My photo
ಕರಾವಳಿ ಹುಡುಗಿ :)

Wednesday, July 21, 2010

ಪಾಲಕ್ ಸೊಪ್ಪು- ಕ್ಯಾರೆಟ್ ಪಲಾವ್ (Spinach - Carrot Pulav) and Green bean stir fry

ಬ್ಲಾಗ್ ಅಪ್ಡೇಟ್ ಮಾಡದೆ ತಿಂಗಳು ದಾಟಿತು.. ಜೂನ್ ತಿಂಗಳಲ್ಲಿ ಹದಿನೈದು ದಿನ ಅಮೆರಿಕಾದಲ್ಲಿ ಸಣ್ಣ ಟೂರ್ ಹೊಡೆದು ಬಂದ್ವಿ.ಹೊರಡುವ ಮೊದಲು 15 ದಿನ preparation; ..ಬಂದ ಮೇಲೆ ಸ್ವಲ್ಪ ಸೋಂಬೇರಿತನ.. ಆದುದರಿಂದ ಏನೂ ಬರೆದಿರಲಿಲ್ಲ. ಇತ್ತೀಚಿಗೆ ನನ್ನ ಆಂಧ್ರದ ಫ್ರೆಂಡ್ ಒಬ್ಬರು ಮಾಡಿದ ಪಾಲಕ್ - ಕ್ಯಾರೆಟ್ ಪಲಾವ್, ನಮ್ಮನೆಯಲ್ಲಿ ಎಲ್ಲರಿಗೂ ತುಂಬಾ ಇಷ್ಟ ಆಯಿತು. ಅದನ್ನು ನಿಮ್ಮ ಜೊತೆ ಹಂಚಿಕೊಳ್ಳೋಣ ಎಂದು ಅನ್ನಿಸಿತು..

ಪಾಲಕ್ ಸೊಪ್ಪು- ಕ್ಯಾರೆಟ್ ಪುಲಾವ್ ಮಾಡಲು ಬೇಕಾಗುವ ಸಾಮಗ್ರಿಗಳು:

ಬಾಸ್ಮತಿ ರೈಸ್ - 2 ಕಪ್
ಪಾಲಕ್ ಸೊಪ್ಪು - ಒಂದು ಕಟ್ಟು (ಕಟ್ಟಿನಿಂದ ಬಿಡಿಸಿ ಸೊಪ್ಪು ಮಾತ್ರ ತೆಗೆದು ಕ್ಲೀನ್ ಮಾಡಿ ಕಟ್ ಮಾಡಿಡಿ)
ಕ್ಯಾರೆಟ್ - 2-3 (ತುರಿದುಕೊಂಡು)
ಬಟಾಣಿ - ½ ಕಪ್ (ನೀರಿನಲ್ಲಿ 6-8 ಗಂಟೆ ನೆನೆಸಿ / frozen green peas )
ಆಲೂಗಡ್ಡೆ - 1-2
ಹಸಿ ಮೆಣಸು - 2-3
ಗರಂ ಮಸಾಲ ಪುಡಿ - 1 ಚಮಚ
ಈರುಳ್ಳಿ - 1 ಕಟ್ ಮಾಡಿ
ಶುಂಟಿ - ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಚೆಕ್ಕೆ - 1” ತುಂಡು
ಏಲಕ್ಕಿ - 1ಲವಂಗ- 3

