My photo
ಕರಾವಳಿ ಹುಡುಗಿ :)

Wednesday, March 3, 2010

ಹಿಟ್ಟು ಒಂದು; ತಿಂಡಿ ಹಲವು (NAAN, PIZZA, CALZONES & STUFFED BUN)

ಬೇಕಾಗುವ ಸಾಮಗ್ರಿಗಳು:

ಗೋಧಿ ಹಿಟ್ಟು - 2 ½ ಕಪ್ (ಕೇವಲ ಮೈದಾ ಅಥವಾ 1:1 ಮೈದಾ: ಗೋಧಿಹಿಟ್ಟನ್ನು ಮಿಕ್ಸ್ ಮಾಡಿ ಕೂಡ ಉಪಯೋಗಿಸಬಹುದು)
ಉಪ್ಪು
- 1 ಚಮಚ

ಸಕ್ಕರೆ - ½ ಚಮಚ

ನೀರು - 1 ಕಪ್

ಎಣ್ಣೆ - 2 ಚಮಚ (preferably Olive oil)
FLAX SEED POWDER 3 ಚಮಚ (optional)

Flax seedನಲ್ಲಿ ಫೈಬರ್ ಹಾಗೂ Omega-3-fattyacid ಯಥೇಚ್ಚವಾಗಿರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದು.

Dry active yeast powder – 1 ಚಮಚ
ಈಸ್ಟ್ ನ್ನು ಒಂದು ಪಾತ್ರೆಗೆ ಹಾಕಿ ಹದ ಬೆಚ್ಚಗಿನ ನೀರಿನಲ್ಲಿ ಕಲಸಿ 3 ನಿಮಿಷ ಇಡಿ. ನಂತರ ಇದನ್ನು ಹಿಟ್ಟಿಗೆ ಸೇರಿಸಿಕೊಂಡು ಉಪ್ಪು ಮತ್ತು ಬೇಕಾದಷ್ಟು ನೀರು ಸೇರಿಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ. ಕೊನೆಯಲ್ಲಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಒಂದು ಗಾಳಿಯಾಡದ ಪಾತ್ರೆಯಲ್ಲಿ ಮುಚ್ಚಿಡಿ. ಒಂದು ಘಂಟೆಯ ನಂತರ ಹಿಟ್ಟು ಎರಡು ಪಟ್ಟು ಹಿಗ್ಗುತ್ತದೆ. ಇದನ್ನು ಪುನ: ಕಲಸಿ ಒಂದು ಗಂಟೆ ಮುಚ್ಚಿಡಿ. ನಂತರ ಹಿಟ್ಟನ್ನು ಬೇಕಾದ ರೀತಿಯಲ್ಲಿ ಉಪಯೋಗಿಸಿ.

------------------------------------------------------------



ನಾನ್ ಮಾಡುವ ವಿಧಾನ:

ಹಿಟ್ಟನ್ನು ಚಪಾತಿಗಿಂತ ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಂಡು ಓವೆನ್ನಲ್ಲಿ 500F (or BROIL) ನಲ್ಲಿ 2-3ನಿಮಿಷ ಬೇಯಿಸಿ.ಇದನ್ನು ಮಧ್ಯದಿಂದ ತುಂಡು ಮಾಡಿ ಬೇಕಾದ ಪಲ್ಯದೊಂದಿಗೆ ತಿನ್ನಲು ಕೊಡಿ. ಓವೆನ್ನಿಂದ ತೆಗೆದ ಕೂಡಲೇ ಬೇಕಿದ್ದರೆ ಸ್ವಲ್ಪ ಬೆಣ್ಣೆಯನ್ನು ಸವರಬಹುದು.
ಹೆಚ್ಚಿನ ವಿವರಗಳಿಗೆ: Manjula's Kitchen

---------------------------------------------------------


ಪಿಜ್ಜಾ ಮಾಡುವ ವಿಧಾನ:

