My photo
ಕರಾವಳಿ ಹುಡುಗಿ :)

Sunday, April 11, 2010

ತೊಂಡೆಕಾಯಿ - ಕಡ್ಲೆ ಪಲ್ಯ (ತುಳುವಿನಲ್ಲಿ ಕಡ್ಲೆ - ಮನೋಳಿ ಆಜಾಯಿನ)

ಇದು ಮಂಗಳೂರಿನ ಅದರಲ್ಲೂ ತುಳುವರ ಮನೆಯ ಮದುವೆ, ಹಬ್ಬಗಳಲ್ಲಿ ಇರಲೇಬೇಕಾದ ಖಾದ್ಯ. ತೊಂಡೆಕಾಯಿಗೆ ತುಳುವಿನಲ್ಲಿಮನೋಳಿ’ ಹಾಗೂ ಪಲ್ಯಕ್ಕೆಆಜಾಯಿನ/ಸುಕ್ಕ’ ಎಂದು ಕರೆಯುತ್ತಾರೆ. ಪಲ್ಯಕ್ಕೆ ತೆಂಗಿನ ತುರಿಯನ್ನು ಮಸಾಲೆಯೊಂದಿಗೆ ಧಾರಾಳವಾಗಿ ಬಳಸಲಾಗುತ್ತದೆ. ಅದರಲ್ಲೂವಿಷುಹಬ್ಬ’ದಂದು ಇದೇ ರೀತಿ ತೊಂಡೆಕಾಯಿ ಮತ್ತು ಎಳೆ ಹಸಿ ಗೇರುಬೀಜದೊಂದಿಗೆ ಸೇರಿಸಿ ಪಲ್ಯವನ್ನು ತಯಾರಿಸುತ್ತಾರೆ. ಈ ಪಲ್ಯ ತಿನ್ನಲು ತುಂಬ ರುಚಿ.


ಬೇಕಾಗುವ ಸಾಮಗ್ರಿಗಳು:

ತೊಂಡೆಕಾಯಿ - ಕಪ್ (1/2 kg, ಉದ್ದಕ್ಕೆ ಸೀಳಿ)
ಈರುಳ್ಳಿ - 1 (ಸಣ್ಣಗೆ ಹೆಚ್ಚಿ)
ಟೊಮೇಟೊ - 1 (ಸಣ್ಣಗೆ ಹೆಚ್ಚಿ)
ಕಡ್ಲೆ (Kabuli Chana)- 1 ½ ಕಪ್
ತೆಂಗಿನಕಾಯಿ - 1 ಕಪ್ ತುರಿದು


ಮಸಾಲೆಗೆ:
ಎಣ್ಣೆ - ½ ಚಮಚ
ಮೆಂತೆ - ¼ ಚಮಚ
ಮೆಣಸು (ಬ್ಯಾಡಗಿ) - 6-8
ಕೊತ್ತಂಬರಿ ಬೀಜ - 3 ಚಮಚ
ಜೀರಿಗೆ - 1 ಚಮಚ
ಹಳದಿ ಪುಡಿ - ಚಿಟಿಕೆ

ಒಗ್ಗರಣೆಗೆ:
ಎಣ್ಣೆ - 1 ಚಮಚ
ಸಾಸಿವೆ- ½ ಚಮಚ
ಬೆಳ್ಳುಳ್ಳಿ - 2 ದೊಡ್ಡ ಎಸಳು

ಒಣ ಮೆಣಸು - 1
ಕರಿಬೇವು - 6 ಎಲೆ


ತಯಾರಿಸುವ ವಿಧಾನ:
ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, ಮೆಂತೆಯನ್ನು ಸ್ವಲ್ಪಕೆಂಪಗೆ ಆಗುವಷ್ಟು ಹುರಿದು ನಂತರ ಇದಕ್ಕೆ ಕೊತ್ತಂಬರಿ ಬೀಜ, ಜೀರಿಗೆ ಸೇರಿಸಿ ಚೆನ್ನಾಗಿ ಪರಿಮಳ ಬರುವ ತನಕ ಹದ ಉರಿಯಲ್ಲಿ ಹುರಿಯಿರಿ. ಮೆಣಸನ್ನು ಪ್ರತ್ಯೇಕ ಹುರಿದಿಟ್ಟುಕೊಳ್ಳಬಹುದು. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ. ತಣ್ಣಗಾದ ನಂತರ ಮಸಾಲೆಯನ್ನು ನೀರು ಸೇರಿಸದೆ ಪುಡಿ ಮಾಡಿ.

ಕಡ್ಲೆಯನ್ನು 6-8 ಗಂಟೆ ನೀರಿನಲ್ಲಿ ನೆನೆಸಿಟ್ಟು ತೊಳೆದು ಕುಕ್ಕರಿನಲ್ಲಿ ½ ಚಮಚ ಉಪ್ಪು ಸೇರಿಸಿ ಬೇಯಿಸಿ.
ಇನ್ನೊಂದು ಪಾತ್ರೆಯಲ್ಲಿ, 2 ಚಮಚ ಎಣ್ಣೆ ಸೇರಿಸಿ, ಈರುಳ್ಳಿ ಸೇರಿಸಿ ಸ್ವಲ್ಪ ಕೆಂಪಗೆ ಆಗುವ ತನಕ ಹುರಿಯಿರಿ, ನಂತರ ಇದಕ್ಕೆ ಟೊಮೇಟೊ, ತೊಂಡೆಕಾಯಿ ಹಾಗು 1/4 ಕಪ್ ನೀರು ಸೇರಿಸಿ ಹದವಾಗಿ ಬೇಯಿಸಿ. ತೊಂಡೆಕಾಯಿ ಬೇಯುತ್ತ ಬಂದಾಗ, ಇದಕ್ಕೆ ಮಸಾಲೆ ಪುಡಿ, ಕಡ್ಲೆ, ತೆಂಗಿನತುರಿ, ಉಪ್ಪು ಸೇರಿಸಿ 10ನಿಮಿಷ ಹದ ಉರಿಯಲ್ಲಿ ಕುದಿಸಿ, ಕೊನೆಯಲ್ಲಿ ಒಗ್ಗರಣೆ ಸೇರಿಸಿ.
ಪಲ್ಯಕ್ಕೆ 10 ರಿಂದ 15 ಗೋಡಂಬಿಯನ್ನು ಹುರಿದು ಸೇರಿಸಿದರೆ ತುಂಬಾ ರುಚಿಯಾಗಿರುತ್ತದೆ.
ಹುರಿದು ಹದವಾಗಿ ಪುಡಿಮಾಡಿದ ಮಸಾಲೆ