ಉಪ್ಪು - 1 ½ ಚಮಚ

ತುಪ್ಪ / ಎಣ್ಣೆ - ಸ್ವಲ್ಪ

ವಿಧಾನ:
ಅಕ್ಕಿಯನ್ನು 15 ನಿಮಿಷ ನೀರಿನಲ್ಲಿ ನೆನೆಸಿಟ್ಟು ನಂತರ ಚೆನ್ನಾಗಿ ತೊಳೆದಿಟ್ಟುಕೊಳ್ಳಿ.
ಒಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪ / ಎಣ್ಣೆ ಹಾಕಿಕೊಂಡು, ಚೆಕ್ಕೆ, ಏಲಕ್ಕಿ, ಲವಂಗ ವನ್ನು ಸ್ವಲ್ಪ ಹುರಿಯಿರಿ. ಇದಕ್ಕೆ ಈರುಳ್ಳಿ ಸೇರಿಸಿ ಹುರಿದು, ನಂತರ ಪಾಲಕ್ ಸೊಪ್ಪು ಸೇರಿಸಿ, 3-4 ನಿಮಿಷ (ಸೊಪ್ಪು shrink ಆಗುವ ತನಕ) ಹುರಿಯಿರಿ. ನಂತರ ಕ್ಯಾರೆಟ್, ಬಟಾಣಿ, ಆಲೂಗಡ್ಡೆ ಹಾಗು ಅಕ್ಕಿ ಸೇರಿಸಿ 2-3 ನಿಮಿಷ ಹುರಿಯಿರಿ. ಇದನ್ನು ಕುಕ್ಕರಿನಲ್ಲಿ ತೆಗೆದುಕೊಂಡು, ಉಪ್ಪು, ಗರಂ ಮಸಾಲ ಪುಡಿ, ಶುಂಟಿ- ಬೆಳ್ಳುಳ್ಳಿ ಪೇಸ್ಟ್ ಹಾಗು 4 ಗ್ಲಾಸ್ ನೀರು ಸೇರಿಸಿ ಬೇಯಿಸಿರಿ. ಇದನ್ನು ಮೊಸರು ರಾಯಿತ / ಸೈಡ್ ಡಿಶ್ ನೊಂದಿಗೆ ತಿನ್ನಬಹುದು. ತುಂಬಾ ಸುಲಭದಲ್ಲಿ ತಯಾರಿಸಬಹುದಾದ ರೆಸಿಪಿ ಹಾಗು ಟೇಷ್ಟಿಯಾಗಿರುತ್ತದೆ.
ತೆಂಗಿನ ತುರಿ ಸೇರಿಸಿ ಮಸಾಲೆಯನ್ನು ರುಬ್ಬಿಕೊಂಡು ಈ ರೀತಿಯಲ್ಲಿ ಕೂಡ ಈ ಪಲಾವ್ ನ್ನು ಮಾಡಬಹುದು.

ಬೀನ್ಸ್ ಸ್ಟಿರ್ ಫ್ರೈ (Green bean stir fry):

ಅಮೆರಿಕಾದಲ್ಲಿ Asian restaurant ಅಂದರೆ ಹೆಚ್ಚಾಗಿ ಅದು Chinese restaurant ಆಗಿರುತ್ತದೆ. ವೆಜಿಟೇರಿಯನ್ ಆದ ನಂಗೆ ಅಲ್ಲಿ ಹೆಚ್ಚಿನ options ಇಲ್ಲದಿದ್ದರೂ, ಇದ್ದುದರಲ್ಲಿ ಇಷ್ಟವಾಗುವ ಒಂದು dish, green bean stir fry. ಉದ್ದದ ಬೀನ್ಸ್ ನ್ನು ಫ್ರೈ ಮಾಡಿ starter / ಸೈಡ್ ಡಿಶ್ ತರ ಉಪಯೋಗಿಸಬಹುದು. So ಗೂಗಲ್ ನಲ್ಲಿ ಹುಡುಕಿ, ಮನೆಯಲ್ಲಿ ಟ್ರೈ ಮಾಡಿದಾಗ ಹೋಟೆಲ್ ನಲ್ಲಿ ಸಿಕ್ಕುವಷ್ಟು ಕ್ರಿಸ್ಪ್ (crisp) ಆಗದಿದ್ದರೂ, not bad ಅಂತ ಅನ್ನಿಸಿತು.

