My photo
ಕರಾವಳಿ ಹುಡುಗಿ :)

Wednesday, July 21, 2010

ಪಾಲಕ್ ಸೊಪ್ಪು- ಕ್ಯಾರೆಟ್ ಪಲಾವ್ (Spinach - Carrot Pulav) and Green bean stir fry

ಬ್ಲಾಗ್ ಅಪ್ಡೇಟ್ ಮಾಡದೆ ತಿಂಗಳು ದಾಟಿತು.. ಜೂನ್ ತಿಂಗಳಲ್ಲಿ ಹದಿನೈದು ದಿನ ಅಮೆರಿಕಾದಲ್ಲಿ ಸಣ್ಣ ಟೂರ್ ಹೊಡೆದು ಬಂದ್ವಿ.ಹೊರಡುವ ಮೊದಲು 15 ದಿನ preparation; ..ಬಂದ ಮೇಲೆ ಸ್ವಲ್ಪ ಸೋಂಬೇರಿತನ.. ಆದುದರಿಂದ ಏನೂ ಬರೆದಿರಲಿಲ್ಲ. ಇತ್ತೀಚಿಗೆ ನನ್ನ ಆಂಧ್ರದ ಫ್ರೆಂಡ್ ಒಬ್ಬರು ಮಾಡಿದ ಪಾಲಕ್ - ಕ್ಯಾರೆಟ್ ಪಲಾವ್, ನಮ್ಮನೆಯಲ್ಲಿ ಎಲ್ಲರಿಗೂ ತುಂಬಾ ಇಷ್ಟ ಆಯಿತು. ಅದನ್ನು ನಿಮ್ಮ ಜೊತೆ ಹಂಚಿಕೊಳ್ಳೋಣ ಎಂದು ಅನ್ನಿಸಿತು..

ಪಾಲಕ್ ಸೊಪ್ಪು- ಕ್ಯಾರೆಟ್ ಪುಲಾವ್ ಮಾಡಲು ಬೇಕಾಗುವ ಸಾಮಗ್ರಿಗಳು:

ಬಾಸ್ಮತಿ ರೈಸ್ - 2 ಕಪ್
ಪಾಲಕ್ ಸೊಪ್ಪು - ಒಂದು ಕಟ್ಟು (ಕಟ್ಟಿನಿಂದ ಬಿಡಿಸಿ ಸೊಪ್ಪು ಮಾತ್ರ ತೆಗೆದು ಕ್ಲೀನ್ ಮಾಡಿ ಕಟ್ ಮಾಡಿಡಿ)
ಕ್ಯಾರೆಟ್ - 2-3 (ತುರಿದುಕೊಂಡು)
ಬಟಾಣಿ - ½ ಕಪ್ (ನೀರಿನಲ್ಲಿ 6-8 ಗಂಟೆ ನೆನೆಸಿ / frozen green peas )
ಆಲೂಗಡ್ಡೆ - 1-2
ಹಸಿ ಮೆಣಸು - 2-3
ಗರಂ ಮಸಾಲ ಪುಡಿ - 1 ಚಮಚ
ಈರುಳ್ಳಿ - 1 ಕಟ್ ಮಾಡಿ
ಶುಂಟಿ - ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಚೆಕ್ಕೆ - 1” ತುಂಡು
ಏಲಕ್ಕಿ - 1ಲವಂಗ- 3

