My photo
ಕರಾವಳಿ ಹುಡುಗಿ :)

Thursday, November 19, 2009

ಟೊಮೇಟೊ ಪಲ್ಯ / Tomato Sabji

ಟೊಮಾಟೊ - 2-3 (ದೊಡ್ಡ ಗಾತ್ರದ್ದು, ಸಣ್ಣಗೆ ಹೆಚ್ಚಿ)
ಈರುಳ್ಳಿ - 1 (ಸಣ್ಣಗೆ ಹೆಚ್ಚಿ)
ಬ್ಯಾಡಗಿ ಮೆಣಸಿನ ಪುಡಿ - ½ - ¾ ಚಮಚ (ಖಾರಕ್ಕೆ ತಕ್ಕಂತೆ)
ಉಪ್ಪು - ½ ಚಮಚ / ರುಚಿಗೆ ತಕ್ಕಷ್ಟು
ಸಕ್ಕರೆ - ½ ಚಮಚ
ಬೆಳ್ಳುಳ್ಳಿ - 2 (ಸಣ್ಣಗೆ ಹೆಚ್ಚಿ)
ಸಾಸಿವೆ - ½ ಚಮಚ
ಅರಿಶಿನ ಪುಡಿ - ಚಿಟಿಕೆ
ಕರಿಬೇವು - 5-6 ಎಲೆ
ಎಣ್ಣೆ - 3-4 ಚಮಚ
ಒಂದು ಪಾತ್ರೆಯಲ್ಲಿ ಎಣ್ಣೆ ಸೇರಿಸಿಕೊಂಡು ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಸೇರಿಸಿ ಒಗ್ಗರಣೆ ಮಾಡಿಕೊಳ್ಳಬೇಕು.
ನಂತರ ಈರುಳ್ಳಿ ಸೇರಿಸಿಕೊಂಡು ಚೆನ್ನಾಗಿ ಹುರಿಯಬೇಕು. ಇದಕ್ಕೆ ಅರಿಶಿನ ಪುಡಿ, ಮೆಣಸಿನ ಪುಡಿ ಸೇರಿಸಿಕೊಂಡು ಒಂದು ನಿಮಿಷ ಹುರಿದುಕೊಂಡು, ನಂತರ ಸಣ್ಣಗೆ ಹೆಚ್ಚಿದ ಟೊಮೇಟೊವನ್ನು ಸೇರಿಸಿ ಹದಉರಿಯಲ್ಲಿ ಟೊಮೇಟೊ ಮೆತ್ತಗಾಗುವ ತನಕ (15-20 ನಿಮಿಷ) ಬೇಯಿಸಬೇಕು. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಕ್ಕರೆ ಹಾಗು ಕತ್ತರಿಸಿಟ್ಟ ಕೊತ್ತಂಬರಿ ಸೊಪ್ಪು ಸೇರಿಸಿ ಒಲೆಯಿಂದ ಇಳಿಸಿದರೆ ರುಚಿಯಾದ ಟೊಮೇಟೊ ಪಲ್ಯ ಸಿದ್ದ. ಈ ಪಲ್ಯವು ಚಪಾತಿಯ ಜೊತೆಗೆ ಒಳ್ಳೆಯ ಕಾಂಬಿನೇಶನ್.

9 comments:

ಹರೀಶ ಮಾಂಬಾಡಿ said...

ಪ್ರಯೋಗ ಜಾರಿಯಲ್ಲಿದೆ :)

ವನಿತಾ / Vanitha said...

ಥ್ಯಾಂಕ್ಸ್ ಹರೀಶ್, ಪ್ರಯೋಗದ ರಿಸಲ್ಟ್ ತಿಳಿಸಿ,
ವನಿತಾ.

shivu.k said...

ವನಿತಾ,

ಟೋಮೋಟೊ ಪಲ್ಯ ಬಾಯಲ್ಲಿ ನೀರೂರಿಸುತು. ಆದ್ರೆ ಎಂಥ ಮಾಡೋಣ, ಟೋಮೋಟೋ ಮತ್ತು ಈರುಳ್ಳಿ ಬೆಲೆ ಸದ್ಯ ಏರಿಬಿಟ್ಟಿದೆಯಲ್ಲಾ?

ಚುಕ್ಕಿಚಿತ್ತಾರ said...

ನಿಮ್ ಪ್ರಪ೦ಚ ತು೦ಬಾ ಚೆನ್ನಾಗಿದೆ.ವನಿತಾ ಅವರೆ.
ಟೊಮೋಟೋ ಪಲ್ಯ ಚೆನ್ನಾಗಿತ್ತು.
ವ೦ದನೆಗಳು.

Lakshmi said...

tomato palya is something quick to make and tasty to eat. Nimma matavannu nanna blogige kottidakke dhanyavadagalu :)

ಪಾಚು-ಪ್ರಪಂಚ said...

Hi Vanitha..

Nan-prapancha da huttuhabbada shubhashayagalu :-)

ವನಿತಾ / Vanitha said...

ಥ್ಯಾಂಕ್ಸ್ ಪ್ರಶಾಂತ್..ನೀವೇ ಮೊದಲಿಗರು..ಹಾಗೆ ಪಾಚು ಪ್ರಪಂಚಕ್ಕೆ ಕೂಡ ಹಾರ್ದಿಕ ಅಭಿನಂದನೆಗಳು :)

ಮನಮುಕ್ತಾ said...

ನೀರು ದೋಸೆ... ತೆ೦ಗಿನಕಾಯಿ ಚಟ್ನಿ... ವಾವ್..ನೆನಪಾಗಿ ನಾಲಿಗೆಯಲ್ಲಿ ನಾಲಿಗೆಯಲ್ಲಿ ನೀರು ಬ೦ತು...ಬಗೆಬಗೆಯ ಅಡುಗೆ ಹೇಳಿದ್ದೀರಿ...ಧನ್ಯವಾದಗಳು...ತಡವಾಗಿ ಬ೦ದೆ..ನನ್ ಪ್ರಪ೦ಚದ ಹುಟ್ಟುಹಬ್ಬದ ಶುಭಾಶಯಗಳು..ಹಾಗೂ..ಅಭಿನ೦ದನೆಗಳು....

ವನಿತಾ / Vanitha said...

thank you manamuktha:-)