My photo
ಕರಾವಳಿ ಹುಡುಗಿ :)

Sunday, August 2, 2009

ಪಾಸ್ತಾ / PASTA (Kids Favuorite; Indian Version)


ಬೇಕಾಗುವ ಸಾಮಗ್ರಿಗಳು:
ಪಾಸ್ತಾ - 200g
ಈರುಳ್ಳಿ - ½ ಕಪ್
ಕ್ಯಾಬೇಜ್ - ½ ಕಪ್ (ಉದ್ದಕೆ ತೆಳ್ಳಗೆ ಹೆಚ್ಚಿ)
Capsicum – ¼ ಕಪ್ (ಉದ್ದಕೆ ತೆಳ್ಳಗೆ ಹೆಚ್ಚಿ)
ತರಕಾರಿಗಳು - 1 ಕಪ್ (ಬೀನ್ಸ್, ಕ್ಯಾರೆಟ್, ಬಟಾಣಿ - ಸಣ್ಣಗೆ ಹೆಚ್ಚಿ ಬೇಯಿಸಿಟ್ಟುಕೊಳ್ಳಬೇಕು)
ಟೊಮೇಟೊ ಸಾಸ್ - 1-2 ಚಮಚ
ಸೋಯಾ ಸಾಸ್ - ½ ಚಮಚ
Heavy whipping cream - 2 ಟೇಬಲ್ ಸ್ಪೂನ್
Paramesan Cheese grated– 2-3 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಪಾಸ್ತಾವನ್ನು ಪ್ಯಾಕೆಟ್ ನಲ್ಲಿರುವ ಸೂಚನೆಯಂತೆ 10-12 ನಿಮಿಷ ಬೇಯಿಸಿ, ನೀರನ್ನು ಬಸಿಯಬೇಕು. ಪಾಸ್ತಾ ಬೇಯಿಸುವಾಗ ಕುದಿಯುವ ನೀರಿಗೆ ಸ್ವಲ್ಪಉಪ್ಪು ಹಾಗು 2 ಚಮಚ ಎಣ್ಣೆ ಹಾಕಿದರೆ ಪಾಸ್ತಾ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಬಸಿದಿಟ್ಟ ಪಾಸ್ತಾಕ್ಕೆ 2 ಚಮಚ ಎಣ್ಣೆ (olive oil ಹಾಕಿದರೆ ಉತ್ತಮ) ಹಾಕಿ ಮಗುಚಿಕೊಂಡು ಬದಿಯಲ್ಲಿಡಬೇಕು.
ಇದೇ ಸಮಯದಲ್ಲಿ ಒಂದು ದಪ್ಪ ತಳದ ಪಾತ್ರೆಗೆ 4 ಚಮಚ ಎಣ್ಣೆ ಹಾಕಿ, ಈರುಳ್ಳಿಯನ್ನು ಕೆಂಬಣ್ಣ ಬರುವವರೆಗೆ ಹುರಿಯಬೇಕು. ಇದಕ್ಕೆ ಕ್ಯಾಬೇಜ್, ನಂತರ Capsicum ಸೇರಿಸಿಕೊಂಡು 3-4 ನಿಮಿಷ ಹುರಿಯಬೇಕು. ಬೇಯಿಸಿದ ತರಕಾರಿಗಳನ್ನು (ನೀರು ಸೇರಿಸಬಾರದು) ಸೇರಿಸಿಕೊಂಡು, ½ ಚಮಚ ಉಪ್ಪು, ಟೊಮೇಟೊ ಮತ್ತು ಸೋಯಾ ಸಾಸ್ ಸೇರಿಸಿಕೊಂಡು ಚೆನ್ನಾಗಿ ಮಗುಚಬೇಕು. ಕೊನೆಯಲ್ಲಿ 2 ಟೇಬಲ್ ಚಮಚ ಕ್ರೀಂ ಹಾಗು cheeseನ್ನು ಸೇರಿಸಿ, ಬಿಸಿ ಬಿಸಿಯಾಗಿರುವಾಗಲೇ ತಿನ್ನಲು ಕೊಡಿ.
ಬೇಕಿದ್ದರೆ ಹಸಿಮೆಣಸನ್ನು (ಸಣ್ಣಗೆ ಹೆಚ್ಚಿ, ತರಕಾರಿಯೊಂದಿಗೆ fry ಮಾಡಿ) ಅಥವಾ ಕರಿಮೆಣಸಿನ ಪುಡಿಯನ್ನು (ಕೊನೆಯಲ್ಲಿ) ಸೇರಿಸಿಕೊಳ್ಳಬಹುದು.

