My photo
ಕರಾವಳಿ ಹುಡುಗಿ :)

Sunday, September 5, 2010

ಹಬ್ಬಕ್ಕೆ ಎರಡು ದಿಢೀರ್ ಸ್ವೀಟ್ಸ್ (ಗೋಧಿ ಪುಡಿ ಹಲ್ವ ಮತ್ತು ಖರ್ಜೂರ ಪಾಯಸ / Wheat flour Halwa and Dates Payasa)

ಗೋಧಿಪುಡಿ ಹಲ್ವಬೇಕಾಗುವ ಸಾಮಗ್ರಿಗಳು:
ಗೋಧಿ ಪುಡಿ - 1 ಕಪ್
ಸಕ್ಕರೆ - 1 ಕಪ್
ಹಾಲು - 1 ಕಪ್
ತುಪ್ಪ - ¼ ಕಪ್
ಏಲಕ್ಕಿ ಪುಡಿ - 1 ಚಮಚ

ಗೋಡಂಬಿ / ಬಾದಾಮಿ ಪೌಡರ್ - ಸ್ವಲ್ಪ
ಒಂದು ಪಾತ್ರೆಯಲ್ಲಿ
ತುಪ್ಪ ಬಿಸಿ ಮಾಡಿ, ಇದಕ್ಕೆ ಗೋಧಿಪುಡಿಯನ್ನು ಸೇರಿಸಿ, ಸಣ್ಣ ಉರಿಯಲ್ಲಿ ಕೆಂಬಣ್ಣ ಬರುವ ತನಕ (15-20 ನಿಮಿಷ) ಹುರಿಯಿರಿ. ನಂತರ ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಕೊನೆಯಲ್ಲಿ ಹಾಲು ಸೇರಿಸಿ. ಈ ಮಿಶ್ರಣ ತಳ ಬಿಡುವಾಗ (5 ನಿಮಿಷ) ಒಂದು ತುಪ್ಪ ಸವರಿದ ಪ್ಲೇಟ್ ಗೆ ಹಾಕಿ ಸ್ವಲ್ಪ ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ತುಂಡು ಮಾಡಿ. ಮೇಲಿನಿಂದ ಗೋಡಂಬಿ-ಬಾದಾಮಿ ಪೌಡರ್ ನ್ನು ಉದುರಿಸಿ ಅಥವಾ ಇಡೀ ಗೋಡಂಬಿಯಿಂದ ಅಲಂಕರಿಸಿ.

ಖರ್ಜೂರ ಪಾಯಸ

ಬೇಕಾಗುವ ಸಾಮಗ್ರಿಗಳು:
ಖರ್ಜೂರ - 15
ತೆಂಗಿನ ಹಾಲು - 3 ಕಪ್ (½ ತೆಂಗಿನಕಾಯಿಯನ್ನು ತುರಿದು ನೀರು ಸೇರಿಸಿಕೊಂಡು ಮಿಕ್ಸಿಯಲ್ಲಿ ರುಬ್ಬಿ, ಹಾಲನ್ನು ಹಿಂಡಿ ತೆಗೆಯಿರಿ. ಪುನ ಇದಕ್ಕೆ ನೀರು ಸೇರಿಸಿ ಇನ್ನೊಮ್ಮೆ ಹಾಲು ತೆಗೆದಿಡಿ.)
ಸಕ್ಕರೆ ಅಥವಾ ಬೆಲ್ಲ - ½ ಕಪ್ (ಸಿಹಿಗೆ ತಕ್ಕಂತೆ)
ಏಲಕ್ಕಿ ಪುಡಿ - 1 ಚಮಚ

