My photo
ಕರಾವಳಿ ಹುಡುಗಿ :)

Saturday, January 30, 2010

Spinach-Cheese Swirls

ಬೇಕಾಗುವ ಸಾಮಗ್ರಿಗಳು:

ಪಫ್ಫ್ಸ್ ಪೇಸ್ತ್ರೀ ಶೀಟುಗಳು (Puff Pastry sheets) – 1
ಪಾಲಕ್ ಸೊಪ್ಪು -3 ಕಪ್ ( ಸಣ್ಣಗೆ ಹೆಚ್ಚಿ)

ಈರುಳ್ಳಿ - ½ ಕಪ್ (ಸಣ್ಣಗೆ ಹೆಚ್ಚಿ)
Mozzarella cheese (shredded) – ¼ ಕಪ್

Parmesan cheese (grated) - ¼ ಕಪ್

ಗರಂ ಮಸಾಲ ಪುಡಿ - ½ ಚಮಚ

ಎಣ್ಣೆ - 2 ಚಮಚ (Olive oil)

ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಪಫ್ಫ್ ಪೇಸ್ತ್ರೀ ಶೀಟುಗಳನ್ನು, freezerನಿಂದ ಹೊರಗೆ ತೆಗೆದು ಉದ್ದಕ್ಕೆ ಬಿಡಿಸಿಕೊಂಡು 40 ನಿಮಿಷ ಇಡಬೇಕು.

ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಯನ್ನು ಚೆನ್ನಾಗಿ 5 ನಿಮಿಷ ಹುರಿಯಿರಿ. ನಂತರ ಇದಕ್ಕೆ ಹೆಚ್ಚಿಟ್ಟ ಪಾಲಕ್ ಸೊಪ್ಪನ್ನು ಸೇರಿಸಿ 2 ನಿಮಿಷ ಬಾಡಿಸಿಕೊಂಡು, ಸ್ಟವ್ ನಿಂದ ಇಳಿಸಿ. ಪಾಲಕ್ ಸೊಪ್ಪಿನಲ್ಲಿ ಸ್ವಲ್ಪ ಕೂಡ ನೀರಿನಂಶ ಇರಬಾರದು. ಕೊನೆಯಲ್ಲಿ ಇದಕ್ಕೆ ಉಪ್ಪು, ಗರಂ ಮಸಾಲ ಹಾಗು ಚೀಸ್ ಸೇರಿಸಿ ಮಿಕ್ಸ್ ಮಾಡಿ.
ಒಂದು ಪಫ್ಫ್ ಪೇಸ್ತ್ರೀ ಶೀಟ್ ನಲ್ಲಿ ಸ್ವಲ್ಪ ಬೆಣ್ಣೆಯನ್ನು ಸವರಿ, ಅದರ ಮೇಲೆ ಈ ಮಿಶ್ರಣವನ್ನು ಸಮನಾಗಿ
ಹರಡಿಕೊಂಡು ರೋಲ್ ನಂತೆ ಸುತ್ತಿ. ಇದನ್ನು ½ ಇಂಚು ಅಳತೆಯಲ್ಲಿ ಚಕ್ರದಂತೆ ಕತ್ತರಿಸಿ. ಕತ್ತರಿಸಿದ ಭಾಗ ಕೆಳಕ್ಕೆ ಬರುವಂತೆ ಒಂದು ಎಣ್ಣೆ ಸವರಿದ ಅಲುಮಿನಿಯಂ ಶೀಟ್ ನಲ್ಲಿಟ್ಟು ಓವೆನ್ ನಲ್ಲಿ ಮಧ್ಯದ ರಾಕ್ ನಲ್ಲಿ 400Fನಲ್ಲಿ 15 ನಿಮಿಷ bake ಮಾಡಿ. ತರಕಾರಿ ತಿನ್ನದ ಮಕ್ಕಳಿಗೆ ಇದು ಒಳ್ಳೆಯ ಸಂಜೆಯ ಸ್ನಾಕ್.

Cheese ಹಾಗು ಗರಂ ಮಸಾಲ ಪುಡಿ ಯನ್ನು ನಿಮಗೆ ಬೇಕಾದಂತೆ ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಬಹುದು.

Recipe Source: Puff Pastry ಶೀಟಿನ ಕವರಿನಲ್ಲಿದ್ದ ವಿಧಾನ

11 comments:

shivu.k said...

vanitha,

recipy chennagide...adre ithavannu tindu fat jast adare ?

FH said...

Tumba chennagideri Pinwheels, I make them too with Spinach and Feta cheese. very nice snack, I don't mind eating these! :))

ಸಾಗರದಾಚೆಯ ಇಂಚರ said...

ವನಿತಾ
ಮಾಡಿಕೊಡಿ, ತಿನ್ನೋದಕ್ಕೆ ನಾವು ರೆಡಿ

ವನಿತಾ / Vanitha said...

@shivu..thanks, Low fat cheese ಕೂಡ ಮಾರ್ಕೆಟ್ ನಲ್ಲಿ ಸಿಗುತ್ತದೆ. ಚೀಸ್ ನ್ನು ನಮಗೆ ಬೇಕಾದಂತೆ ಹೆಚ್ಚು ಅಥವಾ ಕಡಿಮೆ ಹಾಕಬಹುದು. ಚೀಸ್ ನಲ್ಲಿ fatನೊಂದಿಗೆ ಹೆಚ್ಚು Protein ಮತ್ತು calcium ಇರುತ್ತದೆ. ಹಾಗಾಗಿ ಮಕ್ಕಳಿಗೆ ತುಂಬಾ ಒಳ್ಳೆಯದು.


Thanks asha. Never tried Feta cheese..gonna try soon..yup my lil ones favourite too:-)

ಗುರುಮೂರ್ತಿ..ನೀವಿಲ್ಲಿ ಬಂದರೆ ನಾವು ಕೂಡ ರೆಡಿ.

Lakshmi said...

puff pastry sheet iddaga idu nenape agaolla. eesarthi tandaga khandita madi nodthene.

ಮನಮುಕ್ತಾ said...

Nice recipe..
I will try.

Rashmi said...

Quite interesting, weekend try maadi node bidtini :)

Rashmi

ವನಿತಾ / Vanitha said...
This comment has been removed by the author.
ವನಿತಾ / Vanitha said...

Thanks Lakshmi, Manamuktha, & Rashmi..try maadi nodi:-)

ನಾನು pastry ಶೀಟಿನ ಸಣ್ಣ ಭಾಗವನ್ನು ಉಪಯೋಗಿಸಿದ್ದೇನೆ. full sheet ಉಪಯೋಗಿಸಿದರೆ, swirls ಇನ್ನೂ ದೊಡ್ಡದಾಗಿ ಬರುತ್ತದೆ.

ಮನಸಿನಮನೆಯವನು said...

'ವನಿತಾ' ಅವರೇ..,

ನಿಮ್ಮ ಪಾಕಶಾಲೆ ನೋಡಿ ಖುಷಿಯಾಯ್ತು,ಹಸಿವೂ ಆಯ್ತು...

ನನ್ನ 'ಮನಸಿನಮನೆ'ಗೆ...:http//manasinamane.blogspot.com

ಜಲನಯನ said...

ವನಿತಾ...ನನ್ನ ಜೀರ್ಣರಸಗಳ ಕ್ರಿಯೆ ಉದ್ದೀಪನಗೊಂಡಿದೆ...the recipe is good.....and should be tasty as well.