ಮಿಕ್ಕಿ ಪಿಜ್ಜಾ ಬೇಕ್ ಮಾಡುವ ಮೊದಲು


ಮೇಲೆ ಹೇಳಿದ ಹಿಟ್ಟನ್ನು 3/4 - ಒಂದು ಇಂಚು ದಪ್ಪಕ್ಕೆ ಚಪಾತಿಯಂತೆ ಲಟ್ಟಿಸಿ. ಇದರ ಮೇಲಿಗೆ marinara ಸಾಸ್, ಅಥವಾ ಯಾವುದೇ ಸಾಸ್ ಸವರಿ ಓವೆನ್ ನಲ್ಲಿ 400F ನಲ್ಲಿ ಮಧ್ಯದ ರಾಕ್ ನಲ್ಲಿ 8-10 ನಿಮಿಷ ಬೇಯಿಸಿ. ನಂತರ ಇದನ್ನು ಹೊರಗೆ ತೆಗೆದು, ಇದರ ಮೇಲೆ ನಿಮಗೆ ಬೇಕಾದ ತರಕಾರಿಗಳನ್ನು (Olives, ಕ್ಯಾಪ್ಸಿಕಂ, ಟೊಮೇಟೊ, ಈರುಳ್ಳಿ, mushrooms, ಪಾಲಕ್ ಸೊಪ್ಪು) ಸಮವಾಗಿ ಹರಡಿ, ಮೇಲಿನಿಂದ ಬೇಕಾದಷ್ಟು

Shredded ಚೀಸ್ ಮತ್ತು ಒಂದೆರಡು ಚಮಚ ಒಲಿವ್ ಎಣ್ಣೆ ಸೇರಿಸಿ, ಪುನ: 5-8 ನಿಮಿಷ ಅಥವಾ ಚೀಸ್ ಕರಗುವ ತನಕ ಬೇಯಿಸಿರಿ.

--------------------------------------------------


Calzone ಮತ್ತು stuffed bun ಮಾಡಲು ಉಪಯೋಗಿಸುವ ಪಲ್ಯ ಮಾಡುವ ವಿಧಾನ:
ಆಲೂಗಡ್ಡೆ - 2 ಬೇಯಿಸಿ, ಪುಡಿ ಮಾಡಿ
ಯಾವುದೇ
ಕಾಳು (ಬಟಾಣಿ/Red bean/ Black bean)- ¾ ಕಪ್ ಬೇಯಿಸಿ
ಈರುಳ್ಳಿ
- ½ ಕಪ್
ಗರಂ
ಮಸಾಲ ಪುಡಿ - 1 ಚಮಚ
ಉಪ್ಪು
- ರುಚಿಗೆ ತಕ್ಕಷ್ಟು
ಕೊತ್ತಂಬರಿ
ಸೊಪ್ಪು - ಸ್ವಲ್ಪ
ಜೀರಿಗೆ
- ½ ಚಮಚ
ಶುಂಟಿ
- ಬೆಳ್ಳುಳ್ಳಿ ಪೇಸ್ಟ್ / ತುರಿದು - 1ಚಮಚ
ಎಣ್ಣೆ
- 2-3 ಚಮಚ
ಒಂದು
ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಇದಕ್ಕೆ ಜೀರಿಗೆ, ಈರುಳ್ಳಿ - ಶುಂಟಿ ಸ್ಟ್ ಸೇರಿಸಿ, 1 ನಿಮಿಷ ಹುರಿದುಕೊಂಡು, ಈರುಳ್ಳಿ ಸೇರಿಸಿ ಕೆಂಪಗಾಗುವ ತನಕ ಹುರಿಯಿರಿ. ಈಗ ಸ್ವಲ್ಪ ಹಳದಿ ಪುಡಿ, ಉಪ್ಪು, ಗರಂ ಮಸಾಲೆ ಪುಡಿ ಸೇರಿಸಿ, 1ನಿಮಿಷ ಹುರಿದುಕೊಂಡು , ಕೊನೆಯಲ್ಲಿ ತರಕಾರಿ ಮತ್ತು ಕಾಳುಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ 2-3 ನಿಮಿಷ ಬೆರೆಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
ಮಕ್ಕಳಿಗ
ಇದನ್ನು ಉಪಯೋಗಿಸುತ್ತಿದ್ದರೆ, ಗರಂ ಮಸಾಲ ಪುಡಿಯನ್ನು ಬೇಕಾದಂತೆ ಕಡಿಮೆ ಹಾಕಿ, ಪಲ್ಯವನ್ನು ಬೇರೆ ತೆಗೆದಿಟ್ಟುಕೊಂಡು, ಉಳಿದ ಪಲ್ಯಕ್ಕೆ ಪುನ ಗರಮ್ ಮಸಾಲ ಪುಡಿಯನ್ನು ಹಾಕಿಕೊಳ್ಳಬಹುದು.
ಪಲ್ಯವನ್ನು ಪಫ್ಫ್ಸ್ / ಸಮೋಸ ಅಥವಾ ಯಾವುದೇ fillingಗಳಿಗೆ ಉಪಯೋಗಿಸಬಹುದು.
---------------------------------------------------