ತಯಾರಿಸುವ ವಿಧಾನ:
15-20
ಬೀನ್ಸ್
ಎಣ್ಣೆ - 2-3 ಚಮಚ
ಉಪ್ಪು - ಚಿಟಿಕೆ
ಸೋಯಾ ಸಾಸ್ - ¼ ಚಮಚ

ಬೀನ್ಸ್ ನ್ನು ಕ್ಲೀನ್ ಮಾಡಿ ತೊಳೆದು, ಕುದಿಯುವ ನೀರಿಗೆ ಹಾಕಿ 5ನಿಮಿಷ ಕುದಿಸಿರಿ. ಇದನ್ನು ತಕ್ಷಣ ಒಲೆಯಿಂದ ತೆಗೆದು ತಣ್ಣೀರಿನಲ್ಲಿ 2-3 time rinse ಮಾಡಿ, ನಂತರ ಒಂದು ಬಟ್ಟೆ/ paper towel ನಲ್ಲಿ ತೆಗೆದಿಡಿ.
ಒಂದು ಪಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಈ ಬೀನ್ಸ್ ನ್ನು 10-12 ನಿಮಿಷ ಮೊಗಚುತ್ತ ಹುರಿಯಿರಿ. ಕೊನೆಯಲ್ಲಿ ಸ್ವಲ್ಪ ಉಪ್ಪು, ಸೋಯಾ ಸಾಸ್, ಸೇರಿಸಿ, ಮಿಕ್ಸ್ ಮಾಡಿ, ಸ್ವಲ್ಪ ತಣ್ಣಗಾದ ನಂತರ ತಿನ್ನಲು ಕೊಡಿ.

ಕೊನೆಯಲ್ಲಿ ಸ್ವಲ್ಪ ಶುಂಟಿ- ಬೆಳ್ಳುಳ್ಳಿಯನ್ನು ತುರಿದು ಫ್ರೈ ಮಾಡಿ ಕೂಡ ಸೇರಿಸಬಹುದು. ನೀರಿನಲ್ಲಿ blanch ಮಾಡದೆ direct ಆಗಿ ಬೀನ್ಸ್ ನ್ನು ಹುರಿಯಬಹುದು, but ನಂಗೆ ಫಸ್ಟ್ ವಿಧಾನದಲ್ಲಿ ಮಾಡಿದಾಗ ರುಚಿ ಇಷ್ಟವಾಯಿತು.