ಸ್ವಲ್ಪ ಗೋಡಂಬಿ ಹಾಗು ಒಣ ದ್ರಾಕ್ಷೆ

ಖರ್ಜೂರದ ಬೀಜ ತೆಗೆದು ಸಣ್ಣಗೆ ತುಂಡು ಮಾಡಿಕೊಂಡು ಅರ್ಧ ಕಪ್ ನೀರಿನಲ್ಲಿ 5 ನಿಮಿಷ ಕುದಿಸಿರಿ. ತಣ್ಣಗಾದ ನಂತರ ಇದನ್ನು ಮಿಕ್ಸಿಯಲ್ಲಿ ರುಬ್ಬಿ. ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಇದಕ್ಕೆ ತೆಂಗಿನ ಹಾಲು ಮತ್ತು ಸಕ್ಕರೆ ಸೇರಿಸಿ 5 ನಿಮಿಷ ಹದ ಉರಿಯಲ್ಲಿ ಕುದಿಸಿರಿ. ಕೊನೆಯಲ್ಲಿ ಏಲಕ್ಕಿಪುಡಿ ಹಾಗು ತುಪ್ಪದಲ್ಲಿ ಹುರಿದ ಗೋಡಂಬಿ ಹಾಗು ಒಣ ದ್ರಾಕ್ಷೆಯನ್ನು ಸೇರಿಸಿ, ಬಿಸಿ ಅಥವಾ ತಣ್ಣಗಾದ ನಂತರ ಸವಿಯಲು ಕೊಡಿ. ಪಾಯಸ ಗಟ್ಟಿಯಾಗಿದ್ದರೆ, ಕೊನೆಯಲ್ಲಿ ½ - 1 ಕಪ್ ಹಾಲು ಕೂಡ ಸೇರಿಸಬಹುದು.ಈ ಎರಡು ಸ್ವೀಟ್ಸ್ಗಳನ್ನು ಮಾಡಲು ತುಂಬಾ ಸುಲಭ ಹಾಗೂ ಕಡಿಮೆ ಸಮಯದಲ್ಲಿ ಮಾಡಬಹುದು.

Recipe source: Vidyakkaನನ್- ಪ್ರಪಂಚದ ಓದುಗರೆಲ್ಲರಿಗೂ ಗೌರಿ - ಗಣೇಶ ಹಬ್ಬದ ಶುಭಾಶಯಗಳೊಂದಿಗೆ,
ವನಿತಾ.

17 comments:

ಸೀತಾರಾಮ. ಕೆ. / SITARAM.K said...

ತು೦ಬಾ ಚೆನ್ನಾಗಿ ಸರಳವಾಗಿ ಮಾಡುವ ವಿಧಾನ ಹೇಳಿದ್ದಿರ... ಬಾಯಲ್ಲಿ ನೀರೂರಿಸುವ ಸಿಹಿತಿನಿಸುಗಳು.
ಆದರೇ ನಾನು ಪ್ರಯತ್ನ ಮಾಡೊಲ್ಲ!

ಅನಂತರಾಜ್ said...

ಸಿಹಿ ತಿನಿಸಿನ ಚಿತ್ರಗಳೇ ಇಷ್ಟು ಸ್ವಾದಿಷ್ಟವಾಗಿವೆ..ಇನ್ನು ತಿ೦ಡಿಗಳು..! ಉತ್ತಮ ಮಾಹಿತಿ-ಲೇಖನ..ವನಿತಾ ಅವರೆ.

ಅನ೦ತ್

ಸಿಮೆಂಟು ಮರಳಿನ ಮಧ್ಯೆ said...

ವನಿತಾ..

ನಿಮ್ಮ ಬ್ಲಾಗಿಗೆ ಬಂದರೆ ಬಾಯಲ್ಲಿ ನೀರೂರಿಸಿ ಕಳುಹಿಸುತ್ತೀರಿ..

ಮನೆಯಲ್ಲಿ ಮಾಡಿಸ ಬೇಕು ಈ ಖರ್ಜೂರದ ಪಾಯಸ..!

ಧನ್ಯವಾದಗಳು..

ವಿ.ಆರ್.ಭಟ್ said...

VERY NICE ! doora kulitu bare baayalli neeru tarisutteeri, kelavnnu blog moolaka parcel maadi!

ತೇಜಸ್ವಿನಿ ಹೆಗಡೆ said...

Very tasty annistide.. :)

Shashi jois said...

