My photo
ಕರಾವಳಿ ಹುಡುಗಿ :)

Wednesday, April 28, 2010

ಕಣ್ಣಿಗೆ ಹಬ್ಬ - ನಿಸರ್ಗ ಸೃಷ್ಟಿಯ ಗುಹೆಗಳು

ಸಲ ಅಡುಗೆ ಮನೆ ಬಿಟ್ಟು, ಸ್ವಲ್ಪ ಬೇರೆ ಬರೆಯೋಣ ಅಂತ ಅನ್ನಿಸ್ತು...ಅದಕ್ಕೆ ಇಲ್ಲಿನ (ಟೆಕ್ಸಾಸ್) ಗುಹೆಗಳನ್ನು ಪರಿಚಯಿಸುತ್ತಿದ್ದೇನೆ. ಟೆಕ್ಸಾಸ್ ಉರಿ ಬಿಸಿಲಿಗೆ ಹೆಸರು ವಾಸಿಯಾದರೂ ಕೂಡ, ಕಣ್ಣಿಗೆ ಮುದ ನೀಡುವ ಸುಂದರ ಗುಹೆಗಳು ಇಲ್ಲಿನ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಗುಹೆಗಳಿಗೆ ಮಿಲಿಯನ್ ವರ್ಷಗಳ ಇತಿಹಾಸವಿದೆ.


ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಭೂಮಿಯ ಪದರದ ನಡುವಿರುವ ಸುಣ್ಣದ ಕಲ್ಲಿನ (CaCO3) ಸಂಧಿಗಳಿಂದ ನುಸುಳುವ ಕಾರ್ಬೋನಿಕ್ ಆಮ್ಲ (H2CO3) ನಿಧಾನವಾಗಿ ಸುಣ್ಣದ ಕಲ್ಲನ್ನು ಕರಗಿಸುತ್ತಾ ಸಂಧಿಗಳನ್ನು ಅಗಲವಾಗಿಸುತ್ತ, ಗುಹೆಗಳ ನಿರ್ಮಾಣವಾಗುತ್ತದೆ. ವಾತಾವರಣ ಹಾಗೂ ಮಣ್ಣಿನಲ್ಲಿರುವ ಅಂಗಾರಾಮ್ಲ (CO2) ನೀರಿನೊಂದಿಗೆ (H2O) ಕರಗಿದಾಗ ಕಾರ್ಬೋನಿಕ್ ಆಮ್ಲ ತಯಾರಾಗುತ್ತದೆ. ಈ ಗುಹೆಗಳ ರಚನೆ ಬಹಳ ನಿಧಾನವಾದ ಪ್ರಕ್ರಿಯೆ. ಒಂದು ಅಂದಾಜಿನ ಪ್ರಕಾರ ಒಬ್ಬ ಮನುಷ್ಯ ನುಸುಳಬಹುದಾದ ಗುಹೆಯ ರಚನೆಗೆ ಸುಮಾರು ಒಂದು ಮಿಲಿಯ ವರ್ಷ ತಗಲುತ್ತದೆ.


First ಗೆ ಗುಹೆ ಯನ್ನು ಕಂಡು ಹಿಡಿದಾ ಹಗ್ಗದ ಮೂಲಕ ಕೆಳಕ್ಕಿಳಿಯಲು ಉಪಯೋಗಿಸುತ್ತಿದ್ದ ದಾರಿ. ಈಗ ಪಕ್ಕದಲ್ಲೇ ಮೆಟ್ಟಲುಗಳನ್ನು ಕಾಣಬಹುದು.