ಉಪ್ಪು - 1 ½ ಚಮಚ

ತುಪ್ಪ / ಎಣ್ಣೆ - ಸ್ವಲ್ಪ

ವಿಧಾನ:
ಅಕ್ಕಿಯನ್ನು 15 ನಿಮಿಷ ನೀರಿನಲ್ಲಿ ನೆನೆಸಿಟ್ಟು ನಂತರ ಚೆನ್ನಾಗಿ ತೊಳೆದಿಟ್ಟುಕೊಳ್ಳಿ.
ಒಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪ / ಎಣ್ಣೆ ಹಾಕಿಕೊಂಡು, ಚೆಕ್ಕೆ, ಏಲಕ್ಕಿ, ಲವಂಗ ವನ್ನು ಸ್ವಲ್ಪ ಹುರಿಯಿರಿ. ಇದಕ್ಕೆ ಈರುಳ್ಳಿ ಸೇರಿಸಿ ಹುರಿದು, ನಂತರ ಪಾಲಕ್ ಸೊಪ್ಪು ಸೇರಿಸಿ, 3-4 ನಿಮಿಷ (ಸೊಪ್ಪು shrink ಆಗುವ ತನಕ) ಹುರಿಯಿರಿ. ನಂತರ ಕ್ಯಾರೆಟ್, ಬಟಾಣಿ, ಆಲೂಗಡ್ಡೆ ಹಾಗು ಅಕ್ಕಿ ಸೇರಿಸಿ 2-3 ನಿಮಿಷ ಹುರಿಯಿರಿ. ಇದನ್ನು ಕುಕ್ಕರಿನಲ್ಲಿ ತೆಗೆದುಕೊಂಡು, ಉಪ್ಪು, ಗರಂ ಮಸಾಲ ಪುಡಿ, ಶುಂಟಿ- ಬೆಳ್ಳುಳ್ಳಿ ಪೇಸ್ಟ್ ಹಾಗು 4 ಗ್ಲಾಸ್ ನೀರು ಸೇರಿಸಿ ಬೇಯಿಸಿರಿ. ಇದನ್ನು ಮೊಸರು ರಾಯಿತ / ಸೈಡ್ ಡಿಶ್ ನೊಂದಿಗೆ ತಿನ್ನಬಹುದು. ತುಂಬಾ ಸುಲಭದಲ್ಲಿ ತಯಾರಿಸಬಹುದಾದ ರೆಸಿಪಿ ಹಾಗು ಟೇಷ್ಟಿಯಾಗಿರುತ್ತದೆ.
ತೆಂಗಿನ ತುರಿ ಸೇರಿಸಿ ಮಸಾಲೆಯನ್ನು ರುಬ್ಬಿಕೊಂಡು ಈ ರೀತಿಯಲ್ಲಿ ಕೂಡ ಈ ಪಲಾವ್ ನ್ನು ಮಾಡಬಹುದು.

ಬೀನ್ಸ್ ಸ್ಟಿರ್ ಫ್ರೈ (Green bean stir fry):

ಅಮೆರಿಕಾದಲ್ಲಿ Asian restaurant ಅಂದರೆ ಹೆಚ್ಚಾಗಿ ಅದು Chinese restaurant ಆಗಿರುತ್ತದೆ. ವೆಜಿಟೇರಿಯನ್ ಆದ ನಂಗೆ ಅಲ್ಲಿ ಹೆಚ್ಚಿನ options ಇಲ್ಲದಿದ್ದರೂ, ಇದ್ದುದರಲ್ಲಿ ಇಷ್ಟವಾಗುವ ಒಂದು dish, green bean stir fry. ಉದ್ದದ ಬೀನ್ಸ್ ನ್ನು ಫ್ರೈ ಮಾಡಿ starter / ಸೈಡ್ ಡಿಶ್ ತರ ಉಪಯೋಗಿಸಬಹುದು. So ಗೂಗಲ್ ನಲ್ಲಿ ಹುಡುಕಿ, ಮನೆಯಲ್ಲಿ ಟ್ರೈ ಮಾಡಿದಾಗ ಹೋಟೆಲ್ ನಲ್ಲಿ ಸಿಕ್ಕುವಷ್ಟು ಕ್ರಿಸ್ಪ್ (crisp) ಆಗದಿದ್ದರೂ, not bad ಅಂತ ಅನ್ನಿಸಿತು.

ತಯಾರಿಸುವ ವಿಧಾನ:
15-20
ಬೀನ್ಸ್
ಎಣ್ಣೆ - 2-3 ಚಮಚ
ಉಪ್ಪು - ಚಿಟಿಕೆ
ಸೋಯಾ ಸಾಸ್ - ¼ ಚಮಚ

ಬೀನ್ಸ್ ನ್ನು ಕ್ಲೀನ್ ಮಾಡಿ ತೊಳೆದು, ಕುದಿಯುವ ನೀರಿಗೆ ಹಾಕಿ 5ನಿಮಿಷ ಕುದಿಸಿರಿ. ಇದನ್ನು ತಕ್ಷಣ ಒಲೆಯಿಂದ ತೆಗೆದು ತಣ್ಣೀರಿನಲ್ಲಿ 2-3 time rinse ಮಾಡಿ, ನಂತರ ಒಂದು ಬಟ್ಟೆ/ paper towel ನಲ್ಲಿ ತೆಗೆದಿಡಿ.
ಒಂದು ಪಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಈ ಬೀನ್ಸ್ ನ್ನು 10-12 ನಿಮಿಷ ಮೊಗಚುತ್ತ ಹುರಿಯಿರಿ. ಕೊನೆಯಲ್ಲಿ ಸ್ವಲ್ಪ ಉಪ್ಪು, ಸೋಯಾ ಸಾಸ್, ಸೇರಿಸಿ, ಮಿಕ್ಸ್ ಮಾಡಿ, ಸ್ವಲ್ಪ ತಣ್ಣಗಾದ ನಂತರ ತಿನ್ನಲು ಕೊಡಿ.

