ಈ ಖರ್ಜೂರದ ಕೇಕ್ ರೆಸಿಪಿ ಇಲ್ಲಿಂದ. ಇದು ನಮ್ಮ ಮನೆಯಲ್ಲಿ ಫೇವರಿಟ್ ಕೇಕ್ ಹಾಗು ನನ್ನ ಹೆಚ್ಚಿನ ಫ್ರೆಂಡ್ಸ್ ಗಳಿಗೆ ಇಷ್ಟವಾದ ಕೇಕ್. ಮಾಡಲು ಸುಲಭ, ಹಾಗು ತುಂಬಾ ರುಚಿಯಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ಖರ್ಜೂರ - 18 (ಬೀಜ ತೆಗೆದು)
ಹಾಲು - ¾ ಕಪ್
ಸಕ್ಕರೆ - ¾ ಕಪ್
ಮೈದಾ ಹಿಟ್ಟು - 1 ಕಪ್
ಎಣ್ಣೆ / ಬೆಣ್ಣೆ - ¼ ಕಪ್
ಬೇಕಿಂಗ್ ಸೋಡಾ - 1 ಚಮಚ
Dry Fruits (ಗೋಡಂಬಿ, ಒಣ ದ್ರಾಕ್ಷಿ, ವಾಲ್ ನಟ್ಸ್) - ¼ ಕಪ್
ಮಾಡುವ ವಿಧಾನ:
ಹಾಲಿನಲ್ಲಿ ಖರ್ಜೂರವನ್ನು ಸೇರಿಸಿಕೊಂಡು ಎರಡು ನಿಮಿಷ ಕುದಿಸಿರಿ. ಇದು ತಣ್ಣಗಾದ ನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡು, ಈ ಮಿಶ್ರಣದೊಂದಿಗೆ ಸಕ್ಕರೆ, ಎಣ್ಣೆ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಜರಡಿಯಾಡಿಸಿದ ಮೈದಾವನ್ನು ಸ್ವಲ್ಪ ಸ್ವಲ್ಪವೇ ಸೇರಿಸಿಕೊಂಡು ನಿಧಾನದಲ್ಲಿ ಬೆರೆಸಿರಿ. ಕೊನೆಯಲ್ಲಿ ಬೇಕಿಂಗ್ ಸೋಡಾ, ತುಂಡು ಮಾಡಿಟ್ಟ Dry fruits ಗಳನ್ನು ಸೇರಿಸಿ.
ಒಂದು ಬೇಕಿಂಗ್ ಪಾನ್ ಗೆ ಬೇಕಿಂಗ್ sprayಯನ್ನು ಸವರಿಕೊಂಡು ನಂತರ ಕೇಕ್ ನ ಮಿಶ್ರಣವನ್ನು ಸುರಿದು ಓವೆನ್ ನಲ್ಲಿ ಮಧ್ಯದ rackನಲ್ಲಿಟ್ಟು 350 F ನಲ್ಲಿ 35- 40 ನಿಮಿಷ ಬೇಯಿಸಿರಿ. ಕೇಕ್ ನ ಒಳಗಡೆ ಒಂದು ಚಾಕು ಅಥವಾ tooth pickನ್ನು ಹಾಕಿದಾಗ ಅದು ಸರಾಗವಾಗಿ ಬಂದರೆ ಕೇಕ್ ರೆಡಿಯಾಗಿದೆ. ಇದನ್ನು ಅರ್ಧ ಗಂಟೆ ತಣ್ಣಗಾಗಲು ಬಿಟ್ಟು ನಂತರ ಬೇಕಾದ ರೀತಿಯಲ್ಲಿ ತುಂಡು ಮಾಡಿಕೊಂಡು ತಿನ್ನಬಹುದು.
ಬೇಕಿಂಗ್ ಪಾನ್ ಇಲ್ಲದಿದ್ದರೆ ಯಾವುದೇ ಪಿಂಗಾಣಿಯ Oven safe ಪಾತ್ರೆಯಲ್ಲಿ ಕೇಕ್ ನ್ನು ಮಾಡಬಹುದು.
ಬೇಕಿಂಗ್ sprayಯ ಬದಲು ಪಾತ್ರೆಗೆ (ಒಂದು aluminium foil ಹಾಕಿ ಅಥವಾ ಹಾಕದೆ) ಎಣ್ಣೆ ಸವರಿಕೊಂಡು ಇದರ ಮೇಲೆ ಸ್ವಲ್ಪ ಮೈದಾಪುಡಿಯನ್ನು ಹರಡಿ ಕೊಂಡು ನಂತರ ಪಾತ್ರೆಯನ್ನು ಕವುಚಿ ಹಾಕಿ ಹೆಚ್ಚಾಗಿರುವ ಮೈದಾ ಪುಡಿಯನ್ನು ತೆಗೆದರೆ ಬೇಕಿಂಗ್ ಪಾನ್ ಸಿದ್ದ. ನಂತರ ಇದರಲ್ಲಿ ಕೇಕ್ ಮಿಶ್ರಣವನ್ನು ಹಾಕಬೇಕು. ಕೇಕ್ ಮಿಕ್ಸ್ ಕೊನೆಯಲ್ಲಿ ಇಡ್ಲಿ ಹಿಟ್ಟಿ ಗಿಂತಲೂ ಹೆಚ್ಚು ಗಟ್ಟಿಯಾಗಿರಬೇಕು. ಬೇಕಿಂಗ್ ಪಾನ್ ನಲ್ಲಿ 2-2½ ಇಂಚು ದಪ್ಪಕ್ಕೆ ಹಿಟ್ಟು ಹಾಕಿದರೆ ಕೇಕ್ ಚೆನ್ನಾಗಿ ಬರುತ್ತದೆ. ಕೇಕ್ ಗೆ white sugar ಮತ್ತು brown sugarನ್ನು ಸಮಪ್ರಮಾಣದಲ್ಲಿ ಹಾಕಿದರೆ ಕೇಕ್ ಹೆಚ್ಚು ರುಚಿಯಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ಬಾಳೆಹಣ್ಣು - 3 (ಪಚ್ಚೆ ಬಾಳೆ)
ಮೈದಾ ಹಿಟ್ಟು - 1¼ ಕಪ್
ಸಕ್ಕರೆ - ½ ಕಪ್
ಎಣ್ಣೆ / ಬೆಣ್ಣೆ - ¼ ಕಪ್
ಬೇಕಿಂಗ್ ಸೋಡಾ - 1 ಚಮಚ
ವೆನಿಲ್ಲಾ ಎಸೆನ್ಸ್ - 1 ಚಮಚ
ಹಾಲು - ¼ ಕಪ್
Dry Fruits (ಗೋಡಂಬಿ, ಒಣ ದ್ರಾಕ್ಷಿ, ವಾಲ್ ನಟ್ಸ್) - ¼ ಕಪ್
ಮಾಡುವ ವಿಧಾನ:
ಸಿಪ್ಪೆ ಸುಲಿದ ಬಾಳೆಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಇದಕ್ಕೆ ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿರಿ.
ನಂತರ ಒಂದು ಬೇಕಿಂಗ್ ಪಾನ್ ನಲ್ಲಿ ಹಾಕಿ ಓವೆನ್ನಲ್ಲಿ 350 F ನಲ್ಲಿ 35- 40 ನಿಮಿಷ ಬೇಯಿಸಿರಿ.
ತಣ್ಣಗಾದ ನಂತರ ಬೇಕಾದ ರೀತಿಯಲ್ಲಿ ತುಂಡು ಮಾಡಿಕೊಂಡು ತಿನ್ನಬಹುದು.




Presidential medal of freedom (ಜನವರಿ 10, 1977) - ಇದು Congressional Gold Medal ಜೊತೆಗೆ ಅಮೆರಿಕ ದೇಶವು ತನ್ನ ಪ್ರಜೆಯೊಬ್ಬನಿಗೆ ಕೊಡುವ ಅತ್ಯುನ್ನತ ಪಶಸ್ತಿ.
National medal of science (ಫೆಬ್ರವರಿ13, 2005). ವಿಜ್ಞಾನ ಕ್ಷೇತ್ರದಲ್ಲಿ ಅಮೆರಿಕ ದೇಶವು ತನ್ನ ಪ್ರಜೆಗೆ ಕೊಡುವ ಅತ್ಯುನ್ನತ ಪ್ರಶಸ್ತಿ.
ಅಧಿಕ ಇಳುವರಿಯ ಗೋಧಿ ತಳಿಯ ಉತ್ಪಾದನೆಗಾಗಿ ಮೆಕ್ಸಿಕೋ ಸರಕಾರದಿಂದ ಕೊಡಲ್ಪಟ್ಟ Order of the Aztec Eagle award (1970). ಇದು ಮೆಕ್ಸಿಕೋ ಸರಕಾರ ವಿದೇಶೀಯರಿಗೆ ಕೊಡುವ ಅತ್ಯುನ್ನತ ಪ್ರಶಸ್ತಿ.
ಕ್ಯಾನ್ಸರಿನಿಂದ ಬಳಲುತ್ತಿದರು ಕೂಡ ನಗುಮುಖದಿಂದ ತಮ್ಮ ಕಿರಿಯ ಸಹೋದ್ಯೋಗಿಗಳೊಂದಿಗೆ ಯಾವಾಗಲು discussionಗೆ ಪ್ರಾಮುಖ್ಯತೆ ನೀಡುತ್ತಿದ್ದ ಡಾ.ನೋರ್ಮನ್ ಇ ಬೊರ್ಲಾಗ್ ಜೊತೆಗೆ, ನಮ್ಮ ಮನೆಯವರು ಎರಡು ವರ್ಷಗಳ ಹಿಂದೆ.
ಈ ಎಲ್ಲ ಪ್ರಶಸ್ತಿ ಗಳು ಇಲ್ಲಿನ George bush Presidential library & Museum ನಲ್ಲಿಡಲಾಗಿದೆ. 


















ಬೇಕಾಗುವ ಸಾಮಗ್ರಿಗಳು:









