My photo
ಕರಾವಳಿ ಹುಡುಗಿ :)

Tuesday, December 8, 2009

ನೀರು ದೋಸೆ ಮತ್ತು ಸೌತೆಕಾಯಿ ದೋಸೆ (neer Dose & Southekayi Dose)

ನೀರು ದೋಸೆ ಮಂಗಳೂರಿಗರ ಫೇವರಿಟ್ ದೋಸೆ. ಇದರ ಹಿಟ್ಟು ಉಳಿದ ದೋಸೆ ಹಿಟ್ಟಿಗಿಂತ ತುಂಬಾ ತೆಳ್ಳಗಾಗಿರುವ ಕಾರಣ ಈ ಹೆಸರು. ಇನ್ನೊಂದು ವಿಶೇಷ ಎಂದರೆ ಇದನ್ನು ಅಕ್ಕಿ ರುಬ್ಬಿದ ತಕ್ಷಣವೇ ಮಾಡಬೇಕು.


ಸಾಮಗ್ರಿಗಳು:
ಅಕ್ಕಿ – 1 ಕಪ್
ತೆಂಗಿನ ತುರಿ – ¼ ಕಪ್ (ತೆಂಗಿನ ತುರಿ ಸೇರಿಸದೆ ಕೂಡ ಮಾಡಬಹುದು)
ಉಪ್ಪು – ¾ ಚಮಚ / ರುಚಿಗೆ ತಕ್ಕಷ್ಟು
ನೀರು – 1 ½ ಕಪ್ ನಷ್ಟು

ವಿಧಾನ:

ಅಕ್ಕಿಯನ್ನು ಮುಳುಗವಷ್ಟು ನೀರಿನಲ್ಲಿ 6-8 ಗಂಟೆ ನೆನೆಸಿರಿ. ನಂತರ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ತೆಂಗಿನ ತುರಿ ಹಾಗು ½ ಕಪ್ ನಷ್ಟು ನೀರು ಸೇರಿಸಿಕೊಂಡು ಮಿಕ್ಸಿಯಲ್ಲಿ ನಯವಾಗಿ ರುಬ್ಬಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗು 1 ಕಪ್ ನಷ್ಟು ನೀರು ಸೇರಿಸಿ ಹಿಟ್ಟನ್ನು ಮಿಕ್ಸ್ ಮಾಡಿಟ್ಟುಕೊಳ್ಳಿ.

ಎಣ್ಣೆ ಸವರಿದ ಕಾದ ಕಾವಲಿಯಲ್ಲಿ ಒಂದು ಸೌಟು ಹಿಟ್ಟನ್ನು ತೆಗೆದುಕೊಂಡು ದೋಸೆಯನ್ನು ಮಾಡಬೇಕು. ಈ ದೋಸೆಯನ್ನು ಪುನ: ಮಗುಚಿ ಹಾಕುವ ಅಗತ್ಯ ಇರುವುದಿಲ್ಲ.

ಸಾಮಾನ್ಯವಾಗಿ, ನೀರುದೋಸೆ ಮಾಡುವಾಗ ಕಾವಲಿಯ ಒಂದು ಕೊನೆಯಲ್ಲಿ ಹಿಟ್ಟನ್ನು ಹಾಕಿ, ಕಾವಲಿಯನ್ನು ಕೈಯಿಂದ ಅಲ್ಲಾಡಿಸಿದರೆ ದೋಸೆಹಿಟ್ಟು ಇಡೀ ಕಾವಲಿಯಲ್ಲಿ ಹರಡಿಕೊಳ್ಳುತ್ತದೆ. ಈ ರೀತಿ ಮಾಡಲು ಹೊಸಬರಿಗೆ ಕಷ್ಟವಾದುದರಿಂದ, ದೋಸೆ ಹಿಟ್ಟನ್ನು ಮಧ್ಯದಲ್ಲಿ ಉಳಿದ ದೋಸೆಯಂತೆಯೇ ಹಾಕಿಕೊಂಡು ಮಾಡಬಹುದು. ಅದರ ಸಣ್ಣ ತುಣುಕನ್ನು ಈ ಕೊಂಡಿಯಲ್ಲಿ ನೋಡಬಹುದು.