ವನಿತಾ ಕರ್ಜೂರ ಪಾಯಸ ನಾನು ಮಾಡುವೆ .ಆದ್ರೆ ಈ ತರ ಅಲ್ಲ..ಆದ್ರೆ ನಿಮ್ಮ ಗೋದಿ ಪುಡಿ ಹಲ್ವಾ ಮಾಡುತ್ತೇನೆ.ಚಿತ್ರ ನೋಡಿ ಬಾಯಲ್ಲಿ ನೀರು ಬಂತು.
ಉತ್ತಮ ಮಾಹಿತಿ..

Leena said...

Tumba chennagi kanistha idde kanri karjoora payasa nanage hosadu,tayarisalu prayatna maduve...

ಸುಮ said...

nice...ಒಂದು ಚಿಕ್ಕ ಡೌಟ್ .. ಗೋಧಿ ಪುಡಿ ಅಂದ್ರೆ ಗೋಧಿ ಹುರಿದು ಪುಡಿ ಮಾಡಬೇಕ? ಅಥವಾ ಗೋಧಿ ಹಿಟ್ಟೊ ?

nivedita said...

Hi
Thanks for visiting me and for comments.
Keep Visiting,
Answered your doubt in my blog.

ವನಿತಾ / Vanitha said...

ಧನ್ಯವಾದಗಳು ಸೀತಾರಾಮ್ ಸರ್,ನಿಮ್ಮ ಮನೆಯವರಿಗೆ ಹೇಳಿ:))

ಥ್ಯಾಂಕ್ಸ್ ಅನಂತ್ ರಾಜ್ ಸರ್:))

ಪ್ರಕಾಶಣ್ಣ ಜೈ ಹೋ..

ಥ್ಯಾಂಕ್ಸ್ ವಿ. ಆರ್. ಭಟ್ ಸರ್,ಪಾರ್ಸೆಲ್ ಮಾಡಿದೆ:))

ಥ್ಯಾಂಕ್ಸ್ ತೇಜು:))

ಥ್ಯಾಂಕ್ಸ್ ಶಶಿ ಅಕ್ಕ, ನಿಮ್ಮ recipe ಕೂಡ ಟೈಮ್ ಆದಾಗ ಶೇರ್ ಮಾಡಿ :))

Thanks Leena:))

@ಸುಮಾ, Thanks.ಚಪಾತಿ ಮಾಡಲು ಉಪಯೋಗಿಸುವ ಗೋಧಿ ಹಿಟ್ಟು.

Thanks Nivedita..

Narayan Bhat said...

ಹಬ್ಬಕ್ಕೆ ಎರಡೆರಡು ಸ್ವೀಟ್ಸ್ ಕೊಟ್ಟಿದ್ದೀರಿ..ಥ್ಯಾಂಕ್ಸ್.

Uma Bhat said...

ವನಿತಾ ಅವರೆ,
ತುಂಬಾ ಇಷ್ಟವಾಯಿತು ಖರ್ಜೂರದ ಪಾಯಸ.

ಮನಮುಕ್ತಾ said...

nice recipes..:)

- ಕತ್ತಲೆ ಮನೆ... said...

ಅಂತೂ ಇಂತೂ ಹಬ್ಬಕ್ಕೆ ಸ್ಪೆಷಲ್ ಬಂತಪ್ಪ..
'ವಿಶೇಷ ಕಡುಬು..' ಮಾಡಿದ್ರೆ ಇನ್ನು ಚೆನ್ನಾಗಿರ್ತಿತ್ತು..
ಗೌರಿ-ಗಣೇಶ ಹಬ್ಬಕ್ಕೆ ನನ್ನದೊಂದು ಪುಟ್ಟ ಶುಭಾಷಯ..

Anonymous said...

Vanitha avare....

tumbaa tumbaa chennagive..eradoo recipe try maaduttene..

tumba thanx..

ashokkodlady said...

Vanitha avre,

Aduge priyarige uttama maahiti odagisiddiri...namge maatra chitra torisi baree baayalli neeruruvante maadiddiri....

omme illi bheti needi....

http://ashokkodlady.blogspot.com/

vani said...

very nice