ಈ ಸಲ ಅಡುಗೆ ಮನೆ ಬಿಟ್ಟು, ಸ್ವಲ್ಪ ಬೇರೆ ಬರೆಯೋಣ ಅಂತ ಅನ್ನಿಸ್ತು...ಅದಕ್ಕೆ ಇಲ್ಲಿನ (ಟೆಕ್ಸಾಸ್) ಗುಹೆಗಳನ್ನು ಪರಿಚಯಿಸುತ್ತಿದ್ದೇನೆ. ಟೆಕ್ಸಾಸ್ ಉರಿ ಬಿಸಿಲಿಗೆ ಹೆಸರು ವಾಸಿಯಾದರೂ ಕೂಡ, ಕಣ್ಣಿಗೆ ಮುದ ನೀಡುವ ಸುಂದರ ಗುಹೆಗಳು ಇಲ್ಲಿನ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಈ ಗುಹೆಗಳಿಗೆ ಮಿಲಿಯನ್ ವರ್ಷಗಳ ಇತಿಹಾಸವಿದೆ.
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಭೂಮಿಯ ಪದರದ ನಡುವಿರುವ ಸುಣ್ಣದ ಕಲ್ಲಿನ (CaCO3) ಸಂಧಿಗಳಿಂದ ನುಸುಳುವ ಕಾರ್ಬೋನಿಕ್ ಆಮ್ಲ (H2CO3) ನಿಧಾನವಾಗಿ ಸುಣ್ಣದ ಕಲ್ಲನ್ನು ಕರಗಿಸುತ್ತಾ ಈ ಸಂಧಿಗಳನ್ನು ಅಗಲವಾಗಿಸುತ್ತ, ಗುಹೆಗಳ ನಿರ್ಮಾಣವಾಗುತ್ತದೆ. ವಾತಾವರಣ ಹಾಗೂ ಮಣ್ಣಿನಲ್ಲಿರುವ ಅಂಗಾರಾಮ್ಲ (CO2) ನೀರಿನೊಂದಿಗೆ (H2O) ಕರಗಿದಾಗ ಕಾರ್ಬೋನಿಕ್ ಆಮ್ಲ ತಯಾರಾಗುತ್ತದೆ. ಈ ಗುಹೆಗಳ ರಚನೆ ಬಹಳ ನಿಧಾನವಾದ ಪ್ರಕ್ರಿಯೆ. ಒಂದು ಅಂದಾಜಿನ ಪ್ರಕಾರ ಒಬ್ಬ ಮನುಷ್ಯ ನುಸುಳಬಹುದಾದ ಗುಹೆಯ ರಚನೆಗೆ ಸುಮಾರು ಒಂದು ಮಿಲಿಯ ವರ್ಷ ತಗಲುತ್ತದೆ.

First ಗೆ ಗುಹೆ ಯನ್ನು ಕಂಡು ಹಿಡಿದಾಗ ಹಗ್ಗದ ಮೂಲಕ ಕೆಳಕ್ಕಿಳಿಯಲು ಉಪಯೋಗಿಸುತ್ತಿದ್ದ ದಾರಿ. ಈಗ ಪಕ್ಕದಲ್ಲೇ ಮೆಟ್ಟಲುಗಳನ್ನು ಕಾಣಬಹುದು.
ಅದರಲ್ಲೂ ಈ ಸುಂದರವಾದ ಗುಹೆಯ ಒಳಗಿನ ರಚನೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.ಅಂತೆಯೇ ಗುಹೆಯ ಒಳಗೆ ಜಿನುಗುವ ನೀರಿನ ಹನಿಗಳು ತೊಟ್ಟಿಕ್ಕುತ್ತಾ ಶಿಲಾ ರಚನೆಗಳು ನಿರ್ಮಾಣ ಗೊಳ್ಳುತ್ತವೆ. ಈ ರಚನೆಗಳನ್ನು ಕೈಯಿಂದ ಸ್ಪರ್ಶಿಸ ಬಾರದು. ಏಕೆಂದರೆ, ನಮ್ಮ ಕೈಯಲ್ಲಿರುವ ಎಣ್ಣೆ/ಜಿಡ್ಡು, ಶಿಲೆಗಳ ಬೆಳವಣಿಗೆಯನ್ನು ಸ್ಥಗಿತಗೊಳಿಸುತ್ತವೆ. ನೆಲದಲ್ಲಿ ಉಧ್ಭವವಾದಂತೆ ಕಾಣುವ ಸುಂದರ ಶಿವಲಿಂಗಗಳು, ಅದ್ಭುತ ಗೋಪುರಗಳು, ಕಂಬದಂತೆ, ಗ್ಲಾಸಿನ ಸ್ಟ್ರಾದಂತೆ, ಸೀರೆಯ ನೆರಿಗೆಯಂತೆ ಕಾಣುತ್ತಾ ಮನಸೂರೆಗೊಳ್ಳುತ್ತವೆ. ಇದಕ್ಕನುಗುಣವಾಗಿ ಇವಕ್ಕೆ ಇಂಗ್ಲಿಷ್ ನಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ.
ಗೈಡ್ ನ ಪ್ರಕಾರ ಈ ನೀರನ್ನು ಕೈಯಲ್ಲಿ ಹಿಡಿದು ಕುಡಿದರೆ 'ತೀರ್ಥ' ಸಮಾನವಂತೆ..ಟೇಸ್ಟ್ ಮಾತ್ರ ಚೆನ್ನಾಗಿತ್ತು:)

ಗುಹೆಯ Roof..Beautiful ಆಲ್ವಾ..
ಇದರ ಒಳಗಡೆ ಬಾವಲಿ, ಸಲಮಾಂಡರ್ ನಂತಹ ನಿರುದ್ರಪವಿ ಜೀವಿಗಳು ವಾಸಿಸುತ್ತವೆ.
ಅಲ್ಲದೆ ಹಲವು ಜೀವಿಗಳ ಪಳೆಯುಳಿಕೆಗಳು ಕಾಣಸಿಗುತ್ತದೆ. ಈ ಗುಹೆಗಳು world war ಸಮಯದಲ್ಲಿ ಸೈನಿಕರ ವಾಸಸ್ಥಳವಾಗಿತ್ತು ಎನ್ನುವುದು ಗೈಡ್ ನ ಮಾಹಿತಿ. ಈ ಗುಹೆಗಳು ಸಾಧಾರಣವಾಗಿ 1-2 ಕಿ ಮೀ. ಉದ್ದಕ್ಕಿರುತ್ತವೆ.