ನಷ್ಟು ಉದ್ದಿನ ಪುಡಿ)
ಜೀರಿಗೆ - 1 ಚಮಚ
ಬೆಣ್ಣೆ - 4 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಕರಿಯಲು

ಮಾಡುವ ವಿಧಾನ:
ಅಕ್ಕಿಯನ್ನು 3-4 ಗಂಟೆ ಅಥವಾ ಇಡೀ ರಾತ್ರಿ ನೀರಿನಲ್ಲಿ ನೆನಸಿಡಬೇಕು. ನಂತರ ಅದನ್ನು ತೊಳೆದುಕೊಂದು, ಸ್ವಲ್ಪ ನೀರು ಸೇರಿಸಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಉದ್ದಿನಬೇಳೆಯನ್ನು ಘಂ ಎನ್ನುವ ತನಕ ಹುರಿದುಕೊಂಡು, ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಬೇಕು. ಕೊನೆಯಲ್ಲಿ ರುಬ್ಬಿದ ಅಕ್ಕಿಗೆ, ಉದ್ದಿನಬೇಳೆ ಪುಡಿ, ಬೆಣ್ಣೆ, ಜೀರಿಗೆ, ಉಪ್ಪು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು 30 ನಿಮಿಷ ಮುಚ್ಚಿ ಇಡಬೇಕು.
ಈ ಹಿಟ್ಟನ್ನು ಚಕ್ಕುಲಿ ಅಚ್ಚಿನಲ್ಲಿ ತುಂಬಿಸಿ, ಒಂದು wax ಪೇಪರ್ ಅಥವಾ ಪ್ಲಾಸ್ಟಿಕ್ ಶೀಟ್ ನ ಮೇಲೆ ಒತ್ತಿಕೊಂಡು, ಎಣ್ಣೆಯಲ್ಲಿ ಕರಿದರೆ, ಚಕ್ಕುಲಿ ಸಿದ್ದ.

7 comments:

shivu.k said...

ವನಿತಾ,


ಚಕ್ಕುಲಿ ಸೂಪರ್ ಆಗಿದೆ...ಹೇಗೂ ಇಲ್ಲಿ ಮಳೆಗಾಲ ಶುರುವಾಗಿ ತಣ್ಣಗೆ ಗಾಳಿ ಬೀಸುತ್ತಿದೆ...ಈ ಸಮಯದಲ್ಲಿ ಇಂಥ ಐಟಮ್ ಇದ್ದರೇ ಬಾಯಿ ಚಪ್ಪರಿಸುವುದಕ್ಕೆ ಬಲು ಮಜಾ ಅಲ್ವಾ....

ಧನ್ಯವಾದಗಳು.

ರೂpaश्री said...

ನಾನು ಮಾಡೋದಕ್ಕಿಂತ ಭಿನ್ನವಾಗಿದೆ ನಿಮ್ಮ ಚಕ್ಕುಲಿಗಳು! ನಾನು ಅಕ್ಕಿ+ ಹುರಿ ಕಡ್ಲೆ ಹಿಟ್ಟು+ಬೇಯಿಸಿದ ಹೆಸರುಬೇಳೆ ಹಾಕಿ ಮಾಡ್ತೀನಿ... ನಿಮ್ಮ ರೀತಿ ಪ್ರಯತ್ನಿಸುವೆ..

Rashmi said...

ಹಲೋ ವನಿತಾ ,

ನೀವು ಹೇಳಿರೋದು ಸರಿಯಾಗಿದೆ - ಅಂತ ಒಳ್ಳೊಳ್ಳೆ ತಿಂಡಿ ಆರಾಮಾಗಿ ಸಿಗಬೇಕಾದರೆ ಮನೆಯಲ್ಲಿ ಪ್ರಯತ್ನಿಸೋ ಪ್ರಮೇಯ ಬರ್ಲೆ ಇಲ್ಲ . ಆದರೆ ಈಗ ಎಲ್ಲ ಮನೆಯಲ್ಲಿ ಪ್ರಯತ್ನಿಸೋದ್ರಿಂದ , ಹೊರಗಡೆ ಸಿಗೋ ತಿಂಡಿ ಏನು ಇಷ್ಟ ಆಗ್ತಾ ಇಲ್ಲ :d.
ನಿಮ್ಮ ಚಕ್ಕುಲಿ ರುಚಿಯಾಗಿ ಕಾಣುತ್ತಿದೆ , ಸದ್ಯದಲ್ಲೇ ಪ್ರಯತ್ನಿಸುವೆ :)

Anonymous said...

sooper aagide madam

ಧರಿತ್ರಿ said...