ಇಲ್ಲಿ ಉತ್ತಮ ಗುಣ ಮಟ್ಟದ ಬ್ಯಾಡಗಿ ಮೆಣಸು ಸಿಗದ ಕಾರಣ ನಾನು ಮಸಾಲೆಯ ಪುಡಿಗಳನ್ನು ಮೆಣಸು ಸೇರಿಸದೆ ಹುರಿದು ಪುಡಿಮಾಡಿಟ್ಟುಕೊಳ್ಳುತ್ತನೆ. ಕೊನೆಯಲ್ಲಿ ನನ್ನ ಪ್ರೀತಿಯ ಅತ್ತೆ ಊರಿನಿಂದ ಕಳಿಸಿದ ಬ್ಯಾಡಗಿ ಮೆಣಸಿನ ಪುಡಿಯನ್ನು ಬಳಸುತ್ತೇನೆ.



ವಿಷು ಅಥವಾ ಸೌರಮಾನ ಯುಗಾದಿ ಎಂದರೆ ನನಗೆ ನೆನಪಾಗುವುದು ನನ್ನೂರು, ಕಾಸರಗೋಡು ಜಿಲ್ಲೆಯ ಪುಟ್ಟ ಗ್ರಾಮ 'ಕಯ್ಯಾರು', ಅದೇ ಹಿರಿಯ ಕವಿಗಳ ಹೆಸರಲ್ಲಿರೋ ಊರು. ಕೇರಳಿಗರ ಪ್ರಭಾವವೋ ತಿಳಿಯದು, ಇಲ್ಲಿರುವ ಹೆಚ್ಚಿನ ಹಿಂದೂಗಳೆಲ್ಲರೂ ಆಚರಿಸುವ ಹೊಸ ವರುಷದ ಹಬ್ಬ, ವಿಷು (ಬಿಸು = ತುಳು), ಅಥವಾ ಸೌರಮಾನ ಯುಗಾದಿ. ವಿಷು ಹಬ್ಬದಂದು ಅಮ್ಮ ಬೆಳಗ್ಗೆ ಎದ್ದು ಮನೆಯೆಲ್ಲ ಶುಚಿ ಮಾಡಿ, ಮನೆಯಲ್ಲಿ ಬೆಳೆದ ತೆಂಗಿನಕಾಯಿ, ಹಣ್ಣು, ತರಕಾರಿ, ಹೂವುಗಳೊಂದಿಗೆ ಅಕ್ಕಿ ಮತ್ತು ಕನ್ನಡಿ - ಇವೆಲ್ಲವನ್ನೂ ದೀಪದೊಂದಿಗೆ ದೇವರ ಕೋಣೆಯಲ್ಲಿ ಸಿದ್ದಪಡಿಸುತ್ತಾರೆ. ಇದನ್ನೇ ವಿಷುಕಣಿ ಎನ್ನುವುದು. ಬೆಳಿಗ್ಗೆದ್ದು ವಿಶುಕಣಿ ನೋಡಿ ನಂತರ ಮನೆಯ ಹಿರಿಯರಿಗೆಲ್ಲ ನಮಸ್ಕಾರ ಮಾಡಿ ಅವರ ಆಶೀರ್ವಾದ ಹಾಗೂ ಬಳುವಳಿ ಪಡೆಯುವ ದಿನ. ಅಂತೆಯ ಬೇರೆ ಊರಿನಲ್ಲಿರುವ ಹೆಣ್ಣು ಮಕ್ಕಳು, ತಂದೆ-ತಾಯಿ ಅಥವಾ ಅಣ್ಣನ ಮನೆಗೆ ಬಂದು ಆಶೀರ್ವಾದ ಪಡೆಯುತ್ತಾರೆ. ನಂತರ ಎಲ್ಲರೂ ಮನೆಯಲ್ಲಿ ಸೇರಿ ಮದ್ಯಾಹ್ನದ ಸಿಹಿ ಊಟ..ಅದರಂತೆಯೇ ಹಲವು ವರ್ಷಗಳಿಂದ ನಮ್ಮೊಂದಿಗೆ ಕುಟುಂಬದ ಸದಸ್ಯರಂತೆ ಬೆಳೆದ ಆತ್ಮೀಯ ಕೆಲಸದವರು ತಮ್ಮ ಮನೆಯಲ್ಲಿ ಬೆಳೆದ ಹಣ್ಣು ತರಕಾರಿಗಳನ್ನು ತಂದು ಆಚರಣೆಯಲ್ಲಿ ಪಾಲ್ಗೊಳುತ್ತಾರೆ.


ಹಲವು ವಿಷು ಹಬ್ಬ ಕಳೆದು ಹೋದರು ಕೂಡಾ ಅದರ ಸಿಹಿ ನೆನಪುಗಳು ಮಾಸಿಲ್ಲ....ಜೊತೆಗೆ ನಮ್ಮೊಂದಿಗಿದ್ದ ಆತ್ಮೀಯ ಹಿರಿಯರ ಅಗಲಿಕೆಯ ಕಹಿ ನೆನಪುಗಳು ....