ಕೊನೆಯಲ್ಲಿ ಸ್ವಲ್ಪ ಶುಂಟಿ- ಬೆಳ್ಳುಳ್ಳಿಯನ್ನು ತುರಿದು ಫ್ರೈ ಮಾಡಿ ಕೂಡ ಸೇರಿಸಬಹುದು. ನೀರಿನಲ್ಲಿ blanch ಮಾಡದೆ direct ಆಗಿ ಬೀನ್ಸ್ ನ್ನು ಹುರಿಯಬಹುದು, but ನಂಗೆ ಫಸ್ಟ್ ವಿಧಾನದಲ್ಲಿ ಮಾಡಿದಾಗ ರುಚಿ ಇಷ್ಟವಾಯಿತು.

ಇತ್ತೀಚಿಗೆ ಓದಿದ ಪುಸ್ತಕ - Between Two Worlds: My life and Captivity in Iran by Ms. Roxana Saberi.
ಜನವರಿ 2009ರಲ್ಲಿ, ಇರಾನಿನ ಜೈಲಿನಲ್ಲಿ 100 ದಿನ ಗಳ ಕಾಲ ಶಿಕ್ಷೆ ಅನುಭವಿಸಿದ Roxana Saberi ತನ್ನ ಆ ಜೈಲುವಾಸದ ದಿನಗಳ ಬಗ್ಗೆ ಬರೆದ ಪುಸ್ತಕವಿದು. ಈಕೆ BBC, NPR, Fox news ನಂತ ಹಲವು ಪ್ರಸಿದ್ಧ ಚಾನೆಲ್ ಗಳಿಗೆ ಜರ್ನಲಿಸ್ಟ್ ಆಗಿದ್ದಾಕೆ.
ತನ್ನ ಇರಾನಿ ತಂದೆಯ ಪ್ರಭಾವ ಹಾಗು ಅಲ್ಲಿನ cultural aspectಗಳ ಬಗ್ಗೆ ತಿಳಿಯುವ ಕುತೂಹಲದಿಂದ, ಪುಸ್ತಕ ಬರೆಯಬೇಕೆಂದು ಹೋದ ಈಕೆಯನ್ನು ಇರಾನಿನ Intelligenceನವರು ಅಮೆರಿಕಾದ spy ಎಂದು ಜೈಲಿಗೆ ತಳ್ಳುತ್ತಾರೆ. ಸುಮಾರು ಒಂದು ತಿಂಗಳವರೆಗೆ ಯಾರನ್ನೂ (ಲಾಯರ್ ನ್ನು ಕೂಡ) ಸಂಪರ್ಕಿಸಲು ಬಿಡದೆ, ಯಾರಿಗೂ ಜೈಲಿನಲ್ಲಿರುವದನ್ನು ಹೇಳಕೂಡದು ಎಂದು ತುಂಬಾ ವಿಧದಲ್ಲಿ ಮಾನಸಿಕ ಹಿಂಸೆ ಮತ್ತು 8 ವರ್ಷಗಳ ಶಿಕ್ಷೆ ಯನ್ನು ವಿಧಿಸುತ್ತಾರೆ. ಅಮೆರಿಕಾದ guantanamo bay ಯಂತೆಯೇ ಪ್ರ(ಕು)ಖ್ಯಾತಿ ಪಡೆದ ಇರಾನಿನ Evin Prisonನಲ್ಲಿ 100 ದಿನಗಳ ಕಾಲವಿದ್ದಾಗ ಅಲ್ಲಿನ ಜೈಲರುಗಳು, cell matesಗಳ ಬಗ್ಗೆ, ಕೊನೆಗೆ ಆಕೆ ಅಲ್ಲಿ hunger strike ಮಾಡಿದ್ದು, ಹಾಗು ಅವಳ ಬಂಧನಕ್ಕೆ ವಿಶ್ವದ ಎಲ್ಲ ಮೂಲೆಗಳಿಂದ ಬಂದ ಪ್ರತಿರೋಧಗಳು, ಕೊನೆಗೂ 100 ದಿನಗಳ ನಂತರ ಮೇ 11, 2009 ರಂದು ಜೈಲಿನಿಂದ ಹೊರ ಬಂದುದನ್ನು ಚೆನ್ನಾಗಿ ಬರೆದಿದ್ದಾರೆ. A nice read.