My photo
ಕರಾವಳಿ ಹುಡುಗಿ :)

Saturday, February 5, 2011

ಸಾವನ್ನೇ ಅರಿಯದ ‘ಹೀಲ’ ಜೀವಕೋಶಗಳ ಹಿಂದಿನ ಕಥೆ (Immortal Life of Henrietta Lacks or HELA Cells)

ಸಾವನ್ನು ಗೆದ್ದವರು ಪ್ರಪಂಚದಲ್ಲಿ ಯಾರಿದ್ದಾರೆ ಹೇಳಿ!. ಹುಟ್ಟಿದವನಿಗೆ ಸಾವು ಕಟ್ಟಿಟ್ಟ ಬುತ್ತಿ. ವೈದ್ಯಕೀಯ ಸಂಶೋಧನೆಗಳ ಫಲವಾಗಿ ಸಾವನ್ನು ಮೀರಿದ ಕೋಶಗಳನ್ನು ಸಂಶೋಧಕರು ಹಲವಾರು ವರುಷಗಳ ಹಿಂದೆಯೇ ಕಂಡು ಹಿಡಿದಿದ್ದಾರೆ. ಇದಕ್ಕೆ ಕ್ಯಾನ್ಸರ್ ಕೋಶಗಳು ಉತ್ತಮ ನಿದರ್ಶನವಾಗಿದೆ. ಒಂದು ವಿಧದ ಕ್ಯಾನ್ಸರ್ ಕೋಶಗಳ ಹೆಸರು ಹೀಲ (= HeLa cells). ಇದರ ಹಿಂದಿನ ರೋಚಕ ಕಥೆಯನ್ನು ಓದುವ ಅವಕಾಶ ನನಗೆ ಸಿಕ್ಕಿತ್ತು. ವೈಜ್ಞಾನಿಕ ತ್ಯಘಟನೆಯನ್ನಾದರಿಸಿದ ಪುಸ್ತಕದ ಹೆಸರು - “Immortal Life of Henrietta Lacks” ಬಗ್ಗೆ ನಿಮಗೆ ಹೇಳಲೇಬೇಕು ಅನ್ನಿಸ್ತು.

ಆಕೆಯ ಹೆಸರು ಹೆನ್ರಿಟ್ಟ ಲಾಕ್ಸ್ (Henrietta Lacks). ವರ್ಜಿನಿಯ ಪ್ರಾಂತ್ಯದ ಒಂದು ಬಡ ನೀಗ್ರೋ (ಆಫ್ರಿಕನ್ ಅಮೆರಿಕನ್) ಕುಟುಂಬದ 5 ಮಕ್ಕಳ ತಾಯಿ. ಕೊನೆಯ ಮಗ ಹುಟ್ಟಿ 4 ತಿಂಗಳಿಗೆ ಆಕೆಗೆ 'ಗರ್ಭಕೋಶದ ಕ್ಯಾನ್ಸರ್ಇದೆ ಎಂದು ಅರಿವಾಗುತ್ತದೆ. ಅಮೆರಿಕಾದಲ್ಲಿ 1950ರ ಜನಾಂಗೀಯ ವರ್ಣಭೇದ ನೀತಿ ಇದ್ದ ಕಾಲ. ಆಕೆ ಆಫ್ರಿಕನ್ ಅಮೆರಿಕನ್ನರಿಗೆಂದು ಇದ್ದ ಒಂದೇ ಆಸ್ಪತ್ರೆ John Hopkinsಗೆ ವಿಕಿರಣ ಚಿಕಿತ್ಸೆ (radium therapy) ಗೆಂದು ಅಡ್ಮಿಟ್ ಆಗುತ್ತಾಳೆ. ಅವಳ ಚಿಕಿತ್ಸೆಗಿಂತ ಮೊದಲು ಡಾಕ್ಟರ್ ಗಳು ಅವಳ ಶರೀರದಿಂದ ಕ್ಯಾನ್ಸರ್ ಪೀಡಿತ ಮತ್ತು ಕ್ಯಾನ್ಸರ್ ರಹಿತ ಭಾಗದಿಂದ ಸಣ್ಣ ಮಾಂಸದ ತುಂಡನ್ನು ಅವಳ ಅನುಮತಿಯಿಲ್ಲದೆ ಪರೀಕ್ಷೆಗೆಂದು ತೆಗೆಯುತ್ತಾರೆ ಮತ್ತು ಅಲ್ಲೇ ಪಕ್ಕದಲ್ಲಿದ್ದ 'Dr. George Gey' ಅವರ ಲ್ಯಾಬ್ ಗೆ ಕೃತಕವಾಗಿ ಜೀವ-ಕೋಶಗಳನ್ನು ಬೆಳೆಸಲೆಂದು ಕಳುಹಿಸುತ್ತಾರೆ. ಕೊನೆಗೂ ಒಂದು ವರ್ಷದ ಕಾಲ ಕ್ಯಾನ್ಸರ್ ನಿಂದ ನರಳಿ ಆಕೆ ತನ್ನ 31ನೇ ವಯಸ್ಸಿಗೆ ಅಂತ್ಯ ಕಾಣುತ್ತಾಳೆ. ನಂತರ ನಡೆದ ಘಟನಾವಳಿಗಳು ವಿಜ್ಞಾನದ ದಿಕ್ಕನ್ನೇ ಬದಲಾಯಿಸುತ್ತದೆ ಎಂದು ಯಾರೂ ಭಾವಿಸಿರಲಿಲ್ಲ..