ಇತ್ತೀಚಿಗೆ ಓದಿದ ಪುಸ್ತಕ - Between Two Worlds: My life and Captivity in Iran by Ms. Roxana Saberi.
ಜನವರಿ 2009ರಲ್ಲಿ, ಇರಾನಿನ ಜೈಲಿನಲ್ಲಿ 100 ದಿನ ಗಳ ಕಾಲ ಶಿಕ್ಷೆ ಅನುಭವಿಸಿದ Roxana Saberi ತನ್ನ ಆ ಜೈಲುವಾಸದ ದಿನಗಳ ಬಗ್ಗೆ ಬರೆದ ಪುಸ್ತಕವಿದು. ಈಕೆ BBC, NPR, Fox news ನಂತ ಹಲವು ಪ್ರಸಿದ್ಧ ಚಾನೆಲ್ ಗಳಿಗೆ ಜರ್ನಲಿಸ್ಟ್ ಆಗಿದ್ದಾಕೆ.
ತನ್ನ ಇರಾನಿ ತಂದೆಯ ಪ್ರಭಾವ ಹಾಗು ಅಲ್ಲಿನ cultural aspectಗಳ ಬಗ್ಗೆ ತಿಳಿಯುವ ಕುತೂಹಲದಿಂದ, ಪುಸ್ತಕ ಬರೆಯಬೇಕೆಂದು ಹೋದ ಈಕೆಯನ್ನು ಇರಾನಿನ Intelligenceನವರು ಅಮೆರಿಕಾದ spy ಎಂದು ಜೈಲಿಗೆ ತಳ್ಳುತ್ತಾರೆ. ಸುಮಾರು ಒಂದು ತಿಂಗಳವರೆಗೆ ಯಾರನ್ನೂ (ಲಾಯರ್ ನ್ನು ಕೂಡ) ಸಂಪರ್ಕಿಸಲು ಬಿಡದೆ, ಯಾರಿಗೂ ಜೈಲಿನಲ್ಲಿರುವದನ್ನು ಹೇಳಕೂಡದು ಎಂದು ತುಂಬಾ ವಿಧದಲ್ಲಿ ಮಾನಸಿಕ ಹಿಂಸೆ ಮತ್ತು 8 ವರ್ಷಗಳ ಶಿಕ್ಷೆ ಯನ್ನು ವಿಧಿಸುತ್ತಾರೆ. ಅಮೆರಿಕಾದ guantanamo bay ಯಂತೆಯೇ ಪ್ರ(ಕು)ಖ್ಯಾತಿ ಪಡೆದ ಇರಾನಿನ Evin Prisonನಲ್ಲಿ 100 ದಿನಗಳ ಕಾಲವಿದ್ದಾಗ ಅಲ್ಲಿನ ಜೈಲರುಗಳು, cell matesಗಳ ಬಗ್ಗೆ, ಕೊನೆಗೆ ಆಕೆ ಅಲ್ಲಿ hunger strike ಮಾಡಿದ್ದು, ಹಾಗು ಅವಳ ಬಂಧನಕ್ಕೆ ವಿಶ್ವದ ಎಲ್ಲ ಮೂಲೆಗಳಿಂದ ಬಂದ ಪ್ರತಿರೋಧಗಳು, ಕೊನೆಗೂ 100 ದಿನಗಳ ನಂತರ ಮೇ 11, 2009 ರಂದು ಜೈಲಿನಿಂದ ಹೊರ ಬಂದುದನ್ನು ಚೆನ್ನಾಗಿ ಬರೆದಿದ್ದಾರೆ. A nice read.


33 comments:

ತೇಜಸ್ವಿನಿ ಹೆಗಡೆ said...

ಬಾಯಲ್ಲಿ ನೀರು ಬಂತು ಓದಿಯೇ.... ಈ ವಾರ ಮಾಡಿನೋಡ್ಲೇಬೇಕು. ನನ್ನ ಪುಟ್ಟಿಗೆ ಪುಲಾವ್ ಅಂದ್ರೆ ತುಂಬಾ ಇಷ್ಟ :)

ಮನಮುಕ್ತಾ said...

wow..! tasty recipes..and good information about book. :)

Dr.D.T.K.Murthy. said...

ಬ್ಲಾಗಿನಲ್ಲಿ ಪಲಾವ್ ನ ಚಿತ್ರ ನೋಡಿಯೇ ಬಾಯಲ್ಲಿ ನೀರೂರುತ್ತಿದೆ.ಆದಷ್ಟು ಬೇಗ ಮನೆಯವರಿಗೆ ರೆಸಿಪಿ ತೋರಿಸಬೇಕು.ಧನ್ಯವಾದಗಳು.

shivu.k said...

ವನಿತಾ,

ರೆಸಿಪಿ ನೋಡಿಯೇ ಬಾಯಿ ಚಪ್ಪರಿಸುವಂತಿದೆ...ಬೇಗ ತಯಾರಿ ನಡೆಸಬೇಕು...

ಸವಿಗನಸು said...

ವನಿತಾ,
ಬಾಯಲ್ಲಿ ನೀರು ಬರುತ್ತಿದೆ....

ವನಿತಾ / Vanitha said...

ತೇಜು, ವಿಜಯಶ್ರೀ, ಡಾಕ್ಟ್ರೆ, ಶಿವೂ, ಮಹೇಶಣ್ಣ,...ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್:))
@ತೇಜು..ಪುಟ್ಟಿಗೆ ಖಾರ ಕಮ್ಮಿ ಹಾಕಿ:))

ಸಿಮೆಂಟು ಮರಳಿನ ಮಧ್ಯೆ said...