ಏಪ್ರಿಲ್ ೧೪ ರಂದು ವಿಷು ಹಬ್ಬ (ಸೌರಮಾನ ಯುಗಾದಿ) ವನ್ನು ಆಚರಿಸುವ ಎಲ್ಲ ಮಿತ್ರರಿಗೂ ನನ್-ಪ್ರಪಂಚದ ಶುಭಾಶಯಗಳು.


Tuesday, April 6, 2010

ಉಡುಪಿ / ಮಂಗಳೂರು ಸಾಂಬಾರ್ (Sambar / Curry )


ಬೇಕಾಗುವ ಸಾಮಗ್ರಿಗಳು:

ತರಕಾರಿ - 2 ಕಪ್ (ಬದನೇಕಾಯಿ + ನುಗ್ಗೆಕಾಯಿ / ಮಂಗಳೂರು ಸೌತೆಕಾಯಿ / ಬೀನ್ಸ್+ ಕ್ಯಾರೆಟ್ - ಮುಂತಾದ ತರಕಾರಿಗಳನ್ನು ಉಪಯೋಗಿಸಬಹುದು)
ತೊಗರಿಬೇಳೆ -
¼ ಕಪ್

ಸಾಂಬಾರ್ ಈರುಳ್ಳಿ - 6-8 (ಇಲ್ಲದಿದ್ದರೆ 1 ಈರುಳ್ಳಿಯನ್ನು ಹೆಚ್ಚಿ ಉಪಯೋಗಿಸಬಹುದು)

ಟೊಮೇಟೊ - 1
ಬೆಲ್ಲ - 2 ಚಮಚ
ಹುಣಸೆ ರಸ - ಲಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದು

ಎಣ್ಣೆ - 2 ಚಮಚ


ಮಸಾಲೆಗೆ:
ಎಣ್ಣೆ -
1 ಚಮಚ
ಮೆಂತೆ -
½ ಚಮಚ
ಉದ್ದಿನಬೇಳೆ-
1 ಚಮಚ
ಮೆಣಸು (ಬ್ಯಾಡಗಿ)
- 6-8
ಕೊತ್ತಂಬರಿ ಬೀಜ -
1 ½ ಚಮಚ
ಜೀರಿಗೆ -
½ ಚಮಚ
ಹಳದಿ ಪುಡಿ - ಚಿಟಿಕೆ

ಕರಿಬೇವು -
6 ಎಲೆ
ತೆಂಗಿನಕಾಯಿ -
¼ ಕಪ್ ತುರಿದು

ಒಗ್ಗರಣೆಗೆ
:
ಎಣ್ಣೆ -
2 ಚಮಚ
ಸಾಸಿವೆ
- ½ ಚಮಚ
ಹಿಂಗು
- ½ ಚಮಚ

ಒಣ ಮೆಣಸು - 1
ಕರಿಬೇವು -
6 ಎಲೆ


ತಯಾರಿಸುವ ವಿಧಾನ :
ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ
, ಮೆಂತೆ ಸ್ವಲ್ಪ ಬಣ್ಣ ಚೇಂಜ್ ಆಗುವ ತನಕ ಹುರಿದು, ನಂತರ ಉದ್ದಿನಬೇಳೆ ಸೇರಿಸಿ, ಸ್ವಲ್ಪ ಕೆಂಪಗಾಗುವ ತನಕ ಹುರಿಯಿರಿ. ಇದಕ್ಕೆ ಕರಿಬೇವು, ಕೊತ್ತಂಬರಿ ಬೀಜ, ಜೀರಿಗೆ ಸೇರಿಸಿ ಚೆನ್ನಾಗಿ ಪರಿಮಳ ಬರುವ ತನಕ ಹುರಿಯಿರಿ. ಮಸಾಲೆ ಹುರಿಯುವಾಗ ಸೀದು ಹೋಗದಂತೆ ನೋಡಿಕೊಳ್ಳಬೇಕು. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ. ತೆಂಗಿನತುರಿಯನ್ನು ಸ್ವಲ್ಪ ಕೆಂಬಣ್ಣ ಬರುವ ತನಕ ಹುರಿಯಿರಿ. ತಣ್ಣಗಾದ ನಂತರ ಈ ಮಸಾಲೆಯನ್ನು ರುಬ್ಬಿಡಿ.


ತೊಗರಿಬೇಳೆಯನ್ನು ತೊಳೆದುಕೊಂಡು ಕುಕ್ಕರಿನಲ್ಲಿ ಬೇಯಿಸಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಸೇರಿಸಿಕೊಂಡು ಈರುಳ್ಳಿಯನ್ನು ಹುರಿದು, ಇದಕ್ಕೆ
ಹೆಚ್ಚಿಟ್ಟ ತರಕಾರಿ ಸೇರಿಸಿ ಸ್ವಲ್ಪ ಹುರಿಯಿರಿ. ನಂತರ ಹೆಚ್ಚಿಟ್ಟ ಟೊಮೇಟೊ ಹಾಗೂ ಒಂದು ಕಪ್ ನೀರು ಸೇರಿಸಿ ಬೇಯಿಸಲು ಇಡಿ. ತರಕಾರಿ ಬೇಯುತ್ತ ಬಂದಾಗ, ಇದಕ್ಕೆ ತೊಗರಿಬೇಳೆ, ರುಬ್ಬಿಟ್ಟ ಮಸಾಲೆ, ಹುಳಿ, ಉಪ್ಪು, ಬೆಲ್ಲ ಮತ್ತು ಬೇಕಾದಷ್ಟು ನೀರು ಸೇರಿಸಿಕೊಂಡು ಸೇರಿಸಿ 10ನಿಮಿಷ ಹದ ಉರಿಯಲ್ಲಿ ಕುದಿಸಿರಿ. ಕೊನೆಯಲ್ಲಿ ಒಗ್ಗರಣೆ ಸೇರಿಸಿ. ಈ ಸಾಂಬಾರನ್ನು ಇಡ್ಲಿ, ದೋಸೆ ಅಥವಾ ಅನ್ನದೊಂದಿಗೆ ಉಪಯೋಗಿಸಬಹುದು.

ನಾನು ಮಂಗಳೂರು ರಸಂ (ಸಾರು) ಮಾಡಲು ಕೂಡ ಇದೆ ಮಸಾಲೆ ಉಪಯೋಗಿಸ್ತೇನೆ...ಟೊಮೇಟೊ ಕಟ್ ಮಾಡಿ 1 ಕಪ್ ನೀರಿನಲ್ಲಿ 10 ನಿಮಿಷ ಬೇಯಿಸಿ ನಂತರ ಇದೇ ಮಸಾಲೆ ಪುಡಿ + ಎರಡು ಚಮಚ ತೆಂಗಿನ ತುರಿ (ಹುರಿದು ಅಥವಾ ಹುರಿಯದೆ) , ಸ್ವಲ್ಪ pepper ಪುಡಿ, ಹುಳಿ, ಬೆಲ್ಲ ಹಾಗೂ 1 ಕಪ್ ನೀರು ಸೇರಿಸಿ ಕುದಿಸಿ, ಕೊನೆಯಲ್ಲಿ ಸೇಮ್ ಒಗ್ಗರಣೆ ಸೇರಿಸಿದರೆ ಸಾರು ರೆಡಿ.
ಈ ಸಾರಿನಲ್ಲಿ ಬೆಳ್ಳುಳ್ಳಿ ಅಥವಾ ಈರುಳ್ಳಿ ಯನ್ನು ಸೇರಿಸುವುದಿಲ್ಲ.ಆದರೆ ನಾನು ಈರುಳ್ಳಿ ಯನ್ನು ಫ್ರೈ ಮಾಡಿ ಸೇರಿಸುತ್ತೇನೆ.

Tuesday, March 16, 2010

ಹೋಳಿಗೆ / HOLIGE

ಹೂರಣ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಕಡಲೆಬೇಳೆ - 1 ಕಪ್
ನೀರು - ½ ಕಪ್
ಬೆಲ್ಲದ ಪುಡಿ - 1 ಕಪ್
ಏಲಕ್ಕಿ ಪುಡಿ - ½ ಚಮಚ

ಕನಕ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಮೈದಾ- 1½ ಕಪ್
ನೀರು - ¾ -1 ಕಪ್
ಹಳದಿ ಪುಡಿ - ಚಿಟಿಕೆ
ಉಪ್ಪು - ಚಿಟಿಕೆ
ಎಣ್ಣೆ - 2-3 ಟೇಬಲ್ ಚಮಚ

ಹೂರಣ ತಯಾರಿಸುವ ವಿಧಾನ:
ಕಡಲೇಬೇಳೆಯನ್ನು 1-2 ಘಂಟೆ ನೀರಿನಲ್ಲಿ ನೆನೆಸಿಡಿ.
ನಂತರ ಇದನ್ನು ತೊಳೆದುಕೊಂಡು ½ ಕಪ್ ನೀರು ಸೇರಿಸಿ, ಕುಕ್ಕರಿನಲ್ಲಿ ಬೇಯಲು ಇಡಿ.
ಕುಕ್ಕರಿನ steam ಬಂದ ನಂತರ weight ಹಾಕಿ ಸಣ್ಣ ಉರಿಯಲ್ಲಿ (whistle ಬರದಂತೆ) 15-20 ನಿಮಿಷ ಬೇಯಿಸಿ. ತಣ್ಣಗಾದ ನಂತರ ಬೇಯಿಸಿದ ಕಡಲೇಬೇಳೆಗೆ ಬೆಲ್ಲ ಸೇರಿಸಿ ಮಿಕ್ಸಿಯಲ್ಲಿ ನೀರು ಸೇರಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ, 12-15 ಉಂಡೆ ಮಾಡಿಟ್ಟುಕೊಳ್ಳಿ.

ಕನಕ ತಯಾರಿಸುವ ವಿಧಾನ:
ಮೈದಾ ಹಿಟ್ಟಿಗೆ, ಉಪ್ಪು, ಹಳದಿ ಪುಡಿ ಸೇರಿಸಿಕೊಂಡು ಬೇಕಾದಷ್ಟು ನೀರು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಿ. ಕೊನೆಯಲ್ಲಿ ಇದಕ್ಕೆ ಎಣ್ಣೆ ಸೇರಿಸಿ ½ ಘಂಟೆ ಮುಚ್ಚಿಡಿ. ಇದರಿಂದ 12-15 ಉಂಡೆ ಮಾಡಿ.

ಹೋಳಿಗೆ ತಯಾರಿಸುವ ವಿಧಾನ:
ಕೈಗೆ ಎಣ್ಣೆ ಹಚ್ಚಿಕೊಂಡು ಕನಕದ ಒಂದು ಉಂಡೆ ತೆಗೆದುಕೊಂಡು ಅಂಗೈ ಯಲ್ಲಿ ಸ್ವಲ್ಪ ತಟ್ಟಿ, ಇದರಲ್ಲಿ ಒಂದು ಹೂರಣದ ಉಂಡೆಯನ್ನು ತುಂಬಿಸಿ ಇಡಿ.
ಎಲ್ಲಾ ಉಂಡೆಗಳಿಗೂ ಇದೇ ತರ ತುಂಬಿಸಿಕೊಂಡು ಎಣ್ಣೆ ಸವರಿದ ಪ್ಲೇಟ್ ನಲ್ಲಿಡಿ. ಈ ಉಂಡೆಗಳನ್ನು ಮೈದಾ ಪುಡಿ ಬಳಸಿಕೊಂಡು ಸಾಧ್ಯವಾದಷ್ಟು ತೆಳ್ಳಗೆ ಚಪಾತಿಯಂತೆ ಲಟ್ಟಿಸಿ.
ಲಟ್ಟಿಸಿದ ಹೋಳಿಗೆಯನ್ನು ಹದ ಬಿಸಿಯಾದ ಕಬ್ಬಿಣದ ಕಾವಲಿಯಲ್ಲಿ ಮೇಲಿನಿಂದ ಸ್ವಲ್ಪ ತುಪ್ಪ ಸವರಿಕೊಂಡು ಎರಡೂ ಕಡೆ ಸ್ವಲ್ಪ ಕೆಂಪಾಗುವ ತನಕ ಬೇಯಿಸಿ, ಬಿಸಿಯಾರುವ ತನಕ ಹೋಳಿಗೆಯನ್ನು ಒಂದು ಪೇಪರ್ ನಲ್ಲಿ ಹರಡಿಡಿ. ನಂತರ ಇದನ್ನು ತುಪ್ಪ ಅಥವಾ ತೆಂಗಿನ ಹಾಲಿನೊಂದಿಗೆ ಸವಿಯಲು ಕೊಡಿ.

ಮಂಗಳೂರು ಕಡೆಯಲ್ಲಿ ಹೆಚ್ಹಾಗಿ ಹೋಳಿಗೆಯನ್ನು ಮದುವೆ ಸಮಾರಂಭಗಳಲ್ಲಿ ಮಾಡುತ್ತಾರೆ. ಈ ಹೋಳಿಗೆಗಳು ತುಂಬಾ ತೆಳ್ಳಗೆ ಪದರ ಪದರ ವಾಗಿರುತ್ತದೆ. ಕರ್ನಾಟಕದ ಉಳಿದ ಭಾಗದಲ್ಲಿ ಹೋಳಿಗೆಗೆ 'ಒಬ್ಬಟ್ಟು' ಎಂದು ಕರೆಯುತ್ತಾರೆ. ಇಲ್ಲಿ ಬೆಲ್ಲದೊಂದಿಗೆ ಹೂರಣವನ್ನು ಬೇಯಿಸಿ, ನೀರು ಆರಿದ ನಂತರ ಉಪಯೋಗಿಸುತ್ತಾರೆ. ಇದನ್ನು ಕಡಲೆಬೇಳೆ ಅಥವಾ ತೊಗರಿ ಬೇಳೆಯಿಂದಲೂ ಮಾಡಬಹುದು. ಬೇಳೆಯನ್ನು ಹೆಚ್ಚಿನ ನೀರಿನಲ್ಲಿ ಬೇಯಿಸಿ, ನಂತರ ಈ ನೀರನ್ನು ತೆಗೆದುಕೊಂಡು ರುಚಿಯಾದ ಒಬ್ಬಟ್ಟು ಸಾರು / ಕಟ್ಟು ಸಾರನ್ನು ಕೂಡ ಮಾಡುತ್ತಾರೆ.


ನನ್- ಪ್ರಪಂಚದ ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು..
ಹೊಸ ವರುಷ ಎಲ್ಲರಿಗೂ ಹರುಷ ತರಲಿ :)
ವನಿತಾ.

Wednesday, March 3, 2010

ಹಿಟ್ಟು ಒಂದು; ತಿಂಡಿ ಹಲವು (NAAN, PIZZA, CALZONES & STUFFED BUN)

ಬೇಕಾಗುವ ಸಾಮಗ್ರಿಗಳು:

ಗೋಧಿ ಹಿಟ್ಟು - 2 ½ ಕಪ್ (ಕೇವಲ ಮೈದಾ ಅಥವಾ 1:1 ಮೈದಾ: ಗೋಧಿಹಿಟ್ಟನ್ನು ಮಿಕ್ಸ್ ಮಾಡಿ ಕೂಡ ಉಪಯೋಗಿಸಬಹುದು)
ಉಪ್ಪು
- 1 ಚಮಚ

ಸಕ್ಕರೆ - ½ ಚಮಚ

ನೀರು - 1 ಕಪ್

ಎಣ್ಣೆ - 2 ಚಮಚ (preferably Olive oil)
FLAX SEED POWDER 3 ಚಮಚ (optional)

Flax seedನಲ್ಲಿ ಫೈಬರ್ ಹಾಗೂ Omega-3-fattyacid ಯಥೇಚ್ಚವಾಗಿರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದು.

Dry active yeast powder – 1 ಚಮಚ
ಈಸ್ಟ್ ನ್ನು ಒಂದು ಪಾತ್ರೆಗೆ ಹಾಕಿ ಹದ ಬೆಚ್ಚಗಿನ ನೀರಿನಲ್ಲಿ ಕಲಸಿ 3 ನಿಮಿಷ ಇಡಿ. ನಂತರ ಇದನ್ನು ಹಿಟ್ಟಿಗೆ ಸೇರಿಸಿಕೊಂಡು ಉಪ್ಪು ಮತ್ತು ಬೇಕಾದಷ್ಟು ನೀರು ಸೇರಿಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ. ಕೊನೆಯಲ್ಲಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಒಂದು ಗಾಳಿಯಾಡದ ಪಾತ್ರೆಯಲ್ಲಿ ಮುಚ್ಚಿಡಿ. ಒಂದು ಘಂಟೆಯ ನಂತರ ಹಿಟ್ಟು ಎರಡು ಪಟ್ಟು ಹಿಗ್ಗುತ್ತದೆ. ಇದನ್ನು ಪುನ: ಕಲಸಿ ಒಂದು ಗಂಟೆ ಮುಚ್ಚಿಡಿ. ನಂತರ ಹಿಟ್ಟನ್ನು ಬೇಕಾದ ರೀತಿಯಲ್ಲಿ ಉಪಯೋಗಿಸಿ.

------------------------------------------------------------



ನಾನ್ ಮಾಡುವ ವಿಧಾನ:

ಹಿಟ್ಟನ್ನು ಚಪಾತಿಗಿಂತ ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಂಡು ಓವೆನ್ನಲ್ಲಿ 500F (or BROIL) ನಲ್ಲಿ 2-3ನಿಮಿಷ ಬೇಯಿಸಿ.ಇದನ್ನು ಮಧ್ಯದಿಂದ ತುಂಡು ಮಾಡಿ ಬೇಕಾದ ಪಲ್ಯದೊಂದಿಗೆ ತಿನ್ನಲು ಕೊಡಿ. ಓವೆನ್ನಿಂದ ತೆಗೆದ ಕೂಡಲೇ ಬೇಕಿದ್ದರೆ ಸ್ವಲ್ಪ ಬೆಣ್ಣೆಯನ್ನು ಸವರಬಹುದು.
ಹೆಚ್ಚಿನ ವಿವರಗಳಿಗೆ: Manjula's Kitchen

---------------------------------------------------------


ಪಿಜ್ಜಾ ಮಾಡುವ ವಿಧಾನ:

ಮಿಕ್ಕಿ ಪಿಜ್ಜಾ ಬೇಕ್ ಮಾಡುವ ಮೊದಲು


ಮೇಲೆ ಹೇಳಿದ ಹಿಟ್ಟನ್ನು 3/4 - ಒಂದು ಇಂಚು ದಪ್ಪಕ್ಕೆ ಚಪಾತಿಯಂತೆ ಲಟ್ಟಿಸಿ. ಇದರ ಮೇಲಿಗೆ marinara ಸಾಸ್, ಅಥವಾ ಯಾವುದೇ ಸಾಸ್ ಸವರಿ ಓವೆನ್ ನಲ್ಲಿ 400F ನಲ್ಲಿ ಮಧ್ಯದ ರಾಕ್ ನಲ್ಲಿ 8-10 ನಿಮಿಷ ಬೇಯಿಸಿ. ನಂತರ ಇದನ್ನು ಹೊರಗೆ ತೆಗೆದು, ಇದರ ಮೇಲೆ ನಿಮಗೆ ಬೇಕಾದ ತರಕಾರಿಗಳನ್ನು (Olives, ಕ್ಯಾಪ್ಸಿಕಂ, ಟೊಮೇಟೊ, ಈರುಳ್ಳಿ, mushrooms, ಪಾಲಕ್ ಸೊಪ್ಪು) ಸಮವಾಗಿ ಹರಡಿ, ಮೇಲಿನಿಂದ ಬೇಕಾದಷ್ಟು

Shredded ಚೀಸ್ ಮತ್ತು ಒಂದೆರಡು ಚಮಚ ಒಲಿವ್ ಎಣ್ಣೆ ಸೇರಿಸಿ, ಪುನ: 5-8 ನಿಮಿಷ ಅಥವಾ ಚೀಸ್ ಕರಗುವ ತನಕ ಬೇಯಿಸಿರಿ.

--------------------------------------------------


Calzone ಮತ್ತು stuffed bun ಮಾಡಲು ಉಪಯೋಗಿಸುವ ಪಲ್ಯ ಮಾಡುವ ವಿಧಾನ:
ಆಲೂಗಡ್ಡೆ - 2 ಬೇಯಿಸಿ, ಪುಡಿ ಮಾಡಿ
ಯಾವುದೇ
ಕಾಳು (ಬಟಾಣಿ/Red bean/ Black bean)- ¾ ಕಪ್ ಬೇಯಿಸಿ
ಈರುಳ್ಳಿ
- ½ ಕಪ್
ಗರಂ
ಮಸಾಲ ಪುಡಿ - 1 ಚಮಚ
ಉಪ್ಪು
- ರುಚಿಗೆ ತಕ್ಕಷ್ಟು
ಕೊತ್ತಂಬರಿ
ಸೊಪ್ಪು - ಸ್ವಲ್ಪ
ಜೀರಿಗೆ
- ½ ಚಮಚ
ಶುಂಟಿ
- ಬೆಳ್ಳುಳ್ಳಿ ಪೇಸ್ಟ್ / ತುರಿದು - 1ಚಮಚ
ಎಣ್ಣೆ
- 2-3 ಚಮಚ
ಒಂದು
ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಇದಕ್ಕೆ ಜೀರಿಗೆ, ಈರುಳ್ಳಿ - ಶುಂಟಿ ಸ್ಟ್ ಸೇರಿಸಿ, 1 ನಿಮಿಷ ಹುರಿದುಕೊಂಡು, ಈರುಳ್ಳಿ ಸೇರಿಸಿ ಕೆಂಪಗಾಗುವ ತನಕ ಹುರಿಯಿರಿ. ಈಗ ಸ್ವಲ್ಪ ಹಳದಿ ಪುಡಿ, ಉಪ್ಪು, ಗರಂ ಮಸಾಲೆ ಪುಡಿ ಸೇರಿಸಿ, 1ನಿಮಿಷ ಹುರಿದುಕೊಂಡು , ಕೊನೆಯಲ್ಲಿ ತರಕಾರಿ ಮತ್ತು ಕಾಳುಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ 2-3 ನಿಮಿಷ ಬೆರೆಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
ಮಕ್ಕಳಿಗ
ಇದನ್ನು ಉಪಯೋಗಿಸುತ್ತಿದ್ದರೆ, ಗರಂ ಮಸಾಲ ಪುಡಿಯನ್ನು ಬೇಕಾದಂತೆ ಕಡಿಮೆ ಹಾಕಿ, ಪಲ್ಯವನ್ನು ಬೇರೆ ತೆಗೆದಿಟ್ಟುಕೊಂಡು, ಉಳಿದ ಪಲ್ಯಕ್ಕೆ ಪುನ ಗರಮ್ ಮಸಾಲ ಪುಡಿಯನ್ನು ಹಾಕಿಕೊಳ್ಳಬಹುದು.
ಪಲ್ಯವನ್ನು ಪಫ್ಫ್ಸ್ / ಸಮೋಸ ಅಥವಾ ಯಾವುದೇ fillingಗಳಿಗೆ ಉಪಯೋಗಿಸಬಹುದು.
---------------------------------------------------