ವೈಜ್ಞಾನಿಕ ಅಂದಾಜಿನ ಪ್ರಕಾರ ನಮ್ಮ ದೇಹದಲ್ಲಿ, ಸುಮಾರು 1014 ಜೀವಕೋಶಗಳು ಇರುತ್ತದೆ. ಆರೋಗ್ಯಕರ ಕೋಶಗಳನ್ನು ದೇಹದಿಂದ ಹೊರಗೆ ಲ್ಯಾಬೋರೆಟರಿಯಲ್ಲಿ ಅಗತ್ಯ ಪೋಷಕಾಂಶ ಹಾಗು ವಿಟಮಿನ್ ಗಳಿಂದ ತಯಾರಿಸಿದ ಮಿಶ್ರಣದಲ್ಲಿ (media) ಬೆಳೆಸಿದರೆ 1ವಾರ, 10 ದಿನ.. ಅಬ್ಬಬ್ಬಾ!! ಎಂದರೆ 15 ದಿನ ಬೆಳೆಯಬಲ್ಲುದು. ಸ್ವಲ್ಪ ದಿನಗಳ ನಂತರ ಕೋಶಗಳು artificial mediaದಲ್ಲಿ ತಮ್ಮ ವಿಭಜನೆಯ ಸಾಮರ್ಥ್ಯವನ್ನು ಕಳೆದು ಕೊಳ್ಳುತ್ತವೆ. ಹೆನ್ರಿಟ್ಟಳ ದೇಹದಿಂದ ತೆಗೆದು ಬಳಸಿದ ಸಣ್ಣ ಮಾಂಸದ ತುಂಡಿನಿಂದ ಹುಟ್ಟಿದ ಕೋಶಗಳು ಸಾವನ್ನೇ ಮೀರಿ, ಇಂದಿಗೂ ಬೆಳೆಯುತ್ತಾ ಇದೆ. ಇದನ್ನು ಪ್ರಪಂಚದಾದ್ಯಂತದ ಲ್ಯಾಬ್ ಗಳಲ್ಲಿ ಎಷ್ಟು ಪ್ರಮಾಣದಲ್ಲಿ ಉತ್ಪಾದಿಸಲ್ಪಟ್ಟಿದೆ ಎಂಬುದು ಊಹೆಗೂ ನಿಲುಕದ ವಿಷಯ. ಒಂದು ಅಂದಾಜಿನ ಪ್ರಕಾರ, ಇದುವರೆಗೆ ತಯಾರಿಸಿದ ಹೀಲ ಕೋಶಗಳ ಒಟ್ಟು ತೂಕ 50 ಮಿಲ್ಲಿಯನ್ ಮೆಟ್ರಿಕ್ ಟನ್ ಗಿಂತಲೂ ಹೆಚ್ಚು ಅಂದರೆ 100 Empire State Building (102 ಮಹಡಿಗಳ ನ್ಯೂ ಯಾರ್ಕ್ ನ ಎತ್ತರದ ಕಟ್ಟಡ) ಗಿಂತಲೂ ಹೆಚ್ಚು. ಸತತ 50 ವರ್ಷಗಳಿಂದ ಈ ಕೋಶಗಳು ಸಾವನ್ನೇ ಕಂಡಿಲ್ಲ ಎಂದರೆ ನಂಬುತ್ತೀರಾ... HeLa Cells 1950ರಲ್ಲಿ John Hopkins ಆಸ್ಪತ್ರೆಗೆ ಅಡ್ಮಿಟ್ ಆದ ಆಫ್ರಿಕನ್ ಮಹಿಳೆ Henritta Lacks (He La) ದೇಹದಿಂದ ಬಂದಂತಹ ಕೋಶಗಳು.

ಜೀವಕೋಶಗಳನ್ನು ಕೃತಕವಾಗಿ ಬೆಳೆಸುವುದು ಈಗಲೂ ಬಹಳ ಕ್ಲಿಷ್ಟವಾದ ಕೆಲಸ. ಈಗಿನ ದಿನಗಳಲ್ಲಿ ಜೀವ ಕೋಶಗಳನ್ನು ಬೆಳೆಸಲು ಬೇಕಾದ ಮಿಶ್ರಣಗಳು ರೆಡಿಯಾಗಿ ಸಿಕ್ಕರೂ ಉನ್ನತ ತಂತ್ರಜ್ಞಾನದ ಸಲಕರಣೆಗಳು ಬಳಕೆಯಾಗುತ್ತವೆ. ಆದರೆ 50ರ ದಶಕದಲ್ಲಿ ಜೀವಕೋಶಗಳನ್ನು ತಯಾರಿಸಲು ಬಳಸಿದ ಕೃತಕ ಮೀಡಿಯಾವನ್ನು ತಯಾರಿಸಿದ್ದೇ ಒಂದು ವಿಶೇಷ. ಇದರಲ್ಲಿ ಬಳಸಿದ್ದು ಹೆರಿಗೆಯ ರೂಂ ನಿಂದ ತಂದ ಹೊಕ್ಕುಳ ಬಳ್ಳಿ, ಮಾಂಸದ ಅಂಗಡಿಯ ಕೋಳಿಯ ರಕ್ತ….ಹೀಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ತಂದು ಲ್ಯಾಬ್ ನಲ್ಲಿ ಸಂಸ್ಕ್ರರಿಸಿ, ಅಗತ್ಯ ಮಿಶ್ರಣವನ್ನು ಲ್ಯಾಬ್ ನಲ್ಲೆ ತಯಾರಿಸುತ್ತಿದ್ದರು. ಆದರೆ ಈ ಪ್ರಯೋಗಗಳ ಉತ್ತರ ಯಾವಾಗಲೂ ನಿರಾಶಾದಾಯಕವಾಗಿರುತ್ತಿತ್ತು. ಅಂತಹ ಸಮಯದಲ್ಲಿ Dr George Gey ಅವರ ಲ್ಯಾಬ್ ನಲ್ಲಿ ಬೆಳೆದ ಹೀಲ ಕೋಶಗಳು ವೈಜ್ಞಾನಿಕ ಸಂಶೋಧನೆಗಳ ಪಟ್ಟಿಯಲ್ಲಿ (medical research field) ಹೊಸ ಕ್ರಾಂತಿಯನ್ನೇ ಎಬ್ಬಿಸಿತು.

ಈಗ ವೈದ್ಯಕೀಯ ವಿಜ್ಞಾನ ರಂಗದ ಸಂಶೋಧನೆಗಳಲ್ಲಿ ಈ ಕೋಶಗಳು ಅವಿಭಾಜ್ಯ ಅಂಗ. ಕ್ಯಾನ್ಸರ್, Aids/ HIV, Leukemia, Influenza, ಪೋಲಿಯೋ ಲಸಿಕೆ, ಹಾಗು ಇತರ ಔಷಧಗಳ ತಯಾರಿಕೆಗಳಿಗೆ ನಡೆಯುವ ಪ್ರಯೋಗಗಳಲ್ಲಿ, ಅಂತರಿಕ್ಷ ಯಾನದ ಮೇಲಿನ ಪ್ರಯೋಗಗಳು ಹಾಗು ಮನುಷ್ಯನಲ್ಲಿ ಏನೇ ಪ್ರಯೋಗ ಮಾಡುವುದಿದ್ದರೂ ಅದಕ್ಕಿಂತ ಮೊದಲು ಸಂಶೋಧನೆಗಳನ್ನು ಮಾಡಲು ಈ ಕೋಶಗಳು ನಿರಂತರವಾಗಿ ಬಳಕೆಯಾಗುತ್ತವೆ. ಹೀಲಾ ಸೆಲ್ಲ್ಸ್ 50 ವರ್ಷಗಳಷ್ಟು ಹಳೆಯದಾದರೂ ವಿಶ್ವದಾದ್ಯಂತ ಹಲವು ಲ್ಯಾಬ್ ಗಳಲ್ಲಿ ಇನ್ನೂ ಕೂಡ ಬೆಳೆಯುತ್ತಲೇ ಇದೆ. ಮತ್ತು ಇದನ್ನು ಬೆಳೆಸಿ ಮಾರಾಟ ಮಾಡುವ ಹಲವು ಸಂಸ್ಥೆಗಳಿವೆ. ಇದುವರೆಗೆ ಹೀಲಾ ಸೆಲ್ಲ್ಸ್ ಬಳಸಿದ ಅರುವತ್ತನಾಲ್ಕು ಸಾವಿರಕ್ಕೂ ಮಿಕ್ಕಿ ಸಂಶೋಧನಾ ಲೇಖನಗಳು (research publications) ಬಂದಿವೆ....ಅಂದರೆ ಸರಾಸರಿ ತಿಂಗಳಿಗೆ ಮುನ್ನೂರರಷ್ಟು ಲೇಖನಗಳು ಅಂತರ್ಜಾಲದಲ್ಲಿ ಪ್ರಕಟಗೊಳ್ಳುತ್ತವೆ.. ವಿಪರ್ಯಾಸ ಎಂದರೆ ಮೆಡಿಕಲ್ ಫೀಲ್ಡ್ ನ್ನೇ ಬದಲಾಯಿಸಿದ ಆಕೆಯ ಗಂಡ ಹಾಗು ಮಕ್ಕಳಿಗೆ ಇದರಿಂದ ಯಾವ ಪ್ರಯೋಜನವೂ ಸಿಗಲಿಲ್ಲ, ಯಾವುದೇ ಮೆಡಿಕಲ್ ಇನ್ಶುರೆನ್ಸ್ ಗಳು ಇರಲಿಲ್ಲ..ಅಮೇರಿಕಾದಲ್ಲಿ ಮೆಡಿಕಲ್ ಇನ್ಶುರೆನ್ಸ್ ಇಲ್ಲದೆ ಬದುಕುವುದು ಎಂದರೆ ಅವರ ಬದುಕು ನರಕಕ್ಕೆ ಸಮ.

“The Immortal Life of Henrietta Lacks” ಪುಸ್ತಕದ ಲೇಖಕಿ Rebecca Sklootಗೆ ತನ್ನ ಹೈಸ್ಕೂಲಿನ ವಿಜ್ಞಾನದ ತರಗತಿಯಲ್ಲಿ ಉಂಟಾದ ಕುತೂಹಲದಿಂದಾಗಿ, ಸತತ 20 ವರ್ಷಗಳ ಪರಿಶ್ರಮದಿಂದ, ಹೀಲಾ ಸೆಲ್ ಲೈನ್ ಹಾಗು Henrietta Lacks ಕುಟುಂಬದವರ ಬಗ್ಗೆ, ಆಫ್ರಿಕನ್ ಅಮೆರಿಕನ್ನರ ಮೇಲೆ ನಡೆದ ಹಲವು ವೈಜ್ಞಾನಿಕ ಸಂಶೋಧನೆ, ಹಾಗು ಮುಖ್ಯವಾಗಿ ಸ್ಲೆವರಿ ಗೆಂದು ಬಂದ ಆಫ್ರಿಕನ್ ಅಮೆರಿಕನ್ನರ ನ್ನು ಹೇಗೆ ವೈಜ್ಞಾನಿಕ ಸಂಶೋಧನೆಗಳ ಬಲಿಪಶುಗಳನ್ನಾಗಿ ಮಾಡಲಾಯಿತು.. ಎಲ್ಲಕ್ಕಿಂತ ಮುಖ್ಯವಾಗಿ ನಮಗಿಂದು ದೊರಕುವಂತಹ ಅತ್ಯುನ್ನತ ಮೆಡಿಕಲ್ ಸೌಲಭ್ಯಗಳ ಹಿಂದಿನ ಕರುಣಾಜನಕ ಕಥೆಗಳು….ಮುಂತಾದ ಜ್ವಲಂತ ಸತ್ಯಘಟನೆಗಳನ್ನಾದರಿಸಿ ಬರೆದ ಒಂದು ಒಳ್ಳೆಯ ಪುಸ್ತಕ......ನಿಮಗೆಲ್ಲಿಯಾದರು ಸಿಕ್ಕಿದರೆ ಖಂಡಿತಾ ಓದಿ.

ಉಪಯುಕ್ತ ಲಿಂಕುಗಳು:

1988ರಲ್ಲಿ BBCಯವರು ಮಾಡಿದ ಡಾಕುಮೆಂಟರಿ ವೀಡಿಯೊ ವನ್ನು ಲಿಂಕ್ ಮೂಲಕ ನೋಡಬಹುದು: http://topdocumentaryfilms.com/the-way-of-all-flesh

Rebecca Sklott’s webpage : http://rebeccaskloot.com/

Her blog: http://scienceblogs.com/culturedish/

More info @http://en.wikipedia.org/wiki/Henrietta_Lacks http://en.wikipedia.org/wiki/HeLa

17 comments:

ಜಲನಯನ said...

ಸೂಪರ್ ಸಂಗ್ರಹ..ಮಿತ ಮತ್ತು ಹಿತವಾಗಿ ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಬಹಳ ಚನ್ನಾಗಿ ವಿವರಿಸಿದ್ದೀಯಾ ವನಿತಾ..ಮೆಚ್ಚುಗೆಯಾಯ್ತು..ಇದು ಸಂಶೋಧನಾ ವಿಷಯವಂತಲ್ಲ..ಆದರೆ ಕನ್ನಡಿಗರಿಗೆ ಕನ್ನಡದಲ್ಲಿ ಉಣಬಡಿಸಿದ ವಿಷಯವಾದುದಕ್ಕೆ...ಅಭಿನಂದನೆಗಳು.

ಮನಸಿನಮನೆಯವನು said...

ವಿಶೇಷವಾದ ಉಪಯುಕ್ತ ಮಾಹಿತಿ ನೀಡಿದ್ದೀರಿ..
ಧನ್ಯವಾದಗಳು..

ಮನಸಿನಮನೆಯವನು said...

ಮೇಡಂ..
ನೀವು ಪೋಸ್ಟ್ ನ ಕೆಳಗಡೆ "you might also like this" ಈ ರೀತಿ ಹಾಕಿ ಲಿಂಕ್ ಹಾಕುತ್ತೀರಲ್ಲ.. ಹೇಗೆ?

Narayan Bhat said...

ಆಶ್ಚರ್ಯಕರವೆನಿಸುವ ವೈಜ್ಞಾನಿಕ ಮಾಹಿತಿ ನೀಡಿದ್ದೀರಿ..ಥ್ಯಾಂಕ್ಸ್.

ವನಿತಾ / Vanitha said...

ಲೇಖನ ಇಷ್ಟಪಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್ ಆಜಾದ್ ಸರ್:)

@ ಗುರು (ವಿಚಲಿತ) ಥ್ಯಾಂಕ್ಸ್, "You might also like this" is "link within" Gadget I think now it is not present in blog settings..Not sure!

@ ನಾರಾಯಣ ಭಟ್ ಸರ್..ಥ್ಯಾಂಕ್ಸ್:)

Rajottara said...

ನಿಮ್ಮ ಬರೆವಣಿಗೆ ಅಡುಗೆ ಗಷ್ಟೇ ಮೀಸಲು ಎಂದುಕೊಂಡಿದ್ದೆ, ಬಹು ಸುದರವಾಗಿ ವಿವರಿಸಿದ್ದೀರ ಮಾನವನ ಗಾಡಿ ದಾಟಿದ - HeLa cells ಗಳ ಬಗ್ಗೆ. ಬರೆಯುತ್ತಿರಿ...

shivu.k said...

ವನಿತಾ,

ತಡವಾಗಿ ನಿಮ್ಮ ಬ್ಲಾಗಿಗೆ ಬರುತ್ತಿರುತ್ತೇನೆ. ಆಡುಗೆ ಬಿಟ್ಟು ಬೇರೇನೋ ಹೊಸದು ಬರೆದಾಗ ನನಗೆ ಕುತೂಹಲವಿದ್ದರೂ ನೋಡಲಾಗಿರಲಿಲ್ಲ.
ಇಂತ ವಿಚಾರವನ್ನು ನೀವು ಸರಳವಾಗಿ ಬರೆದ ರೀತಿ ತುಂಬಾ ಇಷ್ಟವಾಯಿತು. ನನಗನ್ನಿಸುತ್ತೆ ಇದು ಸಂಗ್ರಹ ಯೋಗ್ಯ ಬರಹ...ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

Very interesting.. informative too. Thanks for the post :)

ಸುಧೇಶ್ ಶೆಟ್ಟಿ said...

ತು೦ಬಾ ಆಸಕ್ತಿ ಹುಟ್ಟಿಸಿತು.... ಥ್ಯಾ೦ಕ್ಸ್...

ವನಿತಾ / Vanitha said...

Thanks Siddaraj, Shivu, Teju & Sudesh Shetty for liking the article:)

Radhika said...

Interesting. Should catch hold of this book sometime.

Abhijatha said...

ಓಹ್, ಲಿಂಕ್ ಹಿಂಬಾಲಿಸಿಕೊಂಡು ಬಂದು ನೇರವಾಗಿ ಬಿದ್ದದ್ದು ಅಡುಗೆ ಮನೆಗೇ! :-D ನಮ್ಮೂರಿನ ತಿಂಡಿಗಳನ್ನು ನೋಡಬೇಕು, ಮಾಡಬೇಕು... ಇಲ್ಲಿಗೇ ಬರ್ತೀನಿ.

ಮುಂದುವರಿಕೊಂಡು ಹೋಗಿ.

ಸುಧೇಶ್ ಶೆಟ್ಟಿ said...

Yaako bareyode nillisi bittiddeeralla!!!

V.R.BHAT said...

nice collection!

Santhosh Rao said...

Nice write up

Badarinath Palavalli said...

So informative article madam. I will go through the links u have given. You are a good writer. :-)

pl. Visit my blog:
www.badari-poems.blogspot.com

ಶ್ರೀಧರ್. ಎಸ್. ಸಿದ್ದಾಪುರ. said...

article was containing good information thanks.