ಅದರಲ್ಲೂ ಸುಂದರವಾದ ಗುಹೆಯ ಒಳಗಿನ ರಚನೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.ಅಂತೆಯೇ ಗುಹೆಯ ಒಳಗೆ ಜಿನುಗುವ ನೀರಿನ ಹನಿಗಳು ತೊಟ್ಟಿಕ್ಕುತ್ತಾ ಶಿಲಾ ರಚನೆಗಳು ನಿರ್ಮಾಣ ಗೊಳ್ಳುತ್ತವೆ. ಈ ರಚನೆಗಳನ್ನು ಕೈಯಿಂದ ಸ್ಪರ್ಶಿಸ ಬಾರದು. ಏಕೆಂದರೆ, ನಮ್ಮ ಕೈಯಲ್ಲಿರುವ ಎಣ್ಣೆ/ಜಿಡ್ಡು, ಶಿಲೆಗಳ ಬೆಳವಣಿಗೆಯನ್ನು ಸ್ಥಗಿತಗೊಳಿಸುತ್ತವೆ. ನೆಲದಲ್ಲಿ ಉಧ್ಭವವಾದಂತೆ ಕಾಣುವ ಸುಂದರ ಶಿವಲಿಂಗಗಳು, ಅದ್ಭುತ ಗೋಪುರಗಳು, ಕಂಬದಂತೆ, ಗ್ಲಾಸಿನ ಸ್ಟ್ರಾದಂತೆ, ಸೀರೆಯ ನೆರಿಗೆಯಂತೆ ಕಾಣುತ್ತಾ ಮನಸೂರೆಗೊಳ್ಳುತ್ತವೆ. ಇದಕ್ಕನುಗುಣವಾಗಿ ಇವಕ್ಕೆ ಇಂಗ್ಲಿಷ್ ನಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ.


ಶಿಲ್ಪಿ ಕಡೆದ ಕಂಬಗಳಂತೆ ಗೋಚರಿಸುವ ಗುಹೆಯ ಒಳಾಂಗಣ


ಸೀರೆಯ ನೆರಿಗೆಗಳು
ಸ್ಟ್ರಾ (on the roof) ಮಾದರಿಯ ಒಳರಚನೆಗಳು

ಗುಹೆಯ ಒಳಗೆ ನೀರು ತೊಟ್ಟಿಕ್ಕುವ ದೃಶ್ಯ

ಗೈಡ್ ಪ್ರಕಾರ ನೀರನ್ನು ಕೈಯಲ್ಲಿ ಹಿಡಿದು ಕುಡಿದರೆ 'ತೀರ್ಥ' ಸಮಾನವಂತೆ..ಟೇಸ್ಟ್ ಮಾತ್ರ ಚೆನ್ನಾಗಿತ್ತು:)



ಗುಹೆಯ ಒಳಗಿನ ಜಲಪಾತ..ಮಳೆ ಬಂದಾಗ ಇದರಲ್ಲಿ ಹೆಚ್ಚಿನ ನೀರನ್ನು ಕಾಣಬಹುದು ಮತ್ತು ತೊಟ್ಟಿಯಲ್ಲಿ ನೀರು


ಗುಹೆಯ Roof..Beautiful ಆಲ್ವಾ..


ಇದರ ಒಳಗಡೆ ಬಾವಲಿ, ಸಲಮಾಂಡರ್ ನಂತಹ ನಿರುದ್ರಪವಿ ಜೀವಿಗಳು ವಾಸಿಸುತ್ತವೆ.

ಅಲ್ಲದೆ ಹಲವು ಜೀವಿಗಳ ಪಳೆಯುಳಿಕೆಗಳು ಕಾಣಸಿಗುತ್ತದೆ. ಗುಹೆಗಳು world war ಸಮಯದಲ್ಲಿ ಸೈನಿಕರ ವಾಸಸ್ಥಳವಾಗಿತ್ತು ಎನ್ನುವುದು ಗೈಡ್ ಮಾಹಿತಿ. ಗುಹೆಗಳು ಸಾಧಾರಣವಾಗಿ 1-2 ಕಿ ಮೀ. ಉದ್ದಕ್ಕಿರುತ್ತವೆ.



ಜೀವಿಗಳಿಗೂ ಇಲ್ಲಿ ನೆಲೆಯಿದೆ - A fern

ತೂಗಾಡುತ್ತಿರುವ ಬಾವಲಿ (Mexican bat)

ಗುಹೆಯ ಒಳಗೆ ಕಂಡು ಬಂದ ಆನೆ ದಂತದ ಪಳೆಯುಳಿಕೆ

ಫೋಟೋ ಗಳು ವಿನೋದ್ ಕ್ಯಾಮೆರಾ ಕಣ್ಣಿಂದ.

24 comments:

Unknown said...

I have visited one near Penselvania, there r just so beautiful isn't it. Nice pics Vanitha..

Savi-Ruchi said...

I recently visited one in Thailand. Naanu nodiddu samudrada madye ittu, adbhutha alwa?

ವಿ.ರಾ.ಹೆ. said...

wonderful. adbhutavAgide!

Ash said...

Thanks for sharing those delightful pics.... They are wonders for sure.. when u get to visit such places, the feeling is a totally different one... Like very enthralling one!!! I get goosebumps everywhere..... EWW!!!! Ee rahsmaya dharaniya adbhutagalu..... Aha! entha vismaya!!!!! Right from childhood I love visiting abandoned & ruined places... Any old thing I find I have to get in & come out.... It keeps haunting me till then..... WOW!!! sometimes I wonder at myself.... One nut case.... as my hubby calls me Pagli!

Ash....
(http://asha-oceanichope.blogspot.com/)

ಮನಮುಕ್ತಾ said...

ಸು೦ದರ ಚಿತ್ರಗಳೊಡನೆ ಉತ್ತಮ ಮಾಹಿತಿಯ ವಿವರಣೆ.... ನಿಮ್ಮ ಅಡುಗೆ ಅಷ್ಟೆ ಸೊಗಸಾಗಿದೆ!ನಿಜಕ್ಕೂ ತು೦ಬಾ ಹಿಡಿಸಿತು.

ಸಾಗರದಾಚೆಯ ಇಂಚರ said...

Amazing place,
wonderful photos
thanks ri namgoo torisiddakke

Ittigecement said...

ವನಿತಾ..

ವಾಹ್ ! ವಾಹ್.. !

ಫೋಟೊಗ್ರಫಿ ಮತ್ತು ಬರಹ ಎರಡೂ ಸೂಪರ್ !!
ಪ್ರಕೃತಿ ನಿರ್ಮಿಸಿದ ಗುಹೆಗಳು..
ಅವುಗಳ ವಿನ್ಯಾಸ ಅದ್ಭುತವಾಗಿದೆ... !

ಮಲೇಶಿಯಾದಲ್ಲೂ ಇಂಥಹ ಗುಹೆ ನೋಡಿದ್ದೆ...

ನಮಗೆಲ್ಲ ಪರಿಚಯಿಸಿದ್ದಕ್ಕೆ ಧನ್ಯವಾದಗಳು...

shivu.k said...

ವನಿತಾ,

ವೆರಿಗುಡ್, ಆಡುಗೆ ಮನೆಯಿಂದ ಹೊರಬಂದಿದ್ದಕ್ಕೂ ಸಾರ್ಥಕ. ಗುಹೆಯ ಚಿತ್ರಗಳು ತುಂಬಾ ಚೆನ್ನಾಗಿವೆ. ಇವೆಲ್ಲವನ್ನು ನೋಡಿ ನನಗೆ ಆಂದ್ರಪ್ರದೇಶದ ಬೆಲ್ಲಂ ಗುಹೆಗಳನ್ನು ನೋಡಿದ ನೆನಪಾಯಿತು. ಅವು ಹೀಗೆ ಇವೆ.
ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

These are called Stalactite & Stalagmite in Geology. The caves are formed in limestone bed due to water movement causing erosion by dissolving limestone & further there is precipitation of water from cave give rice to deposition of lime from top of roof & also projecting from down from where droplets fall. These will grow like pillar & sometime later both join . These structures are called stallactite, stalagmite & columns.
In India BURRA CAVES in Araku Valley of AP (Near to Rajmahendri) we can see this.
This can also be seen in Kurnool district very near to Raichur (see Link for photos : http://hanamgondpt.blogspot.com/2010/03/saturday-i-had-been-to-brb-college.html

Badarinath Palavalli said...