Calzone ಮಾಡುವ ವಿಧಾನ:


ಹಿಟ್ಟನ್ನು ಚಪಾತಿಯಂತೆ ದಪ್ಪಕ್ಕೆ ಲಟ್ಟಿಸಿ, marinara ಸಾಸ್, ಅಥವಾ ಯಾವುದೇ ಸಾಸ್ ಸವರಿ. ಇದರ ಒಂದು ಭಾಗದಲ್ಲಿ ಪಲ್ಯ ಹಾಗೂ ಸ್ವಲ್ಪ (Shredded Mozzarella) ಚೀಸ್ ನ್ನಿಟ್ಟು ಇನನೊಂದು ಭಾಗವನ್ನು ಮುಚ್ಚಿ ಎಲ್ಲ ಕಡೆಗಳಲ್ಲೂ ಬೆರಳಿನಿಂದ ಸ್ವಲ್ಪ ನೀರು ಮುಟ್ಟಿಸಿಕೊಂಡು ಮುಚ್ಚಿ. ಇದನ್ನು ಓವೆನ್ ನಲ್ಲಿ ಮಧ್ಯದ ರಾಕ್ ನಲ್ಲಿಟ್ಟು 400F ನಲ್ಲಿ 8-10 ನಿಮಿಷ ಬೇಯಿಸಿ.

ಹೆಚ್ಚಿನ ವಿವರಗಳು ಇಲ್ಲಿ.
--------------------------


STUFFED ಬನ್ ಮಾಡುವ ವಿಧಾನ:

ಒಂದು ಎಣ್ಣೆ ಸವರಿದ ಬೋರ್ಡ್ ಮೇಲೆ ಬನ್ನಿನ ಹಿಟ್ಟನ್ನು ತೆಗೆದುಕೊಂಡು ಕೈಯಿಂದಲೇ ಪೂರಿಯ ಗಾತ್ರಕ್ಕೆ ರಿಂದ ½ ಇಂಚು ದಪ್ಪಕ್ಕೆ) ಒತ್ತಿ. ಇದರಲ್ಲಿ ಪಲ್ಯವನ್ನಿಟ್ಟು, ಹಿಟ್ಟನ್ನು ಎಲ್ಲಾ ಭಾಗದಿಂದಲೂ ಸೇರಿಸಿಕೊಂಡು ಪುನ ಕೈಯಿಂದ ಒತ್ತಿಕೊಂಡು ಬನ್ ಆಕಾರದಲ್ಲಿ ತಟಟಿ ಒಂದು ಎಣ್ಣೆ ಸವರಿದ aluminium ಶೀಟ್ ಮೇಲಿಡಿ. ಇದನ್ನು ovenನಲ್ಲಿ ಮಧ್ಯದ ರಾಕ್ ನಲ್ಲಿಟ್ಟು 25-30 ನಿಮಿಷ (ಕೆಂಪಗೆ ಆಗುವ ತನಕ) ಬೇಕ್ ಮಾಡಿ. ಓವೆನ್ ನಿಂದ ಹೊರ ತೆಗೆದ ತಕ್ಷಣ ಮೇಲಿನಿಂದ ಸ್ವಲ್ಪ ಬೆಣ್ಣೆಯನ್ನು ಸವರಿ ತಣ್ಣಗಾದ ಮೇಲೆ ತಿನ್ನಲು ಕೊಡಿ.

ಹೆಚ್ಚಿನ ವಿವರಗಳು ಇಲ್ಲಿ

---------------------------
Thanks to Manjula aunty, Namratha & Madhu for sharing their recipes:)

Thursday, February 18, 2010

ನನ್-ಪ್ರಪಂಚದ ವೈವಿಧ್ಯಗಳು / Recipe Index

ಉಪಾಹಾರಗಳು/ BREAKFAST
  • ನೀರು ದೋಸೆ ಮತ್ತು ಸೌತೆಕಾಯಿ ದೋಸೆ / Neerudose & Southekaayi Dosa link
  • ಪೂರಿ / ದೋಸೆ ಮತ್ತು ಆಲೂಗಡ್ಡೆ ಪಲ್ಯ/ ಬಾಜಿ / Poori /Dosa Potato Sabji link
  • ಬಾಳೆಹಣ್ಣು ದೋಸೆ / Banana Dosa link
  • ಪಾಸ್ತಾ/ Pasta link
  • ಪಾಲಕ್ ಪರೋಟ ಮತ್ತು ಎಲೆಕೋಸು ಚಟ್ನಿ / Spinach Parota and Cabbage Dip/chutney: link
  • ಕಾಶ್ಮೀರಿ ಪಲಾವ್ / Kashmiri Pulao link
  • ವೆಜೆಟೇಬಲ್ ಪಲಾವ್ / Vegetable Pulao link
  • ಮೆಕ್ಷಿಕನ್ ರೈಸ್ / Mexican Rice link
  • ಪಾಲಕ್ - ಕ್ಯಾರೆಟ್ ಪುಲಾವ್ (Spinach- Carrot pulav) and Green bean stir fry link

ಪಲ್ಯ ಸಾಂಬಾರ್ / SUBJI/ SIDE DISHES
  • ಬಸಳೆ ಸೊಪ್ಪು ತಂಬುಳಿ / Indian Spinach in coconut gravy (Thambuli) link
  • ಮೆಣಸುಕಾಯಿ/ Menasukaayi/ Pineapple in Til-Coconut gravy: link
  • ಕೋಸಂಬರಿ/ Kosambari / Salad: link
  • ಅವಿಲ್ / ಅವಿಯಲ್ / Avil / Avial / link
  • Egg Pepper Fry Link
  • Broccoli stir fry link
  • ಬದನೇಕಾಯಿ ಎಳ್ಳು ಸಾಂಬಾರ್ / Baghare Baingan (Brinjal Curry) link
  • ಮೊಳಕೆ ಕಾಳು ಮತ್ತು ಬಸಳೆ ಸಾಂಬಾರ್ / Green Gram - Indian Spinch Curry link
  • Spinach cheese whirls link
  • ಕಡಾಯಿ ಮುಶ್ರೂಮ್ / Kadai Mushroom link
  • ಪನೀರ್ ಮಟರ್/ Paneer matter link
  • ಹೀರೆಕಾಯಿ ಸಿಪ್ಪೆ ಚಟ್ನಿ / Ridge gourd dip (chutney) link
  • ಹಾಗಲಕಾಯಿ ಗೊಜ್ಜು / Bittergourd side dish (gojju) link
  • ಮಾವಿನಹಣ್ಣು ಗೊಜ್ಜು / Mango side dish (gojju) link
  • ಬದನೇಕಾಯಿ ಗೊಜ್ಜು / Baingan bhartha (Brinjal gojju) link
  • ಟೊಮೇಟೊ ಪಲ್ಯ / Tomato-onion Sabji link
  • ಕಲ್ಲಂಗಡಿ ಹಣ್ಣಿನ ಸಿಪ್ಪೆ ಪಲ್ಯ / Watermelon Rind Sabji link
  • Stuffed okra/ Bendekaayi link
  • ಮೆಂತೆ ಸೊಪ್ಪು - ಹೆಸರು ಕಾಳು ಮಸಾಲೆ ಪಲ್ಯ / Green gram- Methi sabji link
  • ಬಾಳೆಕಾಯಿ ಪಲ್ಯ / Raw Plaintain Sabji link
  • ಮಾವಿನಕಾಯಿ ಉಪ್ಪಿನಕಾಯಿ / Pickle link
  • ಉಡುಪಿ / ಮಂಗಳೂರು ಸಾಂಬಾರ್ / Mangalore- Udupi Sambar link
  • ತೊಂಡೆಕಾಯಿ - ಕಡ್ಲೆ ಪಲ್ಯ (ಕಡ್ಲೆ - ಮನೋಳಿ ಆಜಾಯಿನ)/ (Tondekayi) Tindora- Kabuli chana Sabji link


ಕರಿದ ತಿಂಡಿಗಳು / SNACKS
  • ಪಫ್ಫ್ಸ್/ Puffs link
  • ಚಕ್ಕುಲಿ / Chakkuli link
  • ಹೆಸರು ಕಾಳು ವಡೆ / Sprouted Green Gram Fritters link
  • ಕಟ್ಲೆಟ್ / Cutlet link
  • ಸಮೋಸ / Samosa link
  • ಈರುಳ್ಳಿ ಬಜೆ / Onion Fritters link
  • ತುಕುಡಿ / Tukudi/ Diamond Cuts link
  • ಮಂಗಳೂರು ಬನ್ಸ್ / Mangalore Bun link
  • ಗೋಳಿಬಜೆ / Ggoli baje link

ಸಿಹಿತಿಂಡಿಗಳು / SWEETS/ DESSERTS

  • ಎಳ್ಳು -ಬೆಲ್ಲ, ಸಿಹಿ ಪೊಂಗಲ್, ತೆಂಗಿನ ಕಾಯಿ ಬರ್ಫಿ/ Ellu-Bella, Sweet Pongal / Coconut Burfi: link
  • ಖರ್ಜೂರ ಕೇಕ್ ಮತ್ತು ಬಾಳೆಹಣ್ಣು ಕೇಕ್ / Cakes link
  • ಮ್ಯಕಾರೂನ್ಸ್ / Cashew macarons link
  • ಗುಳಿಯಪ್ಪ / guliappa / Paddu link
  • ಕೆಂಡ ದಡ್ಯ /ಗೆಂಡ ದಡ್ಯ / Kendadadya link
  • ಕ್ಯಾರೆಟ್ ಹಲ್ವ / Carrot halva link
  • ಖರ್ಜೂರ ಹಲ್ವ / Date Halwa link
  • ಸೆವೆನ್ ಕಪ್ ಸ್ವೀಟ್ / seven cup sweet: link
  • ಹೋಳಿಗೆ / HOLIGE / OBBATTU / PURAN POLI link
  • ಗೋಧಿ ಪುಡಿ ಹಲ್ವ / ಖರ್ಜೂರ ಪಾಯಸ (wheat flour Halwa & Dates Payasa) link

JUICE / MILKSHAKES

Honey dew melon juice and milkshake link
Strawberry Milk shake link
ಆಪಲ್ ಮಿಲ್ಕ್ ಶೇಕ್ / apple milk shakes: link

ಐಸ್ ಕ್ಯಾಂಡಿ ಮತ್ತು ಫ್ರುಟ್ ಚಾಟ್/ ICE CANDY AND FRUIT CHAT FOR SUMMER link