Calzone ಮಾಡುವ ವಿಧಾನ:


ಹಿಟ್ಟನ್ನು ಚಪಾತಿಯಂತೆ ದಪ್ಪಕ್ಕೆ ಲಟ್ಟಿಸಿ, marinara ಸಾಸ್, ಅಥವಾ ಯಾವುದೇ ಸಾಸ್ ಸವರಿ. ಇದರ ಒಂದು ಭಾಗದಲ್ಲಿ ಪಲ್ಯ ಹಾಗೂ ಸ್ವಲ್ಪ (Shredded Mozzarella) ಚೀಸ್ ನ್ನಿಟ್ಟು ಇನನೊಂದು ಭಾಗವನ್ನು ಮುಚ್ಚಿ ಎಲ್ಲ ಕಡೆಗಳಲ್ಲೂ ಬೆರಳಿನಿಂದ ಸ್ವಲ್ಪ ನೀರು ಮುಟ್ಟಿಸಿಕೊಂಡು ಮುಚ್ಚಿ. ಇದನ್ನು ಓವೆನ್ ನಲ್ಲಿ ಮಧ್ಯದ ರಾಕ್ ನಲ್ಲಿಟ್ಟು 400F ನಲ್ಲಿ 8-10 ನಿಮಿಷ ಬೇಯಿಸಿ.

ಹೆಚ್ಚಿನ ವಿವರಗಳು ಇಲ್ಲಿ.
--------------------------


STUFFED ಬನ್ ಮಾಡುವ ವಿಧಾನ:

ಒಂದು ಎಣ್ಣೆ ಸವರಿದ ಬೋರ್ಡ್ ಮೇಲೆ ಬನ್ನಿನ ಹಿಟ್ಟನ್ನು ತೆಗೆದುಕೊಂಡು ಕೈಯಿಂದಲೇ ಪೂರಿಯ ಗಾತ್ರಕ್ಕೆ ರಿಂದ ½ ಇಂಚು ದಪ್ಪಕ್ಕೆ) ಒತ್ತಿ. ಇದರಲ್ಲಿ ಪಲ್ಯವನ್ನಿಟ್ಟು, ಹಿಟ್ಟನ್ನು ಎಲ್ಲಾ ಭಾಗದಿಂದಲೂ ಸೇರಿಸಿಕೊಂಡು ಪುನ ಕೈಯಿಂದ ಒತ್ತಿಕೊಂಡು ಬನ್ ಆಕಾರದಲ್ಲಿ ತಟಟಿ ಒಂದು ಎಣ್ಣೆ ಸವರಿದ aluminium ಶೀಟ್ ಮೇಲಿಡಿ. ಇದನ್ನು ovenನಲ್ಲಿ ಮಧ್ಯದ ರಾಕ್ ನಲ್ಲಿಟ್ಟು 25-30 ನಿಮಿಷ (ಕೆಂಪಗೆ ಆಗುವ ತನಕ) ಬೇಕ್ ಮಾಡಿ. ಓವೆನ್ ನಿಂದ ಹೊರ ತೆಗೆದ ತಕ್ಷಣ ಮೇಲಿನಿಂದ ಸ್ವಲ್ಪ ಬೆಣ್ಣೆಯನ್ನು ಸವರಿ ತಣ್ಣಗಾದ ಮೇಲೆ ತಿನ್ನಲು ಕೊಡಿ.