A Variation : ಸೌತೆಕಾಯಿ ದೋಸೆ

ಬೇಕಾಗುವ ಸಾಮಗ್ರಿಗಳು:

ಅಕ್ಕಿ – 2 ಕಪ್

1 ಸಣ್ಣ ಸೌತೆಕಾಯಿ(=ಮುಳ್ಳುಸೌತೆಕಾಯಿ)
ಉಪ್ಪು – ರುಚಿಗೆ ತಕ್ಕಷ್ಟು
ನೀರು

ವಿಧಾನ :
ಎಳೆ ಸೌತೆಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಅಕ್ಕಿಯೊಂದಿಗೆ ರುಬ್ಬಿಕೊಂಡು, ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಗು ನೀರು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಬೇಕು. ಸೌತೆಕಾಯಿಯು ದೋಸೆಗೆ ಒಳ್ಳೆಯ ಪರಿಮಳ ಹಾಗು ರುಚಿಯನ್ನು ಕೊಡುತ್ತದೆ.

ಹೆಚ್ಚಾಗಿ ಈ ದೋಸೆಗಳನ್ನು ತೆಂಗಿನ ಕಾಯಿ ಚಟ್ನಿ, ಅಥವಾ ಕಾಯಿತುರಿ-ಬೆಲ್ಲದ ಮಿಶ್ರಣದೊಂದಿಗೆ ತಿನ್ನುವುದು ವಾಡಿಕೆ.

ಒಂದು ವರ್ಷದ ಹಿಂದೆ ಈ " ನನ್- ಪ್ರಪಂಚ" ವನ್ನು ಕುತೂಹಲ, ಉತ್ಸಾಹದಿಂದ ಶುರು ಮಾಡಿದ್ದೆ. ಇದು ನನಗೆ ಹಲವಾರು ಸಹೃದಯಿ ಬ್ಲಾಗ್ ಗೆಳೆಯರನ್ನು ಪರಿಚಯಿಸಿದೆ. ಈ ಮೂಲಕ ನನ್ನ ಸಣ್ಣ ಪ್ರಯತ್ನವು ಸ್ವಲ್ಪವಾದರೂ ಉಪಯೋಗವಾದಲ್ಲಿ ತುಂಬಾ ಸಂತೋಷ..ಇದುವರೆಗೆ ಪ್ರೋತ್ಸಾಹಿಸಿದ ಎಲ್ಲ ಆತ್ಮೀಯರಿಗೆ ನಾನು ಆಭಾರಿ. ಹಾಗೆಯೇ ಮುಂದೆಯೂ ಕೂಡ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ,
ವನಿತಾ.

12 comments:

ವನಿತಾ / Vanitha said...

ಪಾಚು-ಪ್ರಪಂಚ said...
Hi Vanitha..

Nan-prapancha da huttuhabbada shubhashayagalu :-)

ವನಿತಾ / Vanitha said...

ಥ್ಯಾಂಕ್ಸ್ ಪ್ರಶಾಂತ್, ನೀವೇ ಮೊದಲಿಗರು..ಹಾಗೆ ಸದ್ಯ ದಲ್ಲೇ ಹುಟ್ಟು ಹಬ್ಬ ಆಚರಿಸುವ ಪಾಚು ಪ್ರಪಂಚಕ್ಕೆ ಕೂಡ ಹಾರ್ದಿಕ ಅಭಿನಂದನೆಗಳು :)

Ittigecement said...

ವನಿತಾರವರೆ...

ನೀರುದೋಸೆ ಬಗೆಗೆ ಓದಿ ಬಾಯಲ್ಲಿ ನೀರು ಬಂತು...

ನಮ್ಮಲ್ಲಿ ಸೌತೆಕಾಯಿ ದೋಸೆಗೆ "ತೆಳ್ಳೆವು" ಅನ್ನುತ್ತಾರೆ...

ನೀರುದೋಸೆ ಮನೆಯಲ್ಲಿ ಮಾಡಿಸುತ್ತಿದ್ದೇನೆ...

ಮಂಗಳೂರಿನ ಕಡೆ ಮಾಡುವ ದಿಢಿರ್ ಉಪ್ಪಿನಕಾಯಿ ಬಗೆಗೆ ತಿಳಿಸಿಕೊಡುವಿರಾ...??