ನಿಮ್ಮ ಪ್ರಪಂಚ ಭರ್ಜರಿಯಾಗೇ ಸ್ವಾಗತಿಸಿದೆ ವನಿತಾ...ಬಾಯಲ್ಲಿ ನೀರು ಬಂತು..ನಂಗೂ ಬೇಕು ಬಿಸಿಬಿಸಿ ಚಕ್ಕುಲಿ
-ಧರಿತ್ರಿ

ಜಲನಯನ said...

ವನಿತಾ ಮೇಡಂ....ಏನ್ರೀ...ನಮ್ಮನೇಯವ್ರನ್ನ ಮನೋಧರ್ಮಾನ ಕೆಡಿಸ್ತಾ ಇದ್ದೀರಾ..?? ನಿಮ್ಮ ಮೇಲೆ..ಮಹನೀಯ ವಿಮೋಚನಾ ಸಂಘಕ್ಕೆ ದೂರು ಕೊಡಬೇಕು ಅಂತ ಇದ್ದೀನಿ....!!! ಹಾಂ...ಹಾಯಾಗಿ ಬ್ಲಾಗ್ ನೋಡ್ಕೊಂಡು ಬ್ಲಾಗ್ ಪೋಸ್ಟ್ ಮಾಡ್ಕೊಂಡು ಇದ್ದೋನಿಗೆ..ಅದೇನೋ ಹೇಳ್ತಾರಲ್ಲ...ಆಯ್ಕಂಡ್ತಿನ್ನೋ ಕೋಳಿ ಕಾಲು ಮುರ್ದಂಗೆ...ಈ ವಾಗಿ ನನ್ನ ಅರ್ಧಾಂಗಿ..ಅಷ್ಟೊಂದು ಮಧ್ಯರಾತ್ರಿ ವರ್ಗೂ ಏನ್ಮಾಡ್ತಿರ್ತೀರ..?/ ಅಂತ ಒಂದ್ಸರ್ತಿ ನಿಮ್ಮ ಬ್ಲಾಗ್ ನೋಡ್ತಿದ್ದುದನ್ನು ನೋಡಿ ಬಿಟ್ಲು..ಅದೇನೋ ಬರೆದವರಲ್ರೀ..ಅದು ಹ್ಯಾಗೆ ಮಾಡ್ಬೇಕು, ಇದು ಹ್ಯಾಗೆ ಮಾಡ್ಬೇಕು..ಅಂತ.. ಸ್ವಲ್ಪ ಮಾಡ್ಬಹುದಲ್ಲಾ..ಅಂತ...ಸೌಟು ಕೈಗೆ ಕೊಡ್ತಿದ್ದಾಳೆ ಆಗಾಗ....
ಹಹಹಹ....ಸುಮ್ನೇ..ಹಾಗೇ..ತಮಾಷೆಗೆ ಹೇಳ್ದೆ...ಒಳ್ಳೆ ಬ್ಲಾಗ್ ಪೋಸ್ಟ್..ನಮಗೂ ಕಲಿಯೋಕೆ ತುಂಬಾ ಸಿಗುತ್ತೆ ನಿಮ್ಮ ಬ್ಲಾಗಿಂದ....Thanks

ವನಿತಾ / Vanitha said...

@ಹೌದು ಶಿವು...ಮಳೆಗಾಲದಲ್ಲಿ ತಿನ್ನೋಕ್ಕೆ ಚೆನ್ನಾಗಿರುತ್ತೆ ..ಥ್ಯಾಂಕ್ಸ್ ನಿಮ್ಮ ಕಾಮೆಂಟ್ ಗೆ

@ರೂಪಶ್ರೀ ..ನೀವು ಹೇಳಿದ ಹಾಗೆ ಗೊತ್ತಿಲ್ಲ, ಟ್ರೈ ಮಾಡಿ ನಂತರ ತಿಳಿಸುತ್ತೇನೆ..

@ರಶ್ಮಿ....ಪ್ರಯತ್ನಿಸಿ ನಂತರ ತಿಳಿಸಿ..

ಥ್ಯಾಂಕ್ಸ್ ದರಿತ್ರಿ..

@ಜಲನಯನ..ಚೆನ್ನಾಗಿದೆ ನಿಮ್ಮ ಕಾಮೆಂಟ್ ಹ ಹ..ಧನ್ಯವಾದಗಳು ..
ಮತ್ತೊಮ್ಮೆ ಎಲ್ಲರಿಗು ಧನ್ಯವಾದಗಳು ...