ಹೆಚ್ಚಿನ ವಿವರಗಳು ಇಲ್ಲಿ

---------------------------
Thanks to Manjula aunty, Namratha & Madhu for sharing their recipes:)

11 comments:

ಮನಮುಕ್ತಾ said...

yummy recipe!! My kids like these verymuch. Thanks.

FH said...

Naanu Kulcha madide nenne ootakke. Everything looks great, nothing like homemade Pizza or fresh Naans.

My blog's "edit post" isn't working, I can't post my dishes until they fix it!:(

shivu.k said...

ವನಿತಾ,

ಮೂರು ದಿನ ಮದುವೆ ಮನೆಯ ಊಟದಲ್ಲಿ ಎಲ್ಲಾ ವೈವಿಧ್ಯತೆಗಳನ್ನು ತಿಂದು ತೂಕ ಹೆಚ್ಚಿಸಿಕೊಂಡು ಬಂದಿದ್ದೇನೆ. ಅಂತದ್ದರಲ್ಲಿ ನೀವು ಹೀಗೆ ಇಂಥವುಗಳನ್ನು ಕೊಟ್ಟು tempt ಮಾಡುತ್ತಿದ್ದಿರಲ್ಲ....

Unknown said...

Hi Vanitha,
Everthing looks good, love the naan. Hope you enjoyed making stuffed buns.
BTW loved your Bhagra Baingan.. just very tempting pics.

ವನಿತಾ / Vanitha said...
This comment has been removed by the author.
ವನಿತಾ / Vanitha said...

Thanks manamuktha..:)ನನ್ನ ಮಗಳಿಗೆ
ಇವನ್ನು fruits ಜೊತೆಗೆ ಪ್ಯಾಕ್ ಮಾಡಿ ಕೊಡ್ತೇನೆ..ಅವಳಿಗೂ ತುಂಬಾ ಇಷ್ಟ:)


wow asha..love kulcha..never tried though:)..hope u will fix the problem soon..ciao

ಶಿವು, ನೀವು ಕಣ್ಣಲ್ಲಿ ನೋಡಿದರಲ್ಲ ಅಷ್ಟೇ ಸಾಕು..ತುಂಬಾ ತುಂಬಾ ಧನ್ಯವಾದಗಳು

Madhu, My daughter enjoyed stuffed bun preparation as well:)Thanks again..

ಸವಿಗನಸು said...

nice recipe....

ಮನಸಿನಮನೆಯವನು said...

'ವನಿತಾ / Vanitha ' ಅವ್ರೆ..,

ಹಾ ಹಾ!

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

V.R.BHAT said...

ನೀರು ಬಂತ ಕೇಳ
ಅಕ್ಕ ನೀರು ಬಂತ ಕೇಳ
ಬ್ಲಾಗಿನಾಗ ತಿಂಡಿ ಕಾರುಬಾರು ನೋಡಿ
ಯಾಕ ಸಿಗಲೋಲ್ದು ಎನುತ ಮನದೊಳಗ
ನೀರು ಬಂತ ಕೇಳ ಬಾಯಾಗ
ನೀರು ಬಂತ ಕೇಳ !

ವನಿತಾ / Vanitha said...

Thanks ಮಹೇಶಣ್ಣ, ಗುರುದೆಸೆ
@ ವಿ.ಆರ್.ಭಟ್ ತುಂಬಾ ಚೆನ್ನಾಗಿದೆ ನಿಮ್ಮ ಚುಟುಕ..ಧನ್ಯಳಾದೆ..Thank you:)

rukminimalanisarga.blogspot.com said...

ella adugegala Odide. layaka iddu. adu kannadalli baraddu hecchu kushi kottattu.