ಸಾಗರದಾಚೆಯ ಇಂಚರ said...

ನೀರುದೋಸೆ ನೆನಪು ಮಾಡಿ ನಮಗೆ ದೇಶದ ನೆನಪು ಮಾಡಿಬಿಟ್ರಿ
ಈಗ ಎಲ್ಲಿಂದ ತಿನ್ನೋದು
ಧನ್ಯವಾದ ತಿಳಿಸಿದ್ದಕ್ಕೆ

Annapoorna Daithota said...

ಬಹಳ ಉಪಯುಕ್ತ ಮಾಹಿತಿ !!
Good effort :)

shivu.k said...

ವನಿತಾ,

ಇಷ್ಟ ದಿನ ಎಲ್ಲಿ ಹೋಗಿದ್ರಿ. ನೀರು ಮತ್ತು ಸೌತೆಕಾಯಿ ದೋಸೆಯೊಂದಿಗೆ ಬಂದಿದ್ದೀರಿ. ನಮ್ಮ ಮನೆಯಲ್ಲಿ ದೋಸೆ ಹೇಗೆ ಮಾಡಿದರೂ ದಪ್ಪವಾಗಿಬಿಡುತ್ತಿತ್ತು. ಇದನ್ನು ಹೇಮಾಶ್ರೀಗೆ ತೋರಿಸುತ್ತೇನೆ. ಜೊತೆಗೆ ವಿಡಿಯೋ ಕೂಡ ಕೊಟ್ಟುಬಿಟ್ಟಿದ್ದೀರಿ...ಚೆನ್ನಾಗಿದೆ.

ವನಿತಾ / Vanitha said...

ಪ್ರಕಾಶಣ್ಣ..ಥ್ಯಾಂಕ್ಸ್..ನಮ್ಮಲ್ಲಿ ನೀರುದೋಸೆಗೆ "ತೆಳ್ಳೆವು" ಅನ್ನುತ್ತಾರೆ...

ಥ್ಯಾಂಕ್ಸ್ ಗುರುಮೂರ್ತಿ..ನೀವು ನೆನಪಸಿದ್ರಿ,ನಂಗು ಕೂಡ ನಮ್ಮೂರ ನೆನಪಾಗ್ತಿದೆ.ಮನಸ್ಸ್ಸಿದ್ದಲ್ಲಿ ಮಾರ್ಗವಿದೆ ಅಲ್ವಾ,ಒಂದು ದಿನ ಮನೆಯಲ್ಲಿ ದೋಸೆ try ಮಾಡಿ ನೋಡಿ:)

ಥ್ಯಾಂಕ್ಸ್ ಅನ್ನಪೂರ್ಣ..

ಥ್ಯಾಂಕ್ಸ್ ಶಿವೂ, ಇಲ್ಲೇ ಇದ್ದೇನೆ,ಎಲ್ಲೂ ಹೋಗಿಲ್ಲ.
ಮನೆ, ಮಗಳು, ಸ್ಕೂಲ್, ಕೆಲಸ ಇದ್ರಲ್ಲಿ ಸ್ವಲ್ಪ ಬಿಸಿ ಅಷ್ಟೇ.ಬರ್ತಾ ಇರ್ತೇನೆ.

shruthi said...

Vanitha tried your neer dose, came out perfect.Thanks for the simple,healthy & instant tasty recipe.
A vey happy b'dy to your blog !!
Hope to see many more mangalore cuisine.

ವನಿತಾ / Vanitha said...

Thanks Shruthi..Really appreciate ur comment:)

Savi-Ruchi said...

nan-prapancha blogge agle ondu varshada sambrama.., hruthpoorvaka abhinandanegalu, nimma kelsa tumba neat agi ide Vanitha.., keep it going.

ವನಿತಾ / Vanitha said...

Sushma..thumbaa thumbaa thanks:-)

Unknown said...

Hi vanitha, We tried to translate the post using google trnslate, but some of the translation doesn't make sense. Can you put your neer dos receipe in english. Or the video that you have posted in Youtube can post it from start i.e. grinding and all.