ವನಿತಾ...

ಸರಳವಾದ ವಿವರಣೆ..
ಬಾಯಲ್ಲಿ ನೀರೂರಿಸುವಂಥಹ ಫೋಟೊಗಳು..

ಮನೆಯಲ್ಲಿ ಮಾಡಿಸಲೇ ಬೇಕು ಅಂದುಕೊಂಡಿದ್ದೇನೆ...

ಸುಮ said...

ಪಲಾವ್ ನನ್ನ ಪುಟ್ಟಿಗೂ ಇಷ್ಟ... ದಿನಾ ಲಂಚ್ ಬಾಕ್ಸಿಗೆ ಒಂದೊಂದು ರೀತಿಯ ಪಲಾವ್ ಮಾಡಿಕೊಡಬೇಕು ಅವಳಿಗೆ... ಇದೊಂದು ಹೊಸ ರೆಸಿಪಿ ಮಾಡಿ ನೋಡಬೇಕು..

ವಸಂತ್ said...

"ಪಲಾವ್" ಅಂತು ಅದ್ಭುತವಾಗಿದೆ, ಎಂತಹವರಿಗೂ ಬಾಯಲ್ಲಿ ನೀರು ಹರಿಸುತ್ತದೆ. ಉತ್ತಮವಾದ ತಿಂಡಿ ಧನ್ಯವಾದಗಳು ವನಿತಾರವರಿಗೆ.

ವನಿತಾ / Vanitha said...

Thankyou Prakashanna, Vasanth And Suma:-)

Radhika said...

Interesting blog. Food, Books, travellogue . . .I liked these combination you have used in your blog.

Raghu said...

hummm..madbekaayitalla...
Raaghu

ಸೀತಾರಾಮ. ಕೆ. / SITARAM.K said...

ಹೊಸರುಚಿಗಳು ಚೆನ್ನಾಗಿವೆ ಮತ್ತು ಸರಳವಾಗಿ ಹೇಳಿದ್ದಿರಾ.. ಸಧ್ಯದಲ್ಲಿ ಪ್ರಯೋಗಿಸುವ ಇರಾದೆ ಚಿತ್ರಗಳನ್ನೂ ನೋಡುತ್ತಿದ್ದಂತೆ ಹುಟ್ಟಿತು.
ತಮ್ಮ ಅಮೇರಿಕಾ ಪ್ರವಾಸಕಥನಕ್ಕೆ ಕಾಯುತ್ತಿದ್ದೆ. ಚಿತ್ರಗಳನ್ನಂತು ನೋಡಿದ್ದೇವೆ ಅವು ಚೆನ್ನಾಗಿವೆ.

PaLa said...

ಒಂದೇ ಪೋಸ್ಟಲ್ಲಿ ಎರೆಡೆರಡ್ ಮಮ್ಮಮ್ ಮತ್ತೆ ಒಂದು ಪುಸ್ತಕ ಪರಿಚಯ.. buy one get 2 free :) thanks

ಮನಸು said...

super vanitha.... naanu ee ruchi prayatnisi heLuve hegittendu....thnx

Anonymous said...

Nimma blog tumbaa chennagide Vanitha...

ellaa recipe galoo ishtavaayitu..

maadi tinnabeku.....:)

- ಕತ್ತಲೆ ಮನೆ... said...

ವನಿತಾ / Vanitha ,

ಇದೇನಪ್ಪ.. ಅಡುಗೆ ಮನೆ ಒಳಗೆ ಹೋದವರು ಬರಲೇ ಇಲ್ಲ ಅಂದುಕೊಂಡಿದ್ದೆ..
ಈಗ ಗೊತ್ತಾಯ್ತು ಕಾರಣ ಸೋಮಾರಿತನ ಎಂದು.
ಅಂತೂ ಇಂತೂ ಬರೋವಾಗ ಒಳ್ಳೆ ಪಲಾವ್ ತಂದಿದ್ದೀರಿ ಬಿಡಿ..

- ಕತ್ತಲೆ ಮನೆ... said...
This comment has been removed by a blog administrator.
ವನಿತಾ / Vanitha said...

ಥ್ಯಾಂಕ್ಸ್ ರಾಧಿಕಾ,
ಥ್ಯಾಂಕ್ಸ್ ರಘು..
@ಚೇತನ..ಥ್ಯಾಂಕ್ಸ್...But do remember you are dieting..!!
@ಗುರು..ಏನು ಪುನ ಹೆಸರು ಚೇಂಜ್ ಮಾಡಿದ್ದೀರಾ..ಇದು ಯಾರಪ್ಪ ಅಂತ ಅನ್ಕೊಂಡೆ..anyway ಥ್ಯಾಂಕ್ಸ್

shridhar said...

ಚೆನ್ನಾಗಿದೆ ನಿಮ್ಮ ತಿಂಡಿ ಬ್ಲೊಗ್ .. ನನ್ನ ಪಾಕಶಾಲೆಯಲ್ಲಿ ಇದನ್ನೆಲ್ಲ ಒಮ್ಮೆ ಪ್ರಯೋಗಿಸ ಬೇಕು

ವಿ.ಆರ್.ಭಟ್ said...

ನಿಮ್ಮ ನಳಪಾಕವನ್ನು ಓದಿದ್ದೇನೆ, ತಿಂದಷ್ಟೇ ಖುಷಿಯಾಯ್ತು, ಸದ್ಯಕ್ಕೆ ಮನಸ್ಸಲ್ಲೇ ತಿಂದೆ, ಇನ್ನು ಯಾವ್ತಾದರೂ ಮಾಡಿಸಿಕೊಂಡು ತಿನ್ನಬೇಕು, ಆರ್ಕುಟ್ ಲಿಸ್ಟ್ ನಲ್ಲಿ ಸೇರಿಕೊಂಡಿದ್ದೀರಿ, ಥ್ಯಾಂಕ್ಸ್

ಅನಂತರಾಜ್ said...

ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಭೇಟಿ. ಒಳ್ಳೆಯ ನಳಪಾಕವೇ ರೆಡಿ ಇದೆ.

ಶುಭಾಶಯಗಳು
ಅನ೦ತ್

nenapina sanchy inda said...

Dear Vanitha!!
i make that pulav and it sure not only tastes yummy but packed with nutrition
In hotels, to retain the crispness of vegetables they usually add ajinomoto, but there are views that it is not good for health.
Its been so long since i visited ur blog.
take care
:-)
malathi S

ದಿನಕರ ಮೊಗೇರ.. said...

ವನಿತಾ ಮೇಡಂ,
ಪಲಾವ್ ನಂಗಿಷ್ಟ.... ತುಂಬಾ ಇಷ್ಟ.... ದಿನದ ಮೂರೂ ಹೊತ್ತು ಕೊಟ್ಟರು ತಿನ್ನುತ್ತೇನೆ........ ನನ್ನ ವನಿತಾ ಓದಿದ್ದಾಳೆ.... ಯಾವಾಗ ಮಾಡಿ ತಿನ್ನಿಸುತ್ತಾಳೋ ನೋಡಬೇಕು..... . ತಿಂದ ದಿನ ನಿಮಗೆ ಹೇಳುತ್ತೇನೆ..... ಧನ್ಯವಾದ... ನಿಮ್ಮ ಬ್ಲಾಗ್ ಅಪ್ ಡೇಟ್ ಆಗಿದ್ದು ನನಗೆ ತಿಳಿಯುತ್ತಿಲ್ಲ.....

ವನಿತಾ / Vanitha said...

Sridhar, ವಿ.ಆರ್. ಭಟ್, ಅನಂತ ರಾಜ್ ..ನನ್ಪ್ರಪಂಚಕ್ಕೆ ಸ್ವಾಗತ..ಧನ್ಯೋಸ್ಮಿ :-)

ವನಿತಾ / Vanitha said...

Hi Malathi akka, I was not knowing that ajinomoto retains crispness..anyway I do know the bad effect of ajinomoto..so I don't use it in any food. Thanks for visiting,,you too take care :-)

ವನಿತಾ / Vanitha said...

ದಿನಕರ್..ಕುಶಿಯಾಯ್ತು..ಥ್ಯಾಂಕ್ಸ್ ರೀ :-)

SATISH N GOWDA said...

ತುಂಬಾ ಚನ್ನಾಗಿದೆ ರೀ ನಿಮ್ಮ ಅಡುಗೆ . ಸಾರೀ ಪಲಾವ್ ತುಂಬಾ ಚನ್ನಾಗಿದೆ ವನಿತಾ . ನನ್ನ ಮದುವೆಗೆ ನಿಮಗೆ ಹೇಳೋಣ ಅಂತ ಇದೀನಿ ಏನಂತೀರಿ ವನಿತಾ .ಹೋಒ ಸಾರೀ ಪಾ ಸುಮ್ಮನೆ ಜೋಕ್ ಮಾಡಿದ್ದು ಅಷ್ಟೇ . ದಯವಿಟ್ಟು ತಪ್ಪು ತಿಳಿಯ ಬೇಡಿ

SATISH N GOWDA
ನನ್ನ ಸ್ನೇಹ ಲೋಕ (orkut)
satishgowdagowda@gmail.com
ನನ್ನವಳ ಪ್ರೇಮಲೋಕ (my blog)
http://nannavalaloka.blogspot.com

SATISH N GOWDA said...
This comment has been removed by a blog administrator.
Uma Bhat said...

ನಿಮ್ಮ ಪಾಕಶಾಲೆಯ ಎಲ್ಲಾ ತಿನಿಸುಗಳೂ ವೈವಿಧ್ಯಮಯವಾಗಿವೆ...ಚೆನ್ನಾಗಿವೆ. ನಿಮ್ಮನ್ನು ಸಂಪರ್ಕಿಸಲು ಇ-ಮೇಲ್ ವಿಳಾಸವನ್ನು ತಿಳಿಸಿ. ನನ್ನ ಇ-ಮೇಲ್ :umavathibhat@yahoo.com

prabhamani nagaraja said...

@ ವನಿತಾ ಅವರೇ,
ನನ್ನ ಬ್ಲಾಗ್ ಗೆ ( ನನ್ನೂರಿಗೆ!) ಬ೦ದಿದ್ದಕ್ಕೆ ಧನ್ಯವಾದಗಳು. ಚಿಕ್ಕವರಾದ(!) ನಾವಿಬ್ಬರೂ. ನಮ್ಮ೦ತಹ ಅನೇಕರೂ ಸುಖ ದುಃಖಗಳಲ್ಲಿ ಸಮ ಭಾಗಿಗಳು! ನಿಮ್ಮ ಬ್ಲಾಗ್ ಬಹಳ ರುಚಿಕರವಾಗಿದೆ. ರೋಕ್ಸಾನ ಅವರ ಪುಸ್ತಕ ಪರಿಚಯ ಚೆನ್ನಾಗಿತ್ತು. ತಮ್ಮದಲ್ಲದ ತಪ್ಪಿಗೆ ಎ೦ಥಾ ಮಾನಸಿಕ ಹಿ೦ಸೆ. ಇ೦ಥಾ ಎಷ್ಟೂ ಜನ ನಿರಪರಾಧಿಗಳು ಶಿಕ್ಷೆ ಅನುಭವಿಸುತ್ತಿರಬಹುದು. ಅಲ್ಲವೇ?ನನ್ನ ಬ್ಲಾಗ್ ಗೆ ಬರುತ್ತಿರಿ.

Leena said...

Colourful and yummy!

LG said...

Palak and Carrot are wonderful combo, never thought of them in pulav. Looks yummy in that plate.