Intensive writing.

I will back to your blog to dig out full postings.

Pl. vivit my Kannada Poetry blog:
www.badari-poems.blogspot.com

- Badarinath Palavalli

ಗೌತಮ್ ಹೆಗಡೆ said...

ವಾಹ್ !!

Vidya Chandrahas said...

Hi Vanitha,
This is my first visit to your blog. Very nice picture.I am following your blog so that I can keep in touch with your blog.

Visit my blog..
www.akshaypatrerecipes.blogspot.com

ಹರೀಶ ಮಾಂಬಾಡಿ said...

FREE trip thru ur blog
nice photos also

Unknown said...

Namaskara Vanitha,
Kshamisabeku, tumba tadavagi baritha ididni anta..
Ivatthe, monsoonspice.com alli nimma hesaru nodide, Kannadadavara blog noodi tumba tumba khushi aithu.
Dhanya vaadagalu..

Eshtu Chennagi baredidira.
Texas na guhegalige hogi badhage aithu.
Tumba dhanyavaadagalu,

Matte baritini,
Smiley

ಮನಸಿನಮನೆಯವನು said...

ವನಿತಾ / Vanitha,

ಅಡುಗೆ ಮನೆ ಬಿಟ್ಟು ಹೊರಗಡೆ ಬಂದು ಆರಂಭದಲ್ಲೇ ಉತ್ತಮ ಪಯಣ ಶುರುಮಾಡಿದ್ದೀರಿ..
ಅದ್ಭುತ ಚಿತ್ರಗಳಸಹಿತ ವಿವರಣೆ ಸರಿಯಾಗಿದೆ..
ಅಡುಗೆಮನೆಯನ್ನು ಸಂಪೂರ್ಣ ಬಿಡದಿರಿ.., ಹೊರಗಡೆ ಬರದೆಯೂ ಇರದಿರಿ..

FH said...

Thanks Vanitha. We visited a cave around San Antonia once, loved it. It's amazing to see and dark, clod in there too. Beautiful pics! :)

ದಿನಕರ ಮೊಗೇರ said...

vanita madam,
tumbaa sundara photo vivarane......... nimma ellaa aDuge putagalannu nannaake oduttaale....... comment bareyalla ashte...... nimma adugeya jote, ee post tumbaa ishta aaytu.....

Ganesh K said...

Thank you for providing very very interesting information about the caves in America.

Keep writing about the specialities around your environment.

Ganesh K

Raghu said...

beautiful..!

PaLa said...

ಚೆನ್ನಾಗಿದೆ, ಅದ್ಭುತ ಮಾಯಾ ಲೋಕವೊಂದನ್ನು ಹೊಕ್ಕು ಹೊರಬಂದಂತಾಗಿರಬೇಕು ನಿಮಗೆ!

ವನಿತಾ / Vanitha said...

ಬ್ಲಾಗ್ ಮಿತ್ರರೇ, ಧನ್ಯವಾದಗಳು:)
ಈ ಲೇಖನದಿಂದಾಗಿ ಹಲವು ಕಡೆಯಲ್ಲಿನ ಗುಹೆಗಳ ಬಗ್ಗೆ ಮಾಹಿತಿ
ತಿಳಿಯಿತು.

nenapina sanchy inda said...

Hello Vanitha
nice pic and good info.
take care
:-)
malathi akka

Pavithra Kodical said...

Hi Vanitha.. We visited a cave in Missouri longtime back..It was fun :)
Nimma blog thumba chennagide :)

ವನಿತಾ / Vanitha said...

ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು :))