My photo
ಕರಾವಳಿ ಹುಡುಗಿ :)

Thursday, May 7, 2009

ಪನೀರ್ ಮಟರ್ / PANEER MATTAR

ಬೇಕಾಗುವ ಸಾಮಗ್ರಿಗಳು:
ಪನೀರ್ (Paneer) - 100 ಗ್ರಾಂ
ಬಟಾಣಿ (mattar) -1 ½ ಕಪ್ (ಬೇಯಿಸಿದ್ದು / Frozen)
ಈರುಳ್ಳಿ - 1 ಕಪ್
ಟೊಮೇಟೊ ಪ್ಯೂರಿ (Tomato puree) – 5 ಚಮಚ / 1 ಟೊಮೇಟೊದ್ದು
ಕ್ರೀಂ - ½ ಕಪ್
ಶುಂಠಿ - 1 ಚಮಚ (ತುರಿದು)
ಬೆಳ್ಳುಳ್ಳಿ - 1 ಚಮಚ (ತುರಿದು)
ಜೀರಿಗೆ - ½ ಚಮಚ
ಗೋಡಂಬಿ ಬೀಜ - 5 (ಚೆನ್ನಾಗಿ ಪುಡಿ ಮಾಡಿ)
ಜೀರಿಗೆ ಪುಡಿ - ½ ಚಮಚ
ಕೊತ್ತಂಬರಿ ಪುಡಿ - ½ ಚಮಚ
ಮೆಣಸಿನ ಪುಡಿ - 1- 2 ಚಮಚ
ಮೆಂತ್ಯ ಪುಡಿ - ಚಿಟಿಕೆ
ಅರಿಶಿನ ಪುಡಿ - ಚಿಟಿಕೆ
ಎಣ್ಣೆ - 1- 2 ಟೇಬಲ್ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಪನೀರ್ ನ್ನು ಸಣ್ಣಗೆ ಕಟ್ ಮಾಡಿ, ಎಣ್ಣೆಯಲ್ಲಿ ಸ್ವಲ್ಪ ಕೆಂಪು ಬಣ್ಣ ಬರುವ ತನಕ ಹುರಿದು ಪ್ಲೇಟ್ ನಲ್ಲಿ ತೆಗೆದು ಇಡಬೇಕು. ಇದೇ ಎಣ್ಣೆಗೆ, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಗೋಡಂಬಿ ಪುಡಿಯನ್ನು ಸೇರಿಸಿಕೊಂಡು, 1 ನಿಮಿಷ ಹುರಿಯಬೇಕು. ಈರುಳ್ಳಿಯನ್ನು ಸೇರಿಸಿ, ಕೆಂಪಗಾಗುವ ತನಕ ಹುರಿಯಬೇಕು. ನಂತರ ಎಲ್ಲಾ ಮಸಾಲೆಯ ಸಾಮಗ್ರಿಗಳನ್ನು ಸೇರಿಸಿಕೊಂಡು, ಸಣ್ಣ ಉರಿಯಲ್ಲಿ 2-3 ನಿಮಿಷ ಹುರಿಯಬೇಕು. ಟೊಮೇಟೊ ಪ್ಯೂರೀ ಸೇರಿಸಿ, 5 ನಿಮಿಷ ಹುರಿದುಕೊಂಡು, ನಂತರ ಬಟಾಣಿ ಸೇರಿಸಿ, ½ ಕಪ್ ನೀರು ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷ ಮುಚ್ಚಿ ಬೇಯಿಸಬೇಕು. ನಂತರ ಹುರಿದ ಪನೀರ್ ಸೇರಿಸಿ, 5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ, ಕೊನೆಯಲ್ಲಿ ½ ಕಪ್ ಕ್ರೀಂ , ಉಪ್ಪು ಸೇರಿಸಿ, ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಬೇಕು. ಪನೀರ್ ಹಾಕಿದ ನಂತರ ಇದನ್ನು ಜೋರಾಗಿ ಮಿಕ್ಸ್ ಮಾಡಬಾರದು. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಚಪಾತಿ, ರೊಟ್ಟಿ ಯೊಂದಿಗೆ ತಿನ್ನಬಹುದು.

4 comments:

shivu.k said...

ವನಿತಾ...

ಸೂಪರ್ ಕಣ್ರೀ...ಫೋಟೋ ಕೂಡ ಉತ್ತಮವಾಗಿದೆ...

Anonymous said...

ಆನು ಪಾಲಕ್ ಪನೀರ ಮಾಡಿತ್ತೆ, ಹೆಚ್ಚೂ ಕಮ್ಮಿ ಇದೆ ರೀತಿ. ಆದರೆ ಮೊದಾಲು ಪಾಲಕ್ ಬೇಯ್ಸಿ, ಕಡೆದು ಮಡುಗೆಕ್ಕು, ಪನೀರ ಹಾಕುವ ಮೊದಲೇ ಹಾಕೆಕ್ಕು.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಸೂಪರ್...

ವನಿತಾ / Vanitha said...

Shivu and Agni, ಧನ್ಯವಾದಗಳು ..
jyothi..ಅಪ್ಪು.. ಪನೀರ ಸಿಕ್ಕದ್ದರೆ ಅಲೂ ಕೂಡ ಹಾಕಿ ಮಾಡುಲಕ್ಕು..