ಇದು ಮಕ್ಕಳಿಗೆ ತುಂಬಾ ಇಷ್ಟವಾಗುವ ತಿಂಡಿ.

6 comments:

Ittigecement said...

ಒಂದು ಸಾರಿ ಹೊಟೆಲ್‍ನಲ್ಲಿ ರುಚಿನೋಡಿದ್ದೆವು...
ಇದರ ಸ್ಮೆಲ್(ವಾಸನೆ) ಇಷ್ಟವಾಗಲಿಲ್ಲವಾಗಿತ್ತು...

ನಿಮ್ಮ ಫೋಟೊ, ಮಾಡುವ ವಿಧಾನ ನೋಡಿದ ಮೇಲೆ ಇಂದೇ ಮಾಡಿಸುವೆ...
ನಂತರ ಮತ್ತೆ ಅಭಿಪ್ರಾಯ ತಿಳಿಸುವೆ....

ಓವನ್‍ನಲ್ಲಿ ಮಾಡುವ ತಿಂಡಿಗಳ ಬಗೆಗೆ ತಿಳಿಸುವಿರಾ...?

ಪ್ರಕಾಶಣ್ಣ..

ವನಿತಾ / Vanitha said...

@ಪ್ರಕಾಶಣ್ಣ,
Mostly ನಿಮಗೆ pastaಕ್ಕೆ
ಹಾಕುವ ಇಟಾಲಿಯನ್ herbsಗಳು ಇಷ್ಟ ವಾಗಲಿಲ್ಲವಾಗಿರಬಹುದು,ಖಾರ ಬೇಕಿದ್ದರೆ ಸ್ವಲ್ಪ ಚಿಲ್ಲಿ ಸಾಸ್ ಕೂಡ ಹಾಕಿ,ಚೆನ್ನಾಗಿರುತ್ತದೆ..cheese ಹಾಕದೆಯೂ ಮಾಡಬಹುದು.simple ಆಗಿ ಮನೆಯಲ್ಲಿ ಮಾಡಿ ನಂತರ ತಿಳಿಸಿ..oven ತಿಂಡಿಗಳನ್ನು ನಿದಾನದಲ್ಲಿ time ಆದಾಗ ಬರಿಯುತ್ತೇನೆ..Thanku..

ಪಾಚು-ಪ್ರಪಂಚ said...

ವನಿತಾ ಅವರೇ,

ನಮ್ಮ ಆಫೀಸ್ ನಲ್ಲಿ ಹೊಸದಾಗಿ ಪಾಸ್ತ ಕೌಂಟರ್ ತೆರೆದಿದ್ದಾರೆ. ಇನ್ನೂ ಅದರ ರುಚಿ ನೋಡಿಲ್ಲ. ಇವತ್ತು ನಿಮ್ಮ ಬ್ಲಾಗ್ ಕಡೆ ಬಂದರೆ ಇಲ್ಲೂ ಅದೇ..!
ನಾಳೆಯೇ ರುಚಿ ನೋಡುವೆ..:-)

shivu.k said...

ವನಿತಾ,

ಪಾಸ್ತಾ ಚೈನಿಸ್ ಶೈಲಿಯಲ್ಲಿ ಅದರ ರೆಡಿ ಪ್ರಾಡೆಕ್ಟ್ ತಂದು ಮಾಡಿ ತಿಂದುಬಿಡುತ್ತಿದ್ದೆವು. ಈಗ ನಮ್ಮದೇ ಶೈಲಿಯಲ್ಲಿ ರೆಸಿಪಿ ಕೊಟ್ಟಿದ್ದೀರಿ..ನೋಡೋಣ ಪ್ರಯತ್ನಿಸುತ್ತೇವೆ...

ಧನ್ಯವಾದಗಳು.

Anonymous said...

ವನಿತಾ, ಇದು ಮಕ್ಕಳಿಗೆ ತುಂಬಾ ಇಷ್ಟವಾಗುವ ತಿಂಡಿ ಅಂತ ಯಾವ ಗ್ಯಾರಂಟಿ ಮೇಲೆ ಹೇಳ್ತೀರಾ? :)

ನೂಡಲ್ಸ್ ತರ ಈ ಪಾಸ್ತಾ ಕೂಡ ಬ್ಯಾಚುಲರ್ ಫುಡ್ ಆಗೋ ಅರ್ಹತೆಗಳನ್ನು ಹೊಂದಿದೆ ಅನ್ಸುತ್ತೆ. ಆದರೆ ಬಹಳಷ್ಟು ಜನರಿಗೆ ಇದು ಯಾಕೋ ಇಷ್ಟಾ ಆಗ್ತಾ ಇಲ್ಲ. ಇಂಡಿಯನ್ ಟಚ್ ಜಾಸ್ತಿನೆ ಕೊಡಬೇಕಾಗಿದೆ ಇದಕ್ಕೆ .

-ವಿಕಾಸ್ ಹೆಗಡೆ.

ವನಿತಾ / Vanitha said...

ವಿಕಾಸ್ ಹೆಗಡೆ ಅವರೇ,
ನಾನು ತಿಳಿಸಿದ ಪಾಸ್ತಾ ಸ್ವಲ್ಪ ಸ್ವೀಟ್ ಆಗಿರುತ್ತದೆ, ಹಾಗು ನನ್ನ ಮಗಳಿಗೆ, ಮತ್ತು ನಮ್ಮ ಮನೆಗೆ ಬಂದ ಮಕ್ಕಳಿಗೆ ಇದು ಇಷ್ಟವಾಗಿದೆ. ಇದರ ಅರ್ಥ ಎಲ್ಲ ಮಕ್ಕಳಿಗೂ ಪಾಸ್ತಾ ಇಷ್ಟ ಆಗಲೇ ಬೇಕು ಎಂದು ‘ಗ್ಯಾರಂಟಿ’ ಕೊಡ್ತಾ ಇಲ್ಲ ಹಾಗು ಮಕ್ಕಳ ವಿಷಯದಲ್ಲಿ ಚಾಕಲೇಟ್, ಐಸ್ ಕ್ರೀಂ ಬಿಟ್ಟರೆ ಬೇರೆ ತಿಂಡಿಗಳು ಅವರಿಗೆ ಯಾವಾಗಲೂ ಇಷ್ಟವಾಗುವುದು impossible ಕೂಡ.... ಇಲ್ಲಿ ನನ್ನ ಉದ್ದೇಶ ಪಾಸ್ತ ದ flavourನ್ನು ಹಾಗೆಯೇ ಉಳಿಸಿಕೊಳ್ಳುವುದು..ಇನ್ನು ಹೆಚ್ಚು indianise ಮಾಡಿದರೆ ಅದು ಪಾಸ್ತಾ ಬಿಟ್ಟು ‘ಉಪ್ಪಿಟ್ಟು’ ಆಗುವ ಸಾಧ್ಯತೆಗಳು ಹೆಚ್ಚು!!!!...ನಿಮಗೆ ತಿಂಡಿ ಇಷ್ಟವಾದರೆ ಮಾಡಿ ತಿಳಿಸಿ. Blog ನೋಡಿದ್ದಕ್ಕೆ ಧನ್ಯವಾದಗಳು.