ಪಫ್ಫ್ಸ್ ಪೇಸ್ತ್ರೀ ಶೀಟುಗಳು (Puff Pastry sheets) – 1
ಪಾಲಕ್ ಸೊಪ್ಪು -3 ಕಪ್ ( ಸಣ್ಣಗೆ ಹೆಚ್ಚಿ)
ಈರುಳ್ಳಿ - ½ ಕಪ್ (ಸಣ್ಣಗೆ ಹೆಚ್ಚಿ)
Mozzarella cheese (shredded) – ¼ ಕಪ್
Parmesan cheese (grated) - ¼ ಕಪ್
ಗರಂ ಮಸಾಲ ಪುಡಿ - ½ ಚಮಚ
ಎಣ್ಣೆ - 2 ಚಮಚ (Olive oil)
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಪಫ್ಫ್ ಪೇಸ್ತ್ರೀ ಶೀಟುಗಳನ್ನು, freezerನಿಂದ ಹೊರಗೆ ತೆಗೆದು ಉದ್ದಕ್ಕೆ ಬಿಡಿಸಿಕೊಂಡು 40 ನಿಮಿಷ ಇಡಬೇಕು.
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಯನ್ನು ಚೆನ್ನಾಗಿ 5 ನಿಮಿಷ ಹುರಿಯಿರಿ. ನಂತರ ಇದಕ್ಕೆ ಹೆಚ್ಚಿಟ್ಟ ಪಾಲಕ್ ಸೊಪ್ಪನ್ನು ಸೇರಿಸಿ 2 ನಿಮಿಷ ಬಾಡಿಸಿಕೊಂಡು, ಸ್ಟವ್ ನಿಂದ ಇಳಿಸಿ. ಪಾಲಕ್ ಸೊಪ್ಪಿನಲ್ಲಿ ಸ್ವಲ್ಪ ಕೂಡ ನೀರಿನಂಶ ಇರಬಾರದು. ಕೊನೆಯಲ್ಲಿ ಇದಕ್ಕೆ ಉಪ್ಪು, ಗರಂ ಮಸಾಲ ಹಾಗು ಚೀಸ್ ಸೇರಿಸಿ ಮಿಕ್ಸ್ ಮಾಡಿ.
ಒಂದು ಪಫ್ಫ್ ಪೇಸ್ತ್ರೀ ಶೀಟ್ ನಲ್ಲಿ ಸ್ವಲ್ಪ ಬೆಣ್ಣೆಯನ್ನು ಸವರಿ, ಅದರ ಮೇಲೆ ಈ ಮಿಶ್ರಣವನ್ನು ಸಮನಾಗಿ ಹರಡಿಕೊಂಡು ರೋಲ್ ನಂತೆ ಸುತ್ತಿ. ಇದನ್ನು ½ ಇಂಚು ಅಳತೆಯಲ್ಲಿ ಚಕ್ರದಂತೆ ಕತ್ತರಿಸಿ. ಕತ್ತರಿಸಿದ ಭಾಗ ಕೆಳಕ್ಕೆ ಬರುವಂತೆ ಒಂದು ಎಣ್ಣೆ ಸವರಿದ ಅಲುಮಿನಿಯಂ ಶೀಟ್ ನಲ್ಲಿಟ್ಟು ಓವೆನ್ ನಲ್ಲಿ ಮಧ್ಯದ ರಾಕ್ ನಲ್ಲಿ 400Fನಲ್ಲಿ 15 ನಿಮಿಷ bake ಮಾಡಿ. ತರಕಾರಿ ತಿನ್ನದ ಮಕ್ಕಳಿಗೆ ಇದು ಒಳ್ಳೆಯ ಸಂಜೆಯ ಸ್ನಾಕ್.
Cheese ಹಾಗು ಗರಂ ಮಸಾಲ ಪುಡಿ ಯನ್ನು ನಿಮಗೆ ಬೇಕಾದಂತೆ ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